ಏನಿದು ನಿರಾಮಯ ಆರೋಗ್ಯ ವಿಮಾ ಯೋಜನೆ? ಯಾರು ಇದರ ಪ್ರಯೋಜನ ಪಡೆಯಬಹುದು?

By Suvarna News  |  First Published Feb 21, 2024, 4:04 PM IST

ನಿರಾಮಯ ಆರೋಗ್ಯ ವಿಮಾ ಯೋಜನೆ ಅಂಗವೈಕಲ್ಯ ಹೊಂದಿರೋರಿಗೆ ವೈದ್ಯಕೀಯ  ವೆಚ್ಚಗಳನ್ನು ನಿಭಾಯಿಸಲು ನೆರವು ನೀಡುತ್ತದೆ. 
 


Business Desk: ಆರೋಗ್ಯ ವಿಮೆ ಪ್ರತಿಯೊಬ್ಬರಿಗೂ ಅವಶ್ಯಕ. ಅನಾರೋಗ್ಯ ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಇಂದು ವೈದ್ಯಕೀಯ ವೆಚ್ಚಗಳು ದುಬಾರಿಯಾಗಿರುವ ಕಾರಣ ಅನಾರೋಗ್ಯ ಕಾಡಿದರೆ ಅದು ಜೇಬಿಗೆ ಕೂಡ ಹೊರೆ. ಹೀಗಿರುವಾಗ ವಿಕಲಚೇತನರ ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು ನೆರವು ನೀಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ 'ನಿರಾಮಯ ಆರೋಗ್ಯ ವಿಮೆ' ಯೋಜನೆಯನ್ನು ಜಾರಿಗೆ ತಂದಿದೆ. ಇದು ಕೈಗೆಟುಕುವ ದರದಲ್ಲಿ ಸಿಗುವ ವಿಮಾ ಯೋಜನೆಯಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಟ್ರಸ್ಟ್ ಅನುಷ್ಠಾನಗೊಳಿಸುತ್ತದೆ. ಇದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ನಿರಾಮಯ ಯೋಜನೆಯ ಮುಖ್ಯ ಉದ್ದೇಶ ರಾಷ್ಟ್ರೀಯ ಟ್ರಸ್ಟ್ ಕಾಯ್ದೆ 1999 ಅಡಿಯಲ್ಲಿ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಯೋಗ್ಯ ದರದಲ್ಲಿ ಆರೋಗ್ಯ ವಿಮೆ ಒದಗಿಸೋದು. ಈ ಯೋಜನೆ ವಾರ್ಷಿಕ 1ಲಕ್ಷ ರೂ. ತನಕ ಮರುಪಾವತಿ ಆಧಾರದಲ್ಲಿ ಆರೋಗ್ಯ ವಿಮೆ ಕವರ್ ಪಡೆಯಲು ನೆರವು ನೀಡುತ್ತದೆ. 

ಈ ಯೋಜನೆ ವಿಶೇಷತೆಗಳೇನು?
*ಕೈಗೆಟುಕುವ ದರದಲ್ಲಿ ಸಿಗೋ ಸರಳ ಯೋಜನೆಯಾಗಿದೆ. ಕೇವಲ ಒಂದು ಸ್ಥಿರ ಪ್ರೀಮಿಯಂ ಅನ್ನು ವಯಸ್ಸಿನ ಮಿತಿಯಿಲ್ಲದೆ ಪಾವತಿಸಬಹುದು.
*ಎಲ್ಲರಿಗೂ ಸಮಾನವಾದ ಕವರೇಜ್ ಸಿಗಲಿದೆ. ನಿಮ್ಮ ಅಂಗವೈಕಲ್ಯವನ್ನು ಪರಿಗಣಿಸದೆ ನಿಮಗೆ ಅದೇ ಮಟ್ಟದ ಆರೋಗ್ಯಸೇವಾ ಬೆಂಬಲ ಸಿಗಲಿದೆ.
*ಹಣಕಾಸಿನ ನೆರವು ಸಿಗಲಿದೆ. ಮರುಪಾವತಿ ಆಧಾರದಲ್ಲಿ ವಿಮಾ ಕವರೇಜ್ ಸಿಗಲಿದೆ.
*ಅನೇಕ ವಿಧದ ಸೇವೆಗಳು ಸಿಗಲಿವೆ. ನಿಯಮಿತ ಚೆಕ್ ಅಪ್, ಆಸ್ಪತ್ರೆ ದಾಖಲೀಕರಣ, ಥೆರಪಿಗಳು, ಸರಿಪಡಿಸುವ ಸರ್ಜರಿ ಹಾಗೂ ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ವಿಧದ ಸೇವೆಗಳು ಸಿಗಲಿವೆ.
*ಯಾವುದೇ ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ. ವಿಮೆ ಮಾಡಿದ ತಕ್ಷಣದಿಂದಲೇ ಕವರೇಜ್ ಪ್ರಾರಂಭವಾಗುತ್ತದೆ. ಯಾವುದೇ ಪೂರ್ವಭಾವಿ ವಿಮಾ ವೈದ್ಯಕೀಯ ಪರೀಕ್ಷೆಗಳ ಅಗತ್ಯವಿಲ್ಲ.
*ನಿಮ್ಮ ಚಿಕಿತ್ಸೆಗೆ ಯಾವುದೇ ಆಸ್ಪತ್ರೆಯನ್ನು ಆಯ್ಕೆ ಮಾಡಿ. ಅದಕ್ಕೆ ಯಾವುದೇ ನಿರ್ಬಂಧಗಳಿಲ್ಲ.

