ಮುಕೇಶ್ ಅಂಬಾನಿ ಸತತ 5ನೇ ವರ್ಷ ವೇತನ ತ್ಯಜಿಸಿದರೂ ಆದಾಯ ಹೆಚ್ಚಾಗುತ್ತಿರುವುದು ಹೇಗೆ?

Published : Aug 07, 2025, 04:30 PM IST
Mukesh Ambani

ಸಾರಾಂಶ

ಮುಕೇಶ್ ಅಂಬಾನಿ ಸತತ 5ನೇ ವರ್ಷ ತಮಗೆ ಒಂದು ರೂಪಾಯಿ ಸ್ಯಾಲರಿ ಬೇಡ ಎಂದಿದ್ದಾರೆ. ಇಷ್ಟಾದರೂ ಮುಕೇಶ್ ಅಂಬಾನಿ ಆದಾಯ ಹೆಚ್ಚಾಗುತ್ತಿರುವುದು ಹೇಗೆ?

ಮುಂಬೈ (ಆ.07) ಉದ್ಯಮಿ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರಿ ಗ್ರೂಪ್ ಚೇರ್ಮೆನ್. ಮುಕೇಶ್ ಅಂಬಾನಿ ಕಳೆದ ನಾಲ್ಕು ವರ್ಷಗಳಿಂದ ಒಂದು ರೂಪಾಯಿ ಸ್ಯಾಲರಿ ಪಡೆಯುತ್ತಿಲ್ಲ. ಇದೀಗ 5ನೇ ವರ್ಷವೂ ತಮ್ಮ ನಿರ್ಧಾರ ಬದಲಿಸಿಲ್ಲ. ಸ್ಯಾಲರಿ, ಭತ್ಯೆ, ಖರ್ಚು -ವೆಚ್ಚ ಸೇರಿದಂತೆ ಒಂದು ರೂಪಾಯಿಯನ್ನು ಕಂಪನಿಯಿಂದ ಪಡೆಯುತ್ತಿಲ್ಲ. ಕೋವಿಡ್ ವೇಳೆ ಮುಕೇಶ್ ಅಂಬಾನಿ ಆರ್ಥಿಕತೆ ಸರಿದೂಗಿಸಲು ಹಾಗೂ ತನ್ನ ಕಂಪನಿಯ ಉದ್ಯೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ವೇತನ ತ್ಯಜಿಸಿದ್ದರು. ಬಳಿಕ ಪ್ರತಿ ವರ್ಷ ಮುಂದುವರಿಸಿಕೊಂಡು ಬಂದಿದ್ದಾರೆ. ಇದೀಗ 5ನೇ ವರ್ಷವೂ ಮುಕೇಶ್ ಅಂಬಾನಿ ವೇತನ ತ್ಯಜಿಸಿದ್ದಾರೆ. ಇಷ್ಟಾದರೂ ಮುಕೇಶ್ ಅಂಬಾನಿ ಆದಾಯ ಹೆಚ್ಚಾಗುವುದು ಹೇಗೆ? ಅಂಬಾನಿ ಖರ್ಚು ವೆಚ್ಚಗಳ, ಕಾರ್ಯಕ್ರಮ ಆಯೋಜನೆಗಳಿಗೆ ದುಡ್ಡು ಎಲ್ಲಿಂದ ಅನ್ನೋ ಪ್ರಶ್ನೆಗಳಿಗೆ ಉತ್ತರ ಬಹಿರಂಗವಾಗಿದೆ.

ಪ್ರತಿ ವರ್ಷ ಅಂಬಾನಿ ಖಾತೆಗೆ ಸರಿಸರುಮಾರು 3,600 ಕೋಟಿ ರೂ

ಮುಕೇಶ್ ಅಂಬಾನಿ ಒಂದು ರೂಪಾಯಿ ವೇತನ ಪಡೆಯುತ್ತಿಲ್ಲ. ಆದರೆ ಪ್ರತಿ ವರ್ಷ ಮುಕೇಶ್ ಅಂಬಾನಿ ಹೆಚ್ಚು ಕಡಿಮೆ 3,000 ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಕಳೆದ ವರ್ಷದ ಸಾಲಿನಲ್ಲಿ ಮುಕೇಶ್ ಅಂಬಾನಿ 3,600 ಕೋಟಿ ರೂಪಾಯಿ ಆದಾಯ ಪಡೆದಿದ್ದಾರೆ. ಒಂದು ರೂಪಾಯಿ ವೇತನ ಪಡೆಯದಿದ್ದರೂ ಮುಕೇಶ್ ಅಂಬಾನಿ ಸಾವಿರಾರು ಕೋಟಿ ರೂಪಾಯಿ ಆದಾಯ ಪಡೆಯುತ್ತಿರುವುದು ಹೇಗೆ?

