ದೇಶದ ಆರ್ಥಿಕತೆ ಪ್ರಗತಿಗೆ ಸಾಕ್ಷಿ: ಭಾರತದ ರೇಟಿಂಗ್ ಹೆಚ್ಚಿಸಿ ಚೀನಾ ರೇಟಿಂಗ್ ಇಳಿಸಿದ Morgan Stanley ಸಂಸ್ಥೆ

By BK AshwinFirst Published Aug 4, 2023, 1:26 PM IST
Highlights

ಜಾಗತಿಕ ಬ್ರೋಕರೇಜ್ ಸಂಸ್ಥೆ ಮೋರ್ಗಾನ್ ಸ್ಟ್ಯಾನ್ಲಿ ಏಷ್ಯಾದ ಪ್ರಮುಖ ಆರ್ಥಿಕತೆಯ ರಾಷ್ಟ್ರಗಳಿಗೆ ತನ್ನ ರೇಟಿಂಗ್‌ಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ಭಾರತದ ರೇಟಿಂಗ್ ಅನ್ನು ‘’ಓವರ್‌ವೇಯ್ಟ್‌’’ ಗೆ ಅಪ್‌ಗ್ರೇಡ್‌ ಮಾಡಿದ್ದು, ಇನ್ನೊಂದೆಡೆ ಚೀನಾದ ರೇಟಿಂಗ್ ಅನ್ನು ಈಕ್ವಲ್‌ ವೇಯ್ಟ್‌ಗೆ ಇಳಿಸಿದೆ.

ನವದೆಹಲಿ (ಆಗಸ್ಟ್‌ 4, 2023): ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕತೆ ಕುಸಿಯುತ್ತಿದೆ. ಆದರೆ, ಭಾರತದ ಪ್ರಗತಿ ಹೆಚ್ಚಾಗುತ್ತಿದೆ, ದೇಶದ ಆರ್ಥಿಕತೆ ಪ್ರಕಾಶಮಾನವಾಗಿದೆ ಎಂದು ವಿಶ್ವಬ್ಯಾಂಕ್‌ ಸೇರಿ ಅನೇಕ ಜಾಗತಿಕ ಸಂಸ್ಥೆಗಳು ಶಹಬ್ಬಾಸ್‌ ನೀಡಿದೆ. ಇದೇ ರೀತಿ, ಭಾರತ ಪ್ರಗತಿಯಲ್ಲಿ ಸರಿಯಾದ ದಿಕ್ಕಿನಲ್ಲಿದೆ ಅನ್ನೋದಕ್ಕೆ ಮತ್ತೊಂದು ಮಹತ್ವದ ಸಾಕ್ಷಿ ದೊರೆತಿದೆ ನೋಡಿ. 

ಪ್ರಮುಖ ಜಾಗತಿಕ ಬ್ರೋಕರೇಜ್ ಸಂಸ್ಥೆ ಮೋರ್ಗಾನ್ ಸ್ಟ್ಯಾನ್ಲಿ ಏಷ್ಯಾದ ಪ್ರಮುಖ ಆರ್ಥಿಕತೆಯ ರಾಷ್ಟ್ರಗಳಿಗೆ ತನ್ನ ರೇಟಿಂಗ್‌ಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ಈ ಪ್ರಖ್ಯಾತ ಸಂಸ್ಥೆಯು ಭಾರತದ ರೇಟಿಂಗ್ ಅನ್ನು ‘’ಓವರ್‌ವೇಯ್ಟ್‌’’  ("overweight") ಗೆ ಅಪ್‌ಗ್ರೇಡ್‌ ಮಾಡಿದ್ದು, ಇನ್ನೊಂದೆಡೆ ಚೀನಾದ ರೇಟಿಂಗ್ ಅನ್ನು ಈಕ್ವಲ್‌ ವೇಯ್ಟ್‌ ("equal-weight") ಗೆ ಇಳಿಸಿದೆ. ಈ ಬದಲಾವಣೆಯು ಪ್ರಸ್ತುತ ಆರ್ಥಿಕ ವಾತಾವರಣದಲ್ಲಿ ಪ್ರತಿ ರಾಷ್ಟ್ರದ ಭವಿಷ್ಯವನ್ನು ಮೋರ್ಗನ್ ಸ್ಟ್ಯಾನ್ಲಿಯ ಮೌಲ್ಯಮಾಪನವನ್ನು ಪ್ರತಿನಿಧಿಸುತ್ತದೆ.

