ಮನೆ ಕಟ್ಟಿಕೊಳ್ಳಲು ಆಸೆ ಹೊಂದಿರುವವರಿಗೆ ಈ ಎಕ್ಸಪೋ ಪೂರಕವಾಗಿ ಕೆಲಸ ಮಾಡಲಿದೆ. ಸೈಟ್ ಹುಡುಕಾಟದಿಂದ ಹಿಡಿದು ಮನೆ ನಿರ್ಮಿಸಿ ಗೃಹ ಪ್ರವೇಶದ ವರೆಗೆ ಏನೆಲ್ಲ ಅಗತ್ಯಗಳಿವೆಯೋ ಅವುಗಳನ್ನೆಲ್ಲ ಇಲ್ಲಿ ಪಡೆಯಬಹುದು.
ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ (ಜ.19) : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮನೆ ಕಟ್ಟಬೇಕು, ಸೈಟ್ ಖರೀದಿ ಮಾಡಬೇಕು. ಯಾವ ಏರಿಯಾ ಚೆನ್ನಾಗಿದೆ, ಎಲ್ಲಿ ಉತ್ತಮ ಸೈಟ್ ಸಿಗುತ್ತದೆ ಎನ್ನುವುದರ ಬಗ್ಗೆ ಯೋಚಿಸಿ ತಲೆ ಕೆಡಿಸಿಕೊಂಡಿದ್ದೀರಾ? ಹಾಗಾದರೆ ಸದ್ಯಕ್ಕೆ ಆ ಚಿಂತೆ ಬಿಡಿ. ಇದಕ್ಕೆಲ್ಲ ಪರಿಹಾರ ನೀಡಲು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಮತ್ತು ‘ಕನ್ನಡಪ್ರಭ’ ಜಂಟಿಯಾಗಿ ‘ಡ್ರೀಮ್ ಹೋಮ್ ಮೇಗಾ ಎಕ್ಸಪೋ’ ಆಯೋಜಿಸಿವೆ. ಹುಬ್ಬಳ್ಳಿಯ ರಾಯ್ಕರ್ ಮೈದಾನದಲ್ಲಿ ಜ. 20, 21, 22ರಂದು ಎಕ್ಸಪೋ ನಡೆಯಲಿದೆ. ಮನೆ ಕಟ್ಟಿಕೊಳ್ಳಲು ಬೇಕಿರುವ ಎಲ್ಲ ಅವಶ್ಯಕತೆಗಳನ್ನು ಈ ಎಕ್ಸಪೋ ಪೂರೈಸಲಿದೆ.
ಎಕ್ಸಪೋದಲ್ಲಿ ಒಟ್ಟು 35 ಮಳಿಗೆಗಳಿದ್ದು, ಡೈಮಂಡ್, ಪ್ಲಾಟಿನಂ, ಗೋಲ್ಡ್, ಸಿಲ್ವರ್ ವಿಭಾಗಗಳಲ್ಲಿ ಬಿಲ್ಡರ್ಸ್, ಡೆವೆಲಪರ್ಸ್, ಕಚ್ಚಾ ಸಾಮಗ್ರಿ ಪೂರೈಕೆದಾರರು, ವಿವಿಧ ಸೇವೆ ನೀಡುವವರು ಭಾಗವಹಿಸಲಿದ್ದಾರೆ.
Election Canvass: ಶೆಟ್ಟರ್ ಪ್ರಚಾರಕ್ಕೆ ಬಂದ ಪಟಪಟ ಪಾರ್ವತಿ!
ಎಕ್ಸಪೋದಲ್ಲಿ ಏನೇನುಂಟು?
ಮನೆ ಕಟ್ಟಿಕೊಳ್ಳಲು ಆಸೆ ಹೊಂದಿರುವವರಿಗೆ ಈ ಎಕ್ಸಪೋ ಪೂರಕವಾಗಿ ಕೆಲಸ ಮಾಡಲಿದೆ. ಸೈಟ್ ಹುಡುಕಾಟದಿಂದ ಹಿಡಿದು ಮನೆ ನಿರ್ಮಿಸಿ ಗೃಹ ಪ್ರವೇಶದ ವರೆಗೆ ಏನೆಲ್ಲ ಅಗತ್ಯಗಳಿವೆಯೋ ಅವುಗಳನ್ನೆಲ್ಲ ಇಲ್ಲಿ ಪಡೆಯಬಹುದು.
