895 ರೂ.ಗೆ 336 ದಿನಗಳ ವ್ಯಾಲಿಡಿಟಿ, 24 ಜಿಬಿ ಡೇಟಾ: ಜಿಯೋದಿಂದ ಭರ್ಜರಿ ಆಫರ್: ಡಿಟೇಲ್ಸ್‌ ಇಲ್ಲಿದೆ...

Published : Dec 13, 2024, 02:50 PM ISTUpdated : Dec 13, 2024, 02:53 PM IST
 895 ರೂ.ಗೆ 336 ದಿನಗಳ ವ್ಯಾಲಿಡಿಟಿ, 24 ಜಿಬಿ ಡೇಟಾ: ಜಿಯೋದಿಂದ ಭರ್ಜರಿ ಆಫರ್: ಡಿಟೇಲ್ಸ್‌ ಇಲ್ಲಿದೆ...

ಸಾರಾಂಶ

ಜಿಯೋ ತನ್ನ  ಬಳಕೆದಾರರಿಗೆ  895ಕ್ಕೆ 336 ದಿನಗಳ ವ್ಯಾಲಿಡಿಟಿಯ ಯೋಜನೆ ಪರಿಚಯಿಸಿದೆ. ಈ ಯೋಜನೆಯಲ್ಲಿ 24 ಜಿಬಿ ಡಾಟಾ, ಜಿಯೋ ಅಪ್ಲಿಕೇಶನ್‌ಗಳ ಉಚಿತ ಪ್ರವೇಶ ಮತ್ತು ಪ್ರತಿ 28 ದಿನಗಳಿಗೆ 50 ಉಚಿತ SMS ಸಿಗಲಿದೆ. ಕಡಿಮೆ ಇಂಟರ್ನೆಟ್ ಬಳಸುವವರಿಗೆ ಸೂಕ್ತವಾದ ಈ ಯೋಜನೆ, ಭಾರೀ ಬಳಕೆದಾರರಿಗೆ ಸಾಲದು.  

ಇದಾಗಲೇ ಜಿಯೋ ಗ್ರಾಹಕರು ಹೊಸ ವರ್ಷದ ಕೊಡುಗೆ ಸೇರಿದಂತೆ ಹಲವಾರು  ಆಫರ್‍‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಏರ್‍‌ಟೆಲ್‌ ಸೇರಿದಂತೆ ಬೇರೆ ನೆಟ್ ವರ್ಕ್ ಗಳಿಗೆ ಹೋಲಿಸಿದೆ ಜಿಯೋದ ಬೆಲೆ ಸ್ವಲ್ಪ ಅಗ್ಗವಾಗಿದೆ ಎನ್ನುವುದು ಗ್ರಾಹಕರ ಅಂಬೋಣ. ಕೆಲ ತಿಂಗಳ ಹಿಂದೆ ಜಿಯೋ ಬೆಲೆ ಹೆಚ್ಚು ಮಾಡಿದ್ದರಿಂದ ಹಲವಾರು ಮಂದಿ ಬಿಎಸ್‌ಎನ್‌ಎಲ್‌ ಮೊರೆ ಹೋಗಿದ್ದರು. ಆದರೆ ಈಚೆಗೆ ಬಂದಿರುವ ವರದಿಯ ಪ್ರಕಾರ, ಪುನಃ ಜಿಯೊಗೆ ಅವರು ವರ್ಗಾಯಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ತನ್ನ ಗ್ರಾಹಕರನ್ನು ಮತ್ತಷ್ಟು ಸೆಳೆಯಲು ಜಿಯೋ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಅದರಲ್ಲಿ ಇನ್ನೊಂದು ವಿಶೇಷ ಯೋಜನೆ ಎಂದರೆ 895 ರೂಪಾಯಿಗೆ 336 ದಿನಗಳ ವ್ಯಾಲಿಡಿಟಿ, 24 ಜಿಬಿ ಡಾಟಾ ಯೋಜನೆ ಆಗಿದೆ. ಇದು  336 ಯೋಜನೆಯಾಗಿದೆ. ಇದರ ಬೆಲೆ  ಕೇವಲ 895 ರೂಪಾಯಿಗಳು. ಅಂದರೆ ಹನ್ನೊಂದು ತಿಂಗಳವರೆಗೆ  ರೀಚಾರ್ಜ್ ಮಾಡುವ ಅವಶ್ಯಕತೆ ಇಲ್ಲ. ಇದಕ್ಕೆ 24 ಜಿಬಿ ಡಾಟಾ ಕೂಡ ಸಿಗಲಿದೆ. ಇಂಟರ್‍‌ನೆಟ್‌ ಅನ್ನು ಸ್ವಲ್ಪ ಬಳಸುವವರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಒಂದೇ ಒಂದು ವಿಷಯ ಏನೆಂದರೆ, ಇದನ್ನು ಜಿಯೋ ಗ್ರಾಹಕರಿಗೆ ಅಂದರೆ,  ಜಿಯೋ ಫೋನ್ ಹೊಂದಿರುವವರಿಗೆ ಮಾತ್ರ ಅನ್ವಯಿಸಲಾಗಿದೆ.  ಬೇರೆ ಸ್ಮಾರ್ಟ್‌ಫೋನ್ ಹೊಂದಿರುವವರಿಗೆ ಈ ಯೋಜನೆ ಮಾನ್ಯ ಆಗುವುದಿಲ್ಲ. 

