ಜಿಯೋ ಹೊಸ ವರ್ಷದ ಬಂಪರ್, ಕೇವಲ 200 ರೂಪಾಯಿ ಒಳಗೆ 3 ಹೈಸ್ಪೀಡ್ 5ಜಿ ಪ್ಲಾನ್!

By Chethan Kumar  |  First Published Dec 6, 2024, 11:24 AM IST

ಹೊಸ ವರ್ಷ ಸಮೀಪಿಸುತ್ತಿದೆ. ಇದೀಗ ಜಿಯೋ ಗ್ರಾಹಕರಿಗೆ ಹತ್ತು ಹಲವು ಆಫರ್ ನೀಡಲು ಮುಂದಾಗಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗೆ ಕೇವಲ 200 ರೂಪಾಯಿ ಒಳಗೆ ಮೂರು ಹೈಸ್ಪೀಡ್ ಟ್ರೂ 5ಜಿ ಪ್ಲಾನ್  ನೀಡುತ್ತಿದೆ.


ಬೆಂಗಳೂರು(ಡಿ.06) ಭಾರತದ ಖಾಸಗಿ ಟಿಲೆಕಾಂ ಕಂಪನಿಗಳು ತೀವ್ರ ಪೈಪೋಟಿ ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಿಎಸ್‌ಎನ್ಎಲ್ ಹೊಸ ಅವತಾರ. ಕಡಿಮೆ ರೀಚಾರ್ಜ್ ಪ್ಲಾನ್, 4ಜಿ ನೆಟ್‌ವರ್ಕ್ ಮೂಲಕ ಬಿಎಸ್‌ಎನ್ಎಲ್ ಗ್ರಾಹಕರ ಸೆಳೆಯುತ್ತಿದೆ. ಇದೀಗ ಜಿಯೋ ಗ್ರಾಹಕರಿಗೆ ಹೈಸ್ಪೀಡ್ 5ಜಿ ಡೇಟಾ, ಅನ್‌ಲಿಮಿಟೆಡ್ ಕಾಲ್, ಎಸ್ಎಂಎಸ್ , ಲೈವ್ ಸ್ಟ್ರೀಮ್, ಒಟಿಟಿ ಪ್ಲಾಟ್‌ಫಾರ್ಮ್ ಸೇರಿದಂತೆ ಹಲವು ಆಫರ್ ನೀಡಿದೆ. ಕೇವಲ 200 ರೂಪಾಯಿ ಒಳಗೆ ಮೂರು 5ಜಿ ಪ್ಲಾನ್ ನೀಡುತ್ತಿದೆ. ಈ ಮೂಲಕ ಗ್ರಾಹಕರು ಅಡೆತಡೆ ಇಲ್ಲದ ಇಂಟರ್ನೆಟ್, ಅನಿಯಮಿತ ಕರೆ ಸೌಲಭ್ಯಗಳನ್ನು ಪಡೆಯಬಹುದು.

ರಿಲಯನ್ಸ್ ಜಿಯೋ ಭಾರತದಲ್ಲಿ ಬರೋಬ್ಬರಿ 49 ಕೋಟಿ ಗ್ರಾಹಕರನ್ನು ಹೊಂದಿದೆ. ಇತ್ತೀಚೆಗೆ ಜಿಯೋ ಸೇರಿದಂತೆ ಖಾಸಗಿ ಟೆಲಿಕಾಂನ ಕೆಲ ಗ್ರಾಹಕರು ಬಿಎಸ್ಎನ್ಎಲ್‌ಗೆ ಪೋರ್ಟ್ ಆಗಿದ್ದರು. ಬಳಿಕ ಖಾಸಗಿ ಟೆಲಿಕಾಂ ಹೊಸ ಹೊಸ ಆಫರ್ ನೀಡುತ್ತಿದೆ. ಜಿಯೋ ತನ್ನ ಗ್ರಾಹಕರಿಗೆ ನೀಡುತ್ತಿರುವ ಕೈಗೆಟುಕುವ ದರದ ಟ್ರು 5ಜಿ ಮೂರು ಆಫರ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Tap to resize

Latest Videos

ಜಿಯೋ ಆಫರ್‌ಗೆ ಏರ್‌ಟೆಲ್, BSNL ಸುಸ್ತು, ಕೇವಲ 86 ರೂಗೆ 28 ದಿನ ವ್ಯಾಲಿಟಿಡಿ, ಉಚಿತ ಡೇಟಾ!

ಜಿಯೋ 189 ರೂಪಾಯಿ ಪ್ಲಾನ್
ರಿಲಯನ್ಸ್ ಜಿಯೋ ಟ್ರು 5 ಜಿ ಪ್ಲಾನ್ ಅಡಿಯಲ್ಲಿ ಕೇವಲ 189 ರೂಪಾಯಿ ಪ್ಲಾನ್ ನೀಡುತ್ತಿದೆ. ವಿಶೇಷ ಅಂದರೆ 28 ದಿನದ ವ್ಯಾಲಿಟಿಡಿ ಇದಕ್ಕಿದೆ. 2 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಇನ್ನು ಅನ್‌ಲಿಮಿಟೆಡ್ ಕರೆ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಕೂಡ ಉಚಿತವಾಗಿ ಸಿಗಲಿದೆ. ಇದರ ಜೊತೆಗೆ 28 ದಿನ ಜಿಯೋ ಟಿವಿ,ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಉಚಿತ ಸಬ್‌ಸ್ಕ್ರಿಪ್ಶನ್ ಸಿಗಲಿದೆ. ಈ ಪ್ಲಾನ್‌ನಲ್ಲಿರುವ ಒಟ್ಟು ಡೇಟಾ 2 ಜಿಬಿ.

