Published : Mar 04, 2022, 11:47 AM ISTUpdated : Mar 04, 2022, 05:26 PM IST

Karnataka Budget 2022 Live: ಮೇಕೆದಾಟು ಯೋಜನೆಗೆ ಅನುದಾನ, ಕಾಂಗ್ರೆಸ್‌ಗೆ ಬೊಮ್ಮಾಯಿ ಏಟು?

ಸಾರಾಂಶ

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡುವುದಾಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಮೊದಲ ಬಜೆಟ್‌ನಲ್ಲಿ ಘೋಷಿಸಿದ್ದು, ಅಭಿವೃದ್ದಿ ಕಾಮಗಾರಿ ವಿಜವೇಚನೆಯನ್ನು ದೇವಾಲಯಗಳಿಗೆ ನೀಡಲು ತೀರ್ಮಾನಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಹೊಸ್ತಿಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಚೊಚ್ಚಲ ಬಹಳಷ್ಟು ಮಹತ್ವ ಪಡೆದಿದೆ. ಇಲಾಖೆ ಹಾಗೂ ಸಮುದಾಯಗಳಿಗೆ ಅಳೆದು, ತೂಗಿ ಅನುದಾನ ಘೋಷಿಸಿದ್ದು, ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ಮೇಕೆದಾಟು ಯೋಜನೆಗೂ ಅನುದಾನ ಘೋಚಿಸಿದ್ದು, ಈ ವಿಚಾರದ ಲಾಭ ಪಡೆಯಲು ಯೋಜನೆ ರೂಪಿಸಿದ್ದ ಕಾಂಗ್ರೆಸ್‌ಗೂ ಬಹುದೊಡ್ಡ ಏಟು ಕೊಟ್ಟಿದ್ದಾರೆ. ಬಜೆಟ್‌ನಲ್ಲಿ ಇನ್ನಿತರ ಕ್ಷೇತ್ರಗಳಿಗೆ ಏನೆಲ್ಲಾ ಸಿಕ್ಕಿದೆ? ಇಲ್ಲಿದೆ ಕರ್ನಾಟಕ ಬಜೆಟ್ 2022ರ ಲೈವ್‌ ಅಪ್ಡೇಟ್ಸ್‌

Karnataka Budget 2022 Live: ಮೇಕೆದಾಟು ಯೋಜನೆಗೆ ಅನುದಾನ, ಕಾಂಗ್ರೆಸ್‌ಗೆ ಬೊಮ್ಮಾಯಿ ಏಟು?

04:17 PM (IST) Mar 04

ಬೊಮ್ಮಾಯಿ ಘೋಷಿಸಿದ ಹೊಸ ಯೋಜನೆಗಳು ಇಂತಿವೆ

ಸವಾಲಿನ ನಡುವೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕರ್ನಾಟಕ ಬಜೆಟ್ 2022ನ್ನು (Karnataka Budget 2022) ಮಂಡಿಸಿದ್ದಾರೆ.  ಕನ್ನಡ (Kannada) ಭಾಷೆ ಸಂರಕ್ಷಣೆ ಮತ್ತು ಬೆಳವಣಿಗೆಗೆ ಮೊದಲ ಆದ್ಯತೆ ನೀಡಲಾಗಿದ್ದು ಸಿಕ್ಕ ಕೊಡುಗೆಗಳ ಪಟ್ಟಿ ಇಲ್ಲಿದೆ.

ಬಜೆಟ್ ಭಾಷಣ ಓದುತ್ತ ಸಿಎಂ ಬಸವರಾಜ ಬೊಮ್ಮಾಯಿ ಕವಿ ಚನ್ನವೀರ ಕಣವಿ  ಅವರ ಸಾಲುಗಳನ್ನು ಉಲ್ಲೇಖ ಮಾಡಿದರು. ಕನ್ನಡ ನಾಡಿನ ಸಾಹಿತ್ಯ   ಹಾಗೂ ಸಂಸ್ಕೃತಿಯ   ರಕ್ಷಣೆ,   ಅಭಿವೃದ್ಧಿಯ ಜೊತೆಗೆ ಸಮೃದ್ಧ ನೈಸರ್ಗಿಕ ಸಂಪನ್ಮೂಲವನ್ನೂ   ಕಾಪಾಡುವುದು  ನಮ್ಮ  ಗುರಿಯಾಗಿದೆ. ಈಗಾಗಲೇ ಪರಿಸರ ಮಾಲಿನ್ಯದಿಂದಾದ ಕೊರತೆಯನ್ನು ಸರಿದೂಗಿಸಿ, ಪರಿಸರ   ಸಂರಕ್ಷಿಸುವ  ಉದ್ದೇಶದಿಂದ   ನೂತನ   ಕಾರ್ಯಕ್ರಮಗಳನ್ನು  ಹಮ್ಮಿಕೊಂಡಿದ್ದೇವೆ  ಎಂದು ತಿಳಿಸಿದರು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: Karnataka Budget 2022 ಬೊಮ್ಮಾಯಿ ಘೋಷಿಸಿದ ಹೊಸ ಯೋಜನೆಗಳು ಇಂತಿವೆ

04:13 PM (IST) Mar 04

ಕಲ್ಯಾಣ ಕರ್ನಾಟಕಕ್ಕೆ ಹಲವು ಯೋಜನೆಗಳು, ಅಂಜನಾದ್ರಿ ಬೆಟ್ಟಕ್ಕೆ ಬಂಪರ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು 2022-23ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ (karnataka Budget 2022-23)  ಹಿಂದುಳಿದ ಭಾಗ ಎಂದೇ ಹಣೆಪಟ್ಟಿ ಕಟ್ಟಿರುವ ಕಲ್ಯಾಣ ಕರ್ನಾಟಕ (kalyana karnataka) (ಹೈದರಾಬಾದ್ ಕರ್ನಾಟಕ) ಭಾಗಕ್ಕೆ ಅನೇಕ ಕೊಡುಗೆಗಳನ್ನು ಘೋಷಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ  ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲು ನೀಡಲಾಗಿದೆ.

ಹೌದು...  ತಮ್ಮ ಚೊಚ್ಚಲ ಬಜೆಟ್‌ನಲ್ಲಿ ನಾವಿನ್ಯತೆಯುಳ್ಳ ಕಲ್ಯಾಣ ಕರ್ನಾಟಕ ಭಾಗದ 25 ನವೋದ್ಯಮಗಳನ್ನು ಉತ್ತೇಜಿಸಲು Elevate Kalyana Karnataka ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದು, ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಹಿನ್ನೆಲೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3000 ಕೋಟಿ ರೂ. ಅನುದಾನ ನೀಡಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3000 ಕೋಟಿ ರೂ. ಅನುದಾನ

04:09 PM (IST) Mar 04

ಮಹಿಳಾ ಸಬಲೀಕರಣಕ್ಕೆ ಒತ್ತು; ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಹಲವು ಕ್ರಮ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಶುಕ್ರವಾರ (ಮಾ.4) ಮಂಡಿಸಿದ ಕರ್ನಾಟಕ ರಾಜ್ಯದ 2022-23ನೇ ಆರ್ಥಿಕ ಸಾಲಿನ  ಬಜೆಟ್ ನಲ್ಲಿ( (karnataka budget 2022-23) ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು  4,713 ಕೋಟಿ ರೂ. ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ. 

