ನಾರಾಯಣ ಮೂರ್ತಿಯ 17 ತಿಂಗಳ ಮೊಮ್ಮಗನ ಈ ವರ್ಷದ ಆದಾಯ 3.3 ಕೋಟಿ ರೂ

Published : Apr 18, 2025, 07:26 PM ISTUpdated : Apr 18, 2025, 07:35 PM IST
ನಾರಾಯಣ ಮೂರ್ತಿಯ 17 ತಿಂಗಳ ಮೊಮ್ಮಗನ ಈ ವರ್ಷದ ಆದಾಯ 3.3 ಕೋಟಿ ರೂ

ಸಾರಾಂಶ

ನಾರಾಯಣ ಮೂರ್ತಿ ಮೊಮ್ಮಗನ ವಯಸ್ಸು ಕೇವಲ 1 ವರ್ಷ ನಾಲ್ಕು ತಿಂಗಳು. ಆದರೆ ಆದಾಯ ಯಾವ ಸಿಇಒಗಿಂತ ಕಡಿಮೆ ಇಲ್ಲ. ಈ ವರ್ಷ ಈ ಪುಟ್ಟ ಕಂದ 3.3 ಕೋಟಿ ರೂಪಾಯಿ ಆದಾಯಗಳಿಸಿದ್ದಾನೆ. ಈ ಮಗು ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೇ ಜೇಬು ಗಟ್ಟಿ ಮಾಡಿದ್ದು ಹೇಗೆ? 

ಬೆಂಗಳೂರು(ಏ.18) ಇನ್ಫೋಸಿಸ್ ನಾರಾಯಣ ಮೂರ್ತಿ ಆದಾಯ, ಸುಧಾ ಮೂರ್ತಿ ಆಧಾಯ, ಇವರ ಮಕ್ಕಳ ಆದಾಯದ ಕುರಿತು ಅಚ್ಚರಿಯಿಲ್ಲ. ಇನ್ಫೋಸಿಸ್ ಮೂಲಕ ಇತರ ಉದ್ಯಮಗಳ ಮೂಲಕ ನಾರಾಯಣೂರ್ತಿ ಕುಟುಂಬ ಆದಾಯಗಳಿಸುತ್ತಿದೆ. ಆದರೆ 17 ತಿಂಗಳ ಮೊಮ್ಮಗ ಕೂಡ ಇದೀಗ ವರ್ಷಕ್ಕೆ ಕೋಟಿ ಕೋಟಿ ಆದಾಯ ಪಡೆಯುತ್ತಿದ್ದಾನೆ. ಇನ್ನು ಪುಟ್ಟು ಪುಟ್ಟ ಹೆಜ್ಜೆ ಹಾಕಿ ಜಗತ್ತು ನೋಡುವ ತವಕದಲ್ಲಿರುವ ಈ ಮಗು 2025ರ ಆರ್ಥಿಕ ಸಾಲಿನಲ್ಲಿ ಬರೋಬ್ಬರಿ 3.3 ಕೋಟಿ ರೂಪಾಯಿ ಆದಾಯಗಳಿಸಿದ್ದಾನೆ. 

ರೋಹನ್ ಮೂರ್ತಿ ಮಗನ ಆದಾಯ 3.3 ಕೋಟಿ ರೂ
ನಾರಾಯಣ ಮೂರ್ತಿ ಸುಧಾ ಮೂರ್ತಿ ದಂಪತಿ ಪುತ್ರ ರೋಹನ್ ಮೂರ್ತಿ ಇನ್ಫೋಸಿಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಾಲು ಹೊಂದಿದ್ದಾರೆ. ರೋಹನ್ ಮೂರ್ತಿ ಹಾಗೂ ಅಪರ್ಣಾ ಮೂರ್ತಿ ದಂಪತಿ 17 ತಿಂಗಳ ಹಿಂದೆ ಗಂಡು ಮಗುವಿನ ಪೋಷಕರಾಗಿದ್ದರು. ಈ ಮಗುವಿಗೆ ರೋಹನ್ ಮೂರ್ತಿ ದಂಪತಿ ಏಕಾಗ್ರಹ ರೋಹನ್ ಮೂರ್ತಿ ಎಂದು ಹೆಸರಿಟ್ಟಿದ್ದಾರೆ. 1 ತಿಂಗಳು ನಾಲ್ಕು ತಿಂಗಳ ವಯಸ್ಸಿನ ಈ ಮಗು ಈಗ ಪುಟ್ಟ ಹೆಜ್ಜೆ ಇಡಲು ಆರಂಭಿಸಿದೆ. ಎದ್ದು ಬಿದ್ದು ನಡೆಯುತ್ತಿದೆ. ಆದರೆ ಈ ಪಟ್ಟ ಹೆಜ್ಜೆಯ ಆದಾಯ ಹಲವು ಸಿಇಒಗಳ ಸ್ಯಾಲರಿಗಿಂತ ಹೆಚ್ಚಿದೆ. 2025ರ ಆರ್ಥಿಕ ವರ್ಷದಲ್ಲಿ 17 ತಿಂಗಳ ಮಗು ಬರೋಬ್ಬರಿ 3.3 ಕೋಟಿ ರೂಪಾಯಿ ಆದಾಯ ಗಳಿಸಿದೆ.

ನಾರಾಯಣ ಮೂರ್ತಿಗಿಂತ ಶ್ರೀಮಂತ ಈ ಇನ್ಫೋಸಿಸ್ ಸಹ ಸಂಸ್ಥಾಪಕ, ಇಲ್ಲಿದೆ ಧನಿಕರ ಪಟ್ಟಿ!

