ಅಂಬಾನಿ, ಅದಾನಿ ಮಾತ್ರವಲ್ಲ, ಭಾರತದಲ್ಲಿದ್ದಾರೆ 169 ಬಿಲಿಯನೇರ್ಸ್; ಇವರೆಲ್ಲ ರಾಶಿ ರಾಶಿ ಸಂಪತ್ತಿನ ಒಡೆಯರು

By Suvarna News  |  First Published Dec 6, 2023, 2:22 PM IST

ಭಾರತದಲ್ಲಿ ಶ್ರೀಮಂತರು ಎಂದ ತಕ್ಷಣ ನೆನಪಾಗೋದು ಅಂಬಾನಿ, ಅದಾನಿ. ಆದರೆ, ಇವರಿಬ್ಬರಷ್ಟೇ ಅಲ್ಲ, ಇಂಥ 169 ಮಂದಿ ಶ್ರೀಮಂತರು ಭಾರತದಲ್ಲಿದ್ದಾರೆ. ಇವರೆಲ್ಲ ಫೋರ್ಬ್ಸ್ 2023ನೇ ಸಾಲಿನ ವಿಶ್ವದ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಕೂಡ ಪಡೆದಿದ್ದಾರೆ. 
 


Business Desk: ಭಾರತದ ಬಿಲಿಯನೇರ್ ಉದ್ಯಮಿಗಳು ಎಂದ ತಕ್ಷಣ ನೆನಪಿಗೆ ಬರೋದು ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ. ಆದರೆ, ಭಾರತದಲ್ಲಿ ಇವರಿಬ್ಬರೇ ಬಿಲಿಯನೇರ್ ಗಳು ಅಲ್ಲ. ಒಟ್ಟು  169 ಮಂದಿ ಬಿಲಿಯನೇರ್ ಗಳು ಭಾರತದಲ್ಲಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಫೋರ್ಬ್ಸ್ 2023ನೇ ಸಾಲಿನ ವಿಶ್ವದ ಬಿಲಿಯನೇರ್ ಪಟ್ಟಿಯಲ್ಲಿ 169 ಮಂದಿ ಭಾರತೀಯರು ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಈ ಪಟ್ಟಿಯಲ್ಲಿ 166 ಮಂದಿ ಇದ್ದರು, ಈ ವರ್ಷ ಮೂವರು ಹೆಚ್ಚಾಗಿದ್ದಾರೆ. ಇನ್ನು ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಿರೀಕ್ಷೆಯಂತೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮೊದಲ ಸ್ಥಾ ಗಳಿಸಿದ್ದಾರೆ. ನಂತರದ ಎರಡು ಹಾಗೂ ಮೂರನೇ ಸ್ಥಾನಗಳಲ್ಲಿ ಕ್ರಮವಾಗಿ ಗೌತಮ್ ಅದಾನಿ ಹಾಗೂ ಸೈರಸ್ ಪೂನಾವಾಲಾ ಇದ್ದಾರೆ. ಹಾಗಾದ್ರೆ ಇವರನ್ನು ಬಿಟ್ಟು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಬಿಲಿಯನೇರ್ ಗಳು ಯಾರು? ಅವರ ಸಂಪತ್ತು ಎಷ್ಟಿದೆ? ಇಲ್ಲಿದೆ ಮಾಹಿತಿ.

1.ಮುಖೇಶ್ ಅಂಬಾನಿ: ಫೋರ್ಬ್ಸ್ ಬಿಲಿಯನೇರ್ ಪಟ್ಟಿ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತೊಮ್ಮೆ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಬಿಲಿಯನೇರ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಅಂಬಾನಿ, ಜಗತ್ತಿನ ಬಿಲಿಯನೇರ್ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದ್ದಾರೆ. ಮುಖೇಶ್ ಅಂಬಾನಿ ಅವರ ನಿವ್ವಳ ಸಂಪತ್ತು 95.3 ಬಿಲಿಯನ್ ಡಾಲರ್.

Tap to resize

Latest Videos

ನಿಮಗೆ ಈ 7 ಜನಪ್ರಿಯ ಬ್ರ್ಯಾಂಡ್ ಗಳು ಪರಿಚಿತವಿರಬಹುದು, ಆದ್ರೆ ಇವುಗಳ ಮಾಲೀಕ ಮುಖೇಶ್ ಅಂಬಾನಿ ಅನ್ನೋದು ಗೊತ್ತಾ?

2.ಗೌತಮ್ ಅದಾನಿ: ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಭಾರತದ ಬಿಲಿಯನೇರ್ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. 75.9 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಅದಾನಿ ಜಗತ್ತಿ ಬಿಲಿಯನೇರ್ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಪ್ರಾರಂಭದಲ್ಲಿ ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಆದರೆ, ಹಿಂಡನ್ ಬರ್ಗ್ ವರದಿ ಬಳಿಕ ಅದಾನಿ ಸಂಪತ್ತಿನಲ್ಲಿ ಸಾಕಷ್ಟು ಇಳಿಕೆ ಕಂಡುಬಂದಿತ್ತು.

