ಮುಖೇಶ್ ಅಂಬಾನಿ ಭಾರತದ ನಂ.1 ಸಿರಿವಂತ; ಎರಡನೇ ಸ್ಥಾನಕ್ಕೆ ಕುಸಿದ ಅದಾನಿ; ಇಲ್ಲಿದೆ ಹುರೂನ್ ಇಂಡಿಯಾ -2023 ಪಟ್ಟಿ

By Suvarna News  |  First Published Oct 10, 2023, 4:48 PM IST

ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿ 2023ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ನಂ.1 ಶ್ರೀಮಂತನ ಪಟ್ಟವನ್ನು ಮರಳಿ ಪಡೆದಿದ್ದಾರೆ. ಕಳೆದ ವರ್ಷ ಅದಾನಿ ಸಮೂಹ ಸಂಸ್ಥೆ ಮುಖ್ಯಸ್ಥ ಗೌತಮ್ ಅದಾನಿ ಈ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದರು.ಈ ಬಾರಿ ಅದಾನಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 


ನವದೆಹಲಿ (ಅ.10): ಈ ಸಾಲಿನ‘360 ಒನ್ ವೆಲ್ತ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್ 2023’ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮೊದಲ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಕಳೆದ ವರ್ಷ ಭಾರತದ ನಂ.1 ಶ್ರೀಮಂತ ಉದ್ಯಮಿ ಎಂದು ಗುರುತಿಸಿಕೊಂಡಿದ್ದ ಗೌತಮ್ ಅದಾನಿ ಅವರನ್ನು ಅಂಬಾನಿ ಹಿಂದಿಕ್ಕಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಮುಖೇಶ್ ಅಂಬಾನಿ ಅವರ ಸಂಪತ್ತಿನಲ್ಲಿ ಶೇ.2ರಷ್ಟು ಏರಿಕೆಯಾಗಿದ್ದು, ಒಟ್ಟು 808,700 ಕೋಟಿ ರೂ. ಸಂಪತ್ತು ಹೊಂದಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ಹಿಂಡೆನ್‌ಬರ್ಗ್‌ ವರದಿ ಹೊರ ಬಂದ ಬಳಿಕ ಲಕ್ಷ ಲಕ್ಷ ಕೋಟಿ ರೂ.ಕಳೆದುಕೊಂಡಿದ್ದರೂ ಗೌತಮ್ ಅದಾನಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಅದಾನಿ ಸಂಪತ್ತಿನಲ್ಲಿ ಈ ವರ್ಷ ಶೇ.57ರಷ್ಟು ಇಳಿಕೆಯಾಗಿದ್ದು, ಒಟ್ಟು ಸಂಪತ್ತು 4,74,800 ಕೋಟಿ ರೂ.ಗೆ ಕುಸಿದಿದೆ. ಹೀಗಾಗಿಯೇ ಅದಾನಿ ಈ ವರ್ಷ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಸೈರಸ್ ಎಸ್ ಪೂನಾವಾಲಾ ಹಾಗೂ ಕುಟುಂಬ ಮೂರನೇ ಸ್ಥಾನದಲ್ಲಿದೆ. ಇವರು ವಾರ್ಷಿಕ 278,500 ಕೋಟಿ ರೂ. ವಹಿವಾಟು ಹೊಂದಿದ್ದಾರೆ.

ಹುರೂನ್ ಇಂಡಿಯಾ ಹಾಗೂ 360 ಒನ್ ವೆಲ್ತ್ ಸಂಸ್ಥೆಗಳು ಜೊತೆಯಾಗಿ ಪ್ರತಿವರ್ಷ ಭಾರತದ ಶ್ರೀಮಂತರ ಪಟ್ಟಿ ಸಿದ್ಧಪಡಿಸುತ್ತವೆ. ಅದರಂತೆ ಈ ವರ್ಷ ಕೂಡ ಪಟ್ಟಿ ಸಿದ್ಧಪಡಿಸಿವೆ. ಇನ್ನು ಈ ಪಟ್ಟಿಯಲ್ಲಿ ಎಚ್ ಸಿಎಲ್ ಮುಖ್ಯಸ್ಥ ಶಿವ್ ನಡಾರ್ 2,28,900 ಕೋಟಿ ರೂ. ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಗೋಪಿಚಂದ್ ಹಿಂದೂಜ ಆಂಡ್ ಫ್ಯಾಮಿಲಿ 1 ,76,500 ಕೋಟಿ ರೂ. ಸಂಪತ್ತಿನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. 

Tap to resize

Latest Videos

ಅಂಬಾನಿ, ಅದಾನಿಗಿಂತ ಎರಡು ಪಟ್ಟು ಹೆಚ್ಚು ಶ್ರೀಮಂತ ಈ ಸೂಪರ್‌ಮಾರ್ಕೆಟ್‌ ಮಾಲೀಕ! ಒಟ್ಟು ಆಸ್ತಿ ಮೌಲ್ಯವೆಷ್ಟು?

