ಬದಲಾಗ್ತಿದೆ ಯುಪಿಐ ನಿಯಮ, ಎರಡು ಖಾತೆ, ಒಂದು ಮೊಬೈಲ್ ನಂಬರ್ ಇದ್ದವರು ಮಾಡಿ ಈ ಕೆಲಸ

Published : Mar 07, 2025, 12:17 PM ISTUpdated : Mar 07, 2025, 01:17 PM IST
ಬದಲಾಗ್ತಿದೆ ಯುಪಿಐ ನಿಯಮ, ಎರಡು ಖಾತೆ, ಒಂದು ಮೊಬೈಲ್ ನಂಬರ್ ಇದ್ದವರು ಮಾಡಿ ಈ ಕೆಲಸ

ಸಾರಾಂಶ

ಏಪ್ರಿಲ್ 1, 2025 ರಿಂದ ಯುಪಿಐ ವಹಿವಾಟು ಸುರಕ್ಷತೆಗಾಗಿ NPCI ಹೊಸ ನಿಯಮ ಜಾರಿಗೆ ತರಲಿದೆ. ಬಳಕೆಯಲ್ಲಿಲ್ಲದ ಮೊಬೈಲ್ ನಂಬರ್‌ಗಳನ್ನು ಡಿಲೀಟ್ ಮಾಡಲಾಗುತ್ತದೆ. ಬ್ಯಾಂಕುಗಳು ವಾರಕ್ಕೊಮ್ಮೆ ಮೊಬೈಲ್ ಸಂಖ್ಯೆಗಳನ್ನು ನವೀಕರಿಸಬೇಕು. ಯುಪಿಐ ಬಳಕೆದಾರರು ತಮ್ಮ ಮಾಹಿತಿಯನ್ನು ನವೀಕರಿಸಬೇಕು. ನಂಬರ್ ಅಪ್ಡೇಟ್ ಮಾಡದಿದ್ದರೆ ವಹಿವಾಟು ನಡೆಸಲು ಸಾಧ್ಯವಿಲ್ಲ. ಇದರಿಂದ ವಂಚನೆ ಕಡಿಮೆಯಾಗಿ, ಯುಪಿಐ ಬಳಕೆದಾರರಿಗೆ ಹೆಚ್ಚಿನ ಭದ್ರತೆ ಸಿಗುತ್ತದೆ.

ನೀವು ನಿಯಮಿತವಾಗಿ ಯುಪಿಐ (UPI) ಬಳಕೆ ಮಾಡ್ತಿದ್ದರೆ ನಿಮಗೊಂದು ಮಹತ್ವದ ಸುದ್ದಿ ಇದೆ. ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಅದು ಏಪ್ರಿಲ್ 1, 2025ರಿಂದ ಜಾರಿಗೆ ಬರಲಿದೆ. ಯುಪಿಐ ವಹಿವಾಟುಗಳ ಸುರಕ್ಷತೆಯನ್ನು ಹೆಚ್ಚಿಸಲು ಜಾರಿಗೆ ಬರಲಿರುವ ಈ ನಿಯಮದ ಪ್ರಕಾರ, ಈಗಾಗಲೇ ಚಾಲ್ತಿಯಲ್ಲಿಲ್ಲದ ಅಥವಾ ಇನ್ನೊಬ್ಬರಿಗೆ ಹಸ್ತಾಂತರಿಸಲಾಗಿರುವ ಮೊಬೈಲ್ ನಂಬರ್ ಗಳನ್ನು ನಿಯಮಿತವಾಗಿ ಡಿಲಿಟ್ ಮಾಡಲು ನಿರ್ಧರಿಸಲಾಗಿದೆ. ಇದು ಯುಪಿಐ ವಹಿವಾಟಿನಲ್ಲಿ ಆಗುವ ದೋಷವನ್ನು ಕಡಿಮೆ ಮಾಡಲಿದೆ ಎಂದು ನಂಬಲಾಗಿದೆ. 

