ಭಾರತೀಯರ ಮೆದುಳನ್ನು ವಿದೇಶಿಯರಿಗೆ ಅಡವಿಟ್ಟ ನಾರಾಯಣ ಮೂರ್ತಿ ಅವಕಾಶವಾದಿ: ಲೇಖಕ ರಾಜೀವ್‌ ಮಲ್ಹೋತ್ರಾ ಟೀಕೆ!

By Santosh Naik  |  First Published Jul 29, 2024, 5:04 PM IST


ಇತ್ತೀಚೆಗೆ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ವಿರುದ್ಧ ಲೇಖಕ ರಾಜೀವ್‌ ಮಲ್ಹೋತ್ರಾ ಟೀಕೆ ಮಾಡಿದ್ದಾರೆ. ನಾರಾಯಣ ಮೂರ್ತಿ ಅವಕಾಶವಾದಿ ಎಂದು ಅವರು ಟೀಕೆ ಮಾಡಿದ್ದಾರೆ.


ಬೆಂಗಳೂರು (ಜು.29): ಇತ್ತೀಚಿನ ದಿನಗಳಲ್ಲಿ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳುವ ಮಾತುಗಳು ವಿವಾದಕ್ಕೆ ಕಾರಣವಾಗುತ್ತಿದೆ. ಕೆಲವು ದಿನಗಳ ಹಿಂದೆ ಇಂದಿನ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎನ್ನುವ ಹೇಳಿಕೆ ನೀಡಿ ಚರ್ಚೆಗೆ ಕಾರಣವಾಗಿದ್ದ ನಾರಾಯಣ ಮೂರ್ತಿ ಕೆಲ ದಿನಗಳ ಹಿಂದೆ ಭಾರತ ಹಾಗೂ ಚೀನಾದ ನಡುವೆ ನಡೆಯುತ್ತಿರುವ ವಿಶ್ವದ ಉತ್ಪಾದನಾ ಕೇಂದ್ರವಾಗುವ ಹೋರಾಟದ ಬಗ್ಗೆ ಮಾತನಾಡಿದ್ದರು. 'ಚೀನಾ ಈಗಾಗಲೇ ವಿಶ್ವದ ಫ್ಯಾಕ್ಟರಿಯಾಗಿ ಗುರುತಿಸಿಕೊಂಡಿದೆ. ಸೂಪರ್‌ಮಾರ್ಕೆಟ್‌ಗಳಲ್ಲಿರುವ ಹಾಗೂ ನಮ್ಮ ಮನೆಗಳಲ್ಲಿರುವ ಶೇ. 90ರಷ್ಟು ವಸ್ತುಗಳು ಚೀನಾದಲ್ಲಿ ನಿರ್ಮಾಣವಾಗಿರುವಂಥದ್ದು, ಅಲ್ಲಿಂದಲೇ ಆಮದು ಆಗುವಂಥದ್ದು. ಭಾರತಕ್ಕಿಂತ ಆರು ಪಟ್ಟು ಹೆಚ್ಚಿನ ಜಿಡಿಪಿಯನ್ನು ಚೀನಾ ಹೊಂದಿದೆ. ಈ ಹಂತದಲ್ಲಿ ಭಾರತವು ಕೂಡ ಉತ್ಪಾದನಾ ಕೇಂದ್ರವಾಗಲಿದೆ ಎಂದು ಹೇಳುತ್ತಿರುವುದು ತಂಬಾ ಧೈರ್ಯದ ವಿಚಾರ ಎಂದು ಹೇಳಿದ್ದರು. ನಾರಾಯಣ ಮೂರ್ತಿ ಅವರ ಈ ಹೇಳಿಕೆಯೇ ಈಗ ಚರ್ಚೆಗೆ ಕಾರಣವಾಗಿದೆ. ಇವರ ಮಾತಿನ ಬಗ್ಗೆ ಸಂಶೋಧಕ, ಲೇಖಕ ರಾಜೀವ್‌ ಮಲ್ಹೋತ್ರಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ನಾರಾಯಣಮೂರ್ತಿ ಅವರನ್ನು ಅವಕಾಶವಾದಿ ಎಂದೂ ಕರೆದಿದ್ದಾರೆ. 'ಚೀನಾ ಭಾರತಕ್ಕಿಂತ ಮುಂದೆ ಇರೋದಕ್ಕೆ ಮೂಲ ಕಾರಣವೇನೆಂದರೆ, ನಾರಾಯಣಮೂರ್ತಿಯಂಥ ಭಾರತೀಯ ಅವಕಾಶವಾದಿಗಳು ದೇಶದ ಯುವ ಟೆಕ್ಕಿಗಳ ಮೆದುಳನ್ನು ವಿದೇಶಗಳಿಗೆ ಬಾಡಿಗೆ ನೀಡುವ ಮೂಲಕ ತಮ್ಮ ಜೇಬುಗಳನ್ನು ತುಂಬಿಸಿಕೊಂಡರು. ಹಾಗೂ ಅಷ್ಟೇ ಶೀಘ್ರವಾಗಿ ಶತಕೋಟಿಗಳನ್ನೂ ಗಳಿಸಿದರು. ಆದರೆ, ಚೀನಾ ಹಾಗೆ ಮಾಡಲಿಲ್ಲ. ಅವರು ತಮ್ಮದೇ ಆದ ಪೇಟೆಂಟ್‌ಗಳು ಹಾಗೂ ಬೌದ್ಧಿಕ ಆಸ್ತಿಯನ್ನು ಅಭಿವೃದ್ಧಿ ಮಾಡಿದರು. ಅವರದ್ದು ದೀರ್ಘಕಾಲದ ಆಲೋಚನೆಯಾಗಿತ್ತು. ಭಾರತದಲ್ಲಿ ಅಂಥಾ ದೂರದೃಷ್ಟಿ ಇದ್ದಿರಲಿಲ್ಲ. ನಾವು ಭಾವನಾತ್ಮಕ ಮೂರ್ಖರು ಹಾಗೂ ಸ್ವಾರ್ಥಿ ಮಧ್ಯವರ್ತಿಗಳನ್ನು ಪೂಜೆ ಮಾಡುತ್ತಾರೆ. ಇನ್ನು ಸರ್ಕಾರವೂ ಕೂಡ ಅವರಿಗೆ ಹೆಚ್ಚಿನ ಆದ್ಯತೆಗಳನ್ನು ನೀಡಿದೆ' ಎಂದು ಬರೆದಿದ್ದಾರೆ.

