ಹೌಸಿಂಗ್ ಡಾಟ್ ಕಾಮ್ ಯಶಸ್ಸಿನ ಕಥೆ ಎಲ್ಲರಿಗೂ ಗೊತ್ತು. ಆದರೆ, ಒಂದು ಕಾಲದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಇದರ ಸ್ಥಾಪಕ ರಾಹುಲ್ ಯಾದವ್ ನೆನಪು ಎಷ್ಟು ಜನರಿಗಿದೆ? ಈತ ಈಗೇನು ಮಾಡುತ್ತಿದ್ದಾನೆ?
Business Desk:ಪ್ರತಿಭೆ, ದುಡ್ಡು ಎಲ್ಲ ಇದ್ದೂ ಬುದ್ಧಿ ನೆಟ್ಟಗಿಲ್ಲ ಅಂದ್ರೆ ಬದುಕು ಹಳಿ ತಪ್ಪುತ್ತದೆ ಎಂಬುದಕ್ಕೆ ಈತ ಅತ್ಯುತ್ತಮ ನಿದರ್ಶನ. ಒಂದು ಕಾಲದಲ್ಲಿ ಭಾರತದ ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಈತ ತನ್ನ ಕೆಟ್ಟ ವರ್ತನೆಗಳ ಪರಿಣಾಮ ತಾನೇ ಕಟ್ಟಿದ ಕಂಪನಿಯಿಂದ ಹೊರನೂಕಲ್ಪಟ್ಟನು. ಈತನಿಗೆ 'ಬ್ಯಾಡ್ ಬಾಯ್ ಆಫ್ ಸ್ಟಾರ್ಟ್ ಅಪ್ಸ್' ಎಂಬ ಬಿರುದು ಕೂಡ ಇದೆ. ಇಷ್ಟೆಲ್ಲ ವಿವರಣೆ ನೀಡಿದ ಮೇಲೆ ಆತ ಯಾರು ಎಂಬುದು ನಿಮಗೆ ಈಗಾಗಲೇ ಗೊತ್ತಾಗಿರುತ್ತದೆ. ಹೌದು, ಆತನೇ ರಾಹುಲ್ ಯಾದವ್. ಅಪಾರ ಬುದ್ಧಿವಂತಿಕೆಯಿದ್ದರೂ ಎಲ್ಲಿ, ಹೇಗೆ ವರ್ತಿಸಬೇಕೆಂಬ ಪರಿಜ್ಞಾನದ ಕೊರತೆಯಿಂದ ರಾಹುಲ್ ಯಾದವ್ ಖ್ಯಾತಿ ಗಳಿಸಿದಷ್ಟೇ ವೇಗವಾಗಿ ಕುಖ್ಯಾತಿಗೂ ಪಾತ್ರನಾದ. ಯಶಸ್ಸು ಸಿಕ್ಕ ತಕ್ಷಣ ಅದನ್ನು ಹೇಗೆ ಸ್ವೀಕರಿಸಬೇಕು, ಅಲ್ಲಿಂದ ಮುಂದೆ ಹೇಗೆ ಸಾಗಬೇಕು ಎಂಬುದು ಅತೀಮುಖ್ಯ. ಯಶಸ್ಸು ಸಿಕ್ಕ ತಕ್ಷಣ ಅದು ತಲೆಗೇರಿದರೆ ಮುಂದೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹೌಸಿಂಗ್ ಡಾಟ್ ಕಾಮ್ ಎಂಬ ವೆಬ್ ಸೈಟ್ ಪ್ರಾರಂಭಿಸಿ ರಾಹಲು ಅತೀ ಕಡಿಮೆ ಅವಧಿ ಯಶಸ್ಸು ಕಂಡಿದ್ದು ಹೇಗೆ?
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ರಾಹುಲ್
ಭಾರತದ ಅನೇಕ ಜನಪ್ರಿಯ ಬಿಲಿಯನೇರ್ ಉದ್ಯಮಿಗಳು ತಮ್ಮ ಐಐಟಿ ಸಹಪಾಠಿಗಳೊಂದಿಗೆ ಸೇರಿಯೇ ಸ್ಟಾರ್ಟ್ ಅಪ್ ಪ್ರಾರಂಭಿಸಿ ಯಶಸ್ಸು ಕಂಡಿರೋದು. ರಾಹುಲ್ ಯಾದವ್ ಕೂಡ ಇದೇ ಹಾದಿಯಲ್ಲಿ ಸಾಗಲು ಬಯಸಿದ್ದ. ಹೀಗಾಗಿ 11 ಮಂದಿ ಸಹಪಾಠಿಗಳ ಜೊತೆಗೆ ಸೇರಿ 2012ರಲ್ಲಿ ಹೌಸಿಂಗ್ ಡಾಟ್ ಕಾಮ್ (Housing.com) ಪ್ರಾರಂಭಿಸಿದ. ಆ ವರ್ಷ ರಾಹುಲ್ ಯಾದವ್ ಕಂಪನಿ ಹಾಟೆಸ್ಟ್ ಟೆಕ್ ಸ್ಟಾರ್ಟ್ ಅಪ್ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಫೋರ್ಬ್ಸ್ ಇಂಡಿಯಾದ ಮಾಹಿತಿ ಪ್ರಕಾರ ಹೌಸಿಂಗ್ ಡಾಟ್ ಕಾಮ್ ಪ್ರಾರಂಭವಾದ ಮೊದಲ ವಾರದಲ್ಲೇ 8 ಬಿಲಿಯನ್ ಡಾಲರ್ ಮೌಲ್ಯದ ರಿಯಲ್ ಎಸ್ಟೇಟ್ ಮಾರಾಟಗಳನ್ನು ಮಾಡಿದೆ. ಹೀಗೆ ಹೌಸಿಂಗ್ ಡಾಟ್ ಕಾಮ್ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತ ಸಾಗಿತು. ಪರಿಣಾಮ ರಾಹುಲ್ ಯಾದವ್ ಕೂಡ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುವ ಮೂಲಕ ಜನಪ್ರಿಯತೆ ಗಳಿಸಿದರು. ಕೆಲವರು ಇವರನ್ನು ಮುಂದಿನ ಬಿಲ್ ಗೇಟ್ಸ್ ಎಂದು ಕರೆದಿದ್ದರು ಕೂಡ.
