
ಮಹಾರಾಷ್ಟ್ರದಲ್ಲಿ ಒಂದು ಕಡೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಒಂದು ಬಣವಾಗಿದ್ದರೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತೊಂದು ಬಣವಾದಂತಿದೆ. ಅದೇ ರೀತಿ, ಮಹಾರಾಷ್ಟ್ರದ ಬಗ್ಗೆ ಅಲ್ಲಿನ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೀಡಿದ ಹೇಳಿಕೆಗೆ ಠಾಕ್ರೆಯ ಶಿವಸೇನೆ ಬಣ ತೀವ್ರವಾಗಿ ವಿರೋಧಿಸುತ್ತಿದೆ. ಹಾಗಾದ್ರೆ, ಮಹಾರಾಷ್ಟ್ರ ರಾಜ್ಯಪಾಲರು (Governor) ಹೇಳಿದ್ದೇನು ಅಂತೀರಾ.. ಮುಂದೆ ಓದಿ..
ಮಹಾರಾಷ್ಟ್ರದಿಂದ, ಅದರಲ್ಲೂ ಪ್ರಮುಖವಾಗಿ ಮುಂಬೈ ಹಾಗೂ ಥಾಣೆಯಿಂದ ಗುಜರಾತಿಗಳನ್ನು ಹಾಗೂ ರಾಜಸ್ಥಾನಿಗಳನ್ನು ಓಡಿಸಿದರೆ, ಈ ರಾಜ್ಯದಲ್ಲಿ ಹಣವೇ ಉಳಿಯುವುದಿಲ್ಲ ಹಾಗೂ ಮುಂಬೈ ಅನ್ನು ಇನ್ಮುಂದೆ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯುವುದೇ ಇಲ್ಲ ಎಂದು ನಾನು ಆಗಾಗ ಜನರಿಗೆ ಹೇಳುತ್ತಿರುತ್ತೇನೆ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಷಣದ ವೇಳೆ ಮಹಾರಾಷ್ಟ್ರ ರಾಜ್ಯಪಾಲರು ಈ ರೀತಿ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಠಾಕ್ರೆ ಬೆಂಬಲಿತ ಶಿವಸೇನೆ ಬಣ ತೀವ್ರವಾಗಿ ವಿರೋಧಿಸುತ್ತಿದೆ.
ಶಿವಸೇನಾ ಸಂಸದ ಸಂಜಯ್ ರಾವುತ್ ಶನಿವಾರ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿಕೆಯನ್ನು ಖಂಡಿಸಿದ್ದು, ರಾಜ್ಯಪಾಲರು ನೀಡಿದ ಹೇಳಿಕೆಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಖಂಡನೆಯನ್ನಾದರೂ ವ್ಯಕ್ತಪಡಿಸಲಿ ಎಂದು ಸಂಜಯ್ ರಾವುತ್ ಹೇಳಿದ್ದಾರೆ. ಅಲ್ಲದೆ, ಮಹಾರಾಷ್ಟ್ರ ರಾಜ್ಯಪಾಲರ ಭಾಷಣದ ವಿಡಿಯೋವನ್ನು ಶೇರ್ (share) ಮಾಡಿಕೊಂಡ ಸಂಸದ, ಮರಾಠಿಗರ (marathis) ಹೆಮ್ಮೆಯನ್ನು (pride) ರಾಜ್ಯಪಾಲರು ಹೇಗೆ ನೋವು ಉಂಟುಮಾಡಿದ್ದಾರೆ ಎಂಬುದನ್ನು ಸೋಷಿಯಲ್ ಮೀಡಿಯಾದ (social media) ಬಳಕೆದಾರರು ಕೇಳಬೇಕೆಂದು ಟ್ವೀಟ್ ಮಾಡಿದ್ದಾರೆ. ಮರಾಠಿಗರ ಹಾಗೂ ಗುಜರಾತಿಗರ ನಡುವಿನ ಸಂಘರ್ಷ ದಶಕಗಳಿಂದಲೂ ನಡೆಯುತ್ತಿದ್ದು, ಆಗಾಗ ಕಾವೇರುತ್ತಿರುತ್ತಿದೆ.
Fact Check: ವೈರಲ್ ಚಿತ್ರದಲ್ಲಿ ಆಟೋ ರಿಕ್ಷಾ ಜತೆ ನಿಂತಿರುವ ವ್ಯಕ್ತಿ ಮಹಾ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಲ್ಲ
ಅಲ್ಲದೆ, ಬಿಜೆಪಿ ಪ್ರಾಯೋಜಿತ ಮುಖ್ಯಮಂತ್ರಿ ಮಹಾರಾಷ್ಟ್ರದಲ್ಲಿ ಅಧಿಕಾರದಕ್ಕೆ ಬಂದ ಕೂಡಲೇ ಮರಾಠಿ ವ್ಯಕ್ತಿಗೆ ಅವಮಾನವಾಗುತ್ತದೆ. ಸಿಎಂ ಶಿಂಧೆ, ರಾಜ್ಯಪಾಲರ ಹೇಳಿಕೆಯನ್ನಾದರೂ ಖಂಡಿಸಿ. ಮರಾಠಿಯ ಶ್ರಮಜೀವಿಗಳಿಗೆ ಇದು ಅವಮಾನ ಎಂದೂ ಸಂಜಯ್ ರಾವುತ್ ಹೇಳಿದ್ದಾರೆ.
ಶುಕ್ರವಾರ ಮುಂಬೈನ ಅಂಧೇರಿಯಲ್ಲಿ ದಿವಂಗತ ಶಾಂತಾದೇವಿ ಚಂಪಾಲಾ ಕೊಠಾರಿಯ ಹೆಸರಿನಲ್ಲಿಟ್ಟ ಚೌಕವೊಂದನ್ನು ಉದ್ಘಾಟನೆ ಮಾಡಿದಾಗ ಮಹಾರಾಷ್ಟ್ರ ರಾಜ್ಯಪಾಲರು ಈ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, ಈ ವೇಳೆ ಮಾರವಾರಿ ಜುರಾತಿ ಸಮುದಾಯವನ್ನು ಹೊಗಳಿದ ಕೋಶ್ಯಾರಿ, ಈ ಸಮುದಾಯದವರು ಎಲ್ಲಿ ಹೋದರೂ ಆ ಊರಿನಲ್ಲಿ ಆಸ್ಪತ್ರೆಗಳು, ಶಾಲೆಗಳನ್ನು ನಿರ್ಮಾಣ ಮಾಡಿ ಆ ಊರಿನ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಸಹ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಮಹಾರಾಷ್ಟ್ರ ರಾಜ್ಯಪಾಲರು ಮರಾಠಿ ಜನತೆಗೆ ಅವಮಾನ ಮಾಡಿರುವುದು ವಿಪರೀತವಾಗಿದೆ ಎಂದಿದ್ದಾರೆ.
ಉದ್ಧವ್ ಠಾಕ್ರೆ ಸರ್ಕಾರ ಕೊನೆಯ ದಿನಗಳಲ್ಲಿ ಕೈಗೊಂಡಿದ್ದ 400 ನಿರ್ಣಯಗಳ ಪರಿಶೀಲನೆ: ಫಡ್ನವೀಸ್
ಅಲ್ಲದೆ, ಮರಾಠಿಗರಿಗೆ ಇದು ಎಚ್ಚರಿಕೆಯ ಕರೆ (alert call) ಎಂದ ಸಂಜಯ್ ರಾವುತ್, ಮಹಾರಾಷ್ಟ್ರ ಜನತೆ ಹಾಗೂ ಮರಾಠಿಗರು ಭಿಕ್ಷೆ ಬೇಡುವವರು ಎನ್ನುವಂತೆ ರಾಜ್ಯಪಾಲರು ಹೇಳಿದ್ದಾರೆ. ಮುಖ್ಯಮಂತ್ರಿ ಶಿಂಧೆ ನೀವು ಇದನ್ನು ಕೇಳುತ್ತಿದ್ದೀರಾ..? ನಿಮಗೆ ಆತ್ಮಗೌರವವಿದ್ದರೆ ಮಹಾರಾಷ್ಟ್ರ ರಾಜ್ಯಪಾಲರ ರಾಜೀನಾಮೆಯನ್ನು ಕೇಳಿ ಎಂದೂ ಟ್ವೀಟ್ ಮಾಡಿದ್ದಾರೆ.
ಇದರ ಜತೆಗೆ, ಸೇನಾ ಸಂಸದೆ ಪ್ರಿಯಾಂಕ ಚತುರ್ವೇದಿ ಸಹ ಮಹಾರಾಷ್ಟ್ರ ರಾಜ್ಯಪಾಲರ ಹೇಳಿಕೆಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಮಹಾರಾಷ್ಟ್ರದ ಶ್ರಮ ಜೀವಿಗಳಿಗೆ ರಾಜ್ಯಪಾಲರು ತಕ್ಷಣವೇ ಕ್ಷಮೆ ಕೇಳಬೇಕೆಂದೂ ಹೇಳಿದ್ದಾರೆ. ಹಾಗೂ, ಮಹಾರಾಷ್ಟ್ರದ ಶ್ರಮ ಜೀವಿಗಳಿಗೆ ಹಾಗೂ ಮರಾಠಿ ಮಾನೂಗಳಿಗೆ ಇದು ಅವಮಾನವಾಗಿದ. ಇವರು ರಾಜ್ಯವನ್ನು ದೇಶದ ಪ್ರಮುಖ ರಾಜ್ಯವನ್ನಾಗಿಸಲು ದಿನನಿತ್ಯ ಕಷ್ಟಪಡುತ್ತಿದ್ದಾರೆ. ರಾಜ್ಯಪಾಲರು ಕೂಡಲೇಕ್ಷಮೆ ಕೇಳಬೇಕು, ಇಲ್ಲದಿದ್ದರೆ ಅವರನ್ನು ಬದಲಾಯಿಸಲು ನಾವು ಆಗ್ರಹಿಸುತ್ತೇವೆ ಎಂದೂ ಪ್ರಿಯಾಂಕ ಚತುರ್ವೇದಿ ಬರೆದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.