
ನವದೆಹಲಿ(ಜು.19): ತೆರಿಗೆ ತಪ್ಪಿಸುವುದಲ್ಲದೆ ಕಾನೂನು ಹಿಡಿತದಿಂದ ಪಾರಾಗುವ ಸಲುವಾಗಿ ರಾಷ್ಟ್ರವನ್ನು ತೊರೆಯುವ, ದೇಶಭ್ರಷ್ಠ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಜರುಗಿಸುವ ಉದ್ದೇಶದಿಂದ ರೂಪಿಸಲಾಗಿರುವ ದೇಶಭ್ರಷ್ಠ ಆರ್ಥಿಕ ಅಪರಾಧಿಗಳ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.
ಮಸೂದೆಯನ್ನು ಲೋಕಸಭೆಯು ಧ್ವನಿಮತದಿಂದ ಅಂಗೀಕರಿಸಿದ ಬಳಿಕ ಮಾತನಾಡಿದ ಹಣಕಾಸು ಸಚಿವ ಪಿಯೂಷ್ ಗೋಯಲ್, ಸರ್ಕಾರವು ಮಸೂದೆಯನ್ನು ಸಂಸತ್ತಿಗೆ ಪರಿಚಯಿಸುವುದಕ್ಕೆ ಮುನ್ನವೇ ಈ ಕುರಿತಂತೆ ಕಾನೂನು ಜಾರಿಗೊಳಿಸಿದೆ. ಇದರಿಂದಾಗಿ ಸರ್ಕಾರ ಕಪ್ಪು ಹಣ ಹಾಗೂ ಇಂತಹಾ ಭ್ರಷ್ಠ ಅಪರಾಧಿಗಳ ಕುರಿತಂತೆ ಎಷ್ಟು ಆಕ್ರಮಣಕಾರಿ ನಿಲುವು ಹೊಂದಿದೆ ಎನ್ನುವುದು ಸ್ಪಷ್ಟವಾಗಲಿದೆ ಎಂದರು.
ದೇಶಭ್ರಷ್ಠ ಆರ್ಥಿಕ ಅಪರಾಧಿಗಳ ಮಸೂದೆ 2013 ಇಂತಹಾ ಅಪರಾಧಿಗಳ ಹೆಸರಿನಲ್ಲಿರುವ ಆಸ್ತಿಗಳನ್ನಲ್ಲದೆ ಬೇನಾಮಿ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ತನಿಖಾ ಏಜನ್ಸಿಗಳಿಗೆ ನಿಡಲಿದೆ. ಈಗಾಗಲೇ ದೇಶ ತೊರೆದಿರುವವರನ್ನು ಬಂಧಿಸಲು ಈ ಮಸೂದೆ ಅಡಿಯಲ್ಲಿ ಸಾಧ್ಯವಾಗದೆ ಹೋದರೂ ಸರ್ಕಾರಕ್ಕೆ ಆರೋಪಿಗಳನ್ನು ಹೇಗೆ ಬಂಧಿಸಬೇಕೆಂದು ತಿಳಿದಿದೆ ಎಂದು ಗೋಯಲ್ ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.