ಹೋಟೆಲ್ ನಲ್ಲಿ ಪಾತ್ರೆ ತೊಳೆದು ತಿಂಗಳಿಗೆ 18ರೂ. ಸಂಪಾದಿಸುತ್ತಿದ್ದ ಕನ್ನಡಿಗ, ಈಗ 300 ಕೋಟಿಯ ಸಂಸ್ಥೆ ಮಾಲೀಕ!
ಕೆಟ್ಟ ವರ್ತನೆಯೇ ಮುಳುವಾಯ್ತು
ಜಪಾನ್ ಮೂಲದ ಸಾಫ್ಟ್ ಬ್ಯಾಂಕ್ 2014ರ ಡಿಸೆಂಬರ್ ನಲ್ಲಿ 550 ಕೋಟಿ ರೂ. ಹೂಡಿಕೆ ಮಾಡಿದ ಬಳಿಕ ಹೌಸಿಂಗ್ ಡಾಟ್ ಕಾಮ್ ಮೌಲ್ಯದಲ್ಲಿ ಭಾರೀ ವರ್ಧನೆಯಾಯ್ತು. ಅದರ ಮೌಲ್ಯ 1,500 ಕೋಟಿ ರೂ. ತಲುಪಿತು. ಇದಾದ ಕೆಲವೇ ದಿನಗಳಲ್ಲಿ ರಾಹುಲ್ ಯಾದವ್ ಕಂಪನಿಯಲ್ಲಿನ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಹೊರಬರುವ ನಿರ್ಧಾರ ಪ್ರಕಟಿಸಿದ. ಆದರೆ, ಇದಾದ ಬಳಿಕ ಕ್ಷಮೆ ಕೂಡ ಕೇಳಿದ. ರಾಹುಲ್ ಯಾದವ್ ಇತರ ಸಹಂಸ್ಥಾಪಕರು, ಮಾಧ್ಯಮ ಹಾಗೂ ಹೂಡಿಕೆದಾರರ ಜೊತೆಗೆ ಕೆಟ್ಟದ್ದಾಗಿ ವರ್ತಿಸಿದ್ದರು ಎಂದು 2015ರಲ್ಲಿ ವರದಿಯಾಗಿತ್ತು. ಅಲ್ಲದೆ, ಅವರ ವರ್ತನೆ ಬಗ್ಗೆ ಈ ಹಿಂದೆ ಕೂಡ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು, ಆದರೂ ಅವರು ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ ಎಂದು ಹೇಳಲಾಗಿತ್ತು. ಆ ಬಳಿಕ ಆ ವರ್ಷದ ಕೊನೆಯಲ್ಲಿ ಅವರನ್ನು ಕಂಪನಿಯಿಂದ ಹೊರಹಾಕಲಾಯಿತು. ಇದಕ್ಕೆ 'ಹೂಡಿಕೆದಾರರು, ವ್ಯವಸ್ಥೆ ಹಾಗೂ ಮಾಧ್ಯಮದ ಜೊತೆಗೆ ಅವರ ವರ್ತನೆ ಸರಿಯಿಲ್ಲ' ಎಂಬ ಕಾರಣವನ್ನು ಕೂಡ ನೀಡಲಾಗಿತ್ತು.
ಲಕ್ಷಾಂತರ ರೂಪಾಯಿ ಸಂಬಳದ ಕೆಲಸ ಬಿಟ್ಟು, ತನ್ನ ಫೋಟೋ ಮಾರಿ ಕೊಟ್ಯಾಧಿಪತಿಯಾದ ಮಹಿಳೆ
ಕೆಲವು ವರದಿಗಳ ಪ್ರಕಾರ ಹೌಸಿಂಗ್ ಡಾಟ್ ಕಾಮ್ ನಿಂದ ಹೊರಬರುವಾಗ ರಾಹುಲ್ ಯಾದವ್ ತನ್ನ 150-200 ಕೋಟಿ ಮೌಲ್ಯದ ಷೇರುಗಳನ್ನು 2,251 ಉದ್ಯೋಗಿಗಳಿಗೆ ನೀಡಿದ್ದರು ಎಂದು ಹೇಳಲಾಗಿದೆ. ಹೌಸಿಂಗ್ ಡಾಟ್ ಕಾಮ್ ನಿಂದ ಹೊರಬಂದ ರಾಹುಲ್ ಯಾದವ್ 4ಬಿ ನೆಟ್ ವರ್ಕ್ಸ್ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಕಳೆದ ವರ್ಷ ಕೂಡ ಯಾದವ್ ಸುದ್ದಿಯಾಗಿದ್ದರು. ಇದಕ್ಕೆ ಕಾರಣ 4 ಬಿ ನೆಟ್ ವರ್ಕ್ ವಿರುದ್ಧ ಫಾರೆನ್ಸಿಕ್ ಅಡಿಟ್ ನಡೆಸೋದಾಗಿ ಇನ್ಫೋ ಏಜ್ ಪ್ರಕಟಿಸಿತ್ತು. ಹೀಗಾಗಿ ಯಾದವ್ ಮತ್ತೆ ಸುದ್ದಿಯಾಗಿದ್ದರು.