Daniel George: 25ಕ್ಕೆ ನೌಕರಿ, 29ನೇ ವಯಸ್ಸಿನಲ್ಲಿ ನಿವೃತ್ತಿ; ನಾಲ್ಕೇ ವರ್ಷದಲ್ಲಿ ಭವಿಷ್ಯ ಭದ್ರಪಡಿಸಿಕೊಂಡವ ಹೇಳೋದೇನು?

By Suvarna News  |  First Published Jan 18, 2024, 2:50 PM IST

ಜೀವನ ಪರ್ಯಂತ ದುಡಿದ್ರೂ ನಿವೃತ್ತಿಗೆ ಅಗ್ತಯವಿರೋ ಹಣ ಸಂಪಾದನೆ ಮಾಡೋದು ಕಷ್ಟ. ಹಾಗಿರುವಾಗ ಈತ ನಾಲ್ಕೇ ವರ್ಷದಲ್ಲಿ ಕುಳಿತು ತಿನ್ನಬಹುದಾದಷ್ಟು ಹಣ ಗಳಿಸಿದ್ದಾನೆ. ಆತನ ಮನಿ ಮೇಕಿಂಗ್ ಐಡಿಯಾ ಇಲ್ಲಿದೆ.


ಇಪ್ಪತ್ತೈದನೇ ವಯಸ್ಸಿಗೆ ಅನೇಕರ ಶಿಕ್ಷಣವೇ ಮುಗಿದಿರೋದಿಲ್ಲ. ಶಿಕ್ಷಣ ಮುಗಿಸಿ, ಉದ್ಯೋಗಕ್ಕೆ ಹುಡುಕಾಟ ನಡೆಸಿ, ಒಂದೊಳ್ಳೆ ಜಾಬ್ ಸಿಗೋವರೆಗೆ ವಯಸ್ಸು ಮೂವತ್ತರ ಹತ್ತಿರ ಬಂದಿರುತ್ತದೆ. ಆ ನಂತ್ರ ಗಳಿಸಿದ ಹಣ ಬೈಕ್, ಕಾರ್, ಮನೆ, ಮನೆಗೆ ಅಗತ್ಯವಿರುವ ವಸ್ತುಗಳು, ಒಳ್ಳೋಳ್ಳೆ ಬ್ರ್ಯಾಂಡ್ ಬಟ್ಟೆ ಖರೀದಿಗೆ ಖರ್ಚಾಗಿರುತ್ತದೆ. ಸ್ವಲ್ಪ ದಿನಗಳಲ್ಲೇ ಮದುವೆ ತಯಾರಿ ಶುರುವಾಗುತ್ತದೆ. ಮದುವೆ, ಹನಿಮೂನ್ ಅಂತ ಒಂದಿಷ್ಟು ಖರ್ಚು ಮಾಡುವ ವೇಳೆಗೆ ಸಾಲ ಮೈಮೇಲಿರುತ್ತದೆ. ಮಕ್ಕಳಾಗುವ ಹೊತ್ತಿಗೆ ಸಾಲ ಹೆಚ್ಚಾಗಿರುತ್ತೆ. ನಲವತ್ತು ವರ್ಷಕ್ಕೆ ಬರ್ತಿದ್ದಂತೆ ಜನರಿಗೆ ಜ್ಞಾನೋದಯವಾಗುತ್ತೆ. ಸ್ವಲ್ಪ ಹಣವನ್ನು ಉಳಿತಾಯ ಮಾಡಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ ಅಂತಾ ಕೈ ಕೈ ಹಿಸುಕಿಕೊಳ್ತಾರೆ. ಆದ್ರೆ ಹೋದ ಕಾಲ ಮತ್ತೆ ಬರೋದಿಲ್ಲ. ನೀವಿನ್ನೂ ಇಪ್ಪತ್ತೈದರ ಹರೆಯದಲ್ಲಿದ್ರೆ ಇವರು ಫಾಲೋ ಮಾಡಿದ ಟ್ರಿಕ್ಸ್ ಅನುಸರಿಸಿ. ನಿಮಗೆ ಇವರಷ್ಟು ಸಂಬಳ ಬರದೆ ಇರಬಹುದು. ಆದ್ರೆ ಬಂದ ಹಣವನ್ನೇ ಉಳಿತಾಯ ಮಾಡೋ ಕಲೆಯನ್ನು ಇವರಿಂದ ಕಲಿತ್ರೆ ವಯಸ್ಸು ಮೂವತ್ತೈದು ದಾಟೋದ್ರಲ್ಲಿ ನೀವು ಟೆನ್ಷನ್ ಇಲ್ಲದ ಜೀವನ ನಡೆಸಬಹುದು.

