Budget 2025: 12.75 ಲಕ್ಷದವರೆಗೆ ಆದಾಯಕ್ಕೆ ತೆರಿಗೆ ಇಲ್ಲ, 1 ಸಾವಿರ ಹೆಚ್ಚಾದ್ರೂ 60 ಸಾವಿರ ಟ್ಯಾಕ್ಸ್‌ ಕಟ್ಟೋದು ತಪ್ಪಿದ್ದಲ್ಲ!

Published : Feb 01, 2025, 03:08 PM ISTUpdated : Feb 01, 2025, 03:09 PM IST
Budget 2025: 12.75 ಲಕ್ಷದವರೆಗೆ ಆದಾಯಕ್ಕೆ ತೆರಿಗೆ ಇಲ್ಲ, 1 ಸಾವಿರ ಹೆಚ್ಚಾದ್ರೂ 60 ಸಾವಿರ ಟ್ಯಾಕ್ಸ್‌ ಕಟ್ಟೋದು ತಪ್ಪಿದ್ದಲ್ಲ!

ಸಾರಾಂಶ

ಹೊಸ ತೆರಿಗೆ ಪದ್ಧತಿಯಲ್ಲಿ ರಿಬೇಟ್‌ ಮಿತಿಯನ್ನು 7 ಲಕ್ಷದಿಂದ 12 ಲಕ್ಷಕ್ಕೆ ಹೆಚ್ಚಿಸಲಾಗಿದೆ. 12.75 ಲಕ್ಷ ರೂ. ವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿಯೂ ಬದಲಾವಣೆಗಳನ್ನು ಘೋಷಿಸಲಾಗಿದೆ.

ನವದೆಹಲಿ (ಫೆ.1): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಮ ವರ್ಗದವರಿಗೆ ದೊಡ್ಡ ರಿಲೀಫ್‌ ಮಾಡಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ ಈವರೆಗೂ ಇದ್ದ ಟ್ಯಾಕ್ಸ್‌ ರಿಬೇಟ್‌ ಲಿಮಿಟ್‌ಅನ್ನು 7 ಲಕ್ಷದಿಂದ 12 ಲಕ್ಷ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಇದರರ್ಥ ನೀವು ವಾರ್ಷಿಕವಾಗಿ 12 ಲಕ್ಷ ಹಾಗೂ 75 ಸಾವಿರ ರೂಪಾಯಿಯ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೇರಿಸಿ, 12.75 ಲಕ್ಷ ರೂಪಾಯಿಗೆ ಯಾವುದೇ ಟ್ಯಾಕ್ಸ್‌ ಕಟ್ಟುವಂತಿಲ್ಲ. ಹಾಗೇನಾದರೂ ನಿಮ್ಮ ವಾರ್ಷಿಕವಾಗಿ 12.76 ಲಕ್ಷ ರೂಪಾಯಿ ಆಗಿದ್ದಲ್ಲಿ, ಬರೀ ಒಂದು ಸಾವಿರ ರೂಪಾಯಿಗೆ ನೀವು ಸರ್ಕಾರಕ್ಕೆ 62 ಸಾವಿರ ಟ್ಯಾಕ್ಸ್ ಕಟ್ಟುವ ಪ್ರಮೇಯ ಎದುರಾಗಲಿದೆ.

ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷದವರೆಗೆ ರಿಬೇಟ್‌ ಘೋಷಣೆ ಮಾಡಲಾಗಿದೆ. ಅದರೊಂದಿಗೆ ಈಗಾಗಲೇ 75 ಸಾವಿರದ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಜಾರಿಯಲ್ಲಿದೆ. ನಿರ್ಮಲಾ ಸೀತಾರಾಮನ್‌ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಗಳನ್ನು ಘೋಷಣೆ ಮಾಡಿದ್ದಾರೆ. ಅಂದರೆ ವರ್ಷಕ್ಕೆ ರೂ. 12.75 ಕ್ಕಿಂತ ಹೆಚ್ಚು ಆದಾಯ ಗಳಿಸುವವರಿಗೆ ಹೊಸ ತೆರಿಗೆ ಸ್ಲ್ಯಾಬ್‌ಗಳು ಅನ್ವಯವಾಗುತ್ತವೆ. ಹಣಕಾಸು ಸಚಿವರು ತೆರಿಗೆ ರಿಯಾಯಿತಿ ಮಿತಿಯನ್ನು ಹೆಚ್ಚಿಸಿದ್ದಾರೆಯೇ ಹೊರತು ಮೂಲ ವಿನಾಯಿತಿಯನ್ನು ಅಲ್ಲ ಅನ್ನೋದು ಗಮನಿಸಬೇಕಾದ ಅಂಶ.