3.ಶಿವ್ ನಡಾರ್ : ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಶಿವ್ ನಡಾರ್ ಮೂರನೇ ಸ್ಥಾನದಲ್ಲಿದ್ದಾರೆ. ಎಚ್ ಸಿಎಲ್ ಟೆಕ್ನಾಲಜೀಸ್ ಮುಖ್ಯಸ್ಥರಾಗಿರುವ ಶಿವ ನಡಾರ್ ಜಾಗತಿಕ ಪಟ್ಟಿಯಲ್ಲಿ 48ನೇ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಸಂಪತ್ತು 30.2 ಬಿಲಿಯನ್ ಡಾಲರ್.

4.ಸಾವಿತ್ರಿ ಜಿಂದಾಲ್ : ಜಿಂದಾಲ್ ಗ್ರೂಪ್ ಮುಖ್ಯಸ್ಥೆ ಸಾವಿತ್ರಿ ಜಿಂದಾಲ್ ಅವರು ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಇವರು 25.3 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದಾರೆ.

5.ಸೈರಸ್ ಪೂನವಾಲಾ:  ಸೀರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ ಸೈರಸ್ ಪೂನವಾಲಾ ಗ್ರೂಪ್ ಮುಖ್ಯಸ್ಥರಾಗಿರುವ ಪೂನವಾಲಾ ಅವರು ಭಾರತದ ನಾಲ್ಕನೇ ಶ್ರೀಮಂತ ಉದ್ಯಮಿ. 22.3ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿರುವ ಸೈರಸ್ ಪೂನವಾಲಾ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 75ನೇ ಸ್ಥಾನದಲ್ಲಿದ್ದಾರೆ.

6.ದಿಲೀಪ್ ಸಾಂಘ್ವಿ: ಸನ್ ಫಾರ್ಮಾ ಇಂಡಸ್ಟ್ರೀಸ್ ಲಿಮಿಟೆಡ್ ಸ್ಥಾಪಕರಾಗಿರುವ ಇವರ ನಿವ್ವಳ ಸಂಪತ್ತು 20.6 ಬಿಲಿಯನ್ ಡಾಲರ್. ದಿಲೀಪ್ ಸಾಂಘ್ವಿ ಭಾರತದ 5ನೇ ಶ್ರೀಮಂತ ಉದ್ಯಮಿ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಇವರು  86ನೇ ಸ್ಥಾನದಲ್ಲಿದ್ದಾರೆ.

7.ಕುಮಾರ್ ಬಿರ್ಲಾ: ಆದಿತ್ಯ ಬಿರ್ಲಾ ಗ್ರೂಪ್ ಮುಖ್ಯಸ್ಥ ಕುಮಾರ್ ಬಿರ್ಲಾ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಇವರು18.6 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದಾರೆ. 

ಒಂದೇ ದಿನದಲ್ಲಿ 5 ಲಕ್ಷ ಕೋಟಿ ಹೆಚ್ಚಾದ ಷೇರುಪೇಟೆ ಹೂಡಿಕೆದಾರರ ಸಂಪತ್ತು: ಅದೃಷ್ಟ ಅಂದ್ರೆ ಇದಪ್ಪಾ!

8.ರಾಧಾಕಿಶಾನ್  ದಮಾನಿ: ಅವೆನ್ಯೂ ಸೂಪರ್ ಮಾರ್ಕೆಟ್  ಸ್ಥಾಪಕ ರಾಧಾಕಿಶಾನ್  ದಮಾನಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. 17.9 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿರುವ ಇವರು ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 99ನೇ ಸ್ಥಾನದಲ್ಲಿದ್ದಾರೆ.

9.ಲಕ್ಷ್ಮೀ ಮಿತ್ತಲ್ : ಅರ್ಸೆಲ್ ಮಿತ್ತಲ್ ಗ್ರೂಪ್ ಮುಖ್ಯಸ್ಥ ಲಕ್ಷ್ಮೀ ಮಿತ್ತಲ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಸಂಪತ್ತು 16.3 ಬಿಲಿಯನ್ ಡಾಲರ್.

10.ಕುಶಲ್ ಪಲ್ ಸಿಂಗ್ : ಭಾರತದ ಅತೀದೊಡ್ಡ ಲಿಸ್ಟೆಡ್ ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್ ಎಫ್ ಲಿಮಿಟೆಡ್  (DLF) ಮುಖ್ಯಸ್ಥ ಕುಶಲ್ ಪಲ್ ಸಿಂಗ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. 

click me!