ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ: ಜರ್ಮನಿಯಲ್ಲಿ ಸಚಿವ ನಿರಾಣಿ ನಿಯೋಗ

By Girish GoudarFirst Published Oct 5, 2022, 11:00 PM IST
Highlights

ಇಂಗ್ಲೆಂಡ್, ಫ್ರಾನ್ಸ್ ದೇಶಗಳಲ್ಲಿ ಸುಪ್ರಸಿದ್ಧ ಕಂಪನಿಗಳಿಗೆ ಭೇಟಿ ನೀಡಿದ ಸಚಿವರ ನಿಯೋಗಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. 

ಬೆಂಗಳೂರು(ಅ.05): ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಭಾಗವಾಗಿ ಕಳೆದ 7 ದಿನಗಳಿಂದ ಯುರೋಪ್‌ ಪ್ರವಾಸ ಕೈಗೊಂಡಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ನಿರಾಣಿ ಅವರ ನಿಯೋಗ ಇಂದು(ಬುಧವಾರ) ಜರ್ಮನ್ ದೇಶಕ್ಕೆ ತೆರಳಿದೆ. ಇಂಗ್ಲೆಂಡ್, ಫ್ರಾನ್ಸ್ ದೇಶಗಳಲ್ಲಿ ಸುಪ್ರಸಿದ್ಧ ಕಂಪನಿಗಳಿಗೆ ಭೇಟಿ ನೀಡಿದ ಸಚಿವರ ನಿಯೋಗಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. 

ಇಂದು ಜರ್ಮನಿಯ ಎನ್ಆರ್ ಡಬ್ಲ್ಯು ಗ್ಲೋಬಲ್ ಬ್ಯುಸಿನೆಸ್‌ ಕಂಪನಿಯ ಭಾರತ ಹಾಗೂ ಆಸ್ಟ್ರೇಲಿಯಾದ ಬ್ಯುಸಿನೆಸ್ ಹೆಡ್ ಸ್ಟೆಫೆನ್ ಬೋರ್ಸ್, ಸ್ಪೈಡರ್ ಕಂಪನಿ ಮುಖ್ಯಸ್ಥ ಸುಶ್ರುತ ಲುಗಾನಿ, ಯುರೋ ಕನ್ಸಲ್ಟ್ ಕಂಪನಿಯ ಪಾಲುದಾರ ಹರಾಶ್ ಹಝುರಿಯಾ, ಹ್ಯಾಪ ಮಾನ್ ಲೈಬ್ಸ್ ಕಂಪನಿಯ ಚೇರ್ಮನ್ ಡಾ: ಜಾರ್ಜ್ ಪಾಡೆಲ್ ಹಾಗೂ ಸಿಟಿ ಆಫ್ ಡೀಸೆಲ್‌ ಡಾರ್ಫ್ ಎಕಾನಾಮಿಕ್ ಡೆವಲಪ್‌ಮೆಂಟ್ ಕಂಪನಿಯ ಅಂತರಾಷ್ಟ್ರೀಯ ವ್ಯವಹಾರಗಳ ಮುಖ್ಯಸ್ಥ ಅನೆಟ್ ಕ್ಲರ್ಕ್ಸ್ ರನ್ನು ಸಚಿವರ ನಿಯೋಗ ಭೇಟಿ ಮಾಡಿ ಜಾಗತಿಕ ಬಂಡವಾಳ ಹೂಡಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.

ಸಾಲದ ಬಡ್ಡಿದರ ಏರಿಕೆ ಮಾಡಿದ ಬ್ಯಾಂಕುಗಳು; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

ನಿಯೋಗವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಡಾ. ಇ.ವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್‌ ಕೃಷ್ಣ ಅವರನ್ನೊಳಗೊಂಡಿದೆ. 
 

click me!