
ಮುಂಬೈನ ಪ್ರಸಿದ್ಧ ಲಾಲ್ ಬಾಗ್ ಚಾ ರಾಜಾ ಗಣೇಶೋತ್ಸವಕ್ಕೆ ಇಂದು ತೆರೆ ಬೀಳಲಿದೆ. ಸೆಪ್ಟೆಂಬರ್ 14 ರಂದು ಪ್ರತಿಷ್ಟಾಪನೆಗೊಂಡಿದ್ದ ಗಣೇಶ ಮೂರ್ತಿಯ ವಿಸರ್ಜನೆ ಇಂದು ಅಂದ್ರೆ ಸೆಪ್ಟೆಂಬರ್ 25 ರಂದು ನಡೆಯಲಿದೆ. ವಿಸರ್ಜನೆಗೂ ಮುನ್ನ ಅನೇಕ ಸೆಲೆಬ್ರಿಟಿಗಳು ಇಲ್ಲಿಗೆ ಭೇಟಿ ನೀಡಿ ಗಣಪತಿ ದರ್ಶನ ಪಡೆಯುತ್ತಿದ್ದಾರೆ. ಅದ್ರಲ್ಲಿ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸೇರಿದ್ದಾರೆ.
ನಿನ್ನೆ ರಾತ್ರಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಬಪ್ಪಾ ಆಶೀರ್ವಾದ ಪಡೆಯಲು ಬಂದಿದ್ದರು. ಮುಖೇಶ್ ಅಂಬಾನಿ ತಮ್ಮ ಮೊಮ್ಮಗಳು ಆದ್ಯಾಳನ್ನು ಕರೆತಂದಿದ್ದರು. ಗಣಪತಿ ದರ್ಶನ ಪಡೆದ ನೀತಾ ಅಂಬಾನಿ, ಅಲ್ಲಿನ ಪ್ರಸಾದ ಮೋದಕ ತಿಂದಿದ್ದಾರೆ. ಆದ್ರೆ ಅವರ ಮೋದಕದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡ್ತಿದೆ. ನೀತಾ ಅಂಬಾನಿ, ಅವರಿಗೆ ಪ್ರಸಾದವಾಗಿ ನೀಡಿದ್ದ ಪೂರ್ತಿ ಮೋದಕ ತಿನ್ನಲಿಲ್ಲ. ಅವರು ಅರ್ಧ ಮೋದಕ ತಿಂದು ಮೊದಲು ತಮ್ಮ ಮೊಮ್ಮಗಳಿಗೆ ನೀಡಿದ್ದಾರೆ. ಆದ್ರೆ ಆದ್ಯಾ ಅದನ್ನು ನಿರಾಕರಿಸಿದ್ದಾಳೆ. ನಂತ್ರ ನೀತಾ ಅಂಬಾನಿ, ತಮ್ಮ ಸ್ಟಾಫ್ ಕರೆದು ಅವರ ಕೈಗೆ ಈ ಮೋದಕ ನೀಡಿದ್ದಾರೆ.
ನೀತಾ ಅಂಬಾನಿ ಅರ್ಧ ಮೋದಕವನ್ನು ಸ್ಟಾಫ್ ಗೆ ನೀಡಿದ್ದು ಈಗ ಚರ್ಚೆಯ ವಿಷ್ಯವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಬಳಕೆದಾರರು ಕಮೆಂಟ್ ಶುರು ಮಾಡಿದ್ದಾರೆ. ಅರ್ಧ ತಿಂದ ಮೋದಕವನ್ನು ಬೇರೆಯವರಿಗೆ ನೀಡುವ ಅಗತ್ಯವೇನಿತ್ತು? ಅವರು ಎಷ್ಟೇ ಶ್ರೀಮಂತರಾಗಿರಲಿ, ಹೀಗೆ ಮಾಡಬಾರದು, ತಿಂದ ಪ್ರಸಾದವನ್ನು ಕೈನಲ್ಲೇ ಇಟ್ಟುಕೊಳ್ಳಬಹುದಿತ್ತು, ಅದನ್ನು ಸ್ಟಾಫ್ ಕೈಗೆ ನೀಡುವ ಅಗತ್ಯ ಏನಿತ್ತು ಅಂತ ಬಳಕೆದಾರರು ಕೋಪ ವ್ಯಕ್ತಪಡಿಸಿದ್ದಾರೆ. ಅವರು ಹೆಚ್ಚಿನ ಡೊನೇಶನ್ ಕೊಟ್ಟಿರೋದ್ರಿಂದ ಗಣೇಶ ಅವರನ್ನು ಕ್ಷಮಿಸ್ತಾನೆ ಎನ್ನುವ ಕಮೆಂಟ್ ಗಳೂ ಬಂದಿವೆ.
ಸುಂದರ ಸೀರೆಯಲ್ಲಿ ಮಿಂಚಿದ ನೀತಾ
ಇನ್ನು ನೀತಾ ಅಂಬಾನಿ ಡ್ರೆಸ್ ಬಗ್ಗೆ ಹೇಳೋದಾದ್ರೆ ನೀತಾ ಅಂಬಾನಿ ಸೀರೆಯಲ್ಲಿ ಎಲ್ಲರ ಗಮನ ಸೆಳೆದರು. ಗುಲಾಬಿ ಮತ್ತು ಮೆರೂನ್ ಮುದ್ರಿತ ರೇಷ್ಮೆ ಸೀರೆಯನ್ನು ಧರಿಸಿದ್ದರು. ಸೀರೆಯ ಮೇಲಿನ ಸಾಂಪ್ರದಾಯಿಕ ವಿನ್ಯಾಸಗಳು ಮತ್ತು ಸುಂದರವಾದ ಬಾರ್ಡರ್ ಅವರ ಲುಕ್ ಗೆ ಮೆರಗು ನೀಡಿತ್ತು. ಎಂದಿನಂತೆ ತಮ್ಮ ನೋಟದಲ್ಲಿ ರಾಜಿಯಾಗದ ನೀತಾ ಅಂಬಾನಿ, ಸೀರೆಗೆ ಹೊಂದಿಕೆಯಾಗುವ ಜ್ಯುವೆಲರಿ ಧರಿಸಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.