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ವಿಧವಾ ವೇತನ, ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ ಪಿಂಚಣಿ ಹೆಚ್ಚಳ

04:08 PM (IST) Mar 04

ಸೆಮಿಕಂಡಕ್ಟರ್‌ ಉದ್ಯಮಕ್ಕೆ ಪ್ರೋತ್ಸಾಹ: ರಾಜ್ಯದಲ್ಲಿ 7 ಕರ್ನಾಟಕ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ!

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ  ರಾಜ್ಯ ಆಯವ್ಯಯವನ್ನು ಶುಕ್ರವಾರ ಮಧ್ಯಾಹ್ನ ಮಂಡಿಸಿದ್ದಾರೆ. ಬೊಮ್ಮಾಯಿ ಬಜೆಟ್‌ನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು Karnataka Institue of Technology ಗಳನ್ನಾಗಿ ಉನ್ನತೀಕರಿಸುವುದು, ಸೆಮಿಕಂಡಕ್ಟರ್‌ಉದ್ಯಮಕ್ಕೆ ಪ್ರೋತ್ಸಾಹ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. 

"ಏಪ್ರಿಲ್ - ಡಿಸೆಂಬರ್ 2021ರ ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಹರಿವಿನ ಪ್ರಮಾಣದಲ್ಲಿ ಕರ್ನಾಟಕವು ಶೇ.40ರಷ್ಟನ್ನು (1.27 ಲಕ್ಷ ಕೋಟಿ ರೂ.) ಆಕರ್ಷಿಸಿದ್ದು, ರಾಷ್ಟ್ರದಲ್ಲಿಯೇ ಅಗ್ರಸ್ಥಾನದಲ್ಲಿದೆ.  ಅಲ್ಲದೇ  ಬೆಂಗಳೂರು ಮೂಲದ 34 ನವೋದ್ಯಮಗಳು ಬಿಲಿಯನ್ ಡಾಲರ್ ಅಥವಾ ಹೆಚ್ಚಿನ ಮೌಲ್ಯವನ್ನು ಹೊಂದಿವೆ ಎಂಬುದು ರಾಜ್ಯದ ಸ್ಪಾರ್ಟ್‌ಅಪ್ ಉತ್ತೇಜಕ ವಾತಾವರಣಕ್ಕೆ ಸಾಕ್ಷಿಯಾಗಿದೆ" ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಬೊಮ್ಮಾಯಿ ಬಜೆಟ್‌ನಲ್ಲಿ ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರಕ್ಕೆ ಸಿಕ್ಕ ಯೋಜನೆಗಳ ಹೈಲೈಟ್ಸ್‌ ಇಲ್ಲಿದೆ. 

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ರಾಜ್ಯದಲ್ಲಿ 7 ಕರ್ನಾಟಕ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ

04:05 PM (IST) Mar 04

ನಿರೀಕ್ಷೆಯಂತೆಯೇ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj bommai) ಇಂದು ತಮ್ಮ ಚೊಚ್ಚಲ ಬಜೆಟ್​ ಅನ್ನು  ಮಂಡಿಸಿದ್ದು, ನಿರೀಕ್ಷೆಯಂತೆಯೇ ಅಂಗನವಾಡಿ ಕಾರ್ಯಕರ್ತೆಯರು (Anganwadi Workers)ಮತ್ತು ಅಂಗನವಾಡಿ ಸಹಾಯಕಿಯರ (Anganwadi helper) ವೇತನ ಹಾಗೂ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ.  ಮಾತ್ರವಲ್ಲ ಆಶಾ ಕಾರ್ಯಕರ್ತರು (asha workers), ಗ್ರಾಮ ಸಹಾಯಕರು ಮತ್ತು ಬಿಸಿಯೂಟ ತಯಾರಕರಿಗೂ  ಗೌರವ ಧನ ಹೆಚ್ಚಿಸಲಾಗಿದೆ. 

20 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ 1,500 ರೂ. 15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1,200 ರೂ. ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ರೂ. ಗೌರವಧನ ಹೆಚ್ಚಳ ಮಾಡಲಾಗಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:  ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಗೌರವ ಧನ ಘೋಷಣೆ

04:04 PM (IST) Mar 04

Karnataka Budget 2022: ರೈತರ ಜೀವನಾಡಿ ನೀರಾವರಿಗೆ ಬೊಮ್ಮಾಯಿ ಬಂಪರ್ ಕೊಡುಗೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದು, ರೈತರ ಜೀವನಾಡಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜಲ ಸಂಪನ್ಮೂಲ ಇಲಾಖೆಗೆ ಒಟ್ಟು 20,601 ಕೋಟಿ ರೂ ಘೋಷಣೆ ಮಾಡಿದ್ದಾರೆ.

ಅದರಲ್ಲೂ ಪ್ರಮುಖವಾಗಿ ಪ್ರಸ್ತುತ ರಾಜ್ಯಾದ್ಯಂತ  ಸಂಚಲನ ಮೂಡಿಸಿದ ಮೇಕೆದಾಟು ಯೋಜನೆಗೆ (Mekedatu) ಕರ್ನಾಟಕ ಸರ್ಕಾರ 2022ನೇ ಸಾಲಿನಲ್ಲಿ ಭಾರೀ ಮೊತ್ತದ ಅನುದಾನ ಘೋಷಣೆ ಮಾಡಿದೆ. ಅಲ್ಲದೇ ಎತ್ತಿನಹೊಳೆ ಯೋಜನೆ, ಕೃಷ್ಣ ಮೇಲ್ದಂಡೆ ಹಾಗೂ ಳಸಾ ಬಂಡೂರಿ ಯೋಜನೆಗೆ ಅನುದಾನ ನೀಡಿದ್ದಾರೆ. ಹಾಗಾದ್ರೆ, ಯಾವುದಕ್ಕೆ ಎಷ್ಟು ನೀಡಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಜಲ ಸಂಪನ್ಮೂಲ ಇಲಾಖೆಗೆ ಒಟ್ಟು 20,601 ಕೋಟಿ ರೂ ಘೋಷಣೆ ಮಾಡಿದ ಬೊಮ್ಮಾಯಿ

03:57 PM (IST) Mar 04

ಸಿಎಂ ಬೊಮ್ಮಾಯಿ ಉತ್ತಮ ಬಜೆಟ್ ಮಂಡಿಸಿದ್ದಾರೆ: ಅರಗ ಜ್ಞಾನೇಂದ್ರ

ಸಿಎಂ ಬೊಮ್ಮಾಯಿ ಉತ್ತಮ ಬಜೆಟ್ ಮಂಡಿಸಿದ್ದಾರೆ. ವಿಶೇಷವಾಗಿ ಗೃಹ ಇಲಾಖೆಗೆ ಉತ್ತಮ ಅನುದಾನ ನೀಡಿದ್ದಾರೆ. ಕೊರೋನಾ ವಾರಿಯರ್ಸ್‌ ಆಗಿ ಕಾರ್ಯ ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸಾವಿರ ಹಣ ಹೆಚ್ಚಳ. ವಿಶೇಷವಾಗಿ ಪೌರಕಾರ್ಮಿಕರಿಗೆ ವೇತನ ಹೆಚ್ಚಳ‌ ಮಾಡಲಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ

03:55 PM (IST) Mar 04

ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್: ಬಿಎಸ್‌ವೈ

ಬೊಮ್ಮಾಯಿಯವರು ಮಂಡಿಸಿರುವ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್. ಕೃಷಿ, ಶಿಕ್ಷಣ , ಗ್ರಾಮೀಣ ಅಭಿವೃದ್ಧಿ , ನೇಕಾರರಿಗೆ ಒತ್ತು ನೀಡಲಾಗಿದೆ. ಸಾಮಾಜಿಕ ಸಮತೋಲನ ತರುವ ನಿಟ್ಟಿನಲ್ಲಿ ಒತ್ತು ನೀಡಲಾಗಿದೆ. ಕೃಷಿ ಹಾಗೂ ಕಾರ್ಮಿಕ ವರ್ಗಕ್ಕೆ ಉತ್ತಮ ಯೋಜನೆಗಳನ್ನು ಒಳಗೊಂಡಿರುವ ಬಜೆಟ್ ಆಗಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಬಜೆಟ್ ಸಹಕಾರಿಯಾಗಿದೆ. ಹೈನುಗಾರಿಕೆ ಪ್ರೋತ್ಸಾಹಕ್ಕೆ ಯೋಜನೆ ರೂಪಿಸಲಾಗಿದೆ. ರೈತರ ಆರೋಗ್ಯ ಅಭಿವೃದ್ಧಿಗಾಗಿ ಯಶಸ್ವಿನಿ ಯೋಜನೆಗೆ ಅನುದಾನ ಮೀಸಲಿಡಲಾಗಿದೆ. ನೀರಾವರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ

03:31 PM (IST) Mar 04

ಇದು ಅತೀ ನೀರಸವಾದ ಬಜೆಟ್: ಈಶ್ವರ್ ಖಂಡ್ರೆ

ಇದು ಅತೀ ನೀರಸವಾದ ಬಜೆಟ್. ಯಾವುದೇ ಮುಂದಿನ ಭವಿಷ್ಯ ಚಿಂತನೆಯಾಗ್ಲಿ, ಅಭಿವೃದ್ಧಿಯ ಚಿಂತನೆಯಾಗ್ಲೀ ಇಲ್ಲದೆ ಮಾಡಿರುವ ಬಜೆಟ್. ಕೋವಿಡ್ ಹಾಗೂ ಪ್ರಕೃತಿ ವಿಕೋಪ ನಿರ್ವಾಹಣೆ ಬಹಳ ಯಶಸ್ವಿಯಾಗಿ ಮಾಡಿದ್ವೀ ಅಂತ ಹೇಳಿದ್ದಾರೆ. ಆದರೆ ಕೋವಿಡ್‌ನಲ್ಲಿ ಮೃತಪಟ್ಟ ಕೆಲವು ಕೆಲವು ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಕಲ್ಯಾಣ ಕರ್ನಾಟಕ್ಕಾಗಿ ಕಳೆದ ಬಾರಿ ನೀಡಿದ ಅನುದಾನದಲ್ಲಿ ಕೇವಲ 300 ಕೋಟಿ ಮಾತ್ರ ಖರ್ಚು ಆಗಿದೆ. ಕಲ್ಯಾಣ ಕರ್ನಾಟಕದಲ್ಲಿ ಕೆರೆ ತುಂಬುವಂತಹ  ಕಾರ್ಯಕ್ರಮ ಘೋಷಣೆಗೆ ಸೀಮಿತವಾಗಿದೆ. ನೀರಾವರಿ ಯೋಜನೆಗಳಲ್ಲಿ ಹಂಚಿಕೆಯಾಗಿರುವ ನೀರನು ಬಳಕೆ ಮಾಡಿಕೊಳ್ಳಲು ಬೇಕಾದ ಅನುದಾನ ಘೋಷಣೆಯಾಗಿಲ್ಲ. ಐದು ಲಕ್ಷ ಮನೆ ಕೊಟ್ಟಿದ್ದೇವೆ ಅಂತ ಹೇಳಿಕೊಂಡಿದ್ದಾರೆ. ಮೂರು ವರ್ಷಗಳಿಂದ ಬಡವರಿಗೆ ಒಂದೇ ಒಂದು ಮನೆ ಸಹ ಸಿಕ್ಕಿಲ್ಲ. ಎಲ್ಲರ ನಿರೀಕ್ಷೆ ಭ್ರಮ ನಿರಸನವಾಗಿದೆ. ಬಡವರನ್ನು ಸಬಲಿಕರಣಗೊಳಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ವಿಷಯ ಮಂಡನೆಯಾಗಿಲ್ಲ ಎಂದಿದ್ದಾರೆ. 

03:27 PM (IST) Mar 04

Karnataka Budget 2022: ಕೃಷಿ ಕ್ಷೇತ್ರಕ್ಕೆ ಬಂಪರ್, 33,700 ಕೋಟಿ ಘೋಷಣೆ, ರೈತರಿಗೆ ಏನೆಲ್ಲಾ ಸಿಕ್ಕಿದೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದು, ಬಜೆಟ್ ಮಂಡನೆಯಲ್ಲಿ ಮೊದಲಿಗೆ ಕೃಷಿ ಕ್ಷೇತ್ರದ ಅನುದಾನವನ್ನು ಘೋಷಿಸಿದರು.  2022-23ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರುಪಾಯಿ ನೀಡಿದ್ದಾರೆ.

ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂಪಾಯಿ ಘೋಷಣೆ ಮಾಡಿದ ಸಿಎಂ ಬಿಎಸ್ ಬಸವರಾಜ ಬೊಮ್ಮಾಯಿ ಅವರು, ರೈತ ಶಕ್ತಿ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ರಾಜ್ಯದಲ್ಲಿ ರೈತ ಶಕ್ತಿ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು,ಈ ಯೋಜನೆ ಮೂಲಕ ರೈತರಿಗೆ ಯಂತ್ರೋಪಕರಣ ಉಪಯೋಗಕ್ಕೆ ಸಹಾಯಧನ, 250 ರೂ. ಡೀಸೆಲ್ ಸಹಾಯಧನ ನೀಡಲಾಗುವುದು. 500 ಕೋಟಿ ರೂ. ಯೋಜನೆಗೆ ಒದಗಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 'ರೈತ ಶಕ್ತಿ' ಯೋಜನೆ, 'ಯಶಸ್ವಿನಿ' ಮರು ಜಾರಿ

03:25 PM (IST) Mar 04

ಕರ್ನಾಟಕದ ಅಭಿವೃದ್ಧಿಗಾಗಿ ಯಾವ ಇಲಾಖೆಗೆ ಎಷ್ಟು ಅನುದಾನ?

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊದಲ ಬಾರಿಗೆ ಇಂದು (ಮಾರ್ಚ್ 4) ವಿಧಾನಸೌಧದಲ್ಲಿ ಕರ್ನಾಟಕ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. 2,53,165 ಕೋಟಿ ಗಾತ್ರದ ಬಜೆಟ್ ಮಂಡಿಸುತ್ತಿರುವ ಸಿಎಂ ಬೊಮ್ಮಾಯಿ ಅವರು ವಿವಿಧ ಇಲಾಖೆಗಳ ಅಭಿವೃದ್ಧಿ ಅನುದಾನ ಹಂಚಿಕೆ ಮಾಡಿದ್ದಾರೆ.

ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ. ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ , ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ ಕಾರ್ಯಕ್ರಮ, ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಅಭಿವೃದ್ಧಿಗೆ ಸಂಘಟಿತ ಕಾರ್ಯಕ್ರಮ, ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯ – ಪಾಲುದಾರಿಕೆಯೊಂದಿಗೆ ಅಭಿವೃದ್ಧಿ ಹಾಗೂ ನವಭಾರತಕ್ಕಾಗಿ ನವ ಕರ್ನಾಟಕ  ಹೊಸ ಚಿಂತನೆ, ಹೊಸ ಚೈತನ್ಯದ ಜತ ಹೊಸ ಮುನ್ನೋಟ ಎಂಬ ನೆಲೆಯಲ್ಲಿ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್ ಇದೆ.ಇನ್ನು ಯಾವ ಇಲಾಖೆಗೆ ಎಷ್ಟು ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ..

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://kannada.asianetnews.com/business/karnataka-budget-2022-here-is-sectors-wise-allocation-rbj-r87nig

 

02:45 PM (IST) Mar 04

2 ತಾಸು 11 ನಿಮಿಷಗಳ ಸುದೀರ್ಘ ಬಜೆಟ್ ಮುಕ್ತಾಯ

2 ತಾಸು 11 ನಿಮಿಷಗಳ ಸುದೀರ್ಘ ಬಜೆಟ್ ಮುಕ್ತಾಯ

ಸರ್ವಸ್ಪರ್ಶಿ ಬಜೆಟ್ ಮಂಡಿಸಿದ ಬೊಮ್ಮಾಯಿ

ರಾಜ್ಯದ ಅಭಿವೃದ್ಧಿಗೆ 3E ಸೂತ್ರ ಅಳವಡಿಕೆ

02:43 PM (IST) Mar 04

ಆರೋಗ್ಯ ಕ್ಷೇತ್ರಕ್ಕೆ ಸಿಎಂ ಬೊಮ್ಮಾಯಿ ಸರ್ಜರಿ

ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ
ಬೆಳಗಾವಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ
10 ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಸೆಂಟರ್
ದೆಹಲಿ ಮಾದರಿಯಲ್ಲಿ ಬೆಂಗಳೂರಿನ ಎಲ್ಲ ವಾರ್ಡ್, ರಾಜ್ಯದ ಪ್ರಮುಖ ನಗರಗಳಲ್ಲಿ 438 ನಮ್ಮ ಕ್ಲಿನಿಕ್
300 ಮಹಿಳಾ ಸ್ವಾಸ್ಥ್ಯ ಕೇಂದ್ರ ಸ್ಥಾಪನೆ
7 ತಾಲೂಕು ಆಸ್ಪತ್ರೆಗಳನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ
ತುಮಕೂರಿನಲ್ಲಿ 20 ಕೋಟಿ ವೆಚ್ಚದಲ್ಲಿ ಟ್ರಾಮಾ ಕೇರ್ ಸೆಂಟರ್
ಜಯದೇವ ಸಂಸ್ಥೆ ಸಹಕಾರದಲ್ಲಿ 75 ತಾಲೂಕು ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಚಿಕಿತ್ಸೆ
200 ಹಾಸಿಗೆ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆಗಳಲ್ಲೂ ಪಿಜಿ ಮೆಡಿಕಲ್ ಕಾಲೇಜು
ಮೈಸೂರು ಕೆ ಆರ್ ಆಸ್ಪತ್ರೆ ನವೀಕರಣಕ್ಕೆ 89 ಕೋಟಿ
ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಪಿಜಿ ಕೋರ್ಸ್ ಆರಂಭ
ಸಿಎಂ ಆರೋಗ್ಯವಾಹಿನಿ ಯೋಜನೆಯಡಿ ಬೀದರ್, ಚಾಮರಾಜನಗರ, ಹಾವೇರಿ
ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಚಾರಿ ಕ್ಲಿನಿಕ್
ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು
ಎಲ್ಲ ತಾಲೂಕುಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ನೀಟ್ ತರಬೇತಿ
ಮೆಡಿಕಲ್ ಓದುವ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ನಿಗದಿಗೆ ಶುಲ್ಕ ನಿಯಂತ್ರಣ ಸಮಿತಿ ರಚನೆ

02:43 PM (IST) Mar 04

ನೀರಾವರಿ ಕ್ಷೇತ್ರಕ್ಕೆ ಸಿಕ್ಕ ಕೊಡುಗೆ ಹೀಗಿದೆ

ನೀರಾವರಿಗೆ 33,700 ಕೋಟಿ ರೂಪಾಯಿ ಅನುದಾನ
ಎತ್ತಿನ ಹೊಳೆ ಯೋಜನೆಯ ಅನುಷ್ಠಾನಕ್ಕೆ 3 ಸಾವಿರ ಕೋಟಿ 
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ 1 ಸಾವಿರ ಕೋಟಿ 
ತುಂಗಭದ್ರಾದ ನವಲೆ ಬಳಿ ಸಮತೋಲನ ಜಲಾಶಯಕ್ಕೆ 1 ಸಾವಿರ ಕೋಟಿ 
ಕಾಳಿ ನದಿಯಿಂದ ಉತ್ತರ ಕರ್ನಾಟಕ ಐದು ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ 
ನೀರಾವರಿ ಪ್ರದೇಶ ಹೆಚ್ಚಿಸಲು 8,774 ಕೋಟಿ ರೂ. ಯೋಜನೆಗೆ ಅನುಮೋದನೆ
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಕಿಂಡಿ ಆಣೆಕಟ್ಟು ನಿರ್ಮಾಣ
ಕೃಷಿ ಚಟುವಟಿಕೆಗೆ ಉಪಯೋಗಿಸಲು 500 ಕೋಟಿ ರೂಗಳ ಕಾಮಗಾರಿ 
ಉಪ್ಪು ನೀರನ್ನು ತಡೆಗಟ್ಟಲು ಖಾರ್ ಲ್ಯಾಂಡ್ ಯೋಜನೆಯಡಿ 1500 ಕೋಟಿ ಯೋಜನೆ 
ರಾಜ್ಯದ ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ ಕ್ರಿಯಾ ಯೋಜನೆ 
308 ದಶಲಕ್ಷ ಲೀಟರ್ ನೀರನ್ನು 234 ಕೆರೆಗಳಿಗೆ ತುಂಬಿಸುವ ಯೋಜನೆಗೆ 865 ಕೋಟಿ 
ಕೆಸಿ ವ್ಯಾಲಿ ಯೋಜನೆಯ 2ನೇ ಹಂತಕ್ಕೆ 455 ಕೋಟಿ ರೂ. ಅನುಮೋದನೆ 
ಅಂತರ್ಜಲ ಸಂಪನ್ಮೂಲ ನಿರ್ವಹಣೆ ಅನುಷ್ಠಾನಕ್ಕೆ 1,202 ಕೋಟಿ ರೂಪಾಯಿ

