ನವದೆಹಲಿ [ಜು.05]: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಕೆಲ ವಸ್ತುಗಳು ಹಾಗೂ ಸೇವೆಗಳು ದುಬಾರಿಯಾದರೆ, ಕೆಲವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಚಿನ್ನವೂ ತುಟ್ಟಿಯಾಗಿದೆ. ಇನ್ನು ಮನೆ ನಿರ್ಮಾಣ ಮಾಡುವವರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಯಾವುದು ಏರಿಕೆ ?
- ಚಿನ್ನ, ಆಭರಣಗಳು ದುಬಾರಿ
- ತಂಬಾಕಿನ ಬೆಲೆ ಹೆಚ್ಚಳ
- ಸಿಸಿ ಕ್ಯಾಮರಾ ದುಬಾರಿ
- ಪೈಪ್, ಟೈಲ್ಸ್, ಡಿವಿಡಿ ಬೆಲೆ ಏರಿಕೆ
- ತಂಬಾಕಿ ಬೆಲೆ ಹೆಚ್ಚಳ
- ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
- ಮದ್ಯ, ಸಿಗರೇಟ್
- ಮೊಬೈಲ್, ಟಿವಿ, ಫ್ರಿಡ್ಜ್, ರಬ್ಬರ್ ಬೆಲೆ ಏರಿಕೆ
- ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ವಸ್ತುಗಳು
- ಸಿಸಿಟಿವಿ, HD ಕ್ಯಾಮೆರಾ, ಫರ್ನಿಚರ್ಸ್
- ಆಟೋ ಪಾರ್ಟ್ಸ್
- ವಾಟರ್ ಬ್ಲಾಕಿಂಗ್ ಟೇಪ್ಸ್, ಸೆರಾಮಿಕ್ ಟೈಲ್ಸ್
- ಗೋಡಂಬಿ, ತಾಳೆ ಎಣ್ಣೆ, ಇಂಡಸ್ಟ್ರಿಯಲ್ ಆಸಿಡ್
- ಪ್ಲಾಸ್ಟಿಕ್, ಸೀಲಿಂಗ್ ಕವರ್, ಫ್ಲೋರ್ ಕವರ್
- AC ಹಾಗೂ ಎಲೆಕ್ಟ್ರಿಕ್ ವೈರ್ಗಳ ಬೆಲೆ ಏರಿಕೆ
- ವಾಹನಗಳ ವೈಪರ್, ಸಿಗ್ನಲಿಂಗ್ ವಸ್ತುಗಳು ತುಟ್ಟಿ
- ಇಂಜಿನ್ ಚಾಸಿಸ್, ವಾಹನದ ಲಾಕ್
- ದ್ವಿಚಕ್ರ ವಾಹನಗಳ ಲೈಟಿಂಗ್ಸ್, ಹಾರ್ನ್ ಸಾಮಾಗ್ರಿ ತುಟ್ಟಿ
ಇಂದಿನಿಂದಲೇ ಪೆಟ್ರೋಲ್ ದುಬಾರಿ: ಕಷ್ಟವಾದೀತು ವಾಹನ ಸವಾರಿ!
ಯಾವುದು ಅಗ್ಗ ?
- ಗೃಹ ಸಾಲ ಇಳಿಕೆ
- ಕಿಡ್ನಿ ಕಸಿ, ಡಯಾಲಿಸಿಸ್ ಯಂತ್ರದ ಬೆಲೆ ಇಳಿಕೆ
- ಸ್ವದೇಶಿ ಎಲೆಕ್ಟ್ರಾನಿಕ್ ಉತ್ಪನ್ನಗಳು
- ಎಲೆಕ್ಟ್ರಿಕ್ ಕಾರು-ಬೈಕ್
- ಆನ್ಲೈನ್ ವಹಿವಾಟು
- ಡಿಜಿಟಲ್ ಪಾವತಿಗೆ ಶುಲ್ಕ ಇಲ್ಲ
- ಗೃಹಸಾಲದ ಮೇಲಿನ ಬಡ್ಡಿ ಕಡಿತ,
- ರಕ್ಷಣಾ ಸಾಮಗ್ರಿ
- ಪಾಮ್ ಆಯಿಲ್
- ಫ್ಯಾಟಿ ಆಯಿಲ್
- ಪೇಪರ್ ಅಗ್ಗ
ಚಿನ್ನ ಖರೀದಿದಾರರಿಗೆ ಶಾಕ್ ಕೊಟ್ಟ ಬಜೆಟ್!: ಬಂಗಾರ ಈಗ ಬಲುಭಾರ