ಪೋಸ್ಟ್ ಆಫೀಸ್​ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!

ಇಷ್ಟೇ ಅಲ್ಲದೇ, ನೀವು ಉಚಿತ SMS ಅನ್ನು ಪಡೆಯುತ್ತೀರಿ, ಆದರೂ ನೀವು ಪ್ರತಿ 28 ದಿನಗಳಿಗೊಮ್ಮೆ 50 ಉಚಿತ SMS ಅನ್ನು ಮಾತ್ರ ಪಡೆಯುತ್ತೀರಿ, ಇದು ಇತರ Jio ಯೋಜನೆಗಳಿಗೆ ಹೋಲಿಸಿದರೆ ಕಡಿಮೆ. ಅಂತಿಮವಾಗಿ, ನೀವು ಈ ಯೋಜನೆಯನ್ನು ಖರೀದಿಸಿದಾಗ, ನೀವು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ಗೆ ಉಚಿತ ಪ್ರವೇಶ ಸೇರಿದಂತೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.

  ಈ ಯೋಜನೆಯು ಕರೆ ಮಾಡಲು ಉತ್ತಮವಾಗಿದ್ದರೂ, ಇದರಲ್ಲಿ ನೀಡಲಾದ ಡೇಟಾವು ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸದಿರಬಹುದು. ನೀವು ಒಟ್ಟು 24 GB ಡೇಟಾವನ್ನು ಪಡೆಯುತ್ತೀರಿ, ಇದು ಮೂಲಭೂತ ಇಂಟರ್ನೆಟ್ ಬಳಕೆಗೆ ಸಾಕಾಗುತ್ತದೆ. ಆದರೆ ಭಾರೀ ಡೇಟಾ ಬಳಕೆದಾರರಿಗೆ ಸೂಕ್ತವಾಗಿರುವುದಿಲ್ಲ. ಅಲ್ಲದೆ, ಈ ಯೋಜನೆಯು ಸುಧಾರಿತ ಟ್ರೂ 5G ಆಯ್ಕೆಗಳನ್ನು ಒಳಗೊಂಡಿಲ್ಲ, ಜೊತೆಗೆ ಜಿಯೋ ಫೋನ್‌ ಹೊಂದಿರುವವರಿಗೆ ಮಾತ್ರವಾಗಿದೆ.  

ಹೊಸ ವರ್ಷಕ್ಕೆ ಜಿಯೋ ಧಮಾಕಾ ಆಫರ್‌; 200 ದಿನ ಅನ್‌ಲಿಮಿಟೆಡ್‌ 5G!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