ಎಲ್ಐಸಿ ಪಾಲಿಸಿಗೆ ಪ್ಯಾನ್ ಲಿಂಕ್ ಮಾಡಲು ಮಾರ್ಚ್ 31 ಅಂತಿಮ ಗಡುವು;ಆನ್ಲೈನ್ ನಲ್ಲಿ ಮಾಡೋದು ಹೇಗೆ?

By Suvarna NewsFirst Published Feb 9, 2023, 5:21 PM IST
Highlights

ಎಲ್ಐಸಿ ಪಾಲಿಸಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡೋದು ಅಗತ್ಯ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಪಾಲಿಸಿದಾರರಿಗೆ ಈ ಹಿಂದೆಯೇ ತಿಳಿಸಿತ್ತು. ಆದರೆ, ಈಗ 2023 ಮಾರ್ಚ್ 31 ರ ಗಡುವು ನೀಡಿದೆ. ಹಾಗಾದ್ರೆ ಎಲ್ಐಸಿ ಪಾಲಿಸಿಗೆ ಪ್ಯಾನ್ ಲಿಂಕ್ ಮಾಡೋದು ಹೇಗೆ?

ನವದೆಹಲಿ (ಫೆ.9):ಭಾರತದಲ್ಲಿ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಪ್ಯಾನ್ ಕಾರ್ಡ್ ಅನ್ನು ಕೆಲವೊಂದು ದಾಖಲೆಗಳಿಗೆ ಜೋಡಣೆ ಮಾಡುವುದು ಅಗತ್ಯವಾಗಿದೆ ಕೂಡ. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಈ ಹಿಂದೆಯೇ ಪಾಲಿಸಿಗಳಿಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡುವಂತೆ ಪಾಲಿಸಿದಾರರಿಗೆ ಮನವಿ ಮಾಡಿತ್ತು. ಕಳೆದ ವರ್ಷ ಮೇನಲ್ಲಿ ನಡೆದ ಎಲ್ಐಸಿ ಐಪಿಒನಲ್ಲಿ ಪಾಲ್ಗೊಳ್ಳಲು ಪಾಲಿಸಿದಾರರು ಎಲ್ಐಸಿ ದಾಖಲೆಗಳಲ್ಲಿ ತಮ್ಮ ಪ್ಯಾನ್ ಸಂಖ್ಯೆ ನವೀಕರಿಸೋದು ಅಗತ್ಯ ಎಂದು ತಿಳಿಸಿತ್ತು ಕೂಡ. ಆದರೆ, ಪಾಲಿಸಿಗಳಿಗೆ ಪ್ಯಾನ್ ಜೋಡಣೆ ಮಾಡಲು ಅಂತಿಮ ಗಡುವು ನೀಡಿರಲಿಲ್ಲ. ಆದರೆ, ಇತ್ತೀಚೆಗಿನ ಅಧಿಸೂಚನೆಯಲ್ಲಿ 2023ರ ಮಾರ್ಚ್ 31ರೊಳಗೆ ಎಲ್ಐಸಿ ಪಾಲಿಸಿಗಳಿಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡುವಂತೆ ಎಲ್ಐಸಿ ತನ್ನ ಗ್ರಾಹಕರಿಗೆ ಸಲಹೆ ನೀಡಿದೆ. ಎಲ್ಐಸಿ ಅಂತಿಮ ಗಡುವು ವಿಸ್ತರಿಸುವ ಕಾರಣ ಇನ್ನೂ ಎಲ್ಐಸಿ ಪಾಲಿಸಿಗಳಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿರೋರು ಆದಷ್ಟು ಬೇಗ ಮಾಡಿ ಮುಗಿಸೋದು ಉತ್ತಮ. ಕಾಯಂ ಖಾತಾ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ 10 ಸಂಖ್ಯೆಗಳನ್ನು ಹೊಂದಿದ್ದು, ಲ್ಯಾಮಿನೇಟೆಡ್ ಕಾರ್ಡ್ ರೂಪದಲ್ಲಿ ಇದನ್ನು ಆದಾಯ ತೆರಿಗೆ ಇಲಾಖೆ ವಿತರಿಸುತ್ತದೆ. ಯಾವುದೇ ಭಾರತೀಯ ವ್ಯಕ್ತಿ ಪ್ಯಾನ್ ಕಾರ್ಡ್ ಕೋರಿ ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಪ್ಯಾನ್ ಕಾರ್ಡ್ ಆದಾಯ ತೆರಿಗೆ ಸಲ್ಲಿಕೆ ಸಂದರ್ಭದಲ್ಲಿ ಅತ್ಯಗತ್ಯವಾಗಿ ಬೇಕಿರುತ್ತದೆ.

