ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಮೊಬೈಲ್ ಕರೆ ಭಾರೀ ದುಬಾರಿ..?

Published : May 15, 2024, 07:15 AM IST
ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಮೊಬೈಲ್ ಕರೆ ಭಾರೀ ದುಬಾರಿ..?

ಸಾರಾಂಶ

5ಜಿ ಸೇವೆ ಒದಗಿಸಲು ಅಪಾರ ಹಣವನ್ನು ದೂರಸಂಪರ್ಕ ಕಂಪನಿಗಳು ವಿನಿಯೋಗಿಸಿವೆ. ಅದರ ಲಾಭ ತೆಗೆಯಲು ಮುಂದಾಗಿರುವ ಕಾರಣ ಮೊಬೈಲ್ ಸೇವೆಯ ಶುಲ್ಕಶೇ.25ರಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಜತೆಗೆ ಹಂತಹಂತವಾಗಿ ಕಡಿಮೆ ಮೌಲ್ಯದ ಪ್ಯಾಕ್‌ಗಳನ್ನು ರದ್ದುಗೊಳಿಸಲಾಗುತ್ತದೆ ಎನ್ನಲಾಗಿದೆ. 

ನವದೆಹಲಿ(ಮೇ.15):  ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಮೊಬೈಲ್ ಸೇವೆ ಬಳಸಲು ಗ್ರಾಹಕರು ಹೆಚ್ಚು ಬೆಲೆ ತೆರುವ ಸಂದರ್ಭ ಸೃಷ್ಟಿಯಾಗುವ ಸಾಧ್ಯತೆ ಇದೆ. ಏಕೆಂದರೆ ಮೊಬೈಲ್ ಸೇವೆ ಒದಗಿಸುವ ಕಂಪನಿಗಳು ಶುಲ್ಕವನ್ನು ಶೇ.25ರಷ್ಟು ಹೆಚ್ಚಿಸಲು ಮುಂದಾಗಿವೆ ಎಂದು ವರದಿಗಳು ತಿಳಿಸಿವೆ.

5ಜಿ ಸೇವೆ ಒದಗಿಸಲು ಅಪಾರ ಹಣವನ್ನು ದೂರಸಂಪರ್ಕ ಕಂಪನಿಗಳು ವಿನಿಯೋಗಿಸಿವೆ. ಅದರ ಲಾಭ ತೆಗೆಯಲು ಮುಂದಾಗಿರುವ ಕಾರಣ ಮೊಬೈಲ್ ಸೇವೆಯ ಶುಲ್ಕಶೇ.25ರಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಜತೆಗೆ ಹಂತಹಂತವಾಗಿ ಕಡಿಮೆ ಮೌಲ್ಯದ ಪ್ಯಾಕ್‌ಗಳನ್ನು ರದ್ದುಗೊಳಿಸಲಾಗುತ್ತದೆ ಎನ್ನಲಾಗಿದೆ. ಏರಿಕೆ ಪ್ರಮಾಣ ಶೇ.25ರಷ್ಟು ಇದೆ ಎಂದು ಹೇಳಲಾಗುತ್ತಿದ್ದರೂ ನಗರ ಪ್ರದೇಶದ ಪ್ರತಿ ಗ್ರಾಹಕ ದೂರಸಂಪರ್ಕ ಸೇವೆಗಾಗಿ ತೆರುವ ದರ ಹಾಲಿ ಶೇ.3.2ರಿಂದ ಶೇ.3.6ಕ್ಕೆ ಹೆಚ್ಚಾಗುತ್ತದೆ.

ಜಿಯೋ ಬಂಪರ್ ಆಫರ್, 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್!

ಗ್ರಾಮಾಂತರ ಪ್ರದೇಶದ ಗ್ರಾಹಕರು ಮಾಡುವ ದೂರವಾಣಿ ವೆಚ್ಚ ಶೇ.5.2ರಿಂದ ಶೇ.5.9ಕ್ಕೆ ಏರಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ಶುಲ್ಕ ಹೆಚ್ಚಳದಿಂದಾಗಿ ಭಾರ್ತಿ ಏರ್‌ಟೆಲ್ ಹಾಗೂ ಜಿಯೋ ಕಂಪನಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ವರದಿಗಳು ವಿವರಿಸಿವೆ.

ಏಕೆ ದರ ಏರಿಕೆ?

• 5ಜಿ ಸೌಕರ್ಯಕ್ಕೆ ಟೆಲಿಕಾಂ ಕಂಪನಿಗಳಿಂದ ಅಪಾರ ಹಣ ಹೂಡಿಕೆ
• ಇನ್ನೂ ಅದರ ಪೂರ್ಣ ಪ್ರಮಾಣದ ಲಾಭ ಕಂಪನಿಗಳಿಗೆ ಬರುತ್ತಿಲ್ಲ
• ವೆಚ್ಚ ಸರಿದೂಗಿಸಿಕೊಳ್ಳಲು ಮೊಬೈಲ್ ಕರೆ ದರ ಏರಿಕೆಗೆ ಸಿದ್ಧತೆ
• ಕಡಿಮೆ ದರದ ಪ್ಯಾಕ್‌ಗಳನ್ನು ರದ್ದುಪಡಿಸಲು ಕಂಪನಿಗಳ ಚಿಂತನೆ
• ದರ ಏರಿಕೆಯಿಂದ ಭಾರ್ತಿ ಏರ್ ಟೆಲ್, ಜಿಯೋ ಕಂಪನಿಗಳಿಗೆ ಲಾಭ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!