02:34 PM (IST) Mar 04

ತೆರಿಗೆ ಬರೆ ಇಲ್ಲ, ವಾಣಿಜ್ಯ ತೆರಿಗೆ ಹೆಚ್ಚಳ ಪ್ರಸ್ತಾಪ ಇಲ್ಲ

ಯಾವುದೇ ಹೆಚ್ಚಿನ ತೆರಿಗೆ ವಿಧಿಸಿಲ್ಲ
ತೆರಿಗೆ ಸಂಗ್ರಹ ಇಲಾಖೆಗಳಲ್ಲಿ ದಕ್ಷತೆ ತರಲು ಕ್ರಮ
ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ದರದ ಮೇಲೆ ತೆರಿಗೆ ಹೆಚ್ಚಿಸಿಲ್ಲ
ಕಳೆದ ಸಲ ಪೆಟ್ರೋಲ್, ಡೀಸೆಲ್ ಮಾರಾಟ ಮೇಲಿನ ತೆರಿಗೆ ಇಳಿಸಲಾಗಿತ್ತು..
ಪಿಎಂ ಸ್ವನಿಧಿ ಯೋಜನೆಯಡಿ ಮುದ್ರಾಂಕ ಶುಲ್ಕಗಳಿಗೆ ವಿನಾಯ್ತಿ 
ಬೀದಿ ವ್ಯಾಪಾರಿಗಳಿಗೆ ವಿತರಿಸಿದ ಸಾಲಗಳ ಒಪ್ಪಂದಗಳ ಮೇಲಿನ ಮುದ್ರಾಂಕ ಶುಲ್ಕ ಇಳಿಕೆ
2 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ
ಅಬಕಾರಿ ತೆರಿಗೆಯಲ್ಲೂ ಹೆಚ್ಚಳ ಪ್ರಸ್ತಾಪ ಮಾಡದ ಸರ್ಕಾರ
ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲೂ ಹೆಚ್ಚಳ ಇಲ್ಲ

02:32 PM (IST) Mar 04

ಕರ್ನಾಟಕ ಬಜೆಟ್ 2022: ಇಲ್ಲಿದೆ ಬಜೆಟ್ ಸಂಪೂರ್ಣ ಪ್ರತಿ

02:26 PM (IST) Mar 04

ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ

ಬೆಳಗಾವಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ
ಆಯ್ದ 10 ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಸೆಂಟರ್ ಸ್ಥಾಪನೆ
ಬೆಂಗಳೂರಿನ ಎಲ್ಲ ವಾರ್ಡ್, ರಾಜ್ಯದ ಪ್ರಮುಖ ನಗರಗಳಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ

02:25 PM (IST) Mar 04

ಬಾಗಲಕೋಟೆಯಲ್ಲಿ ವಿನೂತನ 7 ವಿಶ್ವವಿದ್ಯಾಲಯ ಸ್ಥಾಪನೆ

LKG, UKG, ಪ್ರಾಥಮಿಕ, ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ, ವಯಸ್ಕರ ಶಿಕ್ಷಣ ಕ್ಷೇತ್ರಕ್ಕೆ ಹೊಸ ಸಿಲಬಸ್
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 500 ಕೋಟಿ ರೂ.
ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಪೀಠೋಪಕರಣಕ್ಕೆ 100 ಕೋಟಿ ರೂ. 
169 ಬಾಲಕಿಯರ ಪ್ರೌಢಶಾಲೆಗಳಿಗೆ ಲ್ಯಾಬ್ ಇನ್ ಎ ಕಿಟ್ ವಿತರಣೆ
ರಾಜ್ಯದ 7 ಎಂಜಿನಿಯರಿಂಗ್ ಉನ್ನತೀಕರಣ, ಪ್ರತಿಷ್ಠಿತ ವಿದೇಶಿ ವಿವಿ ಜತೆ ಒಪ್ಪಂದ
ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ
ಬಾಗಲಕೋಟೆಯಲ್ಲಿ ವಿನೂತನ 7 ವಿಶ್ವವಿದ್ಯಾಲಯ ಸ್ಥಾಪನೆ

02:25 PM (IST) Mar 04

ಶೈಕ್ಷಣಿಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸರಕಾರಿ ಶಾಲೆಗಳ ಅಭಿವೃದ್ದಿಗೆ 500 ಕೋಟಿ ಘೋಷಣೆ

ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ (Basavaraj Bommai) ಶುಕ್ರವಾರ ಮಂಡಿಸಿರುವ ಕರ್ನಾಟಕ ಬಜೆಟ್ 2022-23ರಲ್ಲಿ (karnataka budget 2022-23) ಶಿಕ್ಷಣ ಕ್ಷೇತ್ರಕ್ಕೆ (Education sector) ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ದಿಗೆ 500 ಕೋಟಿ ರೂ ಅನುದಾನ ಮೀಸಲಿಡಲಾಗಿದ್ದು, ಇದು ರಾಜ್ಯದಲ್ಲಿ ಮೊದಲ ಬಾರಿಗೆ ಎಂದು ಬೊಮ್ಮಾಯಿ ಬಜೆಟ್ ವೇಳೆ ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2022ರ ಪ್ರಕಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ವಯಸ್ಕ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯಕ್ರಮ ರಚನೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಸರಕಾರಿ ಶಾಲೆಗಳ ಅಭಿವೃದ್ದಿಗೆ 500 ಕೋಟಿ ಘೋಷಣೆ

02:22 PM (IST) Mar 04

ಪ್ರಗತಿಯಲ್ಲಿರುವ 14 ನೀರಾವರಿ ಯೋಜನೆ ಪೂರ್ಣಗೊಳಿಸಿ, 35,319 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ.

ಪ್ರಗತಿಯಲ್ಲಿರುವ 14 ನೀರಾವರಿ ಯೋಜನೆ ಪೂರ್ಣಗೊಳಿಸಿ, 35,319 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ.
2021-23ನೇ ಸಾಲಿನಲ್ಲಿ ಅನುಮೋದಿಸಿದ 8,774 ಕೋಟಿ ರೂ.ಗಳ ಹೊಸ ನೀರಾವರಿ ಯೋಜನೆಗಳಿಗೆ ರೂಪುರೇಷೆ 
ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್‌ಲ್ಯಾಂಡ್ ಯೋಜನೆ 
ದಕ್ಷಿಣ ಕನ್ನಡ ಮತ್ತು ಉಡುಪಿಗೂ ವಿಸ್ತರಣೆ

02:20 PM (IST) Mar 04

ರಾಜ್ಯದ ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ

ಕಾಳಿ ನದಿಯಿಂದ ನೀರು ಬಳಸಿಕೊಂಡು, ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲು ಕ್ರಮ 
ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿ
ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಒಟ್ಟು 3,000 ಕೋಟಿ ರೂ ಅನುದಾನ
93 ತಾಲ್ಲೂಕುಗಳಲ್ಲಿ ಶಿಕ್ಷಣ ಗುಣಮಟ್ಟ ವೃದ್ಧಿ, 100 ತಾಲ್ಲೂಕುಗಳಲ್ಲಿ ಆರೋಗ್ಯ ಸೇವೆ

