Exchange Of Demonetized Notes: 1.6ಲಕ್ಷ ರೂ. ಮೌಲ್ಯದ ಅಮಾನ್ಯಗೊಂಡ ನೋಟು ವಿನಿಮಯಕ್ಕೆ ಅವಕಾಶ ನೀಡಿದ ಬಾಂಬೆ ಹೈಕೋರ್ಟ್!

By Suvarna NewsFirst Published Feb 26, 2022, 11:37 AM IST
Highlights

*ಮುಂಬೈ ಮೂಲದ ವ್ಯಕ್ತಿಗೆ ಈ ವಿಶೇಷ ಅವಕಾಶ
*ನೋಟು ವಿನಿಮಯಕ್ಕೆ ಅವಕಾಶ ನೀಡುವಂತೆ ಆರ್ ಬಿಐಗೆ ಕೋರ್ಟ್ ನಿರ್ದೇಶನ
*ನೋಟು ಅಮಾನ್ಯೀಕರಣಗೊಂಡ 6 ವರ್ಷಗಳ ಬಳಿಕ ನ್ಯಾಯಾಲಯ ಈ ಆದೇಶ ನೀಡಿರೋದು ವಿಶೇಷ

ಮುಂಬೈ (ಫೆ.26):  ಮುಂಬೈ (Mumbai) ನಿವಾಸಿಯೊಬ್ಬರಿಗೆ (resident) ಸೇರಿದ 1.6ಲಕ್ಷ ರೂ. ಮೌಲ್ಯದ  ಅಮಾನ್ಯೀಕರಣಗೊಂಡ (demonetised) ನೋಟುಗಳನ್ನು (notes) ಹೊಸ ನೋಟುಗಳಿಗೆ (notes) ಬದಲಾಯಿಸಿಕೊಡುವಂತೆ ಭಾರತೀಯ ರಿಸರ್ವ್ ಬ್ಯಾಂಕಿಗೆ (RBI) ಬಾಂಬೆ  ಹೈಕೋರ್ಟ್ (Bombay High Court) ಆದೇಶಿಸಿದೆ.  ನೋಟು ಅಮಾನ್ಯೀಕರಣಗೊಂಡು ಬರೋಬರಿ 6 ವರ್ಷಗಳ ಬಳಿಕ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠ ಆರ್ ಬಿಐಗೆ (RBI) ಇಂಥದೊಂದು ನಿರ್ದೇಶನ (Direction) ನೀಡಿರೋದು ವಿಶೇಷ.

ಮುಂಬೈನ (Mumbai) ಡೊಂಬಿವಲ್ (Dombival) ಪ್ರದೇಶದ ನಿವಾಸಿ ಕಿಶೋರ್ ಸೊಹೋನಿ (Kishor Sohoni) ಸಲ್ಲಿಸಿದ  ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ  ಗೌತಮ್ ಪಟೇಲ್ (Gautam Patel) ಹಾಗೂ ಮಾಧವ್ ಜಮ್ದಾರ್ (Madhav Jamdar) ಈ ಆದೇಶ ನೀಡಿದ್ದಾರೆ. ವಂಚನೆ ಪ್ರಕರಣವೊಂದರಲ್ಲಿ ಸೊಹೋನಿ ದೂರುದಾರರಾಗಿದ್ದು, ಇದಕ್ಕೆ ಸಂಬಂಧಿಸಿ ಆರೋಪಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ1.6 ಲಕ್ಷ ರೂ. ಠೇವಣಿಯಿಡುವಂತೆ 2016 ರ ಮಾರ್ಚ್ ನಲ್ಲಿ ಕಲ್ಯಾಣ್ ಮ್ಯಾಜಿಸ್ಟ್ರೇಟ್ ನಿರ್ದೇಶನ ನೀಡಿದ್ದರು. 

Latest Videos

Chitra Ramkrishna Case: ಷೇರುಪೇಟೆಯ ಹಿಮಾಲಯ ಯೋಗಿ ರಹಸ್ಯ ಬಯಲು!

2016ರ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಘೋಷಿಸಿತು. ಹೀಗಾಗಿ ಹಳೆಯ ನೋಟುಗಳ ವಿನಿಮಯಕ್ಕೆ ನೀಡಲಾದ ಗಡುವು 2016 ರ ಡಿಸೆಂಬರ್ 31ರೊಳಗೆ ಪೊಲೀಸ್ ಠಾಣೆಯಿಂದ ಹಣ ಪಡೆಯಲು ಅನುಮತಿ ನೀಡಬೇಕೆಂದು ಸೊಹೋನಿ ಮ್ಯಾಜಿಸ್ಟ್ರೇಟ್ ಬಳಿ ಮನವಿ ಮಾಡಿದ್ದರು. ಆದ್ರೆ ಮ್ಯಾಜಿಸ್ಟ್ರೇಟ್ 2017ರ ಮಾರ್ಚ್ 20ರಂದು ಹಣ ಪಡೆಯಲು ಅನುಮತಿ ನೀಡಿದ್ದರು. 

ಸೊಹೋನಿ ತನ್