ಅಣಬೆ ಬಗ್ಗೆ ಪಾಠ ಮಾಡುತ್ತಿದ್ದ ಪ್ರಾಧ್ಯಾಪಕಿಗೆ ಈಗ ಅದೇ ಆದಾಯದ ಮೂಲ;ಅಣಬೆ ಕೃಷಿಯಿಂದ ಲಕ್ಷಾಂತರ ರೂ. ಗಳಿಕೆ

By Suvarna NewsFirst Published Sep 11, 2023, 2:00 PM IST
Highlights

ಅಣಬೆ ಬಗ್ಗೆ ಪಾಠ ಮಾಡುತ್ತಿದ್ದ ಕಾಲೇಜು ಪ್ರಾಧ್ಯಾಪಕಿಯೊಬ್ಬರು ಅದನ್ನೇ ಬೆಳೆದು ಇಂದು ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಉತ್ತರ ಪ್ರದೇಶ ಮೂಲಕ ನಿಧಿ ಕಟಾರೆ ಅಣಬೆ ಕೃಷಿಯಿಂದ ತಿಂಗಳಿಗೆ 1.5ಲಕ್ಷ ರೂ. ಗಳಿಸುತ್ತಿದ್ದಾರೆ. ಅವರು ಅಣಬೆ ಕೃಷಿ ಪ್ರಾರಂಭಿಸಿದ್ದು ಹೇಗೆ? ಅದರಲ್ಲಿ ಯಶಸ್ಸು ಸಾಧಿಸಿದ್ದು ಹೇಗೆ? ಇಲ್ಲಿದೆ ಮಾಹಿತಿ. 

Business Desk: 'ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ತೆರೆದುಕೊಳ್ಳುತ್ತದೆ' ಎಂಬ ಮಾತಿದೆ. ಕೆಲವೊಂದು ಸಂದರ್ಭಗಳಲ್ಲಿ ಇದು ನಿಜವಾಗುತ್ತದೆ ಕೂಡ. ಜೀವನದಲ್ಲಿ ಯಾವುದೋ ಒಂದು ಅವಕಾಶ ಕೈ ತಪ್ಪಿದಾಗ ಮುಂದೇನು ಎಂಬ ಚಿಂತೆ ಕಾಡುತ್ತದೆ. ಆದರೆ, ಯಾವುದೋ ಒಂದು ರೂಪದಲ್ಲಿ ಇನ್ನೊಂದು ಅವಕಾಶ ತೆರೆದುಕೊಳ್ಳುತ್ತದೆ. ನಿಧಿ ಕಟಾರೆ ಅವರ ಬದುಕಿನಲ್ಲಿ ಕೂಡ ಹೀಗೆಯೇ ಆಯಿತು. ಗ್ವಾಲಿಯರ್ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿದ್ದ ಇವರಿಗೆ ತಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಕಟ್ಟಡವನ್ನು ಶೀಘ್ರದಲ್ಲೇ ಒಡೆಯುತ್ತಾರೆ. ಹಾಗೆಯೇ ಆ ಕಾಲೇಜು ಸ್ಥಗಿತಗೊಳ್ಳುತ್ತದೆ ಎಂಬ ವಿಷಯ ತಿಳಿದಾಗ ಆಘಾತವಾಗಿತ್ತು. ಮುಂದೇನು ಎಂಬ ಚಿಂತೆ ಕಾಡಿತ್ತು. ಆದರೆ, ಸ್ವಂತ ಉದ್ಯಮ ಪ್ರಾರಂಭಿಸುವ ಯೋಚನೆಯೊಂದು ಆಕೆಯ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಮೈಕ್ರೋಬಯೋಲಾಜಿಯಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿರುವ ನಿಧಿಗೆ ಈ ಸಮಯದಲ್ಲಿ ಅನೇಕ ವಿಶ್ವವಿದ್ಯಾಲಯಗಳಿಂದ ಉದ್ಯೋಗದ ಆಫರ್ ಕೂಡ ಬಂದಿತ್ತು. ಆದರೆ, ಆಕೆ ಅದ್ಯಾವುದನ್ನು ಪರಿಗಣಿಸದೆ ಸ್ವಂತ ಉದ್ಯಮ ಪ್ರಾರಂಭಿಸುವ ಪ್ರಯತ್ನದಲ್ಲೇ ಮುಂದುವರೆದರು. ಅಣಬೆ ಬೆಳೆದು ಮಾರುವ ಸಂಸ್ಥೆಯನ್ನು ಸ್ಥಾಪಿಸಿದ ನಿಧಿ ಇಂದು ತಿಂಗಳಿಗೆ 1.5 ಲಕ್ಷ ರೂ. ಗಳಿಸುತ್ತಿದ್ದಾರೆ. 