ಇದರಲ್ಲಿ ಸೈಟ್ ಹುಡುಕಾಟವನ್ನು ಸಲೀಸಾಗಿಸಲು ಪ್ರತಿಷ್ಠಿತ ಡೆವೆಲಪರ್ಸ್‌ಗಳು, ಬಿಲ್ಡರ್‌ಗಳು ಭಾಗವಹಿಸಲಿದ್ದಾರೆ. ಸೈಟ್ ಅಂತಿಮವಾದ ನಂತರ ಅದಕ್ಕೆ ಆರ್ಥಿಕ ಸಹಾಯ ಒದಗಿಸಲು ಬ್ಯಾಂಕ್‌ಗಳೂ ಭಾಗವಹಿಸುತ್ತಿವೆ. ಇದಾದ ಮೇಲೆ ಮನೆ ನಿರ್ಮಾಣಕ್ಕೆ ಬೇಕಿರುವ ಕಚ್ಚಾ ಸಾಮಗ್ರಿ ಮರಳು, ಸಿಮೆಂಟ್, ಕಬ್ಬಿಣ, ಇಟ್ಟಿಗೆ ಮಾರಾಟಗಾರರೂ ಭಾಗವಹಿಸಲಿದ್ದಾರೆ.
ಇಷ್ಟೇ ಅಲ್ಲದೇ ‘ಲೈಫ್ ಸ್ಟೈಲ್ ಎಕ್ಸಪೋ’ ಸಹ ಆಯೋಜಿಸಾಗಿದೆ. ಉತ್ತಮ ಜೀವನಶೈಲಿ ರೂಪಿಸುವ ಯೋಗ, ಜಿಮ್‌ಗೆ ಸಂಬಂಧಿಸಿದ ಮಳಿಗೆಗಳೂ ಎಕ್ಸಪೋದಲ್ಲಿ ಇರಲಿವೆ. ಇದಲ್ಲದೆ ಹೊಟೇಲ್ ಸಹ ಇದರಲ್ಲಿದ್ದು, ನಿರಾಯಾಸವಾಗಿ ನೀವು ಸಮಯ ಕಳೆದು ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಪಡೆಯಬಹುದು.
ಗೋಲ್ಡ್ ಕಾಯಿನ್ ಬಹುಮಾನ:
ಎಕ್ಸಪೋಗೆ ಪ್ರವೇಶ ಉಚಿತವಾಗಿದ್ದು, ಸೈಟ್ ಬುಕ್ ಮಾಡಿದ ಒಬ್ಬರಿಗೆ ಗೋಲ್ಡ್ ಕಾಯಿನ್ ಬಹುಮಾನವಿದೆ. ಪ್ರತಿದಿನ ಒಬ್ಬ ಅದೃಷ್ಟವಂತರನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು.
ಮೇಡ್ ಇನ್ ಇಂಡಿಯಾ ಆಟೋಬ್ಯಾಲೆನ್ಸ್ ಸ್ಕೂಟರ್ ಅನಾವರಣ, ಇದು ವಿಶ್ವದಲ್ಲೇ ಮೊದಲು!
ವಿವಿಧ ಕಂಪನಿಗಳು ಗ್ರಾಹಕರಿಗೆ ತಮ್ಮ ವಸತಿ ಯೋಜನೆಗಳ ಸಂಪೂರ್ಣ ವಿವರಗಳನ್ನು ನೀಡಲಿದೆ. ಈ ಎP್ಸ… ಪೋಗೆ ಆಗಮಿಸಿ ನಿಮ್ಮ ಕನಸಿನ ಮನೆಯನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು. ನುರಿತ ಮಾರ್ಗದರ್ಶಕರು, ಇಂಟೀರಿಯರ್ ಡಿಸೈನರ್‌ಗಳು ಹಾಗೂ ಸಲಹೆಗಾರರು ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ಮೂರುದಿನಗಳ ಕಾಲ ನಡೆಯುವ ಈ ಮೇಳದಲ್ಲಿ ನಿತ್ಯ ಸಂಜೆ ಹೆಸರಾಂತ ಕಲಾ ತಂಡಗಳಿಂದ ನೃತ್ಯ, ಗಾಯನ, ಹಾಸ್ಯ, ಲಘು ಪ್ರಹಸನ, ಮಿಮಿಕ್ರಿ ಇತ್ಯಾದಿ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಎಕ್ಸ್‌ಪೋಗೆ ನವೀನ್ ಮೀಡಿಯಾ ಸೊಲೂಷನ್ಸ್ ಸಹಯೋಗವಿದ್ದು, ಹುಬ್ಬಳ್ಳಿಯ ದ ಫೆರ್ನ್ ರೆಸಿಡೆನ್ಸಿ ಕೈಜೋಡಿಸಿದೆ.