ಹುರೂನ್ ಇಂಡಿಯಾ  2023ರ ಶ್ರೀಮಂತರ ಪಟ್ಟಿ:
1.ಮುಖೇಶ್ ಅಂಬಾನಿ 
2.ಗೌತಮ್ ಅದಾನಿ 
3.ಸೈರಸ್ ಎಸ್ ಪೂನಾವಾಲಾ ಹಾಗೂ ಕುಟುಂಬ 
4.ಶಿವ್ ನಡಾರ್ 
5.ಗೋಪಿಚಂದ್ ಹಿಂದೂಜ ಆಂಡ್ ಫ್ಯಾಮಿಲಿ 
6.ದಿಲೀಪ್ ಸಾಂಘ್ವಿ  (ಸನ್ ಫಾರ್ಮ) 
7.ಎಲ್ ಎನ್ ಮಿತ್ತಲ್ ಅಂಡ್ ಫ್ಯಾಮಿಲಿ 
8.ರಾಧಾಕೃಷ್ಣ ದಮನಿ (ಅವೆನ್ಯೂ ಸೂಪರ್ ಮಾರ್ಕೆಟ್) 
9.ಕುಮಾರಮಂಗಲಂ ಬಿರ್ಲಾ ಮತ್ತು ಕುಟುಂಬ 
10. ನೀರಜ್ ಬಜಾಜ್ ಮತ್ತು ಕುಟುಂಬ 

ನೀತಾ ಅಂಬಾನಿ, ಚಿನ್ನಲೇಪಿತ, ವಜ್ರ ಹುದುಗಿಸಿದ ವಿಶ್ವದ ಅತೀ ದುಬಾರಿ ಐಫೋನ್‌ ಬಳಸ್ತಾರಾ? ಸತ್ಯಾಂಶವೇನು?

ರಾಧಾವೆಂಬು ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ
ಇನ್ನು ಈ ಬಾರಿಯ ಹುರೂನ್ ಇಂಡಿಯಾ ಪಟ್ಟಿಯಲ್ಲಿ ಝುಹೂ ಸಂಸ್ಥೆ ಮುಖ್ಯಸ್ಥೆ ರಾಧಾ ವೆಂಬು ಶ್ರೀಮಂತ ಭಾರತೀಯ ಸೆಲ್ಫ್ ಮೇಡ್ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. ಇವರು ನೈಕಾ ಸಂಸ್ಥಾಪಕಿ ಫಾಲ್ಗುಣಿ ನಾಯರ್ ಅವರನ್ನು ಹಿಂದಿಕ್ಕಿ ಈ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಕನ್ ಫ್ಲೂಯೆಂಟ್ ಸಹಸಂಸ್ಥಾಪಕಿ ನೇಹಾ ನರ್ಖೆಡೆ ಅತ್ಯಂತ ಕಿರಿಯ ಸೆಲ್ಫ್ ಮೇಡ್ ಮಹಿಳಾ ಉದ್ಯಮಿ ಎಂದು ಗುರುತಿಸಿಕೊಂಡಿದ್ದಾರೆ. 

1,319 ಮಂದಿ ಸಾವಿರ ಕೋಟಿ ಒಡೆಯರು
ಹುರೂನ್ ಇಂಡಿಯಾ ವರದಿ ಅನ್ವಯ ಭಾರತದಲ್ಲಿ ಈಗ ₹1,000 ಕೋಟಿಗಿಂತ ಅಧಿಕ ಸಂಪತ್ತು ಹೊಂದಿರುವ 1,319 ಮಂದಿ ಇದ್ದಾರೆ. ಕಳೆದ ವರ್ಷಕ್ಕಿಂತ 219 ಮಂದಿ ಹೆಚ್ಚಿದ್ದಾರೆ. ಇನ್ನು ಈ ಪಟ್ಟಿಯಲ್ಲಿರುವ ಶ್ರೀಮಂತರ ಒಟ್ಟು ಸಂಪತ್ತು 109 ಲಕ್ಷ ಕೋಟಿ ರೂ. ಆಗಿದೆ. ಇದು ಸಿಂಗಾಪುರ, ಯುಎಇ ಹಾಗೂ ಸೌದಿ ಅರೇಬಿಯಾದ ಒಟ್ಟು ಜಿಡಿಪಿಗಿಂತ ಹೆಚ್ಚಿದೆ. ಇನ್ನು ಭಾರತದಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಲು ಆಸಕ್ತಿ ತೋರುತ್ತಿರೋರ ಸಂಖ್ಯೆ ಹೆಚ್ಚಿದೆ ಎಂದು ಈ ವರದಿ ತಿಳಿಸಿದೆ. ಶೇ.64ರಷ್ಟು ಮಂದಿ ಸೆಲ್ಫ್ ಮೇಡ್ ಉದ್ಯಮಿಗಳಾಗಿದ್ದಾರೆ. 

click me!