Latest Videos

ಇದನ್ನು ಓದಿ: ಆರ್ಥಿಕ ಹಿಂಜರಿಕೆಯಿಂದ ಹೊರಗುಳಿದ ಭಾರತಕ್ಕೆ ವಿಶ್ವಬ್ಯಾಂಕ್‌ ಶಹಬ್ಬಾಸ್‌: ಜಿಡಿಪಿ ದರಕ್ಕೂ ಮೆಚ್ಚುಗೆ

ಭಾರತಕ್ಕೆ ಸಂಬಂಧಿಸಿದಂತೆ, ಬ್ರೋಕರೇಜ್ ಸಂಸ್ಥೆಯು ಈ ರೇಟಿಂಗ್ ಹೆಚ್ಚಿಸಿರುವ ಹಿಂದೆ ಹಲವಾರು ಕಾರಣಗಳನ್ನು ಉಲ್ಲೇಖಿಸಿದೆ. ರಾಷ್ಟ್ರದ ಸುಧಾರಣೆ ಮತ್ತು ಸ್ಥೂಲ-ಸ್ಥಿರತೆಯ ಕಾರ್ಯತಂತ್ರವು ಬಂಡವಾಳದ ಖರ್ಚು ಹಾಗೂ ಲಾಭಕ್ಕಾಗಿ ಉತ್ತಮ ದೃಷ್ಟಿಕೋನವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಮತ್ತು ಭಾರತದಲ್ಲಿ ಸಾಪೇಕ್ಷ ಮೌಲ್ಯಗಳು ಅಕ್ಟೋಬರ್‌ಗಿಂತ ಕಡಿಮೆ ತೀವ್ರತೆಯನ್ನು ಕಂಡಿವೆ ಎಂದೂ ಹೇಳಿದೆ.

ಮೋರ್ಗಾನ್ ಸ್ಟ್ಯಾನ್ಲಿ ಸಂಸ್ಥೆ ಸಕಾರಾತ್ಮಕ ಎಫ್‌ಡಿಐ ಮತ್ತು ಪೋರ್ಟ್‌ಫೋಲಿಯೋ ಹರಿವಿನ ಪ್ರವೃತ್ತಿಗಳಿಗೆ ಒತ್ತು ನೀಡಿದ್ದು, ಇದು ಸುಧಾರಣೆಗಳು ಮತ್ತು ಸ್ಥೂಲ ಆರ್ಥಿಕ ಸ್ಥಿರತೆಗೆ ಭಾರತದ ಸಮರ್ಪಣೆಯಿಂದ ಬೆಂಬಲಿತವಾಗಿದೆ ಎಂದು ಹೇಳಿದೆ. ವರದಿಯು ಇತರ ಉದಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ನಿರಂತರವಾದ ಉನ್ನತ ಅಮೆರಿಕ ಡಾಲರ್‌ EPS ಬೆಳವಣಿಗೆಗೆ ದೇಶದ ಸಾಮರ್ಥ್ಯವನ್ನು ಒತ್ತಿಹೇಳಿದೆ. ಇದರಿಂದ ಯುವ ಜನಸಂಖ್ಯಾ ಪ್ರೊಫೈಲ್ ಈಕ್ವಿಟಿ ಒಳಹರಿವುಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: 5 ವರ್ಷದಲ್ಲಿ 13.5 ಕೋಟಿ ಭಾರತೀಯರು ಬಡತನದಿಂದ ಹೊರಕ್ಕೆ: ಮೋದಿ ಅವಧಿಯಲ್ಲಿ ಕ್ರಾಂತಿಕಾರಿ ಆರ್ಥಿಕತೆ ಸುಧಾರಣೆ