ನನ್‌ಗಿಯಾ ಆಂಡರ್ನಸ್‌ ಇಂಡಿಯಾದ ನಿರ್ದೇಶನ ನೀತು ಬ್ರಹ್ಮ ಈ ಬಗ್ಗೆ ಮಾತನಾಡಿದ್ದು, 'ಟ್ಯಾಕ್ಸ್ ರಿಬೇಟ್‌ ಘೋಷಣೆ ಮಾಡಿರುವ ಕಾರಣ, ಒಬ್ಬ ವ್ಯಕ್ತಿ ವಾರ್ಷಿಕವಾಗಿ 12 ಲಕ್ಷ ರೂಪಾಯಿವರೆಗೆ ಗಳಿಸುತ್ತಿದ್ದಲ್ಲಿ ಅವರ ಟ್ಯಾಕ್ಸೇಬಲ್‌ ಆದಾಯ ಶೂನ್ಯವಾಗುತ್ತದೆ. ಆದರೆ, ಇದು ಮೂಲ ವಿನಾಯಿತಿ ಅಲ್ಲ ಅನ್ನೋದು ಗಮನಿಸಬೇಕು. ಹಾಗೇನಾದರೂ ನಿಮ್ಮ ವೇತನ 12 ಲಕ್ಷಕ್ಕೂ ಅಧಿಕವಾದಲ್ಲಿ, ನಿಮ್ಮ ಪೂರ್ಣ ಆದಾಯಕ್ಕೆ ಟ್ಯಾಕ್ಸ್‌ ಕಟ್ಟಬೇಕಾಗುತ್ತದೆ' ಎಂದಿದ್ದಾರೆ.

ಹೊಸ ಬದಲಾಣೆಯ ಪ್ರಕಾರ, ವಾರ್ಷಿಕವಾಗಿ 12 ಲಕ್ಷ ವೇತನ ಪಡೆಯುವವರಿಗೆ 4 ಲಕ್ಷದವರೆಗೆ ಯಾವುದೇ ರೀತಿಯ ಟ್ಯಾಕ್ಸ್‌ ಇರೋದಿಲ್ಲ. ಇವರು ಪಡೆಯುವ 4 ರಿಂದ 8 ಲಕ್ಷದವರೆಗಿನ ಟ್ಯಾಕ್ಸ್‌ಗೆ ಶೇ. 5 ರಷ್ಟು, 8 ರಿಂದ 12 ಲಕ್ಷದವರೆಗಿನ ಆದಾಯಕ್ಕೆ ಶೇ. 15 ರಷ್ಟು ಹಾಗೂ 16 ರಿಂದ 20 ಲಕ್ಷದವರೆಗಿನ ಆದಾಯಕ್ಕೆ ಶೇ. 20ರಂತೆ, 20-24 ಲಕ್ಷಕ್ಕೆ ಶೇ.25ರಂತೆ ಹಾಗೂ 24 ಲಕ್ಷಕ್ಕಿಂತ ಹೆಚ್ಚಿನ ವೇತನ ಇದ್ದವರು ಶೇ.30ರಂತೆ ತೆರಿಗೆ ಕಟ್ಟಬೇಕಿದೆ.

ಹಾಗೇನಾದರೂ ಒಬ್ಬ ವ್ಯಕ್ತಿಯ ವೇತನ ಒಂದು ವರ್ಷದಲ್ಲಿ 12.76ಲಕ್ಷ ಅಥವಾ 12.80 ಲಕ್ಷ ರೂಪಾಯಿ ಆದಲ್ಲಿ ಕಳೆದ ವರ್ಷ ಆತ 80 ಸಾವಿರ ಟ್ಯಾಕ್ಸ್‌ ಕಟ್ಟಬೇಕಿತ್ತು. ಮುಂದಿನ ವರ್ಷದಿಂದ ಆತ ಕಟ್ಟಬೇಕಾಗಿರುವ ಟ್ಯಾಕ್ಸ್‌  60 ಸಾವಿರಕ್ಕೆ ಇಳಿಯಲಿದೆ. ಇದಕ್ಕೆ ಕಾರಣವಾಗೋದು ಆದಾಯ ತೆರಿಗೆ ಇಲಾಖೆಯ ತ್ರೀಶೋಲ್ಡ್‌ ನಿಯಮ.

Budget 2025: ಟೆಲಿಕಾಂ & ಐಟಿ ಸೆಕ್ಟರ್‌ಗೆ 95,298 ಕೋಟಿ ಮೀಸಲಿಟ್ಟ ಸರ್ಕಾರ

ಮತ್ತಷ್ಟು ತರ್ಕಬದ್ಧಗೊಳಿಸಲಾದ ಈ ಸ್ಲ್ಯಾಬ್‌ಗಳು, ಹೊಸ ವ್ಯವಸ್ಥೆಯಡಿಯಲ್ಲಿ ಬರುವ ಮತ್ತು ವಾರ್ಷಿಕ ಆದಾಯ ರೂ. 12.75 ಲಕ್ಷಕ್ಕಿಂತ ಹೆಚ್ಚಿರುವವರ ಕೈಯಲ್ಲಿ ಹೆಚ್ಚಿನ  ಖರ್ಚಿನ ಆದಾಯವನ್ನು ಬಿಡುತ್ತವೆ.ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂಪಾಯಿ ಆದಾಯ ಹೊಂದಿರುವ ತೆರಿಗೆದಾರರು 80,000 ರೂಪಾಯಿ ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ. 18 ಲಕ್ಷ ರೂಪಾಯಿ ಆದಾಯ ಹೊಂದಿರುವ ವ್ಯಕ್ತಿಗಳು 70,000 ರೂಪಾಯಿ ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ. ವರ್ಷಕ್ಕೆ 25 ಲಕ್ಷ ರೂ.ಗಿಂತ ಹೆಚ್ಚು ಆದಾಯ ಗಳಿಸುವವರು ಈಗ 1.1 ಲಕ್ಷ ರೂ. (ತೆರಿಗೆ ಪಾವತಿಸಬೇಕಾದ ಮೊತ್ತದ 25%) ಉಳಿಸುತ್ತಾರೆ. ತೆರಿಗೆ ದರಗಳಲ್ಲಿನ ಬದಲಾವಣೆಗಳಿಂದಾಗಿ ಸರ್ಕಾರವು 1 ಲಕ್ಷ ಕೋಟಿ ರೂ. ನೇರ ತೆರಿಗೆಗಳನ್ನು ಮತ್ತು 2,600 ಕೋಟಿ ರೂ. ಪರೋಕ್ಷ ತೆರಿಗೆಗಳನ್ನು ತ್ಯಜಿಸುವುದಾಗಿ ಹಣಕಾಸು ಸಚಿವೆ ಸೀತಾರಾಮನ್ ತಮ್ಮ ಭಾಷಣದಲ್ಲಿ ಘೋಷಿಸಿದರು.

Union Budget 2025: ಮಧ್ಯಮ ವರ್ಗದವರಿಗೆ ಮೋದಿ ಬಂಪರ್ ಕೊಡುಗೆ,ಆದಾಯ ತೆರಿಗೆಯಲ್ಲಿನ ಮಹತ್ವದ ಬದಲಾವಣೆ ಬಗ್ಗೆ ತಿಳಿಯಿರಿ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!