02:18 PM (IST) Mar 04

ಮಾಸಾಶನ ಹೆಚ್ಚಳ

ವಿಧವಾ ವೇತನ, ಲೈಂಗಿಕ ಅಲ್ಪಸಂಖ್ಯಾತರ ಪಿಂಚಣಿ 800 ರೂ.ಗೆ ಹೆಚ್ಚಳ
ವಿಚ್ಛೇದಿತ, ಅವಿವಾಹಿತ ಮಹಿಳೆಯರ ಪಿಂಚಣಿಯೂ 800ರೂ.ಗೆ ಹೆಚ್ಚಳ
ಮಾಸಿಕ ಪಿಂಚಣಿ 600 ರೂ.ಗಳಿಂದ 800 ರೂ.ಗೆ ಹೆಚ್ಚಳ
ಆಸಿಡ್ ದಾಳಿಗೊಳಗಾದ ಮಹಿಳೆಯರ ಪಿಂಚಣಿ10 ಸಾವಿರ ರೂ.ಗೆ ಹೆಚ್ಚಳ
50 ವರ್ಷ ಮೇಲ್ಪಟ್ಟ ಕುಸ್ತಿಪಟುಗಳ ಮಾಸಾಶನ ಸಾವಿರ ರೂ.ಗೆ ಹೆಚ್ಚಳ

02:11 PM (IST) Mar 04

ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುದಾನ ಹಂಚಿಕೆ

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 - 5,000 ಕೋಟಿ ರೂ.
ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ 1,000 ಕೋಟಿ
ಭದ್ರಾ ಮೇಲ್ದಂಡೆ ಯೋಜನೆ- 3,000 ಕೋಟಿ ರೂ..
ಎತ್ತಿನಹೊಳೆ ಯೋಜನೆ ಅನುದಾನ. - 3,000 ಕೋಟಿ ರೂ..
ಮೇಕೆದಾಟು ಯೋಜನೆ- 1,000 ಕೋಟಿ ರೂ. ಅನುದಾನ.
ತುಂಗಭದ್ರಾ ಜಲಾಶಯ ನೀರು ಸರಿದೂಗಿಸಲು ಜಲಾಶಯದ ನ ನೀರು ಸಂಗ್ರಹಣೆ ನವಲೆ - ಬಳಿ , ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1,000 ಕೋಟಿ ರೂ. ಅನುದಾನ.

02:11 PM (IST) Mar 04

ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಳ

ಗ್ರಾಮ ಸಹಾಯಕರು, ಬಿಸಿಯೂಟ ತಯಾಕರ ಗೌರವ ಧನ 1000 ರೂ. ಹೆಚ್ಚಳ
ಅಂಗನವಾಡಿ ಕಾರ್ಯಕರ್ತೆರಿಗೆ 1 ರಿಂದ 1500 ರೂ.ಗೆ ಗೌರವ ಧನ ಹೆಚ್ಚಳ
ಪೌರ ಕಾರ್ಮಿಕರಿಗೆ ಮಾಸಿಕ 2000 ರೂ. ಸಂಕಷ್ಟ ಭತ್ಯೆ
ಪ್ರವಾಸಿ ಗೈಡ್ಗಳಿಗೆ ಮಾಸಿಕ 2000 ರೂ. ಗೌರವ ಧನ
ಆಸಿಡ್ ದಾಳಿಯ ಸಂಸತ್ರಸ್ತ ಮಹಿಳೆ ಮಾಸಾಶನ ಮೊತ್ತ 10,000 ರೂ. ಹೆಚ್ಚಳ

02:10 PM (IST) Mar 04

ರೈತ ಮಹಿಳೆಯರಿಗೆ 5 ಲಕ್ಷ ಕೋಳಿ ಮರಿ ವಿತರಣೆಗೆ ಕ್ರಮ

ರೈತ ಮಹಿಳೆಯರಿಗೆ 5 ಲಕ್ಷ ಕೋಳಿ ಮರಿ ವಿತರಣೆಗೆ ಕ್ರಮ
ಕೆಎಂಎಫ್ ಮೂಲಕ 2 ಸಾವಿರ ಸ್ಥಳೀಯ ತಳಿ ಗೋವುಗಳ ವಿತರಣೆ
ವೈದ್ಯಕೀಯ ಸೌಲಭ್ಯ ನೀಡುವ ಯಶಸ್ವಿನಿ ಯೋಜನೆ ಮತ್ತೆ ಜಾರಿ
ಕೆರೆಗಳ ಹೂಳು ತೆಗೆಯಲು 500 ಕೋಟಿ ರೂ. ಯೋಜನೆ

02:10 PM (IST) Mar 04

ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು..?

ಜೋಗದಲ್ಲಿ ರೋಪ್ವೇ ಅಭಿವೃದ್ಧಿಗೆ 116 ಕೋಟಿ ರೂ.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ.
ಚಾಮುಂಡಿ ಬೆಟ್ಟ, ಮುಳ್ಳಯ್ಯನಗಿರಿ ರೋಪ್ ವೇ ನಿರ್ಮಾಣಕ್ಕೆ ಯೋಜನೆ
ನಂದಿ ಬೆಟ್ಟದಲ್ಲಿ 93 ಕೋಟಿ ವೆಚ್ಚದಲ್ಲಿ ರೋಪ್ ವೇ ನಿರ್ಮಾಣ
ಉತ್ತರ ಕನ್ನಡದ ಯಾಣದಲ್ಲಿ ರೋಪ್ ವೇ ನಿರ್ಮಾಣಕ್ಕೆ ಕ್ರಮ
ಕೇಂದ್ರದ ಪರ್ವತಮಾಲಾ ಯೋಜನೆ ಅಡಿಯಲ್ಲಿ ಪ್ರಸ್ತಾವನೆ
ಪ್ರವಾಸಿ ಕ್ಷೇತ್ರದ 400 ಗೈಡ್ಗಳಿಗೆ 2 ಸಾವಿರ ರೂ. ಪ್ರೋತ್ಸಾಹ ಧನ
ಜೋಗದಲ್ಲಿ 116 ಕೋಟಿ ರೂ ವೆಚ್ಚದಲ್ಲಿ ಹೋಟೆಲ್, ರೋಪ್ ವೇ ಅಭಿವೃದ್ಧಿ
ಬೇಲೂರು, ಹಳೇಬೀಡು, ಸೋಮನಾಥಪುರ, ಹೊಯ್ಸಳ ಸ್ಮಾರಕ ಯುನೆಸ್ಕೋ ಪಟ್ಟಿಗೆ ಸೇರಿಸಲು ಕ್ರಮ

01:54 PM (IST) Mar 04

ಪೊಲೀಸ್ ಗೃಹ ಯೋಜನೆಗೆ 250 ಕೋಟಿ ರೂ. ಅನುದಾನ

ಪೊಲೀಸ್ ಗೃಹ ಯೋಜನೆಗೆ 250 ಕೋಟಿ ರೂಪಾಯಿ ಅನುದಾನ ಘೋಷಣೆ 
2ನೇ ಹಂತದಲ್ಲಿ 250 ಕೋಟಿ ರೂಪಾಯಿ ಮೀಸಲು, ಮೊಬಿಲಿಟಿ ಯೋಜನೆಗೆ 50 ಕೋಟಿ ರೂ. ಅನುದಾನ 
ರಾಜ್ಯದಲ್ಲಿ ನೂತನ KSRP ಮಹಿಳಾ ಕಂಪನಿ ಆರಂಭಿಸಲು ಯೋಜನೆ 
ಅಗ್ನಿಶಾಮಕ ಸಿಬ್ಬಂದಿ ವಿಮೆ ಮೊತ್ತ ಹೆಚ್ಚಳ,  1 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಕೆ
ದಾವಣಗೆರೆಯಲ್ಲಿ SDRF ಆರಂಭಿ,ಕಾರಾಗೃಹದಲ್ಲಿ ಅತ್ಯಾಧುನಿಕ ಉಪಕರಣ 
ಕಾರಾಗೃಹಗಳಲ್ಲಿ ಮೊಬೈಲ್ ಜಾಮರ್ ಅಳವಡಿಕೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೂತನ ಕಾರಾಗೃಹ ಕಟ್ಟಡಕ್ಕೆ ಅನುಮತಿ 