ಇನ್ಫೋಸಿಸ್ ಡಿವಿಡೆಂಟ್‌ನಿಂದ ಮಗುವಿಗೆ ಆದಾಯ
ಶೀಘ್ರದಲ್ಲೇ ಏಕಾಗ್ರಹ ರೋಹನ್ ಮೂರ್ತಿ ಅಂದರೆ ನಾರಾಯಣ ಮೂರ್ತಿ ಅವರ 17 ತಿಂಗಳ ಮೊಮ್ಮಗ 3.3 ಕೋಟಿ ರೂಪಾಯಿ ಆದಾಯವನ್ನು ಪಡೆಯಲಿದ್ದಾರೆ. ಇನ್ಫೋಸಿಸ್ ಡಿವಿಡೆಂಟ್ ಮೂಲಕ ಮಗು ಈ ಕೋಟಿ ಕೋಟಿ ರೂಪಾಯಿ ಆದಾಾಯ ಪಡೆದಿದೆ. ಏಕಾಗ್ರಹ ರೋಹನ್ ಮೂರ್ತಿ ಹುಟ್ಟಿದ ಬೆನ್ನಲ್ಲೇ ಇನ್ಫೋಸಿಸ್‌ನ ಶೇಕಡಾ 0.04ರಷ್ಟು ಷೇರುಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಈ ವರ್ಷದ ಡಿವಿಡೆಂಟ್ ರೂಪದಲ್ಲಿ ಮಗು 3.3 ಕೋಟಿ ರೂಪಾಯಿ ಆದಾಯ ಪಡೆಯಲಿದ್ದಾರೆ. 2025ರ ಆರ್ಥಿಕ ವರ್ಷದ ಅಂತಿಮ ಈಕ್ವಿಟಿ ಡಿವಿಟೆಂಡ್ ಪಾಲನ್ನು ಮೇ.30 ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಂಚಲಾಗುತ್ತದೆ. ಶೇಕಡಾ 2ರಷ್ಟಿರಿವು ಈ ಪಾಲು ಮೂರ್ತಿ ಕುಟಂಬಸ್ಥರಲ್ಲಿ ಹಂಚಿಕೆಯಾಗಲಿದೆ. 

ಸುಧಾ ಮೂರ್ತಿಗೆ 76 ಕೋಟಿ ರೂ
ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿ ಸುಧಾ ಮೂರ್ತಿ ಸೇರಿದಂತೆ ಮೂರ್ತಿ ಕುಟುಂಬ ಸದಸ್ಯರು ಪಾಲು ಹೊಂದಿದ್ದಾರೆ. ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಇನ್ಫೋಸಿಸ್‌ನ 3.89 ಲಕ್ಷ ಷೇರುಗಳನ್ನು ಹೊಂದಿದ್ದಾರೆ. ಈ ಮೂಲಕ ಡಿವಿಡೆಂಟ್ ರೂಪದಲ್ಲಿ ಅಕ್ಷತಾ ಮೂರ್ತಿ ಈ ವರ್ಷ 85.71 ಕೋಟಿ ರೂಪಾಯಿ ಆದಾಯ ಪಡೆಯಲಿದ್ದಾರೆ. ಇನ್ನು ನಾರಾಯಣ ಮೂರ್ತಿ ತಮ್ಮ ಪಾಲಿನ ಷೇರುಗಳ ಡಿವಿಡೆಂಟ್‌ನಿಂದ ಈ ವರ್ಷ 33.3 ಕೋಟಿ ರೂಪಾಯಿ ಆದಾಯ ಪಡೆಯಲಿದ್ದಾರೆ.ಇನ್ನು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಈ ವರ್ಷ ಇನ್ಪೋಸಿಸ್ ಡಿವಿಡೆಂಟ್ ಮೂಲಕ 76 ಕೋಟಿ ರೂಪಾಯಿ ಪಡೆಯಲಿದ್ದಾರೆ.

ಇನ್ಫೋಸಿಸ್ ಕಟ್ಟಿ ಬೆಳೆಸಿದ ನಾರಾಯಣ ಮೂರ್ತಿ ಇದೀಗ ವಿಶ್ವದ ಟೆಕ್ ಉದ್ಯಮ ಸಾಮ್ರಾಜ್ಯದ ದಿಗ್ಗಜನಾಗಿದ್ದಾರೆ. ಇತ್ತ ಇನ್ಪೋಸಿಸ್ ಸಂಸ್ಥೆ ಕಟ್ಟುವಾಗ ಸುಧಾಮೂರ್ತಿ ಉದ್ಯೋಗ ತೊರೆದು ಪತಿ ನಾರಾಯಣ ಮೂರ್ತಿಗೆ ನೆರವಾಗಿದ್ದರು. ಪತಿಯ ಬೆಂಬಲವಾಗಿ ನಿಂತುಕೊಂಡಿದ್ದರು. ಈ ಇನ್ಫೋಸಿಸ್ ಸಂಸ್ಥೆಯಲ್ಲಿ ಮೂರ್ತಿ ಕುಟುಂಬ ಷೇರು ಹೊಂದಿದೆ. ಸದ್ಯ ಸುಧಾಮೂರ್ತಿ ರಾಜ್ಯಸಭಾ ಸಂಸದೆಯಾಗಿದ್ದಾರೆ. 

ನಾರಾಯಣ ಮೂರ್ತಿ ವಾರಕ್ಕೆ 70 ತಾಸು ದುಡಿಮೆ ಹೇಳಿಕೆಯನ್ನು ಸಮರ್ಥಿಸಿಕೊಂಡ ಸುಧಾ ಮೂರ್ತಿ
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!