ಮತ್ತೂಟ್‌ ಚಿನ್ನದ ಸಾಲ ಉತ್ಸವದ ಭಾಗವಾಗಿ ಲಕ್ಕಿ ಡ್ರಾ ಆರಂಭ!

By Suvarna NewsFirst Published Jan 19, 2023, 4:56 PM IST
Highlights

ಮುತ್ತೂಟ್ ಫಿನಾನ್ಶಿಯರ್ಸ್ ತನ್ನ ಗೋಲ್ಡ್ ಲೋನ್ ಗ್ರಾಹಕರಿಗೆ ಲಕ್ಕಿ ಡ್ರಾ ಸ್ಪರ್ಧೆ ಆರಂಭಿಸಿದೆ.  ಕಾರು, ಸ್ಕೂಟರ್, ಚಿನ್ನದ ನಾಣ್ಯ, ಸೈಕಲ್ ಹಾಗೂ ಇತರ ರೋಮಾಂಚಕ ಬಹುಮಾನ ಗೆಲ್ಲುವ ಅವಕಾಶವನ್ನು ಮುತ್ತೂಟ್ ನೀಡುತ್ತಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಭಾರತದಲ್ಲಿರುವ NBFC ಕಂಪನಿಗಳಲ್ಲಿ ಮುತ್ತೂಟ್ ಫಿನಾನ್ಶಿಯರ್ಸ್ ಮುಂಚೂಣಿಲ್ಲಿದೆ. ಸಾಮಾನ್ಯವಾಗಿ ಯೆಲ್ಲೋ ಮತ್ತೂಟ್ ಎಂದೇ ಗುರುತಿಸಿಕೊಂಡಿರುವ ಮುತ್ತೂಟ್ ಇದೀಗಾ ಗ್ರಾಹಕರಿಗಾಗಿ ಲಕ್ಕಿ ಡ್ರಾ ಆರಂಭಿಸಿದೆ. ಈ ಲಕ್ಕಿ ಡ್ರಾ ಚಿನ್ನದ ಸಾಲ ಉತ್ಸವದ ಭಾಗವಾಗಿ ಆರಂಭಿಸಲಾಗಿದೆ. ವಿಶೇಷ ಅಂದರೆ ಸಾಮಾನ್ಯ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳಲು ವಿವಿಧೆಡೆ ಗೋಲ್ಡ್ ಲೋನ್ ಉತ್ಸವ ಆರಂಭಿಸಲಾಗಿದೆ.

ಗ್ರಾಹಕ ಕೇಂದ್ರಿತವಾಗಿ ಈ ಲಕ್ಕಿ ಡ್ರಾ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಗ್ರಾಹಕರು ಮುತ್ತೂಟ್‌ನಿಂದ ಯಾವುದೇ ರೂಪದಲ್ಲಿ ಚಿನ್ನದ ಸಾಲ ಪಡೆದಿರಬೇಕು. ಅಥವಾ ಇತರ ಕಂಪನಿಗಳಿಂದ ಮುತ್ತೂಟ್‌ಗೆ ಸಾಲವನ್ನು ವರ್ಗಾಯಿಸಿರಬೇಕು. ಈ ಸ್ಪರ್ಧೆಯಲ್ಲಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಘೋಷಿಸಲಾಗುತ್ತದೆ. ವಿಜೇತರು ಕಾರು, ಸ್ಕೂಟರ್, ಚಿನ್ನದ ನಾಣ್ಯ, ಸೈಕಲ್ ಹಾಗೂ ಇತರ ರೋಮಾಂಚಕ ಬಹುಮಾನ ಗೆಲ್ಲುವ ಅವಕಾಶವಿದೆ. ಈ ಕುರಿತು ಗ್ರಾಹಕರು ಹತ್ತಿರದ ಮತ್ತೂಟ್ ಮಿನಿ ಫಿನಾನ್ಶಿಯರ್ಸ್ ಬ್ರಾಂಚ್‌ಗೆ ಭೇಟಿ ನೀಡಬಹುದು. ಇದರ ಜೊತೆಗೆ ಟ್ರೋಲ್ ಫ್ರಿ ಸಂಖ್ಯೆ 1800 2700212 ಕರೆ ಮಾಡಿ ಮಾಹಿತಿ ಪಡೆಯಬಹುದು. ಇಷ್ಟೇ ಅಲ್ಲ https://bit.ly/MMFL-Lucky-Draw ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಮತ್ತೂಟ್ ಗೋಲ್ಡ್ ಲೋನ್ ಉತ್ಸವದಲ್ಲಿ ಗ್ರಾಹಕರಿಗೆ ಮತ್ತಷ್ಟು ಸೇವೆಗಳು ಲಭ್ಯವಿದೆ. ಗ್ರಾಹಕರು ಸಾಲದ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಠೇವಣಿ, ಆನ್‌ಲೈನ್ ಟಾಪ್-ಅಪ್, ಪಾರ್ಟ್ ಪೇಮೆಂಟ್, ಬಡ್ಡಿ ಪಾವತಿ, ಆನ್‌ಲೈನ್ ಸಾಲ ನವೀಕರಣ ಆಯ್ಕೆ, ರಿಲ್ಯಾಕ್ಸ್ ಲೋನ್, ಸಾಲದ ಸಂಪೂರ್ಣ ಅವಧಿಗೆ ಒಂದು ಬಡ್ಡಿ ದರ, ಗ್ರಾಹಕರು ಸಾಲಗಳನ್ನು ಕಂತುಗಳಲ್ಲಿ ಮರುಪಾವತಿಸುವ ಸೂಪರ್ ಇಎಂಐ ಮೂಲಕ ಮುತ್ತೂಟ್ ಈ ಗೋಲ್ಡ್ ಲೋನ್ ಉತ್ಸವ ಆರಂಭಿಸಿದೆ. ಇದರ ಜೊತೆಗೆ ಸೇಫ್ ಲಾಕ್ ಗೋಲ್ಡ್ ಲೋನ್ ಮೂಲಕ ಗ್ರಾಹಕರು ತಮ್ಮ ಚಿನ್ನಾಭರಣಗಳನ್ನು ಮುತ್ತೂಟ್‌ ಲಾಕರ್‌ನಲ್ಲಿ ಭದ್ರವಾಗಿಡುವ ಅವಕಾಶವೂ ಸಿಗಲಿದೆ. ಈ ಮೂಲಕ ಈ ಚಿನ್ನಕ್ಕೆ ವಿಮೆ ಸೌಲಭ್ಯವೂ ಲಭ್ಯವಾಗಲಿದೆ. ಈ ಸೌಲಭ್ಯ ಆಯ್ದ ಬ್ರಾಂಚ್‌ಗಳಲ್ಲಿ ಲಭ್ಯವಿದೆ ಮತ್ತು ಶೀಘ್ರದಲ್ಲೇ ಸೇಫ್ ಲಾಕರ್ ದೇಶದ ಎಲ್ಲಾ ಶಾಕೆಗಳಿಗೆ ವಿಸ್ತರಣೆಯಾಗಲಿದೆ.  

