ರಾಜೇಶ್ ಗಾಂಧಿ ವಡಿಲಾಲ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿದ್ದಾರೆ. ಅವರು 1979 ರಲ್ಲಿ ಕಂಪನಿಗೆ ಸೇರಿದ ನಾಲ್ಕನೇ ತಲೆಮಾರಿನ ಉದ್ಯಮಿಯಾಗಿದ್ದಾರೆ. ಅವರು 9ನೇ ಕ್ಲಾಸ್‌ನಲ್ಲಿ ಫೇಲ್ ಆಗಿದ್ದ ಘಟನೆಯನ್ನು ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ನವದೆಹಲಿ (ಸೆಪ್ಟೆಂಬರ್ 18, 2023): ಉದ್ಯಮಿಗಳೆಲ್ಲ ಐಐಟಿ, ಐಐಎಂನಲ್ಲಿ ಓದಿರೋದಿಲ್ಲ. ಅಲ್ಲದೆ, ಎಲ್ಲರೂ ಡಿಸ್ಟಿಂಕ್ಷನ್, ಉನ್ನತ ಸ್ಥಾನ ಪಡೆದವರೇ ಆಗಿರಲ್ಲ. 9ನೇ ಕ್ಲಾಸ್ ಓದಿ ಫೇಲ್ ಆದ ವ್ಯಕ್ತಿ ಸಹ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಹೌದು, ವಡಿಲಾಲ್ ಐಸ್‌ಕ್ರೀಂ ಕಂಪನಿ ಹೆಸರು ಕೇಳಿರ್ಬೋದು. ಈ ಖ್ಯಾತ ಐಸ್‌ಕ್ರೀಂ ಕಂಪನಿಯ ಅಧ್ಯಕ್ಷರು 9ನೇ ಕ್ಲಾಸ್ ಫೇಲ್.
ರಾಜೇಶ್ ಗಾಂಧಿ ವಡಿಲಾಲ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿದ್ದಾರೆ. ಅವರು 1979 ರಲ್ಲಿ ಕಂಪನಿಗೆ ಸೇರಿದ ನಾಲ್ಕನೇ ತಲೆಮಾರಿನ ಉದ್ಯಮಿಯಾಗಿದ್ದಾರೆ. ರಾಜೇಶ್ ಗಾಂಧಿಯವರ ಅಡಿಯಲ್ಲಿ, ವಡಿಲಾಲ್ 90ರ ದಶಕದ ಆರಂಭದಲ್ಲಿ ಹಲವಾರು ರಾಜ್ಯಗಳಲ್ಲಿ ತನ್ನ ಕೋಲ್ಡ್-ಚೈನ್ ನೆಟ್‌ವರ್ಕ್ ಅನ್ನು ಅತ್ಯುತ್ತಮವಾಗಿಸಲು ಸಂಸ್ಕರಿಸಿದ ಆಹಾರ ಉದ್ಯಮದಲ್ಲಿ ತೊಡಗಿದೆ.
undefined
ಇದನ್ನು ಓದಿ: 41 ಕೋಟಿ ಉಳಿತಾಯ ಮಾಡಿ 35 ವರ್ಷಕ್ಕೇ ನಿವೃತ್ತಿಯಾಗ್ತೀನಿ ಎಂದಿದ್ದ ಗೂಗಲ್ ಟೆಕ್ಕಿಗೆ ದೊಡ್ಡ ಶಾಕ್!
ಜನಪ್ರಿಯ ಐಸ್ ಕ್ರೀಮ್ ಕಂಪನಿಯನ್ನು 1907 ರಲ್ಲಿ ವಡಿಲಾಲ್ ಗಾಂಧಿಯವರು ಸ್ಥಾಪಿಸಿದರು. ಇದು ಅಹಮದಾಬಾದ್‌ನಲ್ಲಿ ಕೇವಲ ಒಂದು ಸಣ್ಣ ಬೀದಿ ಸೋಡಾ ಅಂಗಡಿಯೊಂದಿಗೆ ಪ್ರಾರಂಭವಾಯಿತು. ಕಂಪನಿಯು ಈಗ ಸೆಪ್ಟೆಂಬರ್ 18, 2023 ರ ಹೊತ್ತಿಗೆ 1,843 ಕೋಟಿ ರೂ. ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಸೋಮವಾರದಂದು ಕಂಪನಿಯ ಷೇರು ಬೆಲೆ 2,545.50 ರೂ. ಆಗಿತ್ತು.
ರಾಜೇಶ್ ಗಾಂಧಿಯವರು ತಮ್ಮ ಶಾಲಾ ಶಿಕ್ಷಣವನ್ನು ಅಹಮದಾಬಾದ್‌ನ ಸೇಂಟ್ ಕ್ಸೇವಿಯರ್ಸ್ ಹೈಸ್ಕೂಲ್ ಲೊಯೋಲಾ ಹಾಲ್‌ನಲ್ಲಿ ಮಾಡಿದರು. ಉದ್ಯಮಿ ಒಮ್ಮೆ ಫಾರ್ಚೂನ್ ಇಂಡಿಯಾಗೆ 9ನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದೆ ಮತ್ತು ಶಾಲೆಯಿಂದ ಹೊರಬಂದು ಹೊಸ ಶಾಲೆಯಲ್ಲಿ 10ನೇ ತರಗತಿಗೆ ಸೇರಲು ಬಯಸಿದ್ದಾಗಿ ಹೇಳಿದರು. ಆದರೆ ತಮ್ಮ ತಂದೆ ನಿರಾಕರಿಸಿದರು ಮತ್ತು 9ನೇ ತರಗತಿ ಮತ್ತೆ ಇನ್ನೊಂದು ವರ್ಷ ಓದಬೇಕಾಯಿತು ಎಂದು ಹೇಳಿದ್ದರು.
ಇದನ್ನೂ ಓದಿ: ಜಗತ್ತಿನ ನಂ. 1 ಶ್ರೀಮಂತ ರಾಜ ಇವ್ರೇ: ಈ ಅರಸನ ಸಂಪತ್ತಿನ ಎದುರು ಅಂಬಾನಿ, ಅದಾನಿ, ಎಲಾನ್ ಮಸ್ಕ್ ಲೆಕ್ಕಕ್ಕೇ ಇಲ್ಲ!
ವಡಿಲಾಲ್ ಕೋನ್, ಕ್ಯಾಂಡಿ, ಬಾರ್, ಕಪ್ ಮತ್ತು ಫ್ಯಾಮಿಲಿ ಪ್ಯಾಕ್ ಸೇರಿದಂತೆ ಹಲವಾರು ರೂಪಗಳಲ್ಲಿ ಐಸ್‌ಕ್ರೀಂ ಅನ್ನು ಉತ್ಪಾದಿಸುತ್ತಾರೆ. ಕಂಪನಿಯು ತನ್ನ ಫ್ರ್ಯಾಂಚೈಸ್-ಆಧಾರಿತ ಹ್ಯಾಪಿನ್ನೆಜ್ ಐಸ್ ಕ್ರೀಮ್ ಪಾರ್ಲರ್‌ಗಳ ಮೂಲಕ ಸೂಪರ್ ಮಾರ್ಕೆಟ್‌ನಲ್ಲಿ ಮಾತ್ರವಲ್ಲದೆ ಚಿಲ್ಲರೆ ಅಂಗಡಿಗಳಲ್ಲೂ ಉಪಸ್ಥಿತಿಯನ್ನು ಹೊಂದಿದೆ. 1990 ರ ದಶಕದಲ್ಲಿ, ವಡಿಲಾಲ್ ತನ್ನ ಸ್ಥಾಪಿತ ಕೋಲ್ಡ್ ಚೈನ್ ನೆಟ್‌ವರ್ಕ್ ಬಳಸಿಕೊಂಡು ಸಂಸ್ಕರಿಸಿದ ಆಹಾರ ಉದ್ಯಮವನ್ನು ಪ್ರವೇಶಿಸುವ ಮೂಲಕ ತನ್ನ ವ್ಯವಹಾರವನ್ನು ವೈವಿಧ್ಯಗೊಳಿಸಿದೆ.
1972-73ರಲ್ಲಿ ಅಹಮದಾಬಾದ್‌ನಲ್ಲಿ ವಡಿಲಾಲ್ 8-10 ಮಳಿಗೆಗಳನ್ನು ಹೊಂದಿತ್ತು.. ಕ್ರಮೇಣ, ಅಲ್ಲಿಂದ ಗುಜರಾತ್‌ನ ಇತರ ಭಾಗಗಳಲ್ಲಿ ಸಹ ಮಳಿಗೆಗಳು ಬಂದವು. 1985 ರ ಹೊತ್ತಿಗೆ, ಕಂಪನಿಯು ನೆರೆಯ ರಾಜ್ಯಗಳಾದ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಿಗೆ ವಿಸ್ತರಿಸಿತು. ಇಂದು, ವಡಿಲಾಲ್ ಭಾರತದ ಪ್ರಮುಖ ಆಹಾರ ಮತ್ತು ಪಾನೀಯ ಕಂಪನಿಗಳಲ್ಲಿ ಒಂದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ: 2023ರಲ್ಲಿ ಭಾರತದಲ್ಲಿನ ಟಾಪ್ 10 ಬ್ಯಾಂಕ್‌ಗಳ ಪಟ್ಟಿ ಹೀಗಿದೆ: ಇದ್ರಲ್ಲಿ ನಿಮ್ಮ ಬ್ಯಾಂಕ್ ಇದ್ಯಾ ನೋಡಿ..