ಈ ವ್ಯಕ್ತಿ ಅಂತಿಂತವರಲ್ಲ. ತಮ್ಮ 25 ನೇ ವಯಸ್ಸಿನಲ್ಲಿ ದುಡಿಯಲು ಪ್ರಾರಂಭಿಸಿ, 29 ನೇ ವಯಸ್ಸಿನಲ್ಲಿ ನಿವೃತ್ತಿ (Retirement) ಯಾಗುವಷ್ಟು ಹಣಗಳಿಸಿ, ಕೆಲಸಕ್ಕೆ ರಾಜೀನಾಮೆ ನೀಡಿ, ಸ್ವಂತ ಉದ್ಯೋಗ (employment) ಶುರು ಮಾಡಿದ್ದಾರೆ.  

Tap to resize

Latest Videos

ಕೊನೆಗೂ ಮದುವೆಯಾದ ಏಷ್ಯಾದ ಹಾಟ್ ಬ್ಯಾಚುಲರ್, ವಿಶ್ವದ ಶ್ರೀಮಂತ ವ್ಯಕ್ತಿಯ ಕೈ ಹಿಡಿದ ಆಕೆ ಯಾರು?

ಈಗ ನಾವು ಹೇಳ್ತಿರೋದು ಭಾರತೀಯ ಮೂಲದ ಡೇನಿಯಲ್ ಜಾರ್ಜ್ (Daniel George) ಬಗ್ಗೆ. ಡೇನಿಯಲ್ ಐಐಟಿ ಬಾಂಬೆಯಲ್ಲಿ ಓದುವಾಗ್ಲೇ, ಬೇಗ ನಿವೃತ್ತಿ ಹೊಂದುವ ಯೋಜನೆ ರೂಪಿಸಿದ್ದರು. ಆಗ ಅವರಿಗೆ ಬರೀ 24 ವರ್ಷ. 2015 ರಲ್ಲಿ ಭೌತಶಾಸ್ತ್ರ ಎಂಜಿನಿಯರಿಂಗ್‌ನಲ್ಲಿ  ಬ್ಯಾಚುಲರ್ ಪದವಿ ಪೂರ್ಣಗೊಳಿಸಿದ ನಂತರ ಇಂಟರ್ನ್‌ಶಿಪ್ ಮಾಡಿದರು. 2018 ರಲ್ಲಿ ಗೂಗಲ್ (Google) ನಿಂದ ನೇರ ಆಫರ್ ಬಂತು. ಇಪ್ಪತ್ತೈದನೇ ವಯಸ್ಸಿನಲ್ಲಿ ಅವರ ಕೈ ಸೇರಿದ ಸಂಬಳ  2.2 ಕೋಟಿ ರೂಪಾಯಿ. ಎಐ ಇಂಜಿನಿಯರ್ ಕೆಲಸ ಮಾಡಿದ ಡೇನಿಯಲ್ ಜಾರ್ಜ್, ಕೆಲ ವರ್ಷ ಕೆಲಸ ಮಾಡಿ ನಾನು ಭಾರತಕ್ಕೆ ವಾಪಸ್ ಆಗ್ಬಹುದು ಎಂಬ ಲೆಕ್ಕಾಚಾರ ಮಾಡಿದ ಚಾರ್ಜ್, ಕೆಲಸ ಮುಂದುವರೆಸಿದ್ದರು. ಗೂಗಲ್ ನಲ್ಲಿ ಕೆಲಸ ಮಾಡೋದು ಅವರ ಕನಸಾಗಿತ್ತು. ಅನಿಯಮಿತ ಆಹಾರ ಮತ್ತು ಪಾನೀಯ, ಪಿಂಗ್ ಪಾಂಗ್ ಟೇಬಲ್‌ಗಳು, ವಿಡಿಯೋ ಗೇಮ್ ರೂಮ್, ಜಿಮ್, ಟೆನ್ನಿಸ್ ಕೋರ್ಟ್‌, ಉಚಿತ ಮಸಾಜ್‌ ಸೇರಿದಂತೆ ಅನೇಕ ಸೌಲಭ್ಯ ಸಿಗ್ತಿತ್ತು. ಒಂದು ವರ್ಷ ಕೆಲಸ ಮಾಡಿದ ಜಾರ್ಜ್, ಉಳಿತಾಯದ ಬಗ್ಗೆ ಆಲೋಚನೆ ಮಾಡಲು ಶುರು ಮಾಡಿದ್ರು. ಗಳಿಸಿದ ಶೇಕಡಾ 50 ರಷ್ಟು ಹಣ ತೆರಿಗೆ ಪಾವತಿಗೆ ಹೋಗ್ತಿದೆ ಎಂಬುದನ್ನು ಅರಿತ ಅವರು ಹೂಡಿಕೆ ಪ್ಲಾನ್ ಮಾಡಿದ್ರು.

ಯಾವ ನಟನೂ ಅಲ್ಲ, ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಚಿತ್ರರಂಗದ ಏಕೈಕ ಉದ್ಯಮಿ!