01:52 PM (IST) Mar 04

ಕಟ್ಟಡ ಕಾರ್ಮಿಕರಿಗೆ ಸಿಹಿ

ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2100 ಕೋಟಿ ಮೀಸಲು
ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಆರಂಭ
ಕಟ್ಟಡ ಕಾರ್ಮಿಕರಿಗಾಗಿ ರಿಯಾಯಿತಿ ಬಸ್ ಪಾಸ್ ಯೋಜನೆ
ಹುಬ್ಬಳ್ಳಿ & ದಾವಣಗೆರೆ ESI ಆಸ್ಪತ್ರೆಗಳ ಬೆಡ್ 100ಕ್ಕೆ ಹೆಚ್ಚಳ ಯೆಲ್ಲೊ ಬೋರ್ಡ್‌ ಡ್ರೈವರ್ ಮಕ್ಕಳಿಗಾಗಿ ವಿದ್ಯಾನಿಧಿ ಸ್ಕೀಮ್ 
ಡ್ರೈವರ್ಸ್‌ ಮಕ್ಕಳ ಆರೋಗ್ಯ ಸೌಲಭ್ಯಕ್ಕೂ ವಿಶೇಷ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ

01:46 PM (IST) Mar 04

ಸಿಲಿಕಾನ್ ಸಿಟಿಗೆ ಸಿಕ್ಕಿದ್ದೇನು? ಒಂದೇ ಲಿಂಕ್‌ನಲ್ಲಿ ಓದಿ

ಕೊರೋನಾ (Corionavirus) ಸವಾಲಿನ ನಡುವೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕರ್ನಾಟಕ ಬಜೆಟ್ 2022ನ್ನು (Karnataka Budget 2022) ಮಂಡಿಸಿದ್ದಾರೆ. ರಾಜಧಾನಿ ಬೆಂಗಳೂರು (Bengaluru) ಮಹಾನಗರಕ್ಕೆ ಭರಪೂರ ಕೊಡುಗೆ ನೀಡಿದ್ದು ನಗರದ ಸಮಗ್ರ ಅಭಿವೃದ್ಧಿ ಗುರಿ ಎಂದು ತಿಳಿಸಿದ್ದಾರೆ. ಹಾಗಾದರೆ ಬೆಂಗಳೂರು ನಗರಕ್ಕೆ ಸಿಕ್ಕ ಕೊಡುಗೆಗಳು ಏನು?

 ಬಜೆಟ್ ನಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಾರಾಗೃಹದಲ್ಲಿ ಅತ್ಯಾಧುನಿಕ ಮಾದರಿಯ ಉಪಕರಣಗಳು ಮತ್ತು ಮೊಬೈಲ್ ಜಾಮರ್ ಗಳ ಅಳವಡಿಕೆ ಮಾಡಲಾಗುತ್ತಿದೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೂತನ ಕಾರಾಗೃಹ ನಿರ್ಮಾಣಕ್ಕೆ ಬಜೆಟ್ ಹಣ ಮೀಸಲಿಟ್ಟಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: Karnataka Budget 2022 : ಬೊಮ್ಮಾಯಿ ಬಜೆಟ್‌ನಲ್ಲಿ ಬೆಂಗಳೂರಿಗೆ ಭರಪೂರ ಕೊಡುಗೆ

01:32 PM (IST) Mar 04

5 ಕೆಜಿ ಅಕ್ಕಿಯ ಜತೆ 1 ಕೆಜಿ ರಾಗಿ ಅಥವಾ ಜೋಳ ವಿತರಣೆ

5 ಕೆಜಿ ಅಕ್ಕಿಯ ಜತೆ 1 ಕೆಜಿ ರಾಗಿ ಅಥವಾ ಜೋಳ ವಿತರಣೆ 

ಇದಕ್ಕೆ 1400 ಕೋಟಿ ರೂ ಹೆಚ್ಚುವರಿ ವೆಚ್ಚ

4.34 ಕೋಟಿ ಫಲಾನುಭವಿಗಳಿಗೆ ಅನುಕೂಲ

01:30 PM (IST) Mar 04

ಹಾಲು ಉತ್ಪಾದಕರಿಗೆ ಸಿಕ್ಕ ಅನುದಾನ

ಕ್ಷೀರ ಸಮೃದ್ಧಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯಕ್ಕೆ 360 ಕೋಟಿ
ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರುಗೆ ಪ್ರತ್ಯೇಕ ಹಾಲು ಒಕ್ಕೂಟ
ಗೋವುಗಳ ದತ್ತು ಸ್ವೀಕಾರಕ್ಕೆ ಪುಣ್ಯಕೋಟಿ ದತ್ತು ಯೋಜನೆ 

01:30 PM (IST) Mar 04

ಕುರಿಗಾಹಿಗಳಿಗೆ ಏನೆಲ್ಲಾ ಘೋಷಣೆ?

ಕುರಿ/ಮೇಕೆಗಳ ಮರಣಕ್ಕೆ ಪರಿಹಾರ ಧನ 2,500 ರೂ.ನಿಂದ 3,500 ರೂ.ಗೆ ಹೆಚ್ಚಳ
ಕುರಿಗಾಹಿಗಳು ಆಕಸ್ಮಿಕ ಮರಣ ಹೊಂದಿದರೆ 5 ಲಕ್ಷ ರೂ. ವಿಮಾ ಸೌಲಭ್ಯ
ಕುರಿ ದೊಡ್ಡಿ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ

01:29 PM (IST) Mar 04

ಬಜೆಟ್ ಮಂಡಿಸುತ್ತಿರುವ ಸಿಎಂ ಬೊಮ್ಮಾಯಿ, ನೇರಪ್ರಸಾರಕ್ಕಾಗಿ...

01:28 PM (IST) Mar 04

ಅಲ್ಪಸಂಖ್ಯಾತ ಸಮುದಾಯಕ್ಕೆ ಬಜೆಟ್ ನಲ್ಲಿ ವಿವಿಧ ಘೋಷಣೆ

ಮುಸ್ಲಿಂ ಸಮುದಾಯಕ್ಕೆ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಘೋಷಣೆ

ಜತೆಗೆ ಪದವಿ ಪೂರ್ವ ತರಗತಿಯೂ ಪ್ರಾರಂಭ

ಸಿಬಿಎಸ್ಇ ಮಾನ್ಯತೆ ಪಡೆಯಲು 25 ಕೋಟಿ ರೂ ಅನುದಾನ

ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂ

ಜೈನ್, ಸಿಖ್, ಬೌದ್ಧ ಸಮುದಾಯಗಳ‌ ಅಭಿವೃದ್ಧಿಗೆ 50 ಕೋಟಿ ರೂ..