ಎಲ್ಐಸಿ ಪಾಲಿಸಿಗೆ ಪ್ಯಾನ್ ಜೋಡಣೆ ಪರಿಶೀಲಿಸೋದು ಹೇಗೆ?
ಹಂತ 1: ಎಲ್ಐಸಿ ವೆಬ್ ಸೈಟ್ ನೇರ ಲಿಂಕ್ linkpan.licindia.in/UIDSeedingWebApp/getPolicyPANStatus ಭೇಟಿ ನೀಡಿ.
ಹಂತ 2: ನಿಗದಿತ ಸ್ಥಳದಲ್ಲಿ ಪಾಲಿಸಿ ಸಂಖ್ಯೆ ನಮೂದಿಸಿ.
ಹಂತ 3: ನಿಮ್ಮ ಪ್ಯಾನ್ ಮಾಹಿತಿ ಹಾಗೂ ಕ್ಯಾಪ್ಚ ಕೋಡ್ ಜೊತೆಗೆ ನಿಮ್ಮ ಜನ್ಮದಿನಾಂಕ ನಮೂದಿಸಿ. 
ಹಂತ 4: 'Submit'ಬಟನ್ ಆಯ್ಕೆ ಮಾಡಿ. 
ಈಗ ನಿಮ್ಮ ಫೋನ್ ಸ್ಕ್ರೀನ್ ಅಥವಾ ಕಂಪ್ಯೂಟರ್ ಮಾನಿಟರ್ ನಲ್ಲಿ ನಿಮ್ಮ ಎಲ್ಐಸಿ ಪಾಲಿಸಿ ಹಾಗೂ ಪ್ಯಾನ್ ಜೋಡಣೆ ಮಾಹಿತಿ ಕಾಣಿಸುತ್ತದೆ. ಒಂದು ವೇಲೆ ನಿಮ್ಮ ಎಲ್ಐಸಿ ಪಾಲಿಸಿಗಳಿಗೆ ಪ್ಯಾನ್ ಲಿಂಕ್ ಆಗಿರದಿದ್ರೆ “click here to register your PAN with us" ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದ್ರೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಿರುವ ಮಾಹಿತಿಗಳನ್ನು ನೀವು ಭರ್ತಿ ಮಾಡಬೇಕು. 

EPFO ಪೋರ್ಟಲ್ ನಲ್ಲಿ KYC ನವೀಕರಿಸೋದು ಹೇಗೆ? ಇಲ್ಲಿದೆ ಮಾಹಿತಿ

ಪಾಲಿಸಿಗೆ ಪ್ಯಾನ್ ಲಿಂಕ್ ಮಾಡೋದು ಹೇಗೆ?
ಎಲ್ಐಸಿ ಪಾಲಿಸಿಗಳಿಗೆ ಪ್ಯಾನ್ ಲಿಂಕ್ ಮಾಡೋದು ಕಷ್ಟದ ಕೆಲಸವೇನಲ್ಲ. ಈ ಕೆಳಗೆ ನೀಡಿರೋ ಹಂತಗಳನ್ನು ಅನುಸರಿಸಿ ನೀವು ಪಾಲಿಸಿಗಳಿಗೆ ಪ್ಯಾನ್ ಲಿಂಕ್ ಮಾಡಬಹುದು.
ಹಂತ 1:  ಪ್ಯಾನ್ ಲಿಂಕ್ ಮಾಡಲು ಇರುವ ಎಲ್ಐಸಿಯ ನೇರ ಲಿಂಕ್  linkpan.licindia.in/UIDSeedingWebApp/home ಭೇಟಿ ನೀಡಿ.
ಹಂತ 2: ನಿಮ್ಮ ಪ್ಯಾನ್ ಮಾಹಿತಿ ಬಳಸಿಕೊಂಡು ನಿಮ್ಮ ಜನ್ಮದಿನಾಂಕ ಹಾಗೂ ಲಿಂಗದ ಮಾಹಿತಿ ನಮೂದಿಸಿ.
ಹಂತ 3: ನಿಮ್ಮ ಪ್ಯಾನ್ ಕಾರ್ಡ್ ಮಾಹಿತಿಗಳೊಂದಿಗೆ ಇ-ಮೇಲ್ ವಿಳಾಸ ನಮೂದಿಸಿ. 
ಹಂತ 4: ಪ್ಯಾನ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಪೂರ್ಣ ಹೆಸರು, ಫೋನ್ ಸಂಖ್ಯೆ ಹಾಗೂ ಪಾಲಿಸಿ ಸಂಖ್ಯೆ ನಮೂದಿಸಿ.
ಹಂತ 5: ಕ್ಯಾಪ್ಚ ಕೋಡ್ ನಮೂದಿಸಿ ಹಾಗೂ 'Get OTP'ಆಯ್ಕೆ ಮಾಡಿ.
ಹಂತ 6: ನಿಗದಿತ ಸ್ಥಳದಲ್ಲಿ ಒಟಿಪಿ ನಮೂದಿಸಿ. 
ಈಗ ನಿಮ್ಮ ಪ್ಯಾನ್ ಹಾಗೂ ಎಲ್ಐಸಿ ಪಾಲಿಸಿ ಜೋಡಣೆ (link) ಮನವಿ ಕಂಪ್ಯೂಟರ್ ಅಥವಾ ಮೊಬೈಲ್ ಪರದೆ ಮೇಲೆ ಕಾಣಿಸುತ್ತದೆ. 

ಉತ್ತಮ ರಿಟರ್ನ್ಸ್ ನೀಡುವ ಅಂಚೆ ಇಲಾಖೆಯ 5 ಯೋಜನೆಗಳು ಇವೇ ನೋಡಿ

 

click me!