ಜಿಯೋ 198 ರೂಪಾಯಿ 5ಜಿ ಪ್ಲಾನ್
ಹೈಸ್ಪೀಡ್ 5 ಜಿ ಪ್ಲಾನ್ ಪೈಕಿ 198 ರೂಪಾಯಿ ಆಫರ್‌ನಲ್ಲಿ ಗ್ರಾಹಕರು ಪ್ರತಿ ದಿನ 2 ಜಿಬಿ ಡೇಟಾ ಉಚಿತವಾಗಿ ಪಡೆಯಲಿದ್ದಾರೆ. ಪ್ರತಿ ದಿನದ ನಿಗದಿತ ಡೇಟಾ ಮುಗಿದ ಬಳಿಕ ನೆಟ್ ಸ್ಪೀಡ್ ಕಡಿಮೆಯಾಗಲಿದೆ. ಇದರ ವ್ಯಾಲಿಟಿಡಿ 14 ದಿನ. ಈ ಪ್ಲಾನ್ ರೀಚಾರ್ಜ್ ಮಾಡಿಕೊಂಡರೆ ಒಟ್ಟು 28 ಜಿಬಿ 5ಜಿ ಸ್ಪೀಡ್ ಡೇಟಾ ಲಭ್ಯವಾಗಲಿದೆ.

ಜಿಯೋ 199 ರೂಪಾಯಿ ಪ್ಲಾನ್
ರಿಲಯನ್ಸ್ ಜಿಯೋ ಪ್ಲಾನ್ 199 ರೂಪಾಯಿ ಪ್ಲಾನ್ ಕೂಡ ಹಲವು ಸೌಲಭ್ಯ ನೀಡುತ್ತಿದೆ. ಪ್ರತಿ ದಿನ 1.5ಜಿಬಿ ಡೇಟಾ ಈ ಪ್ಲಾನ್ ಮೂಲಕ ಗ್ರಾಹಕರಿಗೆ ಸಿಗಲಿದೆ. ಇನ್ನು ಅನ್‌ಲಿಮಿಟೆಡ್ ಕಾಲ್ ಸೌಲಭ್ಯವೂ ಸಿಗಲಿದೆ. ಪ್ರತಿ ದಿನ 100 ಎಸ್ಎಂಸ್ ಕೂಡ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಉಚಿತ ಸಬ್‌ಸ್ಕ್ರಿಪ್ಶನ್ ಸಿಗಲಿದೆ.

ಜಿಯೋ ಬಂಪರ್, ತಿಂಗಳಿಗೆ 160 ರೂ.ನಂತೆ 84 ದಿನ ವ್ಯಾಲಿಟಿಡಿ, ಉಚಿತ ಕರೆ- ಡೇಟಾ ಪ್ಲಾನ್!

ಕೇವಲ 200 ರೂಪಾಯಿ ಒಳಗೆ ಜಿಯೋ ಈ ಮೂರು ಪ್ಲಾನ್ ನೀಡುತ್ತಿದೆ. ಗ್ರಾಹಕರು ತಮ್ಮ ಅವಶ್ಯಕತೆಗೆ ತಕ್ಕಂತೆ ಆಫರ್ ಬಳಸಿಕೊಳ್ಳಬಹುದು. ಕಳೆದ ಜೂನ್ ತಿಂಗಳಲ್ಲಿ ಜಿಯೋ, ಏರ್ಟೆಲ್, ವೋಡಾಫೋನ್ ಆಡಿಯಾ ಟೆಲಿಕಾಂ ಕಂಪನಿಗಳು ರೀಚಾರ್ಜ್, ಟ್ಯಾರಿಫ್, ಟಾಪ್ ಅಪ್ ಬೆಲೆ ಏರಿಕೆ ಮಾಡಿತ್ತು. ಇದು ಟೆಲಿಕಾಂ ಕಂಪನಿಗಳಿಗೆ ತೀವ್ರ ಹೊಡೆತ ನೀಡಿತ್ತು. ಇದರ ಪರಿಣಾಮ ಕೆಲವೇ ತಿಂಗಳಲ್ಲಿ ರಿಲಯನ್ಸ್ ಜಿಯೋ ಬರೋಬ್ಬರಿ 79 ಲಕ್ಷ ಗ್ರಾಹಕರನ್ನು ಕಳೆದುಕೊಂಡಿತ್ತು. ಈ ಗ್ರಾಹಕರು ಬಿಎಸ್ಎನ್ಎಲ್ ಸೇರಿದಂತೆ ಇತರ ನೆಟ್‌ವರ್ಕ್‌ಗಳಿಗೆ ಪೋರ್ಟ್ ಆಗಿದ್ದರು.  ಖಾಸಗಿ ಟೆಲಿಕಾಂ ಕಂಪನಿಗಳು ಒಟ್ಟು 1 ಕೋಟಿಗೂ ಹೆಚ್ಚು ಗ್ರಾಹಕರನ್ನು ಕಳೆದುಕೊಂಡಿತ್ತು. ಈ ಪೈಕಿ ಜಿಯೋ 7.9 ಮಿಲಿಯನ್, ಏರ್‌ಟೆಲ್ 1.4 ಮಿಲಿಯನ್, ವೋಡಾಫೋನ್ ಐಡಿಯಾ 1.5 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿತ್ತು. 

ಖಾಸಗಿ ಕಂಪನಿಗಳು ಗ್ರಾಹಕರ ಕಳೆದುಕೊಂಡರೆ ಬಿಎಸ್‌ಎನ್‌ಎಲ್ ಇದೇ ವೇಳೆ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಂಡಿತ್ತು. 55 ಲಕ್ಷ ಗ್ರಾಹಕರು ಇತರ ನೆಟ್‌ವರ್ಕ್‌ಗಳಿಂದ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗಿದ್ದರು.
 

click me!