ಕೋಕಿಲಾಬೆನ್ ಅಂಬಾನಿ ಬಳಿಯಿದೆ ಶಾರ್ಕ್ ಟ್ಯಾಂಕ್ ಇಂಡಿಯಾದ ಎಲ್ಲ ತೀರ್ಪುಗಾರರನ್ನು ಖರೀದಿಸುವಷ್ಟು ಸಂಪತ್ತು!

By Suvarna News  |  First Published Mar 8, 2023, 4:38 PM IST

ಕೋಕಿಲಾಬೆನ್ ಅಂಬಾನಿ ಅವರು ಅಂಬಾನಿ ಕುಟುಂಬದ ಅತ್ಯಂತ ಪ್ರಭಾವಿ ವ್ಯಕ್ತಿ ಅನ್ನೋದು ತಿಳಿದಿರುವ ವಿಚಾರವೇ. ಆದ್ರೆ ಅವರ ಬಳಿ ಎಷ್ಟು ಸಂಪತ್ತಿದೆ ಗೊತ್ತಾ ನಿಮಗೆ? ಅವರ ಬಳಿಯಿರುವ ಸಂಪತ್ತಿನಿಂದ ಶಾರ್ಕ್ ಟ್ಯಾಂಕ್ ಇಂಡಿಯಾ ಟಿವಿ ಶೋನಲ್ಲಿ ತೀರ್ಪುಗಾರರಾಗಿರುವ ಎಲ್ಲ ಉದ್ಯಮಿಗಳನ್ನು ಒಂದೇ ಬಾರಿಗೆ ಖರೀದಿಸಬಹುದು.  ಶಾರ್ಕ್ ಟ್ಯಾಂಕ್ ಆಫ್ ಇಂಡಿಯಾದ ಎಲ್ಲ ತೀರ್ಪುಗಾರರ ಒಟ್ಟು ಸಂಪತ್ತು  5,285 ಕೋಟಿ ರೂ. ಕೋಕಿಲಾಬೆನ್ ಅವರ ಬಳಿ ಇದರ ಸರಿಸುಮಾರು ಮೂರು ಪಟ್ಟು ಸಂಪತ್ತಿದೆ. 


Business Desk: ಧೀರೂಭಾಯಿ ಅಂಬಾನಿ ಅವರ ಪತ್ನಿ ಕೋಕಿಲಾಬೆನ್ ಅಂಬಾನಿ ಕುಟುಂಬದ ಅತ್ಯಂತ ಪ್ರಭಾವಿ ವ್ಯಕ್ತಿ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಪುತ್ರರಾದ ಮುಖೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ನಡುವೆ ವೈಮನಸ್ಸು ಮೂಡಿದ ಅದನ್ನು ಬಗೆಹರಿಸಿದ್ದು ತಾಯಿ ಕೋಕಿಲಾ ಬೆನ್ ಅವರೇ. ತಾಯಿ ಮಾತಿನಂತೆ ಇಬ್ಬರೂ ಪುತ್ರರು ತಮ್ಮ ಪಾಲಿನ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗಲು ಒಪ್ಪಿಕೊಂಡಿದ್ದರು. ಇನ್ನು ಹಿರಿಯ ಪುತ್ರ ಮುಖೇಶ್ ಅಂಬಾನಿ ಅವರಿಗೆ ನೀತಾ ಅಂಬಾನಿಯೇ ಸರಿಯಾದ ಜೋಡಿ ಎಂದು ಆಯ್ಕೆ ಮಾಡಿದ್ದು ಕೂಡ ಕೋಕಿಲಾ ಬೆನ್ ಅವರೇ. ಇಂದಿಗೂ ಕೂಡ ಕೋಕಿಲಾ ಬೆನ್ ಹಾಗೂ ನೀತಾ ಅಂಬಾನಿ ನಡುವೆ ಉತ್ತಮ ಬಾಂಧವ್ಯವಿದೆ. ಇದೇ ಕಾರಣಕ್ಕೆ ಅವರು ಹಿರಿಯ ಪುತ್ರ ಮುಖೇಶ್ ಅಂಬಾನಿ ಕುಟುಂಬದ ಜೊತೆಗೆ ನೆಲೆಸಿದ್ದಾರೆ. ಇನ್ನು ಕೋಕಿಲಾ ಬೆನ್ ಅವರ ಸಂಪತ್ತಿನ ವಿಷಯಕ್ಕೆ ಬಂದರೆ ಅವರ ನಿವ್ವಳ ಸಂಪತ್ತು ಶಾರ್ಕ್ ಟ್ಯಾಕ್ ಇಂಡಿಯಾದ ಎಲ್ಲ ಶಾರ್ಕ್ ಗಳನ್ನು (ತೀರ್ಪುಗಾರರನ್ನು) ಖರೀದಿಸುವಷ್ಟಿದೆ. ಕೋಕಿಲ್ ಬೆನ್ ಅವರ ಸಂಪತ್ತನ್ನು ಶಾರ್ಕ್ ಟ್ಯಾಂಕ್ ಇಂಡಿಯಾದ ಶಾರ್ಕ್ ಗಳ ಸಂಪತ್ತಿನೊಂದಿಗೆ ಹೋಲಿಸುವ ಮುನ್ನ ಅವರ ಬಗ್ಗೆ ಬಹುತೇಕರಿಗೆ ತಿಳಿಯದ ಒಂದಿಷ್ಟು ಆಸಕ್ತಿಕರ ಸಂಗತಿಗಳ ಬಗ್ಗೆ ತಿಳಿಯೋಣ ಬನ್ನಿ.

