3.80 ಲಕ್ಷ ಕೋಟಿ ಆಸ್ತಿ: ಮುಕೇಶ್‌ ಭಾರತದ ನಂ.1 ಶ್ರೀಮಂತ!

By Web DeskFirst Published Sep 26, 2019, 4:50 PM IST
Highlights

3.80 ಲಕ್ಷ ಕೋಟಿ ಆಸ್ತಿ: ಮುಕೇಶ್‌ ಭಾರತದ ನಂ.1 ಶ್ರೀಮಂತ| ಹರೂನ್‌ ಇಂಡಿಯಾ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಸತತ 8ನೇ ವರ್ಷ ಮುಕೇಶ್‌ ಟಾಪರ್‌

ಮುಂಬೈ[ಸೆ.26]: ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮಕೇಶ್‌ ಅಂಬಾನಿ ಸತತ 8ನೇ ವರ್ಷವೂ ಭಾರತದ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಹರೂನ್‌ ಇಂಡಿಯಾ ಬಿಡುಗಡೆ ಮಾಡಿರುವ ಭಾರತದ ಶ್ರೀಮಂತರ ಪಟ್ಟಿಯಲ್ಲಿ 3.80 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮುಕೇಶ್‌ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಲಂಡನ್‌ ಮೂಲದ ಎಸ್‌.ಪಿ.ಹಿಂದೂಜಾ ಮತ್ತು ಕುಟುಂಬ 1.86 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 2ನೇ ಸ್ಥಾನ, 1.17 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜೀ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸಂಖ್ಯೆ ಹೆಚ್ಚಳ: ಇದೇ ವೇಳೆ 1000 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಹೊಂದಿದವರ ಪಟ್ಟಿಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. 2018ರಲ್ಲಿ 1000 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಹೊಂದಿದವರ ಸಂಖ್ಯೆ 831 ಇದ್ದರೆ, 2019ರಲ್ಲಿ ಅದು 953ಕ್ಕೆ ಏರಿದೆ.

ಸಿರಿವಂತರ ಪಟ್ಟಿಯಲ್ಲಿರುವ ಟಾಪ್‌ 25 ಶ್ರೀಮಂತರ ಒಟ್ಟು ಆಸ್ತಿ ಭಾರತದ ಜಿಡಿಪಿಯ ಶೇ.10ರಷ್ಟಿದೆ. ಅದೇ ಟಾಪ್‌ 953 ಶ್ರೀಮಂತರ ಒಟ್ಟು ಆಸ್ತಿಯ ದೇಶದ ಒಟ್ಟು ಜಿಡಿಪಿಯ ಶೇ.27ರಷ್ಟಾಗುತ್ತದೆ ಎಂದು ವರದಿ ಹೇಳಿದೆ.

ವಾಣಿಜ್ಯ ರಾಜಧಾನಿ ಮುಂಬೈ ದೇಶದಲ್ಲಿ ಅತಿ ಹೆಚ್ಚು (246) ಸಿರಿವಂತ ಉದ್ಯಮಿಗಳನ್ನು ಹೊಂದಿದ್ದರೆ, ದೆಹಲಿಯಲ್ಲಿ 175 ಮತ್ತು ಬೆಂಗಳೂರಿನಲ್ಲಿ ಜನ ವಾಸವಿದ್ದಾರೆ.

ಓಯೋ ರೂಮ್ಸ್‌ನ ರಿತೇತ್‌ ಅಗರ್‌ವಾಲ್‌ 7500 ಕೋಟಿ ರು. ಆಸ್ತಿಯೊಂದಿಗೆ ದೇಶದ ಅತಿಕಿರಿಯ ಸ್ವಯಂ ಸಂಪಾದನೆ ಮಾಡಿದ ಶ್ರೀಮಂತ ಎನ್ನಿಸಿಕೊಂಡಿದ್ದಾರೆ.

click me!