Union Budget: ಫೆ.1ಕ್ಕೆ ಷೇರು ಮಾರುಕಟ್ಟೆ ಇರುತ್ತಾ? ಇಲ್ವಾ? ಇಲ್ಲಿದೆ ಡೀಟೇಲ್ಸ್‌..

Published : Dec 23, 2024, 05:32 PM IST
Union Budget: ಫೆ.1ಕ್ಕೆ ಷೇರು ಮಾರುಕಟ್ಟೆ ಇರುತ್ತಾ? ಇಲ್ವಾ? ಇಲ್ಲಿದೆ ಡೀಟೇಲ್ಸ್‌..

ಸಾರಾಂಶ

2025ರ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆ ಪ್ರಯುಕ್ತ NSE ಮತ್ತು BSE ತೆರೆದಿರುತ್ತವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಕೇಂದ್ರ ಬಜೆಟ್ ಅನ್ನು ಮಂಡಿಸುವ ದಿನದಂದು ಲೈವ್ ಟ್ರೇಡಿಂಗ್ ಸೆಷನ್ ನಡೆಯಲಿದೆ.

ಮುಂಬೈ (ಡಿ.23):  ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಫೆಬ್ರವರಿ 1, 2025 ರಂದು (ಶನಿವಾರ) ಕೇಂದ್ರ ಬಜೆಟ್ 2024 ಸಲುವಾಗಿ ತೆರೆದಿರಲಿದೆ ಎಂದು ತಿಳಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ವರ್ಷ ಫೆಬ್ರವರಿ 1 ರಂದು ತಮ್ಮ ಎಂಟನೇ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.

ಸೋಮವಾರ ಈ ಕುರಿತಾಗಿ ಸುತ್ತೋಲೆ ನೀಡಿರುವ ಎನ್‌ಎಸ್‌ಇ, “ಎಲ್ಲಾ ಸದಸ್ಯರ ಗಮನಕ್ಕೆ 2025ರ ಫೆಬ್ರವರಿ 1 ರಂದು ಕೇಂದ್ರ ಬಜೆಟ್‌ ಮಂಡನೆ ಪ್ರಯುಕ್ತ ಲೈವ್‌ ಟ್ರೇಡಿಂಗ್‌ ಸೆಷನ್‌ ಇರಲಿದೆ' ಎಂದು ತಿಳಿಸಿದೆ.

ಕೇಂದ್ರ ಬಜೆಟ್ ಮಂಡನೆಯಿಂದಾಗಿ, ಎಕ್ಸ್‌ಚೇಂಜ್ ಫೆಬ್ರವರಿ 01ರಂದು ಈ ಕೆಳಗಿನಂತೆ ಪ್ರಮಾಣಿತ ಮಾರುಕಟ್ಟೆ ಸಮಯದ ಪ್ರಕಾರ ಲೈವ್ ಟ್ರೇಡಿಂಗ್ ಸೆಷನ್ ಅನ್ನು ನಡೆಸಲಿದೆ. ಇದಲ್ಲದೆ, ಸೆಟಲ್‌ಮೆಂಟ್‌ ಹಾಲಿಡೇ ಕಾರಣದಿಂದ 01-ಫೆಬ್ರವರಿ-2025 ರಂದು T0 ಸೆಶನ್ ಅನ್ನು ವ್ಯಾಪಾರಕ್ಕೆ ನಿಗದಿಪಡಿಸಲಾಗುವುದಿಲ್ಲ ಎನ್ನುವುದನ್ನು ಗಮನಿಸುವಂತೆ ತಿಳಿಸಿದೆ.

ಇಪಿಎಫ್‌ಒ ಸದಸ್ಯರಿಗೆ Important ನೋಟಿಸ್‌, ಜನವರಿ ಒಳಗಾಗಿ ಈ ಕೆಲಸ ಮಾಡಿ!

ಪ್ರೀ ಓಪನ್‌: ಆರಂಭ 9 ಗಂಟೆಗೆ, ಅಂತ್ಯ 9.08 ನಿಮಿಷ.
ಸಾಮಾನ್ಯ ಮಾರುಕಟ್ಟೆ: ಆರಂಭ ಬೆ. 9.15ಕ್ಕೆ, ಮುಕ್ತಾಯ: ಸಂಜೆ 3.30ಕ್ಕೆ

ಏಸು ಸಹೋದರನಿಗೆ ಸಂಬಂಧಿಸಿದ 2 ಸಾವಿರ ವರ್ಷ ಹಳೇ ಮೂಳೆ ಪೆಟ್ಟಿಗೆ ಪ್ರದರ್ಶನಕ್ಕಿಟ್ಟ ಅಮೆರಿಕ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