ಕೋಕಿಲಾಬೆನ್ ಅವರು ಶುದ್ಧ ಸಸ್ಯಹಾರಿ. ಅಲ್ಲದೆ, ತಮ್ಮ ಊಟದ ಬಗ್ಗೆ ಅವರು ಸಾಕಷ್ಟು ಕಾಳಜಿ ವಹಿಸುತ್ತಾರೆ ಕೂಡ. ಇಂಥದ್ದೇ ಆಹಾರ ಸೇವಿಸಬೇಕು, ಆಹಾರ ಯಾವಾಗ ಸೇವಿಸಬೇಕು ಎಂಬೆಲ್ಲ ವಿಚಾರಗಳಲ್ಲಿ ಅವರು ಸ್ಪಷ್ಟತೆ ಹೊಂದಿದ್ದಾರೆ ಅಂತೆ. ಇನ್ನು ಈ ಇಳಿ ವಯಸ್ಸಿನಲ್ಲಿ ಕೂಡ ಕೋಕಿಲಾ ಬೆನ್ ಅವರಿಗೆ ದೂರದ ಸ್ಥಳಗಳಿಗೆ ಪ್ರಯಾಣ ಮಾಡೋದೆಂದ್ರೆ ಅಚ್ಚುಮೆಚ್ಚು. ಐಷಾರಾಮಿ ಕಾರುಗಳಲ್ಲಿ ದೂರದ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರಂತೆ. ಅಂಬಾನಿ ಕುಟುಂಬದಲ್ಲಿ ಕೋಕಿಲಾ ಬೆನ್ ಅತ್ಯಂತ ಪ್ರಭಾವಿ ವ್ಯಕ್ತಿ ಕೂಡ ಹೌದು. ಇವರ ಮಾತಿಗೆ ಕುಟುಂಬದ ಸದಸ್ಯರು ತುಂಬಾನೇ ಬೆಲೆ ನೀಡುತ್ತಾರೆ. ಕೋಕಿಲಾಬೆನ್ ಅವರಿಗೆ ಗುಲಾಬಿ ಬಣ್ಣವೆಂದ್ರೆ ಅಚ್ಚುಮೆಚ್ಚು. ಇದೇ ಕಾರಣಕ್ಕೆ ಗುಲಾಬಿ ಬಣ್ಣದ ಸೀರೆಗಳನ್ನು ಹೆಚ್ಚಾಗಿ ಧರಿಸಲು ಇಷ್ಟಪಡುತ್ತಾರೆ. 

Tap to resize

Latest Videos

ಎಂಎನ್‌ಸಿ ಕಂಪನಿಯಲ್ಲೂ ಇಷ್ಟು ಸ್ಯಾಲರಿ ಸಿಗಲ್ಲ.. ಮುಕೇಶ್‌ ಅಂಬಾನಿ ಡ್ರೈವರ್‌ ಸ್ಯಾಲರಿ ಡಿಟೇಲ್ಸ್‌!

ಹಿರಿಯ ಪುತ್ರ ಮುಖೇಶ್ ಅಂಬಾನಿ ಅವರಿಗೆ ತಾನು ಮೆಚ್ಚಿದ ಹುಡುಗಿಯ ಜೊತೆಗೇ ಕೋಕಿಲಾಬೆನ್ ಮದುವೆ ಮಾಡಿಸಿದ್ದರು. ನೀತಾ ಅಂಬಾನಿ ಅವರಿಗೆ ನೃತ್ಯ ಮತ್ತು ಸಂಗೀತದಲ್ಲಿ ತುಂಬಾ ಆಸಕ್ತಿಯಿತ್ತು. ನವರಾತ್ರಿ ಸಂದರ್ಭದಲ್ಲಿ ಮುಂಬೈ ಬಿರ್ಲಾ ಮಾತೋಶ್ರೀನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೀತಾ ನೃತ್ಯ ಪ್ರದರ್ಶನ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಧೀರೂಭಾಯಿ ಅಂಬಾನಿ ಹಾಗೂ ಕೋಕಿಲಾಬೆನ್ ಕೂಡ ಉಪಸ್ಥಿತರಿದ್ದರು. ನೀತಾ ಅವರ ನೃತ್ಯವನ್ನು ನೋಡಿ ಇಷ್ಟಪಟ್ಟ ಕೋಕಿಲಾಬೆನ್ ಅವರು ತಮ್ಮ ಪುತ್ರನಿಗೆ ಈಕೆ ಸರಿಯಾದ ಜೋಡಿ ಎಂದು ಭಾವಿಸಿದ್ದರು. ಆ ಬಳಿಕ ನೀತಾ ಕುಟುಂಬದ ಜೊತೆಗೆ ಮಾತುಕತೆ ನಡೆಸಿ ಇಬ್ಬರ ಮದುವೆ ನಡೆಸಿದ್ದರು.