ಜುಲೈ 16, 2024 ರಂದು ನಡೆದ ಮಹತ್ವದ ಸಭೆಯಲ್ಲಿ ಎನ್ ಪಿಸಿಐ ಈ ನಿರ್ಧಾರಕ್ಕೆ ಬಂದಿದೆ. ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಪೂರೈಕೆದಾರರು ತಮ್ಮ ಸಿಸ್ಟಂಗಳನ್ನು ನಿಯಮಿತವಾಗಿ ನವೀಕರಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಬ್ಯಾಂಕುಗಳು ಮತ್ತು ಯುಪಿಐ ಅಪ್ಲಿಕೇಶನ್‌ಗಳು ಪ್ರತಿ ವಾರ ಬಂದ್ ಆಗಿರುವ ಅಥವಾ ಹೊಸ ಬಳಕೆದಾರರಿಗೆ  ನೀಡಲಾದ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ರಿಫ್ರೆಶ್ ಮಾಡುತ್ತವೆ. ಈ ಪ್ರಕ್ರಿಯೆಯಿಂದ, ತಪ್ಪು ಮೊಬೈಲ್ ಸಂಖ್ಯೆ ಮೇಲೆ ನಡೆಯುತ್ತಿದ್ದ ವಹಿವಾಟುಗಳು ಕಡಿಮೆಯಾಗುತ್ತವೆ ಮತ್ತು ಭದ್ರತೆ ಹೆಚ್ಚಾಗುತ್ತದೆ. ಗ್ರಾಹಕ, ಎರಡು ಬ್ಯಾಂಕ್ ಖಾತೆ ಹೊಂದಿದ್ದು, ಅದ್ರಲ್ಲಿ ಯಾವುದಾದ್ರೂ ಒಂದು ಬ್ಯಾಂಕ್ ನಲ್ಲಿ ಈ ನಂಬರ್ ಬಳಕೆ ಮಾಡ್ತಿಲ್ಲ ಎಂದಾದ್ರೆ ಆ ನಂಬರ್ ಕೂಡ ಡಿಲಿಟ್ ಆಗಲಿದೆ. 

ಏನಾದ್ರೂ ಬ್ಯುಸಿನೆಸ್ ಮಾಡ್ಬೇಕಾ? ಹೀಗೂ ಮಾಡ್ಬಹುದು ನೋಡಿ

ಯುಪಿಐ ಬಳಕೆದಾರರು ಏನು ಮಾಡ್ಬೇಕು? : ಯುಪಿಐ ಅಪ್ಲಿಕೇಷನ್ ಗಳು ನಂಬರ್ ನವೀಕರಣಕ್ಕೆ ನಿಮ್ಮ ಒಪ್ಪಿಗೆಯನ್ನು ಕೇಳುತ್ತವೆ. ನಿಮಗೆ ಆಪ್ಟ್-ಇನ್ ಆಯ್ಕೆ ಸಿಗುತ್ತದೆ. ನೀವು ನಂಬರ್ ನವೀಕರಿಸಲು ಒಪ್ಪಿಗೆ ನೀಡಿದ್ರೆ ನಿಮ್ಮ ನಂಬರ್ ಅಪ್ಡೇಟ್ ಆಗುತ್ತದೆ. ಯುಪಿಐ ಅಪ್ಲಿಕೇಷನ್ ಗಳು ಯಾವುದೇ ಒತ್ತಾಯದ ಮೂಲಕ ಈ ಕೆಲಸವನ್ನು ಮಾಡುವುದಿಲ್ಲ. ಒಂದ್ವೇಳೆ ನೀವು ನಂಬರ್ ಅಪ್ಡೇಟ್ ಮಾಡಿಲ್ಲ ಎಂದಾದ್ರೆ ಯುಪಿಐ ಮೂಲಕ ಹಣದ ವಹಿವಾಟು ನಡೆಸಲು ನಿಮಗೆ ಸಾಧ್ಯವಾಗುವುದಿಲ್ಲ. 

