2023ರಲ್ಲಿ ಭಾರತದಲ್ಲಿನ ಟಾಪ್ 10 ಬ್ಯಾಂಕ್‌ಗಳ ಪಟ್ಟಿ ಹೀಗಿದೆ: ಇದ್ರಲ್ಲಿ ನಿಮ್ಮ ಬ್ಯಾಂಕ್ ಇದ್ಯಾ ನೋಡಿ..
ಬ್ಯಾಂಕಿಂಗ್ ಕ್ಷೇತ್ರ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಆರ್ಥಿಕತೆಯ ಬೆಳವಣಿಗೆ, ವ್ಯಾಪಾರ ಮತ್ತು ಹೂಡಿಕೆಗಳಿಗೆ ಸಹಾಯ ಮಾಡುತ್ತದೆ. ದೇಶದ ಟಾಪ್ 10 ಬ್ಯಾಂಕುಗಳ ವಿವರ ಹೀಗಿದೆ..
ಒಂದು ದೇಶಕ್ಕೆ ಬ್ಯಾಂಕಿಂಗ್ ಕ್ಷೇತ್ರ ಎಷ್ಟು ಮುಖ್ಯ ಗೊತ್ತಾ? ಇದು ಆರ್ಥಿಕತೆಯ ಬೆನ್ನೆಲುಬಾಗಿದ್ದು, ಆರ್ಥಿಕತೆಯ ಬೆಳವಣಿಗೆ, ವ್ಯಾಪಾರ ಮತ್ತು ಹೂಡಿಕೆಗಳಿಗೆ ಸಹಾಯ ಮಾಡುತ್ತದೆ. ಎಲ್ಲರಿಗೂ ಹಣಕಾಸಿನ ಪ್ರವೇಶವನ್ನು ಖಾತ್ರಿಗೊಳಿಸುತ್ತದೆ ಮತ್ತು ವ್ಯಕ್ತಿಗಳು, ವ್ಯವಹಾರಗಳಿಗೆ ಸಾಲಗಳನ್ನು ಒದಗಿಸುತ್ತದೆ.
ಈ ಲೇಖನದಲ್ಲಿ, ನಾವು ಭಾರತದ ಟಾಪ್ 10 ಬ್ಯಾಂಕ್‌ಗಳು ಯಾವುವು, ಅವುಗಳ ಕಾರ್ಯಾಚರಣೆಗಳು, ಹಣಕಾಸಿನ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಪ್ರಭಾವದ ವಿವರ ನೀಡ್ತೇವೆ ನೋಡಿ..
1) HDFC ಬ್ಯಾಂಕ್
ಸ್ಥಾಪಿತವಾದದ್ದು: ಆಗಸ್ಟ್ 30, 1994
ಸಿಇಒ: ಶಶಿಧರ್ ಜಗದೀಶ್
ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆಯ ಕ್ಯಾಪ್‌ನಲ್ಲಿ ಭಾರತದಲ್ಲಿನ ಅತಿದೊಡ್ಡ ಬ್ಯಾಂಕ್ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ಬ್ಯಾಂಕ್ ಆಗಿದೆ. ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು ಹಣಕಾಸು ಉದ್ಯಮದಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಜುಲೈ 1, 2023 ರಂದು, HDFC ಬ್ಯಾಂಕ್ ತನ್ನ ಸಹೋದರಿ ವಸತಿ ಹಣಕಾಸು ಕಂಪನಿಯಾದ HDFC ಲಿಮಿಟೆಡ್‌ನೊಂದಿಗೆ ವಿಲೀನಗೊಂಡಿತು. ಬಳಕೆದಾರರಿಗೆ ಉತ್ತಮ ಮತ್ತು ಹೆಚ್ಚು ಸಮಗ್ರ ಹಣಕಾಸು ಸೇವೆಗಳನ್ನು ಒದಗಿಸಲು ವಿಲೀನ ಪ್ರಕ್ರಿಯೆಯಾಗಿದೆ.
2) ICICI ಬ್ಯಾಂಕ್
ಸ್ಥಾಪಿತವಾದದ್ದು: ಜನವರಿ 5, 1994
ಸಿಇಒ: ಸಂದೀಪ್ ಭಕ್ಷಿ
ICICI ಬ್ಯಾಂಕ್ ವ್ಯಾಪಕ ಶ್ರೇಣಿಯ ಹಣಕಾಸು ಸೇವೆಗಳನ್ನು ನೀಡುತ್ತದೆ. ಇದು ಗ್ರಾಹಕ ಸ್ನೇಹಿ ವಿಧಾನ, ಸ್ಪರ್ಧಾತ್ಮಕ ದರಗಳು ಮತ್ತು ಸುಧಾರಿತ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದ್ದು ಭಾರತ ಮತ್ತು ವಿದೇಶಗಳಲ್ಲಿ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ.
3) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಸ್ಥಾಪನೆಯಾದ ದಿನಾಂಕ: ಜುಲೈ 1, 1955
ಸಿಇಒ: ಕಾಮೇಶ್ವರ ರಾವ್ ಕೊಡವಂತಿ
ಮುಂಬೈನಲ್ಲಿ ತನ್ನ ಪ್ರಧಾನ ಕಛೇರಿಯೊಂದಿಗೆ, SBI ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಇದು ಭಾರತದಲ್ಲಿ 22,405 ಶಾಖೆಗಳನ್ನು ಹೊಂದಿದ್ದು, 23 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದೆ. 36 ದೇಶಗಳಲ್ಲಿ 233ಕ್ಕೂ ಹೆಚ್ಚು ವಿದೇಶಿ ಶಾಖೆಗಳನ್ನು ಹೊಂದಿದೆ.
4) ಕೋಟಕ್ ಮಹೀಂದ್ರಾ ಬ್ಯಾಂಕ್
ಸ್ಥಾಪಿತವಾದದ್ದು: ನವೆಂಬರ್ 21, 1985
CEO: ದೀಪಕ್ ಗುಪ್ತಾ (ಮಧ್ಯಂತರ)
ಕೋಟಕ್ ಮಹೀಂದ್ರಾ ಬ್ಯಾಂಕ್ ಕಾರ್ಪೊರೇಟ್‌ಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು SMEಗಳು ಸೇರಿದಂತೆ ವಿವಿಧ ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸುತ್ತದೆ. 21 ವರ್ಷಗಳ ಕಾಲ ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಆಗಿದ್ದ ಉದಯ್ ಕೋಟಕ್ ರಾಜೀನಾಮೆ ನೀಡಿದ್ದಾರೆ.
5) ಆ್ಯಕ್ಸಿಸ್ ಬ್ಯಾಂಕ್
ಸ್ಥಾಪಿತವಾದದ್ದು: ಡಿಸೆಂಬರ್ 3, 1993
CEO: ಅಮಿತಾಭ್ ಚೌಧರಿ
ಆ್ಯಕ್ಸಿಸ್ ಬ್ಯಾಂಕ್ ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾಗಿದೆ. ಇದು ದೊಡ್ಡ ಮತ್ತು ಮಧ್ಯಮ ಗಾತ್ರದ ಕಾರ್ಪೊರೇಟ್‌ಗಳು, SMEಗಳು ಮತ್ತು ಚಿಲ್ಲರೆ ವ್ಯಾಪಾರಗಳಿಗೆ ಹಣಕಾಸು ಸೇವೆಗಳಲ್ಲಿ ಪರಿಣತಿಯನ್ನು ಹೊಂದಿದೆ. ಆಕ್ಸಿಸ್ ಬ್ಯಾಂಕ್ ಡಿಜಿಟಲ್ ಬ್ಯಾಂಕಿಂಗ್‌ಗೆ ಆದ್ಯತೆ ನೀಡುತ್ತದೆ.
6) ಇಂಡಸ್‌ಇಂಡ್ ಬ್ಯಾಂಕ್
ಸ್ಥಾಪಿತವಾದದ್ದು: ಏಪ್ರಿಲ್ 17, 1994
CEO: ಸುಮಂತ್ ಕತ್ಪಾಲಿಯಾ
ಇಂಡಸ್‌ಇಂಡ್ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಆಗಿದೆ. ಪ್ರಮುಖ ಭಾರತೀಯ ಮೆಟ್ರೋ ನಗರಗಳಲ್ಲಿ ಕೇಂದ್ರೀಕೃತವಾಗಿರುವ ಶಾಖೆಗಳು ಮತ್ತು ದುಬೈ, ಅಬುಧಾಬಿ ಮತ್ತು ಲಂಡನ್‌ನಲ್ಲಿ ಪ್ರತಿನಿಧಿ ಶಾಖೆಗಳೊಂದಿಗೆ, ಬ್ಯಾಂಕ್ ವೈವಿಧ್ಯಮಯ ಹಣಕಾಸು ಸೇವೆಗಳನ್ನು ನೀಡುತ್ತದೆ.
7) ಬ್ಯಾಂಕ್ ಆಫ್ ಬರೋಡಾ
ಸ್ಥಾಪನೆಯಾದ ದಿನಾಂಕ: ಜುಲೈ 20, 1908
CEO: ದೇಬದತ್ತ ಚಂದ್
ಗುಜರಾತ್‌ನ ವಡೋದರಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬ್ಯಾಂಕ್ ಆಫ್ ಬರೋಡಾ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್‌ನೊಂದಿಗೆ ವಿಲೀನಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಆಗಿ, ಬ್ಯಾಂಕ್ ಆಫ್ ಬರೋಡಾ ತನ್ನ ವ್ಯಾಪಕವಾದ ಶಾಖೆಯ ಜಾಲ ಮತ್ತು ವೈವಿಧ್ಯಮಯ ಬ್ಯಾಂಕಿಂಗ್ ಸೇವೆಗಳಿಗೆ ಹೆಸರುವಾಸಿಯಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
ಸ್ಥಾಪಿತವಾದದ್ದು: ಮೇ 19, 1893
CEO: ಅತುಲ್ ಕುಮಾರ್ ಗೋಯೆಲ್
ಪಂಜಾಬ್ ನ್ಯಾಷನಲ್ ಬ್ಯಾಂಕ್ ವ್ಯಾಪಕ ಶ್ರೇಣಿಯ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ, ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಪ್ರಬಲ ಉಪಸ್ಥಿತಿ ಮೂಲಕ ಹಣಕಾಸಿನ ಸೇರ್ಪಡೆಗೆ ಬ್ಯಾಂಕಿನ ಬದ್ಧತೆ ಸ್ಪಷ್ಟವಾಗಿದೆ. ಇದು 180 ಮಿಲಿಯನ್‌ಗಿಂತಲೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಬ್ಯಾಂಕಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು.
9) IDBI ಬ್ಯಾಂಕ್
ಸ್ಥಾಪನೆಯಾದ ದಿನಾಂಕ: ಜುಲೈ 1, 1964
CEO: ರಾಕೇಶ್ ಶರ್ಮಾ
IDBI (ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ) 1964 ರಲ್ಲಿ ಭಾರತ ಸರ್ಕಾರದಿಂದ ಸ್ಥಾಪನೆಯಾದಾಗ ಕೈಗಾರಿಕಾ ವಲಯಕ್ಕೆ ಹಣಕಾಸು ಸೇವೆಗಳನ್ನು ಒದಗಿಸಲು ಅಭಿವೃದ್ಧಿ ಹಣಕಾಸು ಸಂಸ್ಥೆಯಾಗಿ ಪ್ರಾರಂಭವಾಯಿತು. 2005 ರಲ್ಲಿ, ಸಂಸ್ಥೆಯನ್ನು ಪ್ರಸ್ತುತ ಮಾಡಲು ವಾಣಿಜ್ಯ ವಿಭಾಗದೊಂದಿಗೆ ವಿಲೀನಗೊಳಿಸಲಾಯಿತು. ಭಾರತ ಸರ್ಕಾರವು ಈಗ ಬ್ಯಾಂಕಿನಲ್ಲಿ 45.48 ಶೇಕಡಾ ಪಾಲನ್ನು ಹೊಂದಿದೆ ಮತ್ತು 49.24 ಶೇಕಡಾ ಪಾಲನ್ನು ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್ (LIC) ಹೊಂದಿದೆ.
10) ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಸ್ಥಾಪನೆಯಾದ ದಿನಾಂಕ: ನವೆಂಬರ್ 11, 1919
ಸಿಇಒ: ಎ. ಮಣಿಮೇಖಲೈ
1919 ರಲ್ಲಿ ಸ್ಥಾಪನೆಯಾದಾಗ ಮಹಾತ್ಮಾ ಗಾಂಧಿಯವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಛೇರಿಯನ್ನು ಉದ್ಘಾಟಿಸಿದರು. ಬ್ಯಾಂಕ್ ಅನ್ನು 1969 ರಲ್ಲಿ 14 ಇತರ ಬ್ಯಾಂಕುಗಳೊಂದಿಗೆ ದೇಶದ ಅಭಿವೃದ್ಧಿಗೆ ತಮ್ಮ ನಿಧಿ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳಲು ರಾಷ್ಟ್ರೀಕರಣಗೊಳಿಸಲಾಯಿತು. ಏಪ್ರಿಲ್ 2020 ರಲ್ಲಿ ಕಾರ್ಪೊರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್‌ನೊಂದಿಗೆ ವಿಲೀನವಾಯಿತು.