ಸಿಎನ್‌ಜಿ ಗ್ಯಾಸ್‌ಗೆ ಟಕ್ಕರ್‌, CBG ಇಂಧನ ಉತ್ಪಾದನೆಗೆ 5000 ಕೋಟಿ ಹೂಡಿಕೆಗೆ ಮುಂದಾದ ಅಂಬಾನಿ, ಏನಿದು ಸಿಬಿಜಿ?

By Suvarna News  |  First Published Feb 27, 2024, 6:56 PM IST

ಅಂಬಾನಿಯ ರಿಲಾಯನ್ಸ್ ಕಂಪನಿ  ಸುಸ್ಥಿರ ಶಕ್ತಿಯತ್ತ ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಹಸಿರು ಇಂಧನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಬರೋಬ್ಬರಿ  5,000 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆಗೆ ಮುಂದಾಗಿದೆ.


ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಸುಸ್ಥಿರ ಶಕ್ತಿಯತ್ತ ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಹಸಿರು ಇಂಧನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಅಂಬಾನಿಯ ರಿಲಾಯನ್ಸ್ ಕಂಪನಿ, ಮುಂದಿನ ಎರಡು ವರ್ಷಗಳಲ್ಲಿ 50 ಕ್ಕೂ ಹೆಚ್ಚು ಸಂಕುಚಿತ ಜೈವಿಕ ಅನಿಲ (CBG) ಸ್ಥಾವರಗಳನ್ನು ಸ್ಥಾಪಿಸಲು ಯೋಜಿಸಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಬರೋಬರಿ 5,000 ಕೋಟಿ ರೂ.ಗಿಂತ ಹೆಚ್ಚು ವ್ಯಯಿಸಲು ಮುಂದಾಗಿದೆ.

CBG ಹಸಿರು ಇಂಧನವಾಗಿದ್ದು, ಕಸದ ತ್ಯಾಜ್ಯ ಅಥವಾ ಇತರ ಜೀವರಾಶಿ ಮೂಲಗಳಿಂದ ರಚಿಸಲಾದ ಗ್ಯಾಸ್‌ ಆಗಿದೆ. ಇದು ಸಿಎನ್‌ಜಿ ಗ್ಯಾಸ್‌   (Compressed natural gas -ಸಂಕುಚಿತ ನೈಸರ್ಗಿಕ ಅನಿಲ) ಗೆ ಸಮಾನವಾದ ಗುಣಲಕ್ಷಣಗಳನ್ನು ಹೊಂದಿದೆ. ಈ ಇಂಧನವು ಆಟೋಮೋಟಿವ್, ಕೈಗಾರಿಕಾ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಬಳಸಬಹುದಾಗಿದೆ.

Tap to resize

Latest Videos

ಅನಂತ್- ರಾಧಿಕಾ ನಿಶ್ಚಿತಾರ್ಥಕ್ಕೆ ಉಂಗುರ ತಂದವರು ಅಂಬಾನಿ ಕುಟುಂಬಕ್ಕೆ ಅದೃಷ್ಟವಂತೆ, ಯಾರವರು ಗೆಸ್‌ ಮಾಡಿ!

ದಿ ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ,  ರಿಲಾಯನ್ಸ್ ಈಗಾಗಲೇ 50 ಸಿಬಿಜಿ ಸ್ಥಾವರಗಳಿಗೆ ಟೆಂಡರ್‌ಗಳನ್ನು ನೀಡಿದೆ. ಶೀಘ್ರದಲ್ಲೇ ಇದನ್ನು ಮತ್ತಷ್ಟು  ವಿತರಿಸುವ ಯೋಜನೆ ಇದೆ. ಪ್ರತಿ ದಿನ 250-500 ಟನ್‌ಗಳ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಈ ಸ್ಥಾವರಗಳು ಪ್ರತಿದಿನ 10 ರಿಂದ 20 ಟನ್‌ಗಳಷ್ಟು CBG ಯನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ.

ರಿಲಾಯನ್ಸ್ ಇಷ್ಟು ಮಾತ್ರ ಯೋಚಿಸಿರುವುದಲ್ಲ ಆರಂಭದಲ್ಲಿ ಘೋಷಿಸಲಾದ 100 ಸಿಬಿಜಿ ಸ್ಥಾವರಗಳ ಬದಲಾಗಿ ಒಟ್ಟು 106 CBG ಸ್ಥಾವರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದಾರೆ. ದಿನಕ್ಕೆ 10 ಟನ್ ಸ್ಥಾವರಕ್ಕಾಗಿ ಸುಮಾರು 100 ಕೋಟಿ ರೂಪಾಯಿಗಳ ಅಂದಾಜು ವೆಚ್ಚವನ್ನು ಲೆಕ್ಕಹಾಕಲಾಗಿದೆ.  ಹೀಗಾಗಿ ಜೈವಿಕ ಶಕ್ತಿ ಉತ್ಪಾದನೆಯನ್ನು ಹೆಚ್ಚಿಸಲು ರಿಲಾಯನ್ಸ್ ಬದ್ಧವಾಗಿದೆ.

ಪ್ರಿಯಾಂಕ ಅಲ್ಲ, ಕಪ್ಪುಗಿರುವ ಕಾರಣ ರಿಜೆಕ್ಟ್ ಆದ ನಟಿ 800 ಕೋಟಿ ರೂ ಹ ...

ರಿಲಾಯನ್ಸ್ ಈ ನಿಟ್ಟಿನಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಕೆಲ ಡೆಮೊ ಘಟಕಗಳನ್ನು ಸ್ಥಾಪಿಸಿದೆ ಮತ್ತು ಉತ್ತರ ಪ್ರದೇಶದಲ್ಲಿ ವಾಣಿಜ್ಯ-ಪ್ರಮಾಣದ CBG ಸ್ಥಾವರವನ್ನು ಕರ್ತವ್ಯದಲ್ಲಿದೆ. ಇದು ಕೃಷಿ ಅವಶೇಷಗಳು, ತ್ಯಾಜ್ಯಗಳು ಸೇವಿಸುವ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಸಾವಯವ ಗೊಬ್ಬರವನ್ನು ಉತ್ಪಾದಿಸುವ ದೊಡ್ಡ ದೃಷ್ಟಿಯ ಭಾಗವಾಗಿ ನಿರ್ಮಾಣವಾಗಿದೆ.

ಹೆಚ್ಚುವರಿಯಾಗಿ, ರಿಲಾಯನ್ಸ್  ತಮ್ಮ Jio-BP ಇಂಧನ ಚಿಲ್ಲರೆ ಮಳಿಗೆಗಳಲ್ಲಿ CBG ಮತ್ತು ಜೈವಿಕ-CNG ಚಿಲ್ಲರೆ ವ್ಯಾಪಾರವನ್ನು ಹೆಚ್ಚಿಗೆ ಮಾಡಲು ಯೋಜಿಸಿದೆ. ಸುಸ್ಥಿರ ಅಭಿವೃದ್ಧಿ ಶಕ್ತಿಗಾಗಿ ರಿಲಾಯಮನ್ಸ್ ಕೇವಲ ಭವಿಷ್ಯದಲ್ಲಿ ಹೂಡಿಕೆ ಮಾಡುತ್ತಿಲ್ಲ ಆದರೆ ಹಸಿರು, ಸ್ವಚ್ಛವಾದ ನಾಳೆಗೆ ದಾರಿ ಮಾಡಿಕೊಡುತ್ತಿದೆ.

click me!