ಈ ಪಿಂಚಣಿದಾರರು ನವೆಂಬರ್ ನಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಾಗಿಲ್ಲ!

By Suvarna News  |  First Published Nov 21, 2022, 12:30 PM IST

ಪಿಂಚಣಿದಾರರು ಪ್ರತಿ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡೋದು ಕಡ್ಡಾಯ. ಪ್ರತಿ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು. ಆದರೆ, ಇಪಿಎಫ್ಒ ವರ್ಷದ ಯಾವುದೇ ಸಮಯದಲ್ಲಿ ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. 
 


ನವದೆಹಲಿ (ನ.21): ಈ ಜಗತ್ತಿನಲ್ಲಿ ಲಕ್ಷಾಂತರ ಪಿಂಚಣಿದಾರರಿದ್ದಾರೆ. ಪಿಂಚಣಿದಾರರು ಪ್ರತಿ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡೋದು ಕಡ್ಡಾಯ. ಪ್ರತಿ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು. ಒಂದು ವೇಳೆ ಪಿಂಚಣಿದಾರರು ಈ ನಿಯಮ ಪಾಲಿಸಲು ವಿಫಲರಾದರೆ, ಅವರ ಪಿಂಚಣಿಯನ್ನು ರದ್ದುಗೊಳಿಸಲಾಗುತ್ತದೆ. ಪಿಂಚಣಿ ಪ್ರಮಾಣಪತ್ರವನ್ನು ಪಿಂಚಣಿ ಪಡೆಯುವ ಸಂಸ್ಥೆಗಳಲ್ಲೇ ಉದಾಹರಣೆಗೆ ಆಯಾ ಬ್ಯಾಂಕಿನ ಶಾಖೆಗಳಲ್ಲಿ ಸಲ್ಲಿಕೆ ಮಾಡಲು ಅವಕಾಶವಿದೆ.  60 ವರ್ಷ ಮೇಲ್ಪಟ್ಟ ಹಿರಿಯರಿಗೆ ಜೀವನ ಪ್ರಮಾಣ ಪತ್ರ ಸಲ್ಲಿಕೆಗೆ ನವೆಂಬರ್ 1ರಿಂದ 30ರ ತನಕ ಅಂದರೆ ಇಡೀ ಒಂದು ತಿಂಗಳು ಕಾಲಾವಕಾಶವಿದೆ. ಆದರೆ, ಕೆಲವು ಪಿಂಚಣಿದಾರರು ನವೆಂಬರ್ ನಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆಯಿಂದ ವಿನಾಯ್ತಿ ಸಿಕ್ಕಿದೆ. ಉದ್ಯೋಗಿಗಳ ಪಿಂಚಣಿ ನಿಧಿ ಸಂಸ್ಥೆ (ಇಪಿಎಫ್ಒ) ವರ್ಷದ ಯಾವುದೇ ಸಮಯದಲ್ಲಿ ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಪಿಂಚಣಿದಾರರಿಗೆ ನವೆಂಬರ್ ನಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಗಡಿಬಿಡಿ ಇಲ್ಲ. 

ಜೀವನ ಪ್ರಮಾಣಪತ್ರಕ್ಕೆ ಒಂದು ವರ್ಷದ ಅವಧಿ
ಇಪಿಎಸ್ -95 (EPS-95) ಪಿಂಚಣಿದಾರರು (Pensioners) ವರ್ಷದ ಯಾವುದೇ ಸಮಯದಲ್ಲಿ ಜೀವನ ಪ್ರಮಾಣಪತ್ರ (life certificate) ಸಲ್ಲಿಕೆ ಮಾಡಬಹುದು ಎಂದು ಇಪಿಎಫ್ ಒ (EPFO) ತಿಳಿಸಿದೆ. ಇದು ಸಲ್ಲಿಕೆ ಮಾಡಿದ ದಿನಾಂಕದಿಂದ ಇಡೀ ವರ್ಷಕ್ಕೆ ಅನ್ವಯಿಸಲಿದೆ. ಉದಾಹರಣೆಗೆ ಒಂದು ವೇಳೆಗೆ ಯಾರಾದ್ರೂ ಜುಲೈ 2022ರಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಿದ್ರೆ ಮುಂದಿನ ವರ್ಷ ಅಂದರೆ 2023ರಲ್ಲಿ ಮತ್ತೊಮ್ಮೆ ಜುಲೈನಲ್ಲೇ ಸಲ್ಲಿಕೆ ಮಾಡಬೇಕು. 