ಚೀನಾದ ರೇಟಿಂಗ್ ಇಳಿಕೆ
ಮತ್ತೊಂದೆಡೆ, ಮೋರ್ಗಾನ್ ಸ್ಟ್ಯಾನ್ಲಿ ಸಂಸ್ಥೆಯ ವಿಶ್ಲೇಷಕರು ಚೀನಾದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬ್ರೋಕರೇಜ್ ಕಂಪನಿಯು ಚೀನಾವನ್ನು 'ಈಕ್ವಲ್‌ ವೇಯ್ಟ್‌' ರೇಟಿಂಗ್‌ಗೆ ಇಳಿಸಿದೆ. ಅಲ್ಲದೆ, ಚೀನಾ ಸರ್ಕಾರದ ಉತ್ತೇಜಕ ಕಾರ್ಯಕ್ರಮಗಳಿಂದ ತಂದ ಪ್ರಸ್ತುತ ಉತ್ಕರ್ಷದ ಮಧ್ಯೆ ಹೂಡಿಕೆದಾರರಿಗೆ ಲಾಭಗಳನ್ನು ತೆಗೆದುಕೊಳ್ಳಲು ಮತ್ತು ಎಚ್ಚರಿಕೆಯಿಂದ ಹೆಜ್ಜೆ ಇಡಲು ಸಲಹೆ ನೀಡಿತು.

ಹಾಗೂ, ಚೀನಾದ ಮೃದುಗೊಳಿಸುವ ಕ್ರಮಗಳು ಮಧ್ಯಮವಾಗಿರುತ್ತವೆ ಮತ್ತು ಸ್ಟಾಕ್ ಮಾರುಕಟ್ಟೆಯಲ್ಲಿನ ಪ್ರಗತಿಯನ್ನು ಉಳಿಸಿಕೊಳ್ಳಲು ಸಾಕಾಗುವುದಿಲ್ಲ ಎಂದು ತಜ್ಞರು ಗಮನಿಸಿದ್ದಾರೆ. ಆಸ್ತಿ ಮತ್ತು ಕಾರ್ಮಿಕ ಮಾರುಕಟ್ಟೆಗಳು, ಭೌಗೋಳಿಕ ರಾಜಕೀಯ ಪರಿಗಣನೆಗಳು ಹಾಗೂ LGFV (ಸ್ಥಳೀಯ ಸರ್ಕಾರದ ಹಣಕಾಸು ವಾಹನ) ಸಾಲದಂತಹ ಗಣನೀಯ ಹೊಂದಾಣಿಕೆಯ ಅಗತ್ಯವಿರುವ ಕ್ಷೇತ್ರಗಳು ದೇಶದ ಭವಿಷ್ಯದ ಒಳಹರಿವು ಮತ್ತು ಮರು-ರೇಟಿಂಗ್ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿವೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಈ ದಶಕದಲ್ಲೇ ಭಾರತ ಉದಯೋನ್ಮುಖ ಮಾರುಕಟ್ಟೆಯಾಗಲಿದ್ಯಾ? ಜಾಗತಿಕ ಉಜ್ವಲ ತಾಣ ಎನ್ನಲು ಈ 9 ಅಂಶಗಳೇ ಸಾಕ್ಷಿ!

ಇಷ್ಟೇ ಅಲ್ಲದೆ, ಚೀನಾ ಮಾತ್ರವಲ್ಲದೆ ತೈವಾನ್‌ನ ರೇಟಿಂಗ್‌ ಅನ್ನು ಸಹ 'ಈಕ್ವಲ್‌ ವೇಯ್ಟ್‌' ಗೆ ಇಳಿಕೆ ಮಾಡಿದೆ. ಟೆಕ್ ವಲಯದಲ್ಲಿ ವಿಸ್ತರಿಸಿದ ಮೌಲ್ಯಮಾಪನಗಳಿಂದ ಈ ರೇಟಿಂಗ್ ನೀಡಲಾಗಿದೆ ಎಂದೂ ಮೋರ್ಗನ್‌ ಸ್ಟ್ಯಾನ್ಲಿ ಸಂಸ್ಥೆ ತಿಳಿಸಿದೆ. 

ಇದನ್ನೂ ಓದಿ: ಭಾರತ ದೊಡ್ಡ ಮಟ್ಟದಲ್ಲಿ ಬದಲಾಗುತ್ತಿದೆ: ಜಗತ್ತು ಇನ್ಮುಂದೆ ನಮ್ಮನ್ನು ನಿರ್ಲಕ್ಷಿಸಲಾಗಲ್ಲ!

click me!