ಕೇವಲ 3ಲಕ್ಷ ರೂ. ಹೂಡಿಕೆಯೊಂದಿಗೆ ರೆಸ್ಟೋರೆಂಟ್ ಪ್ರಾರಂಭಿಸಿದ ಈ ನಟಿ ಇಂದು 50 ಕೋಟಿ ಬೆಲೆಬಾಳೋ ಉದ್ಯಮದ ಒಡತಿ

By Suvarna News  |  First Published Oct 20, 2023, 11:37 AM IST

ಕುಟುಂಬದ ಉದ್ಯಮ ಮುನ್ನಡೆಸಲು ಇಚ್ಛಿಸದ ಈಕೆ ಸ್ವಂತ ಉದ್ಯಮ ಪ್ರಾರಂಭಿಸುವ ಕನಸು ಕಾಣುತ್ತಾರೆ. ಅದಕ್ಕಾಗಿ ಮನೆ ಬಿಟ್ಟು ಬಂದು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗುತ್ತಾರೆ. ಹಲವು ವರ್ಷಗಳ ಬಳಿಕ ಉಳಿತಾಯ ಮಾಡಿದ ಹಣದಲ್ಲಿ ರೆಸ್ಟೋರೆಂಟ್ ಚೈನ್ ಸ್ಥಾಪಿಸಿ ಯಶಸ್ಸು ಕಾಣುತ್ತಾರೆ. 
 


Business Desk: ಅನೇಕ ಮಹಿಳಾ ಉದ್ಯಮಿಗಳು ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ತಮ್ಮದೇ ಆದ ಹೆಸರು ಹಾಗೂ ಅಸ್ತಿತ್ವಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಹಲವು ಮಹಿಳೆಯರು ತಮ್ಮದೇ ಆದ ಹೆಸರು ಗಳಿಸುವಲ್ಲಿ ಸಫಲರಾಗಿದ್ದಾರೆ. ಅಂಥವರಲ್ಲಿ ಅಭಾ ಸಿಂಘಾಲ್ ಕೂಡ ಒಬ್ಬರು. ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಅಭಾ ಜೀವನದಲ್ಲಿ ಅನೇಕ ರಿಸ್ಕ್ ಗಳನ್ನು ತೆಗೆದುಕೊಂಡರು. ಹುಡುಗಿಯರು ನಿರ್ದಿಷ್ಟ ವಯಸ್ಸಿನಲ್ಲಿ ಶಿಕ್ಷಣ ಪೂರ್ಣಗೊಳಿಸಬೇಕು, ಮುದವೆಯಾಗಬೇಕು, ಜೀವನದಲ್ಲಿ ಸೆಟ್ಲ ಆಗಬೇಕು ಎಂಬ ಚೌಕಟ್ಟನ್ನು ಮುರಿದು ಅದರಿಂದ ಹೊರಬಂದು ಬದುಕು ಕಟ್ಟಿಕೊಂಡವರು ಅಭಾ. ಅಭಾ ಜೀವನದ ಕುರಿತು ಕುಟುಂಬ ಸದಸ್ಯರು ಹಾಗೂ ಆಕೆಯ ನಿರೀಕ್ಷೆಗಳು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿದ್ದವು. ಇದೇ ಕಾರಣಕ್ಕೆ ಅಭಾ 23ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೊರಬಂದು ಬದುಕು ಕಟ್ಟಿಕೊಳ್ಳುವ ನಿರ್ಧಾರ ಕೈಗೊಂಡರು.