Tap to resize

Latest Videos

ಇವು ಮಕ್ಕಳ ಶಿಕ್ಷಣದ ಭದ್ರತೆಗಾಗಿ ಮಾಡಿಸಲೇಬೇಕಾದ ವಿಮೆಗಳು

ಜೀವನ ಪ್ರಮಾಣಪತ್ರ ಸಲ್ಲಿಕೆ ಹೇಗೆ?
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪಿಂಚಣಿ (Pension) ಪಡೆಯುವವರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅನೇಕ ಆಯ್ಕೆಗಳಿವೆ. ಈ ಪ್ರಮಾಣಪತ್ರವನ್ನು ಆನ್ ಲೈನ್ ಅಥವಾ ಆಪ್ ಲೈನ್ ಮೂಲಕ ಸಲ್ಲಿಕೆ ಮಾಡಬಹುದು. ಬ್ಯಾಂಕ್ (Bank) ಅಥವಾ ಅಂಚೆ ಕಚೇರಿಗೆ (Post office) ಭೇಟಿ ನೀಡಿ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದು. ಅಲ್ಲಿ ನೀವು ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಬೇಕು. ಹಾಗೆಯೇ ನೀವು ಪ್ಯಾನ್ ಕಾರ್ಡ್ (PAN card) ಹಾಗೂ ಆಧಾರ್ ಕಾರ್ಡ್ (Aadhaar card) ಪ್ರತಿಗಳನ್ನು ಗುರುತು ದೃಢೀಕರಣದ ದಾಖಲೆಯಾಗಿ ಸಲ್ಲಿಕೆ ಮಾಡಬೇಕು. ಇನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೂಡ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದು. 

ಹಣ ಉಳಿಸಿಕೊಳ್ಳಿ: ಟಿವಿ, ಫ್ರಿಡ್ಜ್‌, ಕಾರು ಖರೀದಿ ಬೇಡವೆಂದು ಅಮೆಜಾನ್‌ ಸಂಸ್ಥಾಪಕ ಸಲಹೆ..!

ಮನೆಯಲ್ಲೇ ಕುಳಿತು ಸಲ್ಲಿಕೆ ಹೇಗೆ?
ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಕೂಡ ಜೀವನ ಪ್ರಮಾಣಪತ್ರ (Life Certificate) ಸಲ್ಲಿಕೆ ಮಾಡಬಹುದು. ಇನ್ನು ದೇಶಾದ್ಯಂತ 12ಕ್ಕೂ ಹೆಚ್ಚು ಸಾರ್ವಜನಿಕ ವಲಯದ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ (Customers) ಮನೆ ಬಾಗಿಲಿಗೇ ಬ್ಯಾಂಕಿಂಗ್ ಸೇವೆಗಳನ್ನು (Banking services) ಒದಗಿಸುತ್ತಿವೆ. ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಾಗೂ ಬ್ಯಾಂಕ್ ಆಫ್ ಬರೋಡಾ (BOB) ವಿಡಿಯೋ (Video) ಕರೆ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಅವಕಾಶವನ್ನು ನೀಡಿವೆ.  ಎಸ್ ಬಿಐ  ಅಥವಾ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗೆ ವಿಡಿಯೋ ಕರೆ ಮಾಡುವ ಮೂಲಕ ಪಿಂಚಣಿದಾರರು (Pensioners) ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬಹುದು. ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ಮುಖಾಂತರ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. 

click me!