ಡಿವಿಡೆಂಡ್ ಮೂಲಕ ಮುಕೇಶ್ ಅಂಬಾನಿ ಖಾತೆಗೆ ಆದಾಯ

ಮುಕೇಶ್ ಅಂಬಾನಿ ಆಸ್ತಿ ಬರೋಬ್ಬರಿ 110 ಬಿಲಿಯನ್ ಅಮೆರಿಕನ್ ಡಾಲರ್. ಅಂಬಾನಿ ಪ್ರತಿ ವರ್ಷ ಡಿವಿಡೆಂಡ್ ಮೂಲಕ ಸಾವಿರಾರು ಕೋಟಿ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮುಕೇಶ್ ಅಂಬಾನಿ, ರಿಲಯನ್ಸ್ ಕಂಪನಿಯ 1.61 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಶೇಕಡಾ 5.50ರ ಬಡ್ಡಿದರ ಮೂಲಕ ಮುಕೇಶ್ ಅಂಬಾನಿ 8.85 ಕೋಟಿ ರೂಪಾಯಿ ಡಿವೆಡೆಂಟ್ ಮೊತ್ತ ಆದಾಯ ರೂಪಾಯದಲ್ಲಿ ಪಡೆಯುತ್ತಾರೆ. ಇಷ್ಟೇ ಅಲ್ಲ, ಅಂಬಾನಿ ಒಡೆತದನ ಪ್ರಮೋಟರ್ ಗ್ರೂಪ್ ಕಂಪನಿಯ ಬಹುತೇಕ ಷೇರು ಮುಕೇಶ್ ಅಂಬಾನಿ ಬಳಿ ಇದೆ. ಈ ಮೂಲಕ 2024-25ರ ಸಾಲಿನಲ್ಲಿ ಮುಕೇಶ್ ಅಂಬಾನಿ ಡಿವಿಡೆಂಡ್ ರೂಪದಲ್ಲಿ 3655 ರೂಪಾಯಿ ಆದಾಯ ಪಡೆದಿದ್ದಾರೆ.

ಕೋವಿಡ್‌ಗೂ ಮೊದಲು ಅಂಬಾನಿ ಸ್ಯಾಲರಿ ಎಷ್ಟಿತ್ತು?

ಕೋವಿಡ್ ಮಾಹಾಮಾರಿಯಿಂದ ಆರ್ಥಿಕತೆ, ಕಂಪನಿಗಳ ಆದಾಯಗಳ ಮೇಲೆ ತೀವ್ರ ಹೊಡೆತ ಬಿದ್ದಿತ್ತು. 2020ರಲ್ಲಿ ಮುಕೇಶ್ ಅಂಬಾನಿ ಒಂದು ರೂಪಾಯಿ ಸ್ಯಾಲರಿ ಪಡೆಯದೇ ಕೆಲಸ ಮಾಡಲು ನಿರ್ಧರಿಸಿದ್ದರು. ಬಳಿಕ ಪ್ರತಿ ವರ್ಷ ಇದೇ ಸಂಪ್ರದಾಯ ಮುಂದುವರಿಸಿದ್ದಾರೆ. ಇದೀಗ 5ನೇ ವರ್ಷವೂ ಮುಕೇಶ್ ಅಂಬಾನಿ ಸ್ಯಾಲರಿ ಪಡೆಯದಿರಲು ನಿರ್ಧರಿಸಿದ್ದಾರೆ. ಕೋವಿಡ್‌ಗೂ ಮೊದಲು ಮುಕೇಶ್ ಅಂಬಾನಿ ವಾರ್ಷಿಕವಾಗಿ 15 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದರು. 2008-09 ರಿಂದ 2019-20 ರ ವರೆಗೂ ಮುಕೇಶ್ ಅಂಬಾನಿ ಸ್ಯಾಲರಿಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಬೋರ್ಡ್ ಸದಸ್ಯರಿಗೆ ಮೀಟಿಂಗ್, ಭತ್ಯೆ ಮಾತ್ರ

ಮುಕೇಶ್ ಅಂಬಾನಿ ರಿಲಯನ್ಸ್ ಬೋರ್ಡ್‌ನಲ್ಲಿ ಹಲವು ಸದಸ್ಯರಿದ್ದಾರೆ. ಇವರ ಜವಾಬ್ದಾರಿ ಹುದ್ದೆಗಳಿಗೆ ಅನುಸಾರ ವೇತನ ನೀಡಲಾಗುತ್ತದೆ. 2023ರಲ್ಲಿ ರಿಲಯನ್ಸ್ ಬೋರ್ಡ್ ಸದಸ್ಯರಾಗಿ ಇಶಾ ಅಂಬಾನಿ, ಅಕಾಶ್ ಅಂಬಾನಿ ಹಾಗೂ ಅನಂತ್ ಅಂಬಾನಿಯನ್ನು ಸೇರ್ಪಡೆಗೊಳಿಸಲಾಗಿತ್ತು. ಈ ವೇಳೆ ಇವರಿಗೆ ಯಾವುದೇ ವಾರ್ಷಿಕ ವೇತನ ಇರಲಿಲ್ಲ. ಸಭೆ ಸೇರಿದಂತೆ ಇತರ ಪ್ರಮುಖ ಬೋರ್ಡ್ ಮೀಟಿಂಗ್‌ಗಳ ಸಿಟ್ಟಿಂಗ್ ಚಾರ್ಜ್ ಮಾತ್ರ ನೀಡಲಾಗುತ್ತಿತ್ತು. ಇತ್ತೀಚೆಗೆ ಅನಂತ್ ಅಂಬಾನಿ ರಿಲಯನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಗೊಂಡಿದ್ದಾರೆ. ಈ ವೇಳೆ ಅನಂತ್ ಅಂಬಾನಿಗೆ ವಾರ್ಷಿಕ ವೇತನವಾಗಿ 10 ರಿಂದ 20 ಕೋಟಿ ರೂಪಾಯಿ ಫಿಕ್ಸ್ ಮಾಡಲಾಗಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!