ಇನ್ನು ರಾಜೀವ್‌ ಮಲ್ಹೋತ್ರಾ ಅವರ ಟ್ವೀಟ್‌ಗೂ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. 'ನಾನು ಈ ವಿಚಾರವಾಗಿ ನರೇಂದ್ರ ಮೋದಿಯವರನ್ನು ನೇರವಾಗಿ ದೂಷಣೆ ಮಾಡೋದಿಲ್ಲ. ಸರ್ಕಾರಗಳು ಅಜೆಂಡಾ ಹಾಗೂ ನಿರ್ದೇಶನವನ್ನು ಮಾತ್ರವೇ ಸೆಟ್‌ ಮಾಡುತ್ತದೆ. ಆದರೆ, ನಾನು ಶೇ. 100ರಷ್ಟು ಒಂದು ಮಾತನ್ನು ಒಪ್ಪುತ್ತೇನೆ ಏನೆಂದರೆ, ನಾನು ಗ್ರಾಹಕರು ಬಳಕೆ ಮಾಡುವಂಥ ಉತ್ಪನ್ನಗಳಾದ ವಿಂಡೋಸ್, ಸ್ಕೈಪ್‌ನಂಥ ಉತ್ಪನ್ನಗಳನ್ನು ಸೃಷ್ಟಿ ಮಾಡಲಿಲ್ಲ.ಬದಲಾಗಿ ಅವರಿಗೆ ಸೇವೆ ನೀಡುವುದನ್ನು ಮುಂದುವರಿಸಿದ್ದೇವೆ..' ಎಂದು ಸೌರಭ್‌ ಕೊಚಾರ್‌ ಎನ್ನುವವರು ಬರೆದಿದ್ದಾರೆ.

Tap to resize

Latest Videos

undefined

'100% ನಿಜ. ಮೂರ್ತಿಯಂತಹ ಜನರು ತಮ್ಮನ್ನು ತಾವು ಆಧುನಿಕ ಬುದ್ಧ ಎಂದು ಭಾವಿಸುತ್ತಾರೆ. ಚೀನಾ ಏನು ಮಾಡಿದೆ ಎಂಬುದರ ಕುರಿತು ಸ್ಟೀವ್ ಹ್ಸು ಅವರ ಇತ್ತೀಚಿನ ಪೋಸ್ಟ್‌ಗಳನ್ನು ನೋಡಿ. ಭಾರತ ನಿಜವಾಗಿಯೂ ತನ್ನ ಅವಕಾಶವನ್ನು ಕಳೆದುಕೊಂಡಿದೆ..' ಎಂದು ಬರೆದಿದ್ದಾರೆ.