01:24 PM (IST) Mar 04

ಪುಣ್ಯಕ್ಷೇತ್ರಗಳಿಗೆ ಸಿಕ್ಕಿದ್ದೇನು?

30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ 5 ಸಾವಿರ ಸಹಾಯಧನ
ಯಾತ್ರಾರ್ಥಿಗಳಿಗೆ ಕೆಎಸ್ಟಿಡಿಸಿಯಿಂದ ರಿಯಾಯಿತಿ ಪ್ಯಾಕೇಜ್
ಪಂಡರಾಪುರದಲ್ಲಿ ಅತಿಥಿ ಗೃಹ ನಿರ್ಮಾಣ
ಶ್ರೀಶೈಲದಲ್ಲಿ 85 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ
ಕೈವಾರದಲ್ಲಿ ಪ್ರತಿ ವರ್ಷ ಮಾರ್ಚ್ 27ರಂದು ಯೋಗಿನಾರೇಯಣ ಯತೀಂದ್ರ ಜಯಂತಿ

01:23 PM (IST) Mar 04

ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವತ್ತುಗಳ ವಿವರವನ್ನ ಬಿ ಖಾತದಿಂದ ಎ ಖಾತೆಗೆ ಪರಿವರ್ತಿಸಲು ಕ್ರಮ

- ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವತ್ತುಗಳ ವಿವರವನ್ನ ಬಿ ಖಾತದಿಂದ ಎ ಖಾತೆಗೆ ಪರಿವರ್ತಿಸಲು ಕ್ರಮ

- ಬೆಂಗಳೂರಿನ ನಾಲ್ಕು ಭಾಗದಲ್ಲಿ 500 ಹಾಸಿಗೆ ಸಾಮರ್ಥವಿರೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ ನಿರ್ಮಾಣ ಮಾಡುವುದು...

- ಬೆಂಗಳೂರಿನಲ್ಲಿ  ಆಯ್ದ ಇಪ್ಪತ್ತು ಶಾಲೆಗಳನ್ನ ಪಬ್ಲಿಕ್ ಶಾಲೆಗಳನ್ನ ಅಭಿವೃದ್ಧಿ ಪಡಿಸೋದು ( 89 ಕೋಟಿ ವೆಚ್ಚದಲ್ಲಿ ಸರ್ಕಾರಿ ಶಾಲೆಗಳನ್ನ ಉನ್ನತೀಕರಣಗೊಳಿಸುವುದು)

01:12 PM (IST) Mar 04

ಬೆಂಗಳೂರು ನಗರಕ್ಕೆ ಭರಪೂರ ಕೊಡುಗೆ

6000 ಕೋಟಿ ರೂ ವೆಚ್ಚದಲ್ಲಿ ಅಮೃತ ಯೋಜನೆ ಮೂಲಕ ಮೂಲಭೂತ ಸೌಕರ್ಯ
ಹೆಬ್ಬಾಳದಿಂದ ಜೆಪಿ ನಗರದವರೆಗೆ 32 ಕಿ ಮೀ ಹೊರ ವರ್ತುಲ ರಸ್ತೆ
ಸರ್ಜಾಪುರದಿಂದ ಹೆಬ್ಬಾಳದವರೆಗೆ 37 ಕಿಮೀ ಉದ್ದದ ರಸ್ತೆ ನಿರ್ಮಾಣ, 15000 ಕೋಟಿ ರೂ ವೆಚ್ಚ
ತುಮಕೂರು ರಸ್ತೆಯಿಂದ ಹಳೆ ಮದ್ರಾಸ್ ರಸ್ತೆಯವರೆಗೆ 73 ಕಿಮೀ ಮತ್ತು 100 ಮೀ ಅಗಲದ ಫೆರಫೆರಲ್ ರಿಂಗ್ ರಸ್ತೆ ನಿರ್ಮಾಣ - 21091 ಕೋಟಿ ರೂ ವೆಚ್ಚ
ಗೋರಗುಂಟೆಪಾಳ್ಯದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಗ್ರೇಡ್ ಸೆಪರೆಟರ್ ನಿರ್ಮಾಣ
ಕೇಂಪೆಗೌಡ ಬಡಾವಣೆಯಲ್ಲಿ 1297 ಎಕರೆ ಜಮೀನು ಸ್ವಾದೀನ ಪಡಿಸಿಕೊಂಡು ಆಧುನಿಕ ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿ
NGEF ನ 105 ಎಕರೆ ಪ್ರದೇಶದಲ್ಲಿ ಸಿಂಗಾಪುರ ಮಾದರಿಯಲ್ಲಿ ಗ್ರೀನ್ ಎಕ್ಸ್ ಪೋ ನಿರ್ಮಾಣ

01:06 PM (IST) Mar 04

ಅಲ್ಪಸಂಖ್ಯಾತ ಹಾಸ್ಟೆಲ್ಗಳಲ್ಲಿ ಪದವಿ ಪೂರ್ವ ತರಗತಿ ಆರಂಭ

ಅಲ್ಪಸಂಖ್ಯಾತ ಹಾಸ್ಟೆಲ್ಗಳಲ್ಲಿ ಪದವಿ ಪೂರ್ವ ತರಗತಿ ಆರಂಭ
ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ ಸ್ಥಾಪನೆ
ಅಲ್ಪಸಂಖ್ಯಾತ ವಸತಿ ಶಾಲೆಗಳನ್ನು ಎಪಿಜೆ ಅಬ್ದುಲ್ ಕಲಾಂ ಎಂದು ಮರು ನಾಮಕರಣ

01:05 PM (IST) Mar 04

ಸಿಎಂ ತವರು ಜಿಲ್ಲೆ ಹಾವೇರಿಗೆ ಬಂಪರ್

ಹಾವೇರಿಯಲ್ಲಿ ಮೆಗಾ ಡೈರಿ ಸ್ಥಾಪನೆ
ತವರು ಜಿಲ್ಲೆ ಹಾವೇರಿಯ ಸವಣೂರಿನಲ್ಲಿ ಹೊಡ ಆಯುರ್ವೇದ ಕಾಲೇಜು ಸ್ಥಾಪನೆ
ಹಾನಗಲ್ ನಲ್ಲಿ  ಮಾವು ಸಂಸ್ಕರಣ ಘಟಕ
ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ

01:05 PM (IST) Mar 04

ಸನ್ನತ್ತಿ ಏತನೀರಾವರಿ ಯೋಜನ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ

ಸನ್ನತ್ತಿ ಏತನೀರಾವರಿ ಯೋಜನ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ 
ಹಂತ-1 ಮತ್ತು 2ರಲ್ಲಿನ ಬೂದಿಹಾಳ ಪೀರಾಪುರ ನಂದವಾಡಗಿ ನಾರಾಯಣಪುರ ಕಾಲುವೆ ವಿಸ್ತರಣೆ ಯೋಜನೆ
ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ 3 ಸಾವಿರ ಕೋಟಿ ಅನುದಾನ
ಮೇಕೆದಾಟು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ 1 ಸಾವಿರ ಕೋಟಿ ರೂಗಳು


More Trending News