
ನವದೆಹಲಿ(ಜ.02): 2021ರ ಜನವರಿ 1ರಿಂದ ಗೂಗಲ್ ಪೇ, ಪೇಟಿಎಂ ಮುಂತಾದ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವ ವ್ಯವಹಾರಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸ್ಪಷ್ಟನೆ ನೀಡಿದೆ.
ನೋ ಗೂಗಲ್ ಪೇ, ನೋ ಫೋನ್ ಪೇ ಡೈರೆಕ್ಟ್ ಪಾಕೆಟ್‌ಗೆ: ಲಂಚ ಪಡೆದ ಪೊಲೀಸ್ ಫುಲ್ 'ಫೇಮಸ್'!
ಜ.1ರಿಂದ ಮೊಬೈಲ್ ವ್ಯಾಲೆಟ್‌ಗಳ ಮೂಲಕ ಮಾಡುವ ಹಣದ ಪಾವತಿಯೇ ಮೊದಲಾದ ಯುಪಿಐ ಸೇವೆಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಎನ್‌ಪಿಸಿಐ, ಜನರು ಯಾವುದೇ ಶುಲ್ಕ ಪಾವತಿಸದೆ ಈ ಹಿಂದಿನಂತೆಯೇ ಯುಪಿಐ ವ್ಯವಹಾರಗಳನ್ನು ಉಚಿತವಾಗಿ ನಡೆಸಬಹುದು. ಸುಳ್ಳುಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿದೆ.
2008ರಲ್ಲಿ ಆರಂಭವಾದ ಸರ್ಕಾರಿ ಸ್ವಾಮ್ಯದ ಎನ್‌ಪಿಸಿಐ ನಮ್ಮ ದೇಶದಲ್ಲಿ ಹಣ ವರ್ಗಾವಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ರುಪೇ ಕಾರ್ಡ್, ಐಎಂಪಿಎಸ್, ಯುಪಿಐ, ಭೀಮ್, ಭೀಮ್ ಆಧಾರ್, ಫಾಸ್ಟಾಗ್, ಭಾರ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.