Tap to resize

Latest Videos

ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಕಳೆದುಕೊಳ್ಳುವ ಭೀತಿಯಿಲ್ಲ,ಕೂತಲ್ಲೇ ತಿಂಗಳಿಗೆ 10 ಸಾವಿರ ಆದಾಯ ಗಳಿಸ್ಬಹುದು!

ಪ್ರಯೋಜನಗಳೇನು?
*ವಿವಿಧ ವೈದ್ಯಕೀಯ ವೆಚ್ಚಗಳಿಗೆ 1,00,000ರೂ. ತನಕ ಆರೋಗ್ಯ ವಿಮಾ ಕವರೇಜ್.
*ಔಷಧಗಳು, ರೋಗಪರೀಕ್ಷೆ,  ರೋಗಪತ್ತೆ ಪರೀಕ್ಷೆಗಳು ಇತ್ಯಾದಿ ಹೊರರೋಗಿ ವಿಭಾಗದ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ.
*ನಿಯಮಿತ ವೈದ್ಯಕೀಯ ಪರೀಕ್ಷೆಗಳ ವೆಚ್ಚ ಕೂಡ ಕವರ್ ಆಗುತ್ತದೆ.
*ಹಲ್ಲಿನ ಕೆಲವು ಚಿಕಿತ್ಸಾ ವೆಚ್ಚಗಳನ್ನು ಕೂಡ ಇದು ಕವರ್ ಮಾಡುತ್ತದೆ. 
*ಅಂಗವೈಕಲ್ಯ ಇನ್ನಷ್ಟು ಹೆಚ್ಚುವುದನ್ನು ತಪ್ಪಿಸುವ ಸರ್ಜರಿ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ.
*ಶಸ್ತ್ರಚಿಕಿತ್ಸೆರಹಿತ ಆಸ್ಪತ್ರೆ ದಾಖಲೀಕರಣ ವೆಚ್ಚವನ್ನು ಕವರ್ ಮಾಡುತ್ತದೆ.
*ಪರ್ಯಾಯ ಔಷಧಿಗಳ ವೆಚ್ಚವನ್ನು ಕೂಡ ಇದು ಕವರ್ ಮಾಡುತ್ತದೆ.
*ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಸಾರಿಗೆ ವೆಚ್ಚವನ್ನು ಕೂಡ ಇದು ಕವರ್ ಮಾಡುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?
ರಾಷ್ಟ್ರೀಯ ಟ್ರಸ್ಟ್ ಕಾಯ್ದೆ ಅಡಿಯಲ್ಲಿ ಬರುವ ಯಾವುದೇ ಒಂದು ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಈ ಆರೋಗ್ಯ ವಿಮೆಗೆ ಅರ್ಜಿ ಸಲ್ಲಿಸಬಹುದು. ಆಟಿಸಂ, ಸೆರೆಬ್ರಲ್ ಪಾಲ್ಸಿ, ಮಾನಸಿಕ ಅಸ್ವಸ್ಥತೆ, ಬಹುಅಂಗಾಂಗ ವೈಫಲ್ಯ ಹೊಂದಿರುವ ವ್ಯಕ್ತಿಗಳು ನಿರಾಮಯ ಆರೋಗ್ಯ ವಿಮೆ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ನೀವು ಎರಡು ಇಪಿಎಫ್ ಯುಎಎನ್ ಹೊಂದಿದ್ದೀರಾ? ಹಾಗಾದ್ರೆ ತಡಮಾಡದೆ ಈ ಕೆಲ್ಸ ಮಾಡಿ

ಅರ್ಜಿ ಸಲ್ಲಿಕೆ ಹೇಗೆ?
ನಿರಾಮಯ ಆರೋಗ್ಯ ವಿಮಗೆ ನೋಂದಣಿ ಮಾಡಿಸಲು ಇರುವ ಸಮೀಪದ ನೋಂದಣಿ ಸಂಸ್ಥೆಗೆ (RO)ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಒಮ್ಮೆ ನೋಂದಣಿ ಯಶಸ್ವಿಯಾದ ಬಳಿಕ ಆರೋಗ್ಯ ಐಡಿ ಸಂಖ್ಯೆ/ ಕಾರ್ಡ್ ಅನ್ನು ಫಲಾನುಭವಿಗೆ ನೀಡಲಾಗುತ್ತದೆ. 

 ನೋಂದಣಿ ಕೇಂದ್ರ ಪತ್ತೆ ಹಚ್ಚೋದು ಹೇಗೆ?
https://thenationaltrust.gov.in/content/registered_organization.php ಭೇಟಿ ನೀಡಿದರೆ ಅಲ್ಲಿ ಸಿಗುತ್ತದೆ. 
 

click me!