ಮೊದಲ ಬಾರಿಗೆ ಮುತ್ತೂಟ್ ಜೊತೆ ವ್ಯವಹರಿಸುವ ಗ್ರಾಹಕರಿಗೆ ಉತ್ತಮ ಸೇವಾ ಅನುಭವ ನೀಡಲು ನಾವು ಬದ್ಧರಾಗಿದ್ದೇವೆ. ಈ ಮೂಲಕ ಗ್ರಾಹಕರು ಮತ್ತು ನಮ್ಮ ಜೊತೆಗಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ. ಇಷ್ಟೇ ಅಲ್ಲ ಹೊಸ ಗ್ರಾಹಕರು ಮುತ್ತೂಟ್‌ಗೆ ಆಗಮಿಸುವಂತೆ ಮಾಡುವುದು ಈ ಚಿನ್ನದ ಸಾಲ ಉತ್ಸವದ ಆದ್ಯತೆಯಾಗಿದೆ. ಹೊಸ ಉತ್ಪನ್ನಗಳು, ಹೊಸ ಸೌಲಭ್ಯಗಳ ಮೂಲಕ ಮುತ್ತೂಟ್ ಕುಟುಂಬವನ್ನು ಮತ್ತಷ್ಟು ವೃದ್ಧಿಸಲು ಹಾಗೂ ಚಿನ್ನದ ಮೇಲಿನ ಸಾಲದ ಮೊದಲ ಆದ್ಯತೆಯ ಕಂಪನಿಯಾಗಿ ಬೆಳೆಯಲು ಈ ಯೋಜನೆಗಳು ಸಹಕಾರಿಯಾಗಲಿದೆ ಎಂದು ಮುತ್ತೂಟ್ ಫಿನಾನ್ಶಿಯರ್ ವ್ಯವಸ್ಥಾಪಕ ಮತ್ತು ನಿರ್ದೇಶಕ ಮ್ಯಾಥ್ಯೂ ಮುತ್ತೂಟ್ ಹೇಳಿದ್ದಾರೆ.  

ಗೋಲ್ಡ್ ಲೋನ್ ಉತ್ಸವ ಆರಂಭಿಸಲು ನಮಗೆ ಸಂತಸವಾಗುತ್ತಿದೆ. ನಮ್ಮ ಗ್ರಾಹಕರಿಗೆ ಅವರ ಆರ್ಥಿಕ ಆಗತ್ಯತೆಗಳನ್ನು ಪೂರೈಸಲು ಈ ಗೋಲ್ಡ್‌ಲೋನ್ ಉತ್ಸವ ಸಹಕಾರಿಯಾಗಿದೆ. ನಮ್ಮ ಎಲ್ಲಾ ಚಟುವಟಿಕೆಗಳ ಕೇಂದ್ರ ಬಿಂದು ನಮ್ಮ ಗ್ರಾಹಕರಾಗಿದ್ದಾರೆ. ನಮ್ಮ ಜೊತೆಗಿನ ದೀರ್ಘಕಾಲದ ಬದ್ಧತೆಯ ಭಾಗವಾಗಿ ಲಕ್ಕಿ ಡ್ರಾ ಸ್ಪರ್ಧೆಯನ್ನು ಆರಂಭಿಸಲಾಗಿದೆ. ಈ ಸ್ಪರ್ಧೆ ಅತೀ ದೊಡ್ಡ ಯಶಸ್ಸು ಪಡೆಯಲಿದೆ. ಜೊತೆಗೆ ಗ್ರಾಹಕರೊಂದಿಗೆ  ಹೊಸ ಬಾಂಡ್ ಅಭಿವೃದ್ಧಿಗೆ ನೆರವಾಗಲಿದೆ ಅನ್ನೋದು ನಮ್ಮ ವಿಶ್ವಾಸ ಎಂದು ಮುತ್ತೂಟ್ ಮಿನಿ ಫಿನಾನ್ಶಿಯರ್  ಸಿಇಒ ಪಿ. ಇ ಮಥಾಯ್ ಹೇಳಿದ್ದಾರೆ.
 

click me!