ಅಭಾ ಪೋಷಕರು ಆಕೆ ಕುಟುಂಬದ ಉದ್ಯಮದಲ್ಲಿ ಮುನ್ನಡೆಯಬೇಕೆಂಬ ಬಯಕೆ ಹೊಂದಿದ್ದರು. ಆದರೆ, ಇದು ಅಭಾ ಆಯ್ಕೆಯಾಗಿರಲಿಲ್ಲ. ಇದೇ ಕಾರಣಕ್ಕೆ ಆಕೆ ಮನೆ ತೊರೆದರು. ಆ ಸಂದರ್ಭದಲ್ಲಿ ಅವರ ಕೈಯಲ್ಲಿದ್ದದ್ದು 5 ಸಾವಿರ ರೂ. ಹಾಗೂ ಮಾರ್ಕೆಟಿಂಗ್ ನಲ್ಲಿ ಎಂಬಿಎ. ಸ್ನೇಹಿತೆ ಜೊತೆಗೆ ಮುಂಬೈನ ಬಾಡಿಗೆ ಮನೆಯಲ್ಲಿ ವಾಸಿಸತೊಡಗಿದ ಅಭಾ ಕಂಪನಿಯೊಂದರಲ್ಲಿ ತಿಂಗಳಿಗೆ 22,000ರೂ. ವೇತನ ನೀಡುವ ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ. 

Tap to resize

Latest Videos

ಐಐಟಿ, ಐಐಎಂನಲ್ಲಿ ಓದಿಲ್ಲ, ಆದ್ರೂ ಈಕೆ ಸ್ಥಾಪಿಸಿರುವ ಎಜುಟೆಕ್ ಸ್ಟಾರ್ಟ್ ಅಪ್ ಮೌಲ್ಯ 300 ಕೋಟಿ ರೂ.!

ಕುಟುಂಬದಿಂದ ಬೇರ್ಪಟ್ಟು ಬದುಕು ಕಟ್ಟಿಕೊಳ್ಳಲು ಹೊರಟ ಅಭಾ ಜೀವನ ಕೇವಲ 10 ವರ್ಷಗಳಲ್ಲಿ ಬದಲಾಗುತ್ತದೆ. ಆಕೆ ಯಶಸ್ಸಿ ಉದ್ಯಮಿಯಾಗಿ ಗುರುತಿಸಿಕೊಳ್ಳುತ್ತಾರೆ. 'ಕಿಚಿಡಿ ಎಕ್ಸ್ ಪ್ರೆಸ್' ಎಂಬ ರೆಸ್ಟೋರೆಂಟ್ ಚೈನ್ ಹಾಗೂ ಕ್ಲೌಡ್ ಕಿಚನ್ ಮೂಲಕ ಗುರುತಿಸಿಕೊಳ್ಳುತ್ತಾರೆ. ಆಕೆಯ ಉದ್ಯಮ ಇಂದು 50 ಕೋಟಿ ರೂ. ಮೌಲ್ಯದಾಗಿದೆ.

ಕಿಚಡಿ ಜೊತೆ ನಂಟು
ಲಂಡನ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸುತ್ತಿರುವ ಸಮಯದಲ್ಲಿ ಅಭಾ ಬಳಿ ಜಾಸ್ತಿ ಸಮಯ ಇರಲಿಲ್ಲ. ಹಾಗೆಯೇ ಹಣವೂ ಇರಲಿಲ್ಲ. ಹೀಗಾಗಿ ಆಕೆ ಕಿಚಡಿ ಮಾಡಿಕೊಂಡು ತಿನ್ನುತ್ತಿದ್ದರು. ಕಿಚಡಿ ಆಕೆಯ ಆರೋಗ್ಯ ಹಾಗೂ ಪಾಕೆಟ್ ಎರಡಕ್ಕೂ ಹಿತಕಾರಿಯಾಗಿತ್ತು. ಹೀಗಾಗಿ ಅಭಾ ಕಿಚಡಿ ಜೊತೆ ಹೊಸ ಪ್ರಯೋಗಗಳನ್ನು ಮಾಡಿದ್ದಾನೆ. ಹಾಗೂ ಅದರಲ್ಲಿ ಪರಿಣತಿ ಹೊಂದಿದರು ಕೂಡ. ಇದೇ ಮುಂದೆ ಅಭಾ ಅವರಿಗೆ ಹೊಸ ಉದ್ಯಮ ಪ್ರಾರಂಭಿಸಲು ಪ್ರೇರಣೆಯಾಯಿತು. ಕಿಚಡಿ ಸಿದ್ಧಡಿಸಲು ಆಕೆ ಸಾಕಷ್ಟು ಸಮಯ ವ್ಯಯಿಸುತ್ತಿದ್ದರು. ಹೀಗಾಗಿ ಅವರ ಉದ್ಯಮ ಯಶಸ್ಸು ಕಾಣಲು ಹೆಚ್ಚಿನ ಸಮಯ ಹಿಡಿಯಲಿಲ್ಲ.