ನಿವೃತ್ತಿ ನಿಧಿಗೆ ಹೆಚ್ಚೆಚ್ಚು ಹಣ ಹಾಕಿದರೆ ಒಳ್ಳೆಯದು ಎಂದು ಜಾರ್ಜ್ ಭಾವಿಸಿದ್ದರು. ಗೂಗಲ್ ನಲ್ಲಿ ಕೆಲಸ ಮಾಡ್ತಿದ್ದಾಗ ಅವರು ದುಡಿಮೆಯ ಶೇಕಡಾ 10 ಕ್ಕಿಂತ ಕಡಿಮೆ ಖರ್ಚು ಮಾಡ್ತಿದ್ದರು. ಕೆಲವೊಮ್ಮೆ ಬೈಕ್‌ನಲ್ಲಿ ಮತ್ತೆ ಕೆಲವೊಮ್ಮೆ ಕಾಲ್ನಡಿಗೆಯಲ್ಲಿ ಕೆಲಸಕ್ಕೆ ಹೋಗ್ತಿದ್ದರು. ಅವರು ಕಾರು ಖರೀದಿ ಮಾಡ್ಲಿಲ್ಲ. ಮೂರು ಹೊತ್ತಿನ ಊಟವನ್ನು ಗೂಗಲ್‌ನಲ್ಲಿ ತಿನ್ನುತ್ತಿದ್ದರಲ್ಲದೆ ಅಪರೂಪಕ್ಕೆ ಹಣ ಖರ್ಚು ಮಾಡ್ತಿದ್ದರು. ಅಲ್ಲದೆ ಅಪಾರ್ಟ್ಮೆಂಟ್ ನಲ್ಲಿ ಸ್ನೇಹಿತರ ಜೊತೆ ಉಳಿದಿದ್ದರಿಂದ ಮನೆ ಬಾಡಿಗೆ ಖರ್ಚು ಹಂಚಿಹೋಗ್ತಿತ್ತು.

ಈ ಸಮಯದಲ್ಲಿ ಸಾಕಷ್ಟು ಹಣ ಉಳಿಸಿದ್ದ ಅವರು, ಭಾರತಕ್ಕೆ ವಾಪಸ್ ಬರದಿರಲು ಕಾರಣ ಅವರ ಭಾವಿ ಪತ್ನಿ. ಅವರು ಕೂಡ ಗೂಗಲ್ ನಲ್ಲಿ ಕೆಲಸ ಮಾಡ್ತಿದ್ದರು. ಪ್ರತಿ ವರ್ಷ ಜಾರ್ಜ್ ಸುಮಾರು 62 ಲಕ್ಷ ರೂಪಾಯಿ ಉಳಿತಾಯ ಮಾಡ್ತಿದ್ದರು. ಜೂನ್ 2020 ರಲ್ಲಿ, ಅವರು ಅಮೇರಿಕನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಜೆಪಿ ಮೋರ್ಗಾನ್ ಜೊತೆ ಕೈಜೋಡಿಸಿದ್ರು. ಗೂಗಲ್ ಗೆ ವಿದಾಯ ಹೇಳಿ ಜೆಪಿ ಮೋರ್ಗಾನ್ ಸೇರಿದಾಗ ಅವರ ಸಂಬಳ ಮತ್ತಷ್ಟು ಹೆಚ್ಚಿತ್ತು. ಹಾಸಿಗೆ, ಬಟ್ಟೆ, 56 ಇಂಚಿನ ಟಿವಿ ಬಿಟ್ಟರೆ ಅವರ ಬಳಿ ಮತ್ತೇನೂ ಇರಲಿಲ್ಲ. 27 ನೇ ವಯಸ್ಸಿನಲ್ಲಿ ಮಿಲಿಯನ್ ಡಾಲರ್ ಉಳಿತಾಯ ಮಾಡಿದ ಅವರು, ಆಗಸ್ಟ್ 2023 ರಲ್ಲಿ, ತಮ್ಮ 29 ವರ್ಷದಲ್ಲಿ ಜೆಪಿ ಮೋರ್ಗಾನ್  ತೊರೆದು ತಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿದರು. ಥರ್ಡ್ ಇಯರ್ ಎಐ ಎಂಬ ಸ್ಟಾರ್ಟ್ಅಪ್ ಪ್ರಾರಂಭಿಸಿದ್ದು, ಮದುವೆ, ಮಕ್ಕಳು ಹಾಗೂ ನಿವೃತ್ತಿಯಲ್ಲಿ ಯಾವುದೇ ಚಿಂತೆ ಇಲ್ಲದೆ ಜೀವನ ನಡೆಸುವ ಸ್ಥಿತಿಗೆ ನಾನು ತಲುಪಿದ್ದೇನೆ. ನಾನು ಹೂಡಿಕೆ ಮಾಡಿದ ಹಣದಲ್ಲಿಯೇ ಒಂದಿಷ್ಟು ಆದಾಯ ನನಗೆ ಬರುತ್ತದೆ ಎನ್ನುತ್ತಾರೆ. 

click me!