ಮುಖೇಶ್ ಅಂಬಾನಿ ಮಕ್ಕಳಿಗೆ ಬಾಲ್ಯದಲ್ಲಿ ಸಿಗುತ್ತಿದ್ದ ಪಾಕೆಟ್ ಮನಿ ವಾರಕ್ಕೆ 5ರೂ. ಅಷ್ಟೇ!

ಕೋಕಿಲಾಬೆನ್ ಸಂಪತ್ತು ಶಾರ್ಕ್ ಟ್ಯಾಂಕ್ ತೀರ್ಪುಗಾರರ ಒಟ್ಟು ಸಂಪತ್ತಿಗಿಂತ ಹೆಚ್ಚು
ವರದಿಗಳ ಪ್ರಕಾರ ಕೋಕಿಲಾಬೆನ್ ಅವರ ನಿವ್ವಳ ಸಂಪತ್ತು 18,000 ಕೋಟಿ ರೂ. ಹೀಗಿರುವಾಗ ಶಾರ್ಕ್ ಟ್ಯಾಂಕ್ ಆಫ್ ಇಂಡಿಯಾದ ಎಲ್ಲ ತೀರ್ಪುಗಾರರ ಸಂಪತ್ತನ್ನು ಒಟ್ಟಿಗೆ ಹಾಕಿದ್ರೆ ಅದು  5,285 ಕೋಟಿ ರೂ. ಆಗುತ್ತದೆ. ಹೀಗಿರುವಾಗ ಕೋಕಿಲಾಬೆನ್ ಅವರ ಸಂಪತ್ತು ಶಾರ್ಕ್ ಟ್ಯಾಂಕ್ ತೀರ್ಪುಗಾರರ ಒಟ್ಟು ಸಂಪತ್ತಿನ ಸುಮಾರು ಮೂರು ಪಟ್ಟು ಹೆಚ್ಚಿದೆ. ಹಾಗಾದ್ರೆ ಶಾರ್ಕ್ ಟ್ಯಾಂಕ್ ನ ಶಾರ್ಕ್ ಗಳ ಸಂಪತ್ತು ಎಷ್ಟಿದೆ? ಅಮಿತ್ ಜೈನ್ ಅವರ ನಿವ್ವಳ ಸಂಪತ್ತು 2,900 ಕೋಟಿ ರೂ., ನಮಿತಾ ಥಾಪರ್ ನಿವ್ವಳ ಸಂಪತ್ತು 600 ಕೋಟಿ ರೂ. ವಿನೀತ್ ಸಿಂಗ್ ಅವರ ಸಂಪತ್ತು 300 ಕೋಟಿ ರೂ. , ಅನುಪ್ ಮಿತ್ತಲ್ ಅವರ ಸಂಪತ್ತು 185  ಕೋಟಿ ರೂ., ಅಮನ್ ಗುಪ್ತ ಅವರ ಸಂಪತ್ತು 700 ಕೋಟಿ ರೂ. ಹಾಗೂ ಪೆಯೂಷ್ ಬನ್ಸಾಲ್ ಅವರ ನಿವ್ವಳ ಸಂಪತ್ತು 600 ಕೋಟಿ ರೂ. ಇವರೆಲ್ಲರ ಸಂಪತ್ತನ್ನು ಒಟ್ಟಿಗೆ ಸೇರಿಸಿದ್ರೆ 5285 ಕೋಟಿ ರೂ. ಹೀಗಾಗಿ ಶಾರ್ಕ್ ಟ್ಯಾಂಕ್ ತೀರ್ಪುಗಾರರ ಇಡೀ ತಂಡವನ್ನು ಒಂದೇ ಬಾರಿಗೆ ಖರೀದಿಸುವಷ್ಟು ಸಂಪತ್ತು ಕೋಕಿಲಾಬೆನ್ ಅಂಬಾನಿ ಅವರ ಬಳಿಯಿದೆ. 
 

click me!