Zomatoಗಿಂತ 28 ವರ್ಷದ ಮೊದಲೇ ಮುಟ್ಟಿನ ರಜೆ ಆರಂಭಿಸಿದ್ದ ಬಿಹಾರ ಸರ್ಕಾರ!

Published : Jan 09, 2021, 04:19 PM IST
Zomatoಗಿಂತ 28 ವರ್ಷದ ಮೊದಲೇ ಮುಟ್ಟಿನ ರಜೆ ಆರಂಭಿಸಿದ್ದ ಬಿಹಾರ ಸರ್ಕಾರ!

ಸಾರಾಂಶ

ಹೊಸತಲ್ಲ ಮುಟ್ಟಿನ ರಜೆ ಎಂಬ ಕಾನ್ಸೆಪ್ಟ್| ಜೊಮ್ಯಾಟೋಗಿಂತ ಮೊಲೇ ಈ ಬಗೆಯ ರಜೆ ಘೋಷಿಸಿದ್ದ ಬಿಹಾರ ಸರ್ಕಾರ| ಮಹಿಳೆಯರಿಗೆ ರಜೆ ಪಡೆಯುವ ಅವಕಾಶ ಕಲ್ಪಿಸಿದ್ದ ಸರ್ಕಾರ

ನವದೆಹಲಿ(ಜ.09): ಇತ್ತೀಚೆಗಷ್ಟೇ ಜೊಮ್ಯಾಟೋ ತನ್ನ ಮಹಿಳಾ ಹಾಗೂ ತೃತೀಯ ಲಿಂಗಿ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ಪರಿಚಯಿಸಿತ್ತು. ಈ ವಿಚಾರ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು, ಅಲ್ಲದೇ ಈ ಕುರಿತಾಗಿ ಸೋಶಿಯಲ್ ಮಿಡಿಯಾದಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಆದರೆ ನಿಮಗೆ ಗೊತ್ತಾ ಈ ಮುಟ್ಟಿನ ರಜೆ ಎಂಬ ಕಾನ್ಸೆಪ್ಟ್ ಭಾರತಕ್ಕೆ ಹೊಸತಲ್ಲ...!, ಹೌದು ಕಳೆದ 28 ವರ್ಷಗಳ ಹಿಂದೆಯೇ ಬಿಹಾರ ಸರ್ಕಾರ ಈ ಬಗೆಯ ರಜೆಯನ್ನು ಜಾರಿಗೊಳಿಸಿತ್ತು. ಅಂದು ಮಹಿಳಾ ಉದ್ಯೋಗಿಗಳಿಗೆ ಬಿಹಾರ ಸರ್ಕಾರ ಎರಡು ದಿನದ ಮುಟ್ಟಿನ ರಜೆ ನೀಡಲಾರಂಭಿಸಿತ್ತು. 

1992ರ ಜನವರಿ 2 ರಂದು ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಜೈವಿಕ ಕಾರಣಗಳಿಂದಾಗಿ ನಿಯಮಿತ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಎರಡು ದಿನ ಸಾಮಾನ್ಯ ರಜೆ ನೀಡಬೇಕೆಂದು ತಿಳಿಸಲಾಗಿತ್ತು. 

ಇಷ್ಟೇ ಅಲ್ಲದೇ ಕಳೆದ ಕೆಲ ವರ್ಷಗಳ ಹಿಂದೆ ಜೊಮ್ಯಾಟೋ ಇಂತಹ ರಜೆ ನೀಡುವುದಕ್ಕೂ ಮೊದಲೇ, ವೆಬ್‌ಸೈಟ್ ಕಲ್ಚರ್ ಮಷೀನ್, ಗೋಝೂಪ್, ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಫರ್ಮ್ ಫ್ಲೈಮೈಬಿಜ್ ಕೂಡಾ ತಮ್ಮ ಮಹಿಖಾ ಉದ್ಯೋಗಿಗಳಿಗೆ ಇಂತಹುದ್ದೊಂದು ರಜೆ ಆರಂಭಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ ಮುಟ್ಟಿನ ರಜೆ ಎಂಬ ಕಾನ್ಸೆಪ್ಟ್ ನಮ್ಮ ದೇಶದಲ್ಲೇ ಆರಂಭವಾಗಿದ್ದು, ಹೊರಗಿನ ಪರಿಕಲ್ಪನೆಯಲ್ಲ ಎಂಬುವುದು ಸ್ಪಷ್ಟ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!