ರಿಲಯನ್ಸ್ ಷೇರು ಮೌಲ್ಯ ಕುಸಿತದ ಬೆನ್ನಲ್ಲೇ ಮುಕೇಶ್ ಅಂಬಾನಿಗೆ ಮತ್ತೊಂದು ಶಾಕ್!

By Suvarna NewsFirst Published Jan 9, 2021, 4:44 PM IST
Highlights

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೆಶ್ ಅಂಬಾನಿಗೆ ಬಿಗ್ ಶಾಕ್| ರಿಲಯನ್ಸ್ ಷೇರು ಮೌಲ್ಯ ಕುಸಿಯುತ್ತಿದ್ದಂತೆಯೇ ಮತ್ತೊಂದು ಆಘಾತ| ಚೇತರಿಸಿಕೊಳ್ತಾರಾ ಅಂಬಾನಿ

ಮುಂಬೈ(ಜ.09): ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಚೇರ್ಮನ್ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮತ್ತಷ್ಟು ಕೆಳಗಿಳಿದಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಅನ್ವಯ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಅಂಬಾನಿ ಸದ್ಯ ಈ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ. 

ಬ್ಲೂಮ್‌ಬರ್ಗ್ ಶ್ರೇಣಿಯನ್ವಯ ಅಂಬಾನಿಯ ಒಟ್ಟು ಆಸ್ತಿ ಮೌಲ್ಯ 74.3 ಬಿಲಿಯನ್ ಡಾಲರ್ ಇದೆ. ಇನ್ನು 2020ರ ಆಗಸ್ಟ್‌ನಲ್ಲಿ ಮುಕೇಶ್ ಅಂಬಾನಿ ಬ್ಲೂಮ್‌ಬರ್ಗ್ ರ್ಯಾಂಕಿಂಗ್‌ನಲ್ಲಿ ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ಇದಾದ ಬಳಿಕ RILನ ಷೇರು ಮೌಲ್ಯ ಕುಸಿದಿದ್ದು, ಇದರೊಂದಿಗೆ ಅವರ ಒಟ್ಟು ಆಸ್ತಿ ಮೌಲ್ಯವೂ ಕೆಳಗಿಳಿದಿದೆ.  

ಕಳೆದ ಮೂರು ತಿಂಗಳಲ್ಲಿ ರಿಲಯನ್ಸ್ ಷೇರು ಮೌಲ್ಯ ಶೇ. 18 ರಷ್ಟು ಕುಸಿದಿದೆ. ಈ ಮೂಲಕ ಅಂಬಾನಿ ತಮ್ಮ ಸಾರ್ವಕಾಲಿಕ ಅತ್ಯುನ್ನತ ಸ್ಥಾನ 2,369.35ದಿಂದ ಶೇ. 18.3ರಷ್ಟು ಕುಸಿದಿದ್ದಾರೆ. ಇನ್ನು ರಿಯನ್ಸ್‌ನ ಫ್ಯೂಚರ್ ಗ್ರೂಪ್ ಚಿಲ್ಲರೆ ಮತ್ತು ಸಗಟು ವ್ಯವಹಾರಗಳನ್ನು ಖರೀದಿಸುವ ಒಪ್ಪಂದವನ್ನು ಘೋಷಿಸಿದ ನಂತರ RIL ಷೇರುಗಳು ಕುಸಿತ ಕಂಡಿವೆ ರನ್ನಲಾಗಿದೆ.

ಅತ್ತ ಟೆಸ್ಲಾ ಹಾಗೂ ಸ್ಪೇಸ್ Xನ ಸಿಇಒ ಎಲನ್ ಮಸ್ಕ್, ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೇಜೋಸ್‌ರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟಕ್ಕೇರಿದ್ದಾರೆ. ಬ್ಲೂಮ್‌ಬರ್ಗ್ ಅನ್ವಯ ಅವರ ಒಟ್ಟು ಆಸ್ತಿ 209 ಬಿಲಿಯನ್ ಡಾಲರ್‌ ಆಗಿದೆ. ಅತ್ತ ಜೆಫ್ ಒಟ್ಟು ಆಸ್ತಿ ಮೌಲ್ಯ 186 ಬಿಲಿಯನ್ ಡಾಲರ್ ಮೂಲಕ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಬಿಲ್‌ ಗೇಟ್ಸ್ ಪಾಲಾಗಿದೆ. ಇವರ ಒಟ್ಟು ಆಸ್ತಿ 134 ಬಿಲಿಯನ್ ಡಾಲರ್ ಆಗಿದೆ. ಇನ್ನು 117 ಬಿಲಿಯನ್ ಡಾಲರ್ ಹೊಂದಿರುವ ಬರ್ನಾರ್ಡ್ ಅರ್ನೋಲ್ಟಾ ಹಾಗೂ 101 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ತಲಾ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

click me!