'ಮತ್ತು ಈಗ ಅದೇ ಪಾಶ್ಚಿಮಾತ್ಯ ಕಂಪನಿಗಳು ಭಾರತದಲ್ಲಿ ಭಾರತೀಯ ಟೆಕ್ಕಿಗಳನ್ನು ನೇಮಿಸಿಕೊಳ್ಳುತ್ತಿವೆ. "ಸ್ಥಳೀಯ ಬಂಧಿತ" ಕೇಂದ್ರಗಳಿಗೆ. ನೀವು ಬಲವಾದ ಕೈಗಾರಿಕಾ ಮೂಲ ಮತ್ತು ಸ್ಪರ್ಧಾತ್ಮಕ ಪ್ರಯೋಜನವನ್ನು ಹೊಂದಿರುವಾಗ ಮುಕ್ತ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತವೆ. ನೀವು ಹೊಸ ತಾಂತ್ರಿಕ ಕೈಗಾರಿಕಾ ನೆಲೆಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವಾಗ ಅಲ್ಲ' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಸುಧಾಮೂರ್ತಿ ಕಿವಿಮಾತು: ಗಂಡ-ಹೆಂಡ್ತಿ ಜಗಳವಾಡದಿದ್ರೆ ಅವ್ರು ದಾಂಪತ್ಯ ಜೀವನ ನಡೆಸಲು ನಾಲಾಯಕ್ ಅಂತೆ!

'ಮೂರ್ತಿ, ನಿಲೇಕಣಿ ಮತ್ತು ಇನ್ಫೋಸಿಸ್‌ನ ಇತರ ಸಂಸ್ಥಾಪಕರು ದಾರ್ಶನಿಕರಲ್ಲ. ಅವರು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಉತ್ತಮ ತಂತ್ರಜ್ಞರಾಗಿದ್ದರು. ಭಾರತೀಯ ದಾರ್ಶನಿಕನ ಉದಾಹರಣೆ ಯಾರು? ಎಂ.ವಿಶ್ವೇಶ್ವರಯ್ಯ ಅವರಿಗೆ ನನ್ನ ವೋಟ್‌. ಭಾರತದಲ್ಲಿ ಚಿಂತಕರೆಲ್ಲರೂ ಬ್ರಾಹ್ಮಣರು ಆದರೆ ಸಮಾಜದಲ್ಲಿ ವಿಶೇಷವಾಗಿ ಸರ್ಕಾರದಲ್ಲಿ ಏರುವುದನ್ನು ಸಕ್ರಿಯವಾಗಿ ನಿಷೇಧಿಸುವ ಅಸಾಧ್ಯವಾದ ಪರಿಸ್ಥಿತಿಯನ್ನು ನಾವು ಹೊಂದಿದ್ದೇವೆ' ಎಂದು (@bkv0123) ಬರೆದುಕೊಂಡಿದ್ದಾರೆ. 'ದಯವಿಟ್ಟು ಅವರ ಮೇಲೆ ಅಷ್ಟು ಕಠೋರವಾಗಿ ವರ್ತಿಸಬೇಡಿ. ಅವರು ಮಹತ್ತರವಾದ ಕೆಲಸವನ್ನು ಮಾಡಿದ್ದಾರೆ. ನಮ್ಮಲ್ಲಿರುವ ಯಾವುದೇ ಸಂಪನ್ಮೂಲಗಳಿಂದ ಭಾರತದಲ್ಲಿ ಏನು ಮಾಡಬಹುದೆಂಬ ಅವರ ಆಲೋಚನೆಗಳನ್ನು ಮುಂದುವರಿಸುವುದು ಇತರರಿಗೆ ಬಿಟ್ಟದ್ದು. ಭಾರತ ಗಳಿಸುವ ಶತಕೋಟಿ ವಿದೇಶಿ ಕರೆನ್ಸಿಯನ್ನು ಮರೆಯಬೇಡಿ..' ಎಂದು ನಾರಾಯಣಮೂರ್ತಿ ಪರವಾಗಿ ಮಾತನಾಡಿದ್ದಾರೆ.

'74ನೇ ವಯಸ್ಸಲ್ಲಿ ಹೊಸ ವೃತ್ತಿ..' ತಾಯಿ ಸುಧಾಮೂರ್ತಿಯ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಮಗ ರೋಹನ್

One reason China is ahead of India is that Indian opportunists like Narayan Murthy filled their pockets by renting out brains of young techies to foreign countries & make quick billions. Chinese developed their own patents & intellect property. That was long range thinking.… https://t.co/xTxx5JC70W

— Rajiv Malhotra (@RajivMessage)
click me!