ಅಪ್ಪನ ಪಾದರಕ್ಷೆಉದ್ಯಮ ಮುನ್ನಡೆಸಲು ಅಮೆರಿಕ ಬಿಟ್ಟು ಭಾರತಕ್ಕೆ ಮರಳಿದ ಮಗಳು ಇಂದು ಬಿಲಿಯನೇರ್ ಉದ್ಯಮಿ

By Suvarna News  |  First Published Dec 11, 2023, 1:22 PM IST

ಮೆಟ್ರೋ ಶೂ ಇಂದು ದೇಶದ ಜನಪ್ರಿಯ ಪಾದರಕ್ಷೆ ಬ್ರ್ಯಾಂಡ್. ಈ ಸಂಸ್ಥೆ ಇಂದು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಮುಖ್ಯ ಕಾರಣ ಎಂಡಿ ಫರಾ ಮಲ್ಲಿಕ್. ಈಕೆ ತಂದೆಯ ಪಾದರಕ್ಷೆ ಉದ್ಯಮಕ್ಕೆ ಹೊಸ ರೂಪ ನೀಡಿದ ಕಾರಣ ಇಂದು ಆ ಸಂಸ್ಥೆ ಮಾರುಕಟ್ಟೆ ಮೌಲ್ಯ 35,117 ಕೋಟಿ ರೂ. 
 


Business Desk: ಕೋಟಿಗಟ್ಟಲೆ ಮೌಲ್ಯದ ಸಾಮ್ರಾಜ್ಯ ಕಟ್ಟಿದ ಬಳಿಕ ಭಾರತದ ಅನೇಕ ಉದ್ಯಮಿಗಳು ಅದನ್ನು ತಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ. ಭಾರತದ ಉದ್ಯಮ ರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಇನ್ನೊಂದು ತಲೆಮಾರಿನ ರಾಜ್ಯಭಾರ ಪ್ರಾರಂಭವಾಗಿದೆ. ಮಕ್ಕಳು ತಂದೆ ಕಟ್ಟಿದ ಸಂಸ್ಥೆಯ ಎಂಡಿ, ಸಿಇಒ ಅಥವಾ ನಿರ್ದೇಶಕರಾಗಿ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಂಥ ಹೊಸ ತಲೆಮಾರಿನ ಉದ್ಯಮಿಗಳಲ್ಲಿ ಫರಾ ಮಲ್ಲಿಕ್ ಭಂಜಿ ಕೂಡ ಒಬ್ಬರು. ಜನಪ್ರಿಯ ಮಲ್ಟಿ ಬ್ರ್ಯಾಂಡ್ಸ್  ಪಾದರಕ್ಷೆ ರಿಟೇಲರ್ ಮೆಟ್ರೋ ಬ್ರ್ಯಾಂಡ್ಸ್ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿರುವ ಈಕೆ ಬಿಲಿಯನೇರ್ ಉದ್ಯಮಿ ರಫಿಕ್ ಮಲ್ಲಿಕ್ ಅವರ ಪುತ್ರಿ. ರಫಿಕ್ ಮಲ್ಲಿಕ್ ಮೆಟ್ರೋ ಬ್ರ್ಯಾಂಡ್ಸ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಂಪನಿಯನ್ನು ಫರಾ ಅವರ ಅಜ್ಜ ಮಲ್ಲಿಕ್ ತೇಜನಿ ಮುಂಬೈನಲ್ಲಿ 1955ರಲ್ಲಿ ಪ್ರಾರಂಭಿಸಿದ್ದರು. ಫರಾ ಮೆಟ್ರೋ ಶೂ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಮಾಡರ್ನ್ ರಿಟೇಲಿಂಗ್ ನಲ್ಲಿ ಸಂಸ್ಥೆ ಉತ್ತಮ ಸಾಧನೆ ಮಾಡುತ್ತಿದೆ. ಪ್ರಸ್ತುತ ಈ ಕಂಪನಿಯ ಮಾರುಕಟ್ಟೆ ಮೌಲ್ಯ  35,117 ಕೋಟಿ ರೂ. ಇದೆ. 

ಈ ಕಂಪನಿ ಮೋಚಿ, ಮೆಟ್ರೋ ಹಾಗೂ ವಾಕ್ ವೇ ಮುಂತಾದ ಬ್ರ್ಯಾಂಡ್ ಗಳಿಂದ ಪಾದರಕ್ಷೆ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿದೆ. ರಫಿಕ್ ಮಲ್ಲಿಕ್ ಅವರ ಐವರು ಪುತ್ರಿಯರಲ್ಲಿ ಫರಾ ಎರಡನೇಯವರು. ರಫಿಕ್ ಅವರ ನಿವ್ವಳ ಸಂಪತ್ತು 26,690 ಕೋಟಿ ರೂ. ಪಾದರಕ್ಷೆ ಉದ್ಯಮದಲ್ಲಿ ಫರಾ ಅವರಿಗೆ 20 ವರ್ಷಗಳಿಗಿಂತಲೂ ಹೆಚ್ಚಿನ ಅನುಭವವಿದೆ. ಹೊಸ ತಲೆಮಾರಿಗೆ ತಕ್ಕಂತೆ ಕಂಪನಿಗೆ ಹೊಸ ರೂಪ ನೀಡುವ ಕಲೆ ಫರಾ ಅವರಿಗೆ ತಿಳಿದಿದೆ. ಇದೇ ಕಾರಣಕ್ಕೆ ಮೆಟ್ರೋ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 

