Gold rate: ಶುಕ್ರವಾರ ಚಿನ್ನ ಖರೀದಿಸೋಕೆ ಹೊರಟವರಿಗೆ ಶಾಕ್! ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ

Suvarna News   | Asianet News
Published : Nov 26, 2021, 12:47 PM ISTUpdated : Nov 26, 2021, 02:43 PM IST
Gold rate: ಶುಕ್ರವಾರ ಚಿನ್ನ ಖರೀದಿಸೋಕೆ ಹೊರಟವರಿಗೆ ಶಾಕ್! ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ

ಸಾರಾಂಶ

ರಾಜ್ಯ ರಾಜಧಾನಿಯಲ್ಲಿ ಚಿನ್ನದ ದರದಲ್ಲಿ ನಿನ್ನೆಗಿಂತ ಇಂದು ಕೊಂಚ ಏರಿಕೆ ಕಂಡುಬಂದಿದೆ. ಚಿನ್ನ ಖರೀದಿಗೆ ಶುಕ್ರವಾರ ಶುಭವೆಂದುಕೊಂಡವರಿಗೆ ಇದ್ರಿಂದ ತುಸು ನಿರಾಸೆಯಾಗಿದೆ.

ಬೆಂಗಳೂರು (ನ.26): ಕೊರೋನಾ (Corona) ಕಾಲಿಟ್ಟ ಬಳಿಕ ಚಿನ್ನದ (Gold) ದರ(rate) ಸಾಕಷ್ಟು ಏರಿಕೆ ಕಂಡಿತ್ತು.ಇದು ಹೂಡಿಕೆದಾರರಿಗೆ(Investors) ಖುಷಿ ನೀಡಿದ್ರೆ, ಮಗಳ ಮದುವೆ ತಯಾರಿಯಲ್ಲಿದ್ದ ಹೆತ್ತವರ ನಿದ್ದೆಗೆಡಿಸಿತ್ತು. ಆದ್ರೆ ಇತ್ತೀಚಿಗೆ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪಇಳಿಕೆ ಕಂಡುಬಂದಿತ್ತು. ಒಡವೆ ಖರೀದಿಸಲು ಹಣ ಕೂಡಿಟ್ಟವರು ಚಿನ್ನದ ದರ ಇನ್ನಷ್ಟು ತಗ್ಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ. ಇನ್ನು ಇವತ್ತು ಶುಕ್ರವಾರ (ನ.26) ಚಿನ್ನ ಖರೀದಿಗೆ ಶುಭದಿನ (Auspicious day) ಎಂದು ಆಭರಣ ಮಳಿಗೆಗೆ (Jewellery shop) ತೆರಳಲು ಕೆಲವರು ಪ್ಲ್ಯಾನ್ ಮಾಡಿಕೊಂಡಿರಬಹುದು.ಅಂಥವರಿಗೆ ಇಂದು ತುಸು ನಿರಾಸೆಯಾಗಿದೆ. ಏಕೆಂದ್ರೆ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ.

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bangalore) ಇಂದು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,850ರೂ.ಇದೆ. ನಿನ್ನೆ 44,700ರೂ.ದರವಿದ್ದು,ನಿನ್ನೆಗಿಂತ ಇಂದು 150ರೂ. ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 48, 760 ರೂ. ಇದ್ದು,ಇಂದು 48,930 ರೂ. ಆಗಿದ್ದು, 170ರೂ. ಏರಿಕೆಯಾಗಿದೆ.ಇನ್ನು ಬೆಳ್ಳಿ ದರದಲ್ಲಿ ನಿನ್ನೆಗಿಂತ 200ರೂ. ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 62,900ರೂ.ಇತ್ತು. ಆದ್ರೆ ಇಂದು 63,100ರೂ. ಆಗಿದೆ. 

"

ಇಂದು ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ ಗೊತ್ತಾ?

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ (Delhi) 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,850 ರೂ.ಇದೆ. ನಿನ್ನೆ ಕೂಡ ಇದೇ ದರವಿದ್ದು,ಯಾವುದೇ ಬದಲಾವಣೆಯಾಗಿಲ್ಲ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 51,100 ರೂ. ಇತ್ತು,ಇಂದು ಕೂಡ ಅಷ್ಟೇ ಇದೆ. ಆದ್ರೆ ಬೆಳ್ಳಿ ದರದಲ್ಲಿ 200ರೂ. ಏರಿಕೆಯಾಗಿದೆ. ನಿನ್ನೆ ಒಂದು ಕೆ.ಜಿ. ಬೆಳ್ಳಿಗೆ  62,900 ರೂ.ಇತ್ತು. ಆದ್ರೆ ಇಂದು 63,000ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ ದರ?
ಮುಂಬೈನಲ್ಲಿ(Mumbai) 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,630ರೂ.ಇದ್ದು, ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆಯಾಗಿಲ್ಲ.ನಿನ್ನೆ47,630 ರೂ. ಇತ್ತು,ಇಂದು ಕೂಡ ಅಷ್ಟೇ ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 62,700 ರೂ. ಇತ್ತು. ಆದ್ರೆ ಇಂದು 62,900ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 200 ರೂ. ಏರಿಕೆಯಾಗಿದೆ.

ಹಬ್ಬದ ವೇಳೆ ಮಕ್ಕಳ ಬಟ್ಟೆ ಖರೀದಿ ಹೆಚ್ಚಳ, ಕಿಡ್ಸ್ ಫ್ಯಾಶನ್‌‌ಗೆ ಫ್ಲಿಪ್‌ಕಾರ್ಟ್ ಪ್ರವೇಶ!

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ(Chennai) 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,030ರೂ. ಇದೆ. ನಿನ್ನೆ 44,960ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 70ರೂ.ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 70ರೂ. ಏರಿಕೆಯಾಗಿದೆ. ನಿನ್ನೆ 49,050 ರೂ.ಇತ್ತು,ಇಂದು 49,120 ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 67,800 ರೂ. ಇತ್ತು. ಆದ್ರೆ ಇಂದು 68,000ರೂ. ಆಗಿದೆ.ಅಂದ್ರೆ 200ರೂ. ಏರಿಕೆಯಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!