ಬಂಪರ್‌ ಆಫರ್‌: ಈ ರಾಜ್ಯದಲ್ಲಿ 428 ರೂ. ಗೆ ಸಿಗುತ್ತೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್!

By Kannadaprabha News  |  First Published Sep 3, 2023, 11:31 AM IST

ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್ ಹೊಂದಿರುವವರಿಗೆ ಕೇವಲ 428 ರೂ.ಗ ಳಲ್ಲಿ ಸಿಲಿಂಡರ್ ನೀಡಲು ಗೋವಾ ಸರ್ಕಾರ ನಿರ್ಧರಿಸಿದೆ.


ಪಣಜಿ (ಸೆಪ್ಟೆಂಬರ್ 3, 2023): ಗೋವಾದಲ್ಲಿ ಸಾಮಾನ್ಯ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಈ ಬಾರಿ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಇರುವವರಿಗೆ ಅಡುಗೆ ಅನಿಲದ ಮೇಲೆ ಹೆಚ್ಚುವರಿಯಾಗಿ 275 ರೂ. ಸಹಾಯಧನ ನೀಡಲು ನಿರ್ಧರಿಸಿದೆ.

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ‘ಕೇಂದ್ರ ಸರ್ಕಾರ ಎಲ್‌ಪಿಜಿಗೆ 200 ರೂ. ಸಹಾಯಧನ ಘೋಷಿಸಿದೆ. ನಾವು ಹೆಚ್ಚುವರಿಯಾಗಿ 275 ರೂ. ಸಬ್ಸಿಡಿ ನೀಡಲಿದ್ದೇವೆ’ ಎಂದರು. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಅಡುಗೆ ಅನಿಲದ ಮೇಲೆ ಒಟ್ಟು 475 ರೂ. ಸಬ್ಸಿಡಿ ಸಿಗಲಿದೆ. 

Tap to resize

Latest Videos

ಇದನ್ನು ಓದಿ: Good News: ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 158 ರೂ. ಇಳಿಕೆ; ಪರಿಷ್ಕೃತ ಬೆಲೆ ವಿವರ ಹೀಗಿದೆ..

ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ರೂಪಾಯಿ ಕಡಿತಗೊಳಿಸಿದ್ದು, ಹಣದುಬ್ಬರದಿಂದ ಜನಸಾಮಾನ್ಯರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಅದಾದ ನಂತರ ನೆರೆಯ ಗೋವಾ ಸರ್ಕಾರ ದೊಡ್ಡ ಘೋಷಣೆ ಮಾಡಿದೆ. ರಾಜ್ಯ ಸರ್ಕಾರದ ಘೋಷಣೆ ಬಳಿಕ ಅಂತ್ಯೋದಯ ಅನ್ನ ಯೋಜನೆ ಕಾರ್ಡುದಾರರಿಗೆ ಕೇವಲ 428 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಸಮ್ಮುಖದಲ್ಲಿ, ಗೋವಾದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮರುಪೂರಣಕ್ಕಾಗಿ ಮುಖ್ಯಮಂತ್ರಿ ಆರ್ಥಿಕ ನೆರವು ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಡಿಯಲ್ಲಿ ರಾಜ್ಯದ ಅಂತ್ಯೋದಯ ಆಹಾರ ಯೋಜನೆ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರವು ಪ್ರತಿ ಸಿಲಿಂಡರ್‌ಗೆ 275 ರೂ ಸಬ್ಸಿಡಿ ನೀಡುತ್ತದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರಕಾರ 200 ರೂ. ಬೆಲೆ ಕಡಿಮೆ ಮಾಡಿರುವ ಜತೆಗೆ ಹೆಚ್ಚುವರಿ 200 ರೂ. ಸಹಾಯಧನ ನೀಡುತ್ತಿದೆ.

ಇದನ್ನೂ ಓದಿ: ಈ ರಾಜ್ಯದಲ್ಲಿ ಶೀಘ್ರದಲ್ಲೇ 500 ರೂ. ಗೆ ಸಿಗುತ್ತೆ ಎಲ್‌ಪಿಜಿ ಸಿಲಿಂಡರ್!

ಇದಲ್ಲದೇ ಎಎವೈ ಅಂತ್ಯೋದಯ ಪಡಿತರ ಚೀಟಿದಾರರಿಗೆ ತಿಂಗಳಿಗೆ 275 ರೂ.ಗಳ ಹೆಚ್ಚುವರಿ ಪಾವತಿಯನ್ನು ಗೋವಾ ಸರ್ಕಾರ ಘೋಷಿಸಿದೆ. ಇದು ಗ್ರಾಹಕರಿಗೆ ಅನುಕೂಲವಾಗಲಿದೆ. ರಕ್ಷಾ ಬಂಧನದ ಸಂದರ್ಭದಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಿರುವುದರಿಂದ ಪಣಜಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 903 ರೂ. ಇದೆ. 

ಇನ್ನೊಂದೆಡೆ, ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್ ಹೊಂದಿರುವವರಿಗೆ ಕೇವಲ 428 ರೂ.ಗ ಳಲ್ಲಿ ಸಿಲಿಂಡರ್ ನೀಡಲು ಗೋವಾ ಸರ್ಕಾರ ನಿರ್ಧರಿಸಿದೆ. ಇದೇ ರೀತಿ, ಮಹಾರಾಷ್ಟ್ರ ಸರ್ಕಾರವು ಅಂತ್ಯೋದಯ ಯೋಜನೆಯಡಿ ಕಾರ್ಡ್ ಹೊಂದಿರುವವರಿಗೆ ಸಬ್ಸಿಡಿ ಸಿಲಿಂಡರ್‌ಗಳನ್ನು ನೀಡಬೇಕು. ದರ ಏರಿಕೆಯಿಂದ ಜನ ಸಾಮಾನ್ಯರ ಜೀವನವೂ ದುಸ್ತರವಾಗಿದೆ ಎಂಬ ಮಾತು ಕೇಳಿಬರುತ್ತಿದೆ. 

ಇದನ್ನೂ ಓದಿ: ‘ಲೋಕ’ ಸಮರ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್‌: ಶೀಘ್ರದಲ್ಲೇ ಎಲ್‌ಪಿಜಿ ಬೆಲೆ ಇಳಿಕೆ, ರೈತರ ಖಾತೆಗೆ ಪರಿಹಾರ ಧನ ಹೆಚ್ಚಳ!

click me!