Tap to resize

Latest Videos

ಮನೆಬಿಟ್ಟಾಗ ಕೈಯಲಿದ್ದಿದ್ದು 300 ರೂ, ಒಂದೊತ್ತಿನ ಊಟಕ್ಕೂ ಇಲ್ಲದವಳೀಗ ಕೋಟ್ಯಾಧಿಪತಿ

ಅಮೆರಿಕದಲ್ಲಿ ಶಿಕ್ಷಣ ಪೂರ್ಣಗೊಳಿಸಿದ ಫರಾ ಅವರಿಗೆ ಭಾರತಕ್ಕೆ ಹಿಂತಿರುಗುವ ಯೋಚನೆ ಪ್ರಾರಂಭದಲ್ಲಿ ಇರಲಿಲ್ಲ. ಆದರೆ, ತಂದೆಯ ಮಾತುಗಳು ಅವರಲ್ಲಿ ಮೆಟ್ರೋ ಬ್ರ್ಯಾಂಡ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಆಸಕ್ತಿಯನ್ನು ಹುಟ್ಟಿಸಿತು. ಹೀಗಾಗಿ ಭಾರತಕ್ಕೆ ಮರಳಿದ  ಆಕೆ ಮತ್ತೆ ಅಮೆರಿಕಕ್ಕೆ ಹೋಗುವ ಯೋಚನೆ ಮಾಡಲಿಲ್ಲ. ತಂದೆಯ ಉದ್ಯಮವನ್ನು 20 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. 

ಫರಾ ಮಾರ್ಕೆಟಿಂಗ್ ನಲ್ಲಿ ತನ್ನ ವೃತ್ತಿ ಪ್ರಾರಂಭಿಸಿದರು. ಆ ಬಳಿಕ ಮೆಟ್ರೋ ಬ್ರ್ಯಾಂಡ್ಸ್ ಲಿಮಿಟೆಡ್ ಸಪ್ಲೈ ಚೈನ್ ನಿರ್ವಹಣೆ ಮಾಡುತ್ತಿದ್ದಾರೆ. ಮೆಟ್ರೋ ಕಂಪನಿ 2021ರ ಡಿಸೆಂಬರ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಡ್ ಆಗಿದೆ. ಇನ್ನು ಮೆಟ್ರೋ ಬ್ರ್ಯಾಂಡ್ ನಲ್ಲಿ ಬಿಲಿಯನೇರ್ ಹೂಡಿಕೆದಾರ ದಿ.ರಾಕೇಶ್ ಜುಂಜುನ್ ವಾಲಾ ಅವರ ಪತ್ನಿ ರೇಖಾ ಜಂಜುನ್ ವಾಲಾ ಅವರು ದೊಡ್ಡ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ.

ಫರಾ ಉತ್ತಮ ಉದ್ಯಮ ಕೌಶಲಗಳನ್ನು ಹೊಂದಿದ್ದಾರೆ. ಬದಲಾಗುತ್ತಿರುವ ಫ್ಯಾಷನ್ ಗಳಿಗೆ ಅನುಗುಣವಾಗಿ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದಾಗಿಯೇ ಮೆಟ್ರೋ ಬ್ರ್ಯಾಂಡ್ ಈಗಲೂ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಫರಾ ನಾಯಕತ್ವದಲ್ಲಿ ಈ ಪಾದರಕ್ಷೆಗಳ ಕಂಪನಿ ಆರ್ಥಿಕವಾಗಿ ಹಾಗೂ ಉದ್ಯೋಗಿಗಳ ಪ್ರಮಾಣ ಎರಡರಲ್ಲೂ ಸಮಾನವಾದ ಬೆಳವಣಿಗೆ ದಾಖಲಿಸಿದೆ. 

ಫೋರ್ಬ್ಸ್ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ SAIL ಮಾಜಿ ಮುಖ್ಯಸ್ಥೆ;ಈಕೆ ಸಾಧನೆ ಹಲವರಿಗೆ ಸ್ಫೂರ್ತಿ

ಕ್ಲಾರ್ಕ್ಸ್, ಕ್ರಾಕ್ಸ್ ಹಾಗೂ ಸ್ಕೆಚರ್ಸ್ ಮುಂತಾದ ವಿದೇಶಿ ಬ್ರ್ಯಾಂಡ್ ಗಳ ಜೊತೆಗೆ ಮೆಟ್ರೋ ಉತ್ತಮ ಸಂಬಂಧ ಹೊಂದಿದೆ. ಹಾಗೆಯೇ 250ಕ್ಕೂ ಅಧಿಕ ವ್ಯಾಪಾರಿಗಳ ಜೊತೆಗೆ ಉತ್ತಮ ಸಂಬಂಧ ಹೊಂದುವಲ್ಲಿ ಕೂಡ ಫರಾ ನೇತೃತ್ವದಲ್ಲಿ ಮೆಟ್ರೋ ಯಶಸ್ಸು ಕಂಡಿದೆ. ಇನ್ನು ಫರಾ 2010ರಲ್ಲಿ 100ರಷ್ಟಿದ್ದ ಮೆಟ್ರೋ ಮಳಿಗೆಗಳನ್ನು 598ಕ್ಕೆ ಏರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಭಾರತದ 136 ನಗರಗಳಲ್ಲಿ ಮೆಟ್ರೋ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. 

 


 

click me!