7 ರಾಜ್ಯಗಳಲ್ಲಿ ಜನಸಂಖ್ಯೆಗಿಂತ ಆಧಾರ್‌ ಕಾರ್ಡುಗಳೇ ಹೆಚ್ಚು!

By Kannadaprabha NewsFirst Published Feb 7, 2020, 10:43 AM IST
Highlights

7 ರಾಜ್ಯಗಳಲ್ಲಿ ಜನಸಂಖ್ಯೆಗಿಂತ ಹೆಚ್ಚು ಜನರ ಬಳಿ ಆಧಾರ್‌!| ಆಧಾರ್‌ ಕಾರ್ಡ್‌ ಹೊಂದಿದವರ ಅಧಿಕ ಮರಣ ಪ್ರಾಯಶಃ ಕಾರಣವಲ್ಲ

ನವದೆಹಲಿ[ಫೆ.07]: ದೇಶದ 7 ರಾಜ್ಯಗಳಲ್ಲಿ ಅಂದಾಜು ಜನಸಂಖ್ಯೆಗಿಂತ ಹೆಚ್ಚು ಮಂದಿಗೆ ಆಧಾರ್‌ ಕಾರ್ಡ್‌ ವಿತರಣೆಯಾಗಿದೆ ಎಂಬ ಅಚ್ಚರಿಯ ಮಾಹಿತಿಯನ್ನು ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದೆ.

2019ರ ಡಿ.31ಕ್ಕೆ ಅನುಗುಣವಾಗಿ ಏಳು ರಾಜ್ಯಗಳಲ್ಲಿ ಅಂದಾಜು ಜನಸಂಖ್ಯೆ ಎಷ್ಟಿರಬೇಕೋ, ಅದಕ್ಕಿಂತ ಹೆಚ್ಚಿನ ಆಧಾರ್‌ ಬಳಕೆದಾರರು ಇದ್ದಾರೆ. ಇದಕ್ಕೆ ಆಧಾರ್‌ ಕಾರ್ಡ್‌ ಹೊಂದಿದವರ ಅಧಿಕ ಮರಣ ಪ್ರಾಯಶಃ ಕಾರಣವಲ್ಲ.

ಜನಸಂಖ್ಯೆ ಅಂದಾಜಿನಲ್ಲೇ ಆಗಿರುವ ಲೋಪ ಹಾಗೂ ಜನರ ವಲಸೆ ಕಾರಣ ಇದ್ದಿರಬಹುದು ಎಂದು ರಾಜ್ಯಸಭೆಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಸಂಜಯ ಧೋತ್ರೆ ತಿಳಿಸಿದ್ದಾರೆ.

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!