ಮಾಡೆಲಿಂಗ್ ಕ್ಷೇತ್ರದಲ್ಲೂ ತೊಡಗಿದ್ದರು
ಜಾಹೀರಾತು ನಿರ್ದೇಶಕರೊಬ್ಬರ ಪರಿಚಯದಿಂದ ಅಭಾ ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸುತ್ತಾರೆ. ಆಗ ಅವರಿಗೆ ಮೊದಲ ಸಂಭಾವನೆ 40 ಸಾವಿರ ರೂ. ಸಿಗುತ್ತದೆ. ಹೀಗೆ ಕೆಲವು ವರ್ಷಗಳ ಕಾಲ ಮಾಡೆಲಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅಭಾ ಒಂದಿಷ್ಟು ಹಣ ಉಳಿತಾಯ ಮಾಡುತ್ತಾರೆ. ಆ ನಂತರ ಸ್ವಂತ ರೆಸ್ಟೋರೆಂಟ್ ಪ್ರಾರಂಭಿಸುವ ನಿರ್ಧಾರ ಕೈಗೊಂಡರು. 

ತನ್ನನ್ನು ಕೆಲಸದಿಂದ ಕಿತ್ತುಹಾಕಿದ ಏರ್‌ ಏಷ್ಯಾ ಸಿಇಒಗಿಂತ ನನಗೇ ಹೆಚ್ಚು ಸಂಬಳ: ಯೂಟ್ಯೂಬರ್‌

3ಲಕ್ಷ ರೂ. ಹೂಡಿಕೆಯೊಂದಿಗೆ ಕಿಚಡಿ ಎಕ್ಸ್ ಪ್ರೆಸ್ ಪ್ರಾರಂಭ 
ಸ್ವಂತ ಉದ್ಯಮ ಪ್ರಾರಂಭಿಸುವ ಸಮಯದಲ್ಲೇ ಅಭಾ ಅವರಿಗೆ ಮಹೇಂದ್ರ ಕುಮಾರ್ ಪರಿಚಯವಾಗುತ್ತದೆ. ಮುಂದೆ ಅವರನ್ನೇ ಅಭಾ ವಿವಾಹವಾಗುತ್ತಾರೆ. ಮಹೇಂದ್ರ ಕುಮಾರ್ ಕೂಡ ಅಭಾ ಅವರ ಉದ್ಯಮದ ಸಹಸಂಸ್ಥಾಪಕರು. 2019ರ ಜುಲೈಯಲ್ಲಿ ಹೈದಾರಾಬಾದ್ ನಲ್ಲಿ ಇವರಿಬ್ಬರು 'ಕಿಚಡಿ ಎಕ್ಸ್ ಪ್ರೆಸ್' ಪ್ರಾರಂಭಿಸುತ್ತಾರೆ. ಕೇವಲ ಒಬ್ಬ ಉದ್ಯೋಗಿಯೊಂದಿಗೆ  ಈ ಉದ್ಯಮ ಪ್ರಾರಂಭಿಸುತ್ತಾರೆ. ಇದಕ್ಕಾಗಿ ಅಭಾ ತಾನು ಕೂಡಿಟ್ಟ 3ಲಕ್ಷ ರೂ. ಹೂಡಿಕೆ ಮಾಡುತ್ತಾರೆ. 
 

click me!