ಈ ಮಾರ್ಗಸೂಚಿಗಳನ್ನು ಜಾರಿಗೆ ತರಲು ಎನ್ ಪಿಸಿಐ, ಬ್ಯಾಂಕುಗಳು ಮತ್ತು ಯುಪಿಐ ಸೇವಾ ಪೂರೈಕೆದಾರರಿಗೆ ಮಾರ್ಚ್ 31, 2025 ರವರೆಗೆ ಸಮಯ ನೀಡಿದೆ. ಏಪ್ರಿಲ್ 1, 2025 ರಿಂದ ಎಲ್ಲಾ ಬ್ಯಾಂಕುಗಳು, ಎನ್ ಸಿಪಿಗೆ ತಮ್ಮ  ಮಾಸಿಕ ವರದಿಗಳನ್ನು ಸಲ್ಲಿಸಬೇಕು. ಒಟ್ಟು ಯುಪಿಐ ಐಡಿಗಳು, ಸಕ್ರಿಯ ಬಳಕೆದಾರರು, ನವೀಕರಿಸಿದ ಮೊಬೈಲ್ ಸಂಖ್ಯೆಗಳ ಮೂಲಕ ಮಾಡಿದ ವಹಿವಾಟುಗಳ ವಿವರಗಳನ್ನು ವರದಿಯಲ್ಲಿ ನೀಡಬೇಕು.  

ಇದರಿಂದ ಬಳಕೆದಾರರಿಗೆ ಲಾಭ ಏನು? : ಬ್ಯಾಂಕುಗಳು ಮತ್ತು ಯುಪಿಐ ಅಪ್ಲಿಕೇಶನ್‌ಗಳು ವಾರಕ್ಕೊಮ್ಮೆ ಮೊಬೈಲ್ ಸಂಖ್ಯೆಗಳನ್ನು ನವೀಕರಿಸುವುದರಿಂದ ವಂಚನೆ ಮತ್ತು ವಿಫಲ ವಹಿವಾಟುಗಳ ಘಟನೆ ಕಡಿಮೆಯಾಗುತ್ತವೆ. ಯುಪಿಐ ಬಳಕೆದಾರರಿಗೆ ಹೆಚ್ಚಿನ ಭದ್ರತೆ ಸಿಗುತ್ತದೆ. ಅಲ್ಲದೆ ಸುಲಭವಾಗಿ ವಹಿವಾಟು ನಡೆಸಬಹುದು.  

ಫಿಎಫ್ ನಿಯಮದಲ್ಲಿ ಮಹತ್ವದ ಬದಲಾವಣೆ, ಪ್ರತಿ ಉದ್ಯೋಗಿಗಳು ತಿಳಿದುಕೊಳ್ಳಿ ರೂಲ್ಸ್

ಬಳಕೆದಾರರು ಏನು ಮಾಡಬೇಕು? : ಎನ್ ಪಿಸಿಐ ಹೊಸ ನಿಯಮಗಳ ಪ್ರಕಾರ, ಯುಪಿಐ ಬಳಕೆದಾರರು, ತಮ್ಮ ಬ್ಯಾಂಕ್ ಮತ್ತು ಯುಪಿಐ ಅಪ್ಲಿಕೇಶನ್‌ಗಳಲ್ಲಿ ತಮ್ಮ ಮಾಹಿತಿಯನ್ನು ನವೀಕರಿಸುತ್ತಿರಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ನೀವು ಇತ್ತೀಚೆಗೆ ನಿಮ್ಮ ಸಂಖ್ಯೆಯನ್ನು ಬದಲಾಯಿಸಿದ್ದರೆ, ಅದನ್ನು ತಕ್ಷಣವೇ ನಿಮ್ಮ ಬ್ಯಾಂಕ್ ಮತ್ತು ಯುಪಿಐ ಅಪ್ಲಿಕೇಶನ್‌ನಲ್ಲಿ ನವೀಕರಿಸಬೇಕು. ಯುಪಿಐ ಅಪ್ಲಿಕೇಶನ್‌ಗಳಿಂದ ಬರುವ ಯಾವುದೇ ನವೀಕರಣಗಳು ಅಥವಾ ಅಧಿಸೂಚನೆಗಳನ್ನು ನಿರ್ಲಕ್ಷಿಸಬಾರದು. ಏಪ್ರಿಲ್ ಒಂದರಿಂದ ಯುಪಿಐ ಹಸ್ತಾಂತರ ನಿಯಮದಲ್ಲಿಯೂ ಬದಲಾವಣೆ ಆಗಲಿದೆ. ನೀವು ಬ್ಯಾಂಕ್ ನಿಂದ ಯುಪಿಐ ವಾಲೆಟ್ ಗೆ ಹಾಕಿದ್ದ ಹಣವನ್ನು ಅದೇ ಬ್ಯಾಂಕ್ ಖಾತೆಗೆ ವಾಪಸ್ ಜಮಾ ಮಾಡಬಹುದು.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