ವಿದ್ಯಾರ್ಥಿಗಳಿಗೆ ಕಲಿಸಿದ್ದನ್ನೇ ಕಾರ್ಯರೂಪಕ್ಕೆ ತಂದರು
ಉತ್ತರ ಪ್ರದೇಶದ ಫರುಖ್ ಬಾದ್ ಮೂಲದ ನಿಧಿ ಮಧ್ಯ ಪ್ರದೇಶದ ಗ್ವಾಲಿಯರ್ ಜಿವಾಜಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಒಂದು ವರ್ಷದ ಬಳಿಕ ಅಂದರೆ 2007ರಲ್ಲಿ ಆಕೆ ಗ್ವಾಲಿಯರ್ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪ್ರಧ್ಯಾಪಕಿಯಾಗಿ ಕೆಲಸ ಪ್ರಾರಂಭಿಸಿದರು. ಅಣಬೆ ಬೆಳಸೋದು ಹೇಗೆ ಎಂಬ ಪಾಠ ಕೂಡ ಇದ್ದ ಕಾರಣ ಅದನ್ನು ಮಕ್ಕಳಿಗೆ ಕಲಿಸುತ್ತಿದ್ದರು. ಆದರೆ, ಆ ಸಮಯದಲ್ಲಿ ಇದೇ ಅಣಬೆ ಕೃಷಿ ಮುಂದೆ ತನ್ನ ಬದುಕಿನ ಹಾದಿಯನ್ನೇ ಬದಲಾಯಿಸುತ್ತದೆ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲ. 2016ರ ತನಕ ಈ ಪಾಠವನ್ನು ಅವರು ಮಕ್ಕಳಿಗೆ ಕಲಿಸಿದ್ದರು. 

ಸಿನಿಮಾದಿಂದ ಅತಿ ಹೆಚ್ಚು ಹಣ ಮಾಡೋ ದಂಪತಿ ಇವ್ರು; ಕೋಟಿ ಕೋಟಿ ಆದಾಯ..ಮುಟ್ಟಿದ್ದೆಲ್ಲಾ ಚಿನ್ನ

ಅಣಬೆ ಬೆಳೆಯೋ ಬಗ್ಗೆ ಮಕ್ಕಳಿಗೆ ಪಸ್ತಕದಲ್ಲಿರೋದನ್ನೇ ಹೇಳಿ ಕೊಡುವ ಬದಲು ತಾನೇ ಅದನ್ನು ಪ್ರಯತ್ನಿಸಿ ನೋಡಬಾರದೇಕೆ ಎಂಬ ಯೋಚನೆ 2017ರಲ್ಲಿ ನಿಧಿ ಅವರ ಮನಸ್ಸಿನಲ್ಲಿ ಮೂಡಿತು. ಅಣಬೆಗಳನ್ನು ಬೆಳೆಸಲು 2017ರಲ್ಲಿ ನ್ಯಾಚುರಲ್ ಬಯೋ ಇಂಪ್ಯಾಕ್ಟ್ ಹಾಗೂ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. 10ಕೆಜಿ ವೋಯಿಸ್ಟರ್ ಅಣಬೆ ಮೊಳಕೆಗಳನ್ನು ಖರೀದಿಸಲು ಅವರು 3 ಸಾವಿರ ರೂ. ವ್ಯಯಿಸಿದರು. ಆ ಬಳಿಕ ಅದನ್ನು ಮನೆಯ 10x10 ಪ್ರದೇಶದಲ್ಲಿ ಬೆಳೆಸಿದರು. 

ಪ್ರಾರಂಭದಲ್ಲಿ ನಿಧಿ ಅಣಬೆ ಮೊಳಕೆಗಳನ್ನು ದೆಹಲಿ ಹಾಗೂ ಆಗ್ರಾದ ಅಣಬೆ ಬೆಳೆಗಾರರಿಂದ ಖರೀದಿಸುತ್ತಿದ್ದರು. ಆದರೆ, ಇವು ಕಳಪೆ ಗುಣಮಟ್ಟ ಹೊಂದಿರೋದನ್ನು ಗಮನಿಸಿದ ನಿಧಿ, ಪೂರ್ವಜರ ಹಳೆಯ 1500 ಚದರ ಅಡಿ ವಿಸ್ತೀರ್ಣದ ಮನೆಯಲ್ಲಿ ಅಣಬೆ ಮೊಳಕೆ ಅಥವಾ ಬೀಜಗಳ ತಯಾರಿಗೆ ಪ್ರಯೋಗಾಲಯವೊಂದನ್ನು ಸ್ಥಾಪಿಸಿದರು. ಇದರ ಮೂಲಕ ಪ್ರತಿ ತಿಂಗಳು ಅವರು ಒಂದು ಸಾವಿರ ಕೆಜಿ ಅಣಬೆ ಮೊಳಕೆಗಳನ್ನು ಸಿದ್ಧಪಡಿಸುತ್ತಿದ್ದರು. ಕನಿಷ್ಠ 150 ರೈತರು ಇವರ ಬಳಿ ಈ ಬೀಜಗಳನ್ನು ಖರೀದಿಸುತ್ತಾರೆ. 

ಗ್ಲಾಮರ್ ಲೈಫ್‌ನಿಂದ ದೂರವಿದ್ದು, ಬಿಸಿನೆಸ್ ಮಾಡಿ ಕೋಟಿ ಗಳಿಸ್ತಿರೋ ಬಾಲಿವುಡ್ ಸ್ಟಾರ್‌ ಕಿಡ್‌ ಈಕೆ!

ಇನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿದ ಅಣಬೆಗಳನ್ನು ಅವರು ಔಷಧ ತಯಾರಿಕಾ ಕೇಂದ್ರಗಳಿಗೆ ಮಾರಾಟ ಮಾಡುತ್ತಾರೆ. ಈ ಅಣಬೆಯನ್ನು ಪ್ರತಿ ಕೆಜಿಗೆ 800ರೂ.ನಂತೆ ಮಾರಾಟ ಮಾಡುತ್ತಾರೆ. ಇನ್ನು ಉತ್ತಮ ಗುಣಮಟ್ಟದ ತಾಜಾ ಅಣಬೆಗಳನ್ನು ಪ್ರತಿ ಕೆಜಿಗೆ 100ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಈ ಎಲ್ಲ ರೀತಿಯ ಅಣಬೆಗಳ ಮಾರಾಟದಿಂದ ನಿಧಿ ತಿಂಗಳಿಗೆ 1.5ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. 

ಅಣಬೆ ಉದ್ಯಮ ಪ್ರಾರಂಭಿಸಿದರು ನಿಧಿ ಅಧ್ಯಾಪನ ವೃತ್ತಿಯನ್ನು ಬಿಟ್ಟಿಲ್ಲ. 11 ಹಾಗೂ 12ನೇ ತರಗತಿ ಮಕ್ಕಳಿಗೆ ಜೀವಶಾಸ್ತ್ರ ಪಾಠ ಮಾಡುತ್ತಾರೆ. ಇನ್ನು ನಿಧಿ ಅವರ ಪತಿ ಸಂಜಯ್ ಕಟರೆ ರಿಲಯನ್ಸ್ ಬ್ರ್ಯಾಂಚ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿ ಪತ್ನಿಯ ಉದ್ಯಮಕ್ಕೆ ನೆರವು ನೀಡುತ್ತಿದ್ದಾರೆ. 

click me!