ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ವಿದೇಶದಲ್ಲಿ ಹೇಗಿರುತ್ತಾರೆ ಎಂಬುದರ ಬಗ್ಗೆ ಬಹಳಷ್ಟು ಜನರಿಗೆ ಕುತೂಹಲ ಇರುತ್ತದೆ. ಆ ಕುರಿತ ವಿಡಿಯೋವೊಂದು ವೈರಲ್ ಆಗಿದೆ.
ಮುಂಬೈ: ಆಗರ್ಭ ಶ್ರೀಮಂತರಾಗಿರುವ ಮುಕೇಶ್ ಅಂಬಾನಿ ಸೇರಿದಂತೆ ಕುಟುಂಬದ ಯಾವುದೇ ಸದಸ್ಯರು ಮನೆಯಿಂದ ಹೊರಗೆ ಬಂದ್ರೆ ಸಾವಿರಾರು ಕೋಟಿ ಬೆಲೆಬಾಳುವ ಕಾರ್‌ಗಳು ಸಾಲಿನಲ್ಲಿ ನಿಂತಿರುತ್ತವೆ. ಅಷ್ಟು ಮಾತ್ರವಲ್ಲದೇ ಅಂಬಾನಿ ಕುಟುಂಬದ ಸದಸ್ಯರು ಇರೋ ಕಾರ್ ಮುಂದೆ ಮತ್ತು ಹಿಂದೆಯೂ ವಾಹನಗಳು ಇರುತ್ತವೆ. ವಿಐಪಿ ಭದ್ರತೆಯಲ್ಲಿಯೇ ಮುಕೇಶ್ ಅಂಬಾನಿ ಕುಟುಂಬ ಸದಸ್ಯರು ಇರುತ್ತಾರೆ. ಇತ್ತೀಚೆಗೆ ನಡೆದ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಇವರ ಶ್ರೀಮಂತಿಕೆಗೆ ತಾಜಾ ಉದಾಹರಣೆಯಾಗಿತ್ತು. ಅನಂತ್-ರಾಧಿಕಾ ಮದುವೆ ಬರೋಬ್ಬರಿ ಮೂರು ತಿಂಗಳ ಕಾಲ ನಡೆದಿತ್ತು. ಅಂಬಾನಿ ಕುಟುಂಬ ಈ ಮದುವೆಗಾಗಿ 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಸಣ್ಣ ಮಕ್ಕಳು ಸಹ ಅಂಬಾನಿ ಕುಟುಂಬದ ಸದಸ್ಯರನ್ನು ಗುರುತಿಸುತ್ತಿರುತ್ತಾರೆ. ಹಾಗೆಯೇ ಸಿನಿಮಾ ಕಲಾವಿದರನ್ನು ಎಲ್ಲೆಡೆ ಗುರುತಿಸಲಾಗುತ್ತದೆ. ಸೆಲಿಬ್ರಿಟಿಗಳಿಗೆ ಸಾಮಾನ್ಯರಂತೆ ರಸ್ತೆಯ ಇಕ್ಕೆಲಗಳಲ್ಲಿ ತಿರುಗಾಡಿ ಶಾಪಿಂಗ್ ಮಾಡಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಹಾಗಾಗಿ ವಿದೇಶಕ್ಕೆ ತೆರಳಿ ಯಾರೂ ಗೊತ್ತಿಲ್ಲದ ಅಪರಿಚಿತ ಸ್ಥಳದಲ್ಲಿ ಸಾಮಾನ್ಯರಂತೆ ತಿರುಗಾಡುತ್ತಾರೆ. ಇದೀಗ ಇದೇ ರೀತಿ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ಜೊತೆ ರಾತ್ರಿ ರಸ್ತೆಯ ಬದಿ ನಡೆದುಕೊಂಡು ಹೋಗಿದ್ದಾರೆ.
undefined
ರಾತ್ರಿ ಸ್ವಿಟ್ಜರ್ಲೆಂಡ್ ರಸ್ತೆ ಬದಿಯಲ್ಲಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ವಾಕ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮುಕೇಶ್ - ನೀತಾ ಅವರ ಜೊತೆಯಲ್ಲಿ ಭದ್ರತಾ ಸಿಬ್ಬಂದಿ ಮಾತ್ರ ಇರೋದನ್ನು ಕಾಣಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು, ಅವರಿಗೂ ಸಾಮಾನ್ಯರಂತೆ ಬದುಕುವ ಆಸೆ ಬಂದಿರಬೇಕು. ಎಷ್ಟೇ ಕೋಟಿ ಕೋಟ ಹಣ ನೀಡಿದರೂ ಈಡೇರಿಸಿಕೊಳ್ಳಲಾಗದ ಆಸೆಗಳು ಇರುತ್ತವೆ. ಕೆಲ ಆಗರ್ಭ ಶ್ರೀಮಂತರಿಗೆ ಸರಳವಾಗಿ ಬದುಕುಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಏನೇನೋ ಮಾಡುತ್ತಿರುತ್ತಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
22000 ಕೋಟಿ ಹೂಡಿಕೆ, 40000 ಉದ್ಯೋಗ ಸೃಷ್ಟಿ; ಭಾರತಕ್ಕೆ ಬಂದ ಅಮೆರಿಕದ ಕಂಪನಿ, ಸಿದ್ದರಾಮಯ್ಯ ಜೊತೆ ಚರ್ಚೆ
ಎಲ್ಲಾ ವಲಯಕ್ಕೂ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾಲಿಡುತ್ತಿದೆ. ಜಿಯೋದಲ್ಲಿ ಹಲವು ಭರ್ಜರಿ ಆಫರ್‌ಗಳನ್ನು ಘೋಷಣೆ ಮಾಡುವ ಮೂಲಕ ಎದುರಾಳಿಗಳಿಗೆ ಟಕ್ಕರ್ ನೀಡುತ್ತಿದ್ದಾರೆ. ಮತ್ತೊಂದೆಡೆ ರತನ್ ಟಾಟಾ ಅವರ ಝೂಡಿಯೋಗೆ ಟಕ್ಕರ್ ಕೊಡಲು ಅಂಬಾನಿ ಫ್ಯಾಶನ್ ಲೋಕಕ್ಕೆ ಕಾಲಿಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
2022-23ರ ಆರ್ಥಿಕ ವರ್ಷದಲ್ಲಿ ಅತಿಹೆಚ್ಚು ತೆರಿಗೆ ಪಾವತಿದಾರರ ಪೈಕಿ ಉದ್ಯಮಿ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ 21 ವರ್ಷಗಳಿಂದ ಫಾರ್ಚುನ್ ಗ್ಲೋಬಲ್ 500ರ ಲಿಸ್ಟ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಸ್ಥಾನ ಕಾಯ್ದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ 20,376 ಕೋಟಿ ರೂಪಾಯಿ ತೆರಿಗೆ ಪಾವತಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಆಯಿಲ್ ನಿಂದ ಟೆಲಿಕಾಂ ಸೇರಿದಂತೆ ಎಲ್ಲಾ ವಲಯದಲ್ಲಿ ಯೂ ವ್ಯಾಪಾರ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು ಆದಾಯ 9,74,864 ಕೋಟಿ ರೂಪಾಯಿ ಆಗಿದೆ.
ಅಂಬಾನಿ ಕುಟುಂಬಕ್ಕೆ ಬಡತನ ಬಂತಾ..? ಮೊಟ್ಟ ಮೊದಲ ಬಾರಿಗೆ ಒಂದೇ ನೆಕ್ಲೇಸ್ ಎರಡು ಬಾರಿ ಧರಿಸಿದ ನೀತಾ!