ಇ ಕಾಮರ್ಸ್‌ ತಾಣದಲ್ಲಿ ನಕಲಿ ರಿವ್ಯೂಗೆ ಕಡಿವಾಣಕ್ಕೆ ಕಾನೂನು

By Kannadaprabha News  |  First Published Nov 21, 2022, 10:55 AM IST

ಇ ಕಾಮರ್ಸ್‌ ತಾಣಗಳಲ್ಲಿ ಕಂಪನಿಗಳು ಮತ್ತು ಉತ್ಪನ್ನಗಳ ಬಗ್ಗೆ ನಕಲಿ ರಿವ್ಯೂ (ವಿಮಶೆ,) ಪ್ರಕಟ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ಸಂಬಂಧ ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ಹೇಳಿದೆ.


ನವದೆಹಲಿ: ಇ ಕಾಮರ್ಸ್‌ ತಾಣಗಳಲ್ಲಿ ಕಂಪನಿಗಳು ಮತ್ತು ಉತ್ಪನ್ನಗಳ ಬಗ್ಗೆ ನಕಲಿ ರಿವ್ಯೂ (ವಿಮಶೆ,) ಪ್ರಕಟ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ಸಂಬಂಧ ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಇ-ಕಾಮರ್ಸ್‌ ವೆಬ್‌ಸೈಟ್‌, ಹೊಟೇಲುಗಳು, ಪ್ರಯಾಣಿಕ ವಾಹನಗಳ ಬುಕಿಂಗ್‌ ಸೇರಿ ವಿವಿಧ ಸೇವೆಗಳಲ್ಲಿ ದಾಖಲಾಗುತ್ತಿರುವ ನಕಲಿ ರಿವ್ಯೂಗಳಿಗೆ ಕಡಿವಾಣ ಹಾಕಲು ಗ್ರಾಹಕ ವ್ಯವಹಾರಳ ಸಚಿವಾಲಯವು ಈಗಾಗಲೇ ಮಾರ್ಗಸೂಚಿ ಅಂತಿಮಗೊಳಿಸಿದೆ. ಹಾಲಿ ಇರುವ ನಿಯಮ ಮತ್ತು ಜಾಗತಿಕವಾಗಿ ಲಭ್ಯವಿರುವ ಉತ್ತಮ ಅಂಶಗಳನ್ನು ಪರಿಗಣಿಸಿ ಹೊಸ ಕಾನೂನಿನ ಚೌಕಟ್ಟು ರೂಪಿಸಲಾಗಿದ್ದು, ಇದನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಇಲಾಖೆಯ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ (Rohit Kumar Singh) ಹೇಳಿದ್ದಾರೆ. ಈ ಚೌಕಟ್ಟು ಜಾರಿಯಾದ ಬಳಿಕ ನಕಲಿ ವಿಮರ್ಶೆಗಳ (fake reviews) ಕಡಿವಾಣಕ್ಕೆ ಕಾನೂನು ರೂಪಿಸಿದ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಪಾತ್ರವಾಗಲಿದೆ.

Tap to resize

Latest Videos

ಯಾವುದೇ ಸರಕು, ಸೇವೆಗಳನ್ನು (goods or services) ಪಡೆಯುವಾಗ ಅದರ ಗುಣಮಟ್ಟದ ಕುರಿತು ತಿಳಿಯಲು ಜನರು ಈ ಮೊದಲೇ ಆ ಸೇವೆ ಪಡೆದ ಅಥವಾ ವಸ್ತುಗಳನ್ನು ಬಳಸಿದ ಗ್ರಾಹಕರು ಹಂಚಿಕೊಂಡ ವಿಮರ್ಶೆಗಳ ಮೇಲೆ ಅವಲಂಬಿತರಾಗಿರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರನ್ನು ಸೆಳೆಯಲು ತಮ್ಮದೇ ಸರಕು ಸೇವೆಗಳಿಗೆ ನಕಲಿ ರೇಟಿಂಗ್‌ (fake ratings)  ಹಾಗೂ ವಿಮರ್ಶೆಗಳನ್ನು ತಮಗೆ ತಕ್ಕಂತೆ ಬರೆದುಕೊಳ್ಳುವ ದಂಧೆ ನಡೆಯುತ್ತದೆ.

ಜೀನ್ಸ್‌ ಆರ್ಡರ್ ಮಾಡಿದ್ರೆ ಒಂದು ಬ್ಯಾಗ್ ಈರುಳ್ಳಿ ಕಳಿಸಿದ ಫ್ಯಾಷನ್ ಸೈಟ್

Online Marketing Scam: ಸೆಕೆಂಡ್ ಹ್ಯಾಂಡ್ ಖರೀದಿ ಮಹಾಮೋಸ.. ಜಪ್ತಿಯಾದ ವಾಹನ ತೋರಿಸ್ತಾರೆ!

ಅಮೇಜಾನ್‌ನಲ್ಲಿ ಕವರ್ ಆರ್ಡರ್‌ ಮಾಡಿದ್ರೆ ಜೊತೆಗೆ ಸಿಕ್ತು ಪಾಸ್‌ಪೋರ್ಟ್

click me!