ಶೀಘ್ರ​ದಲ್ಲೇ 2 ಸರ್ಕಾ​ರಿ ಬ್ಯಾಂಕ್​ ಖಾಸ​ಗೀ​ಕ​ರ​ಣ!

Published : Jun 08, 2021, 10:06 AM IST
ಶೀಘ್ರ​ದಲ್ಲೇ 2 ಸರ್ಕಾ​ರಿ ಬ್ಯಾಂಕ್​ ಖಾಸ​ಗೀ​ಕ​ರ​ಣ!

ಸಾರಾಂಶ

* ಸಾರ್ವ​ಜನಿಕ ವಲ​ಯದ ಬ್ಯಾಂಕು​ಗಳ ಖಾಸ​ಗೀ​ಕ​ರ​ಣ * ಶೀಘ್ರ​ದಲ್ಲೇ 2 ಸರ್ಕಾ​ರಿ ಬ್ಯಾಂಕು​ ಖಾಸ​ಗೀ​ಕ​ರ​ಣ * ಇಂಡಿ​ಯನ್‌ ಓವ​ರ್‌​ಸೀಸ್‌ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾಸಗಿ ತೆಕ್ಕೆ​ಗೆ

ನವ​ದೆ​ಹ​ಲಿ(ಜೂ.08): ಸಾರ್ವ​ಜನಿಕ ವಲ​ಯದ ಬ್ಯಾಂಕು​ಗಳ ಖಾಸ​ಗೀ​ಕ​ರ​ಣದ ಅಂಗ​ವಾಗಿ ಕೇಂದ್ರ ಸರ್ಕಾರ ಪ್ರಸಕ್ತ ಹಣ​ಕಾಸು ವರ್ಷ​ದಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಇಂಡಿ​ಯನ್‌ ಓವ​ರ್‌​ಸೀಸ್‌ ಬ್ಯಾಂಕು​ಗ​ಳನ್ನು ಶೀಘ್ರ​ದಲ್ಲೇ ಖಾಸ​ಗೀ​ಕ​ರ​ಣ​ಗೊ​ಳಿ​ಸಲು ಮುಂದಾ​ಗಿದೆ ಎಂದು ಮೂಲ​ಗಳು ತಿಳಿ​ಸಿವೆ.

ಬಂಡ​ವಾಳ ಹಿಂಪ​ಡೆ​ಯು​ವಿ​ಕೆಗೆ ಸಂಬಂಧಿ​ಸಿ​ದ ಕಾರ್ಯ​ದ​ರ್ಶಿ​ಗಳ ಸಮಿ​ತಿ ಈ ಹಣ​ಕಾಸು ವರ್ಷ​ದಲ್ಲಿ ಖಾಸ​ಗೀ​ಕ​ರ​ಣ​ಗೊ​ಳ್ಳ​ಬೇ​ಕಿ​ರುವ ಎರಡು ಬ್ಯಾಂಕು​ಗಳ ಹೆಸ​ರನ್ನು ಇತ್ತೀ​ಚೆಗೆ ಕೇಂದ್ರ ಸರ್ಕಾ​ರ​ಕ್ಕೆ ಶಿಫಾ​ರಸು ಮಾಡಿದೆ. ಈ ಪ್ರಸ್ತಾ​ವ​ನೆ​ಯನ್ನು ಹೂಡಿಕೆ ಹಾಗೂ ಸಾರ್ವ​ಜ​ನಿಕ ಆಸ್ತಿ ನಿರ್ವ​ಹಣಾ ಇಲಾಖೆ ಮತ್ತು ಹಣ​ಕಾಸು ಸೇವೆ​ಗಳ ಇಲಾಖೆ ಪರಿ​ಶೀ​ಲನೆ ನಡೆ​ಸ​ಲಿದ್ದು, ಬ್ಯಾಂಕು​ಗಳ ಖಾಸ​ಗೀ​ಕ​ರ​ಣಕ್ಕೆ ಅಗ​ತ್ಯ​ವಿ​ರುವ ಕಾನೂ​ನಾ​ತ್ಮ​ಕ ಬದ​ಲಾ​ವ​ಣೆಯ ಕುರಿ​ತಂತೆ ಚರ್ಚೆ ನಡೆ​ಸ​ಲಿ​ದೆ. ಸಂಪುಟ ಕಾರ್ಯ​ದರ್ಶಿ ನೇತೃ​ತ್ವದ ಸಮಿತಿ ಬ್ಯಾಂಕು​ಗಳ ಹೆಸ​ರನ್ನು ಅಂತಿ​ಮ​ಗೊ​ಳಿ​ಸಿ​ದ ಬಳಿಕ ಸಂಪುಟ ಸಭೆಯ ಅನು​ಮೋ​ದ​ನೆಗೆ ಕಳು​ಹಿ​ಸಿ​ಕೊ​ಡ​ಲಾ​ಗು​ತ್ತದೆ. ಆದಾ​ಯನ್ನು ಹೆಚ್ಚಿಸುವ ನಿಟ್ಟಿ​ನಿಂದ ಕೇಂದ್ರ ಸರ್ಕಾರ 4 ಮಧ್ಯಮ ಗಾತ್ರದ ಬ್ಯಾಂಕು​ಗ​ಳನ್ನು ಖಾಸ​ಗೀ​ಕ​ರ​ಣ ಮಾಡಲು ಉದ್ದೇ​ಶಿ​ಸಿ​ದೆ ಎಂದು ವರ​ದಿ​ಗಳು ತಿಳಿ​ಸಿವೆ.

ಕೇಂದ್ರ ಹಣ​ಕಾಸು ಸಚಿವೆ ನಿರ್ಮಲಾ ಸೀತಾ​ರಾ​ಮನ್‌ ಅವರು 2021-22ರ ಬಜೆ​ಟ್‌​ನಲ್ಲಿ ಸಾರ್ವ​ಜ​ನಿಕ ವಲ​ಯದ ಎರಡು ಬ್ಯಾಂಕು​ಗಳು ಮತ್ತು ಒಂದು ವಿಮಾ ಕಂಪ​ನಿ​ಯನ್ನು ಖಾಸ​ಗೀ​ಕ​ರ​ಣ​ಗೊ​ಳಿ​ಸ​ಲಾ​ಗು​ವುದು ಎಂದು ಪ್ರಕ​ಟಿ​ಸಿ​ದ್ದ​ರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!