ಯಾವ ಹಿರೋಯಿನ್‌ಗೂ ಕಮ್ಮಿ ಇಲ್ಲ ಈ ಯಶಸ್ವಿ ಮಹಿಳಾ ಉದ್ಯಮಿ, ವಾರ್ಷಿಕ 148 ಕೋಟಿ ನೆಟ್‌ವರ್ತ್‌!

By Gowthami K  |  First Published Jul 23, 2023, 2:09 PM IST

ಮಮ ಅರ್ಥ್  ನ ಸಹ-ಸಂಸ್ಥಾಪಕರಾದ ಗಜಲ್ ಅಲಾಗ್ ಅವರು ಭಾರತದ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು. ವಾರ್ಷಿಕ  ನಿವ್ವಳ ಮೌಲ್ಯ ಸುಮಾರು ರೂ. 148 ಕೋಟಿ. ದುಡಿಯುತ್ತಾರೆ.


ಭಾರತದ ಅನೇಕ ಮಹತ್ವದ ಗುರಿಗಳ ಸಾಧನೆಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಹಿಳೆಯರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುತ್ತಿದ್ದಾರೆ. ವ್ಯಾಪಾರ ವಹಿವಾಟಿನ ಪ್ರಪಂಚವು ದೇಶಾದ್ಯಂತ ಮಹಿಳೆಯರ ನವೀನ ಆಲೋಚನೆಗಳೊಂದಿಗೆ ಪ್ರವರ್ಧಮಾನಕ್ಕೆ ಬರುತ್ತಿದೆ. 

ಮಮ ಅರ್ಥ್ (MamaEarth)ನ ಸಹ-ಸಂಸ್ಥಾಪಕರಾದ ಗಜಲ್ ಅಲಾಘ್ ಅವರು ಭಾರತದ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು. ಶಾರ್ಕ್ ಟ್ಯಾಂಕ್ ಇಂಡಿಯಾ ಶೋನಲ್ಲಿ ತೀರ್ಪುಗಾರರಾದ ಕಾರಣದಿಂದಾಗಿ ಗಜಲ್ ಪ್ರಸಿದ್ಧರಾದರು, ಆದರೆ ಇದಕ್ಕೂ ಮುಂಚೆಯೇ ಅವರು ಶ್ರೀಮಂತ ಉದ್ಯಮಿಯಾಗಿದ್ದರು.

Tap to resize

Latest Videos

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳೆ ಕೊಡಗಿನ ಮಗಳು, 10 ವರ್ಷದಲ್ಲಿ 1500 ಕೋಟಿ!

ಗಜಲ್ ಹರಿಯಾಣದ ಗುರ್ಗಾಂವ್‌ನಲ್ಲಿ ಬೆಳೆದರು ಮತ್ತು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಬಾಲ್ಯ ಮತ್ತು ಔಪಚಾರಿಕ ಶಿಕ್ಷಣವನ್ನು ಹರಿಯಾಣದಲ್ಲಿ ಮುಗಿಸಿದರು. 2010 ರ ಶೈಕ್ಷಣಿಕ ವರ್ಷದಲ್ಲಿ, ಗಜಲ್ ಪಂಜಾಬ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಪಡೆದರು. 

2013 ರಲ್ಲಿ ವಿನ್ಯಾಸ ಮತ್ತು ಅಪ್ಲೈಡ್ ಆರ್ಟ್ಸ್‌ನಲ್ಲಿ ನ್ಯೂಯಾರ್ಕ್ ಅಕಾಡೆಮಿ ಆಫ್ ಆರ್ಟ್‌ನಲ್ಲಿ  ಕೋರ್ಸ್ ಪೂರ್ಣಗೊಳಿಸಿದರು. ಗಜಲ್ ಅಲಾಘ್ ತನ್ನ ಪತಿಯೊಂದಿಗೆ 2016 ರಲ್ಲಿ MamaEarth ಅನ್ನು ಪ್ರಾರಂಭಿಸಿದರು.  ಭೂಮಿತಾಯಿಯ  ಮೇಲಿನ  ಪ್ರೀತಿಯಿಂದ ಸಾವಯವ ಘಟಕಗಳು ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳಿಗೆ  ವಿಶೇಷ ಒತ್ತು ನೀಡುವ ಮೂಲಕ ಅಮ್ಮ ಮತ್ತು ನವಜಾತ ಶಿಶುಗಳಿಗೆ ಪರಿಸರಸ್ನೇಹಿ, ನೈರ್ಮಲ್ಯ ವಸ್ತುಗಳ ಬಳಕೆಗೆ ಸಂಬಂಧಿಸಿದ ವಸ್ತುಗಳನ್ನು ನೀಡುವ ಕಂಪೆನಿ ಸ್ಥಾಪಿಸಲು ಪ್ರಾರಂಭಿಸಿದರು.

ಮಗು ನಿರೀಕ್ಷೆಯಲ್ಲಿದ್ದ ಗಜಲ್ ಮತ್ತು ವರುಣ್ ಅಲಘ್ ಅವರು  ಮಗುವನ್ನು ಸುರಕ್ಷಿತವಾಗಿಡಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಬಯಸಿದ್ದರು. ಪ್ರೀತಿಯ ಪೋಷಕರಂತೆ, ಇಬ್ಬರು  ಕೂಡ ಮಗುವಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತು ಸಲಹೆಗಾಗಿ ಅಂತರ್ಜಾಲದಲ್ಲಿ ಹುಡುಕಿದರು.

ದೇಶದ ಅತ್ಯಂತ ಶ್ರೀಮಂತ ಮಹಿಳಾ ಯೂಟ್ಯೂಬರ್ ದಕ್ಷಿಣ ಭಾರತದ ಪ್ರತಿಭೆ, ವಾರ್ಷಿಕ ಗಳಿಕೆ ಎಷ್ಟು?

MadeSafe ಲೇಬಲ್ ಗಳಿಸಿದ ಏಷ್ಯಾದ ಮೊದಲ ಬ್ರ್ಯಾಂಡ್ 
ದೆಹಲಿ ನಿವಾಸಿಗಳಾದ ವರುಣ್ ಮತ್ತು ಗಜಲ್ ಅಲಘ್ ಇಬ್ಬರಿಗೂ ತಮ್ಮ ಶಿಶುವಿಗೆ ವಿಶ್ವಾಸಾರ್ಹ ಮತ್ತು ಸುರಕ್ಷಿತ ಉತ್ಪನ್ನದ ಅನುಪಸ್ಥಿತಿ ಒಂದು ಪ್ರಮುಖ ಕಾಳಜಿಯಾಗಿತ್ತು. ಶೇ. ನೂರರಷ್ಟು ಟಾಕ್ಸಿನ್ ಫ್ರೀ ಮತ್ತು ನ್ಯಾಚುರಲ್ ಬೇಬಿ ಮಾಮಾಕೇರ್ ವಸ್ತುಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಈ ಜೋಡಿಯು ಏಷ್ಯಾದ ಮೊದಲ ಸುರಕ್ಷಿತವಾಗಿ ತಯಾರಿಸಿದ ಪ್ರಮಾಣೀಕೃತ ಬ್ರ್ಯಾಂಡ್ MamaEarth ಅನ್ನು ಸ್ಥಾಪಿಸಿತು.

MamaEarth ಎನ್ನುವುದು ವೈಯಕ್ತಿಕ ಆರೈಕೆಯ ಸ್ಪೆಕ್ಟ್ರಮ್‌ನಾದ್ಯಂತ ಸರಕುಗಳನ್ನು ಉತ್ಪಾದಿಸುವ ಬ್ರ್ಯಾಂಡ್ ಆಗಿದೆ ಮತ್ತು ತ್ವಚೆಯ ಆರೈಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವವರಿಗೆ ಇದು ಸಹಕಾರಿಯಾಗಿದೆ.

ವರುಣ್ ಮತ್ತು ಗಜಲ್ ಸಂಸ್ಥೆಯು 25 ಲಕ್ಷ ರೂಪಾಯಿ ಹೂಡಿಕೆಯಿಂದ ಈಗ 9800 ಕೋಟಿ ರೂಪಾಯಿಗೆ ಬೆಳೆದಿದೆ. Mamaearth ಮೊದಲು ಪ್ರಾಥಮಿಕವಾಗಿ ಆನ್‌ಲೈನ್ ಮೂಲಕ ತನ್ನ ಮಾರುಕಟ್ಟೆಯನ್ನು ಬೆಳೆಸಿತು.  ಈಗ ಆಫ್‌ಲೈನ್ ಅಂದ್ರೆ ಶಾಪ್‌ಗಳನ್ನು ಸ್ಥಾಪಿಸಿ ಜನರನ್ನು ಕೇಂದ್ರೀಕರಿಸುತ್ತಿದೆ. ಸಂಸ್ಥೆಯು ತನ್ನದೇ ಆದ ಸಂಶೋಧನಾ ಸೌಲಭ್ಯವನ್ನು ಹೊಂದಿದೆ, ಅಲ್ಲಿ ಸರಕುಗಳನ್ನು ಉತ್ಪಾದಿಸಲಾಗುತ್ತದೆ ಮತ್ತು ಅಮೇರಿಕನ ಏಜೆನ್ಸಿಯಿಂದ ಮೌಲ್ಯಮಾಪನ ಮಾಡಲಾಗುತ್ತದೆ.

ಕಂಪನಿಯು ತನ್ನ ಉತ್ಪನ್ನಗಳನ್ನು ಮೇಡ್‌ಸೇಫ್ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಿದೆ. ವ್ಯಾಪಾರವು ಯುನಿಕಾರ್ನ್ ಸ್ಥಾನಮಾನವನ್ನು ಸಾಧಿಸಿರುವುದರಿಂದ, ಇದು ಶಿಶು ಆರೈಕೆ ವಸ್ತು ಮಾತ್ರವಲ್ಲದೆ ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ದೇಶದ 500ಕ್ಕೂ ಹೆಚ್ಚಿನ ನಗರಗಳಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ಮಮ ಅರ್ಥ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಕಳೆದ ವರ್ಷ ಮೊದಲ ಬಾರಿಗೆ  14 ಕೋಟಿ ರೂ. ಲಾಭ ಗಳಿಸಿತು ಮತ್ತು ಯುನಿಕಾರ್ನ್ ಆಗಿ ರೂಪಾಂತರಗೊಂಡಿದೆ. ಗಜಲ್ ಅಲಾಘ್ ಅವರ ನಿವ್ವಳ ಮೌಲ್ಯ ಸುಮಾರು ರೂ. 148 ಕೋಟಿ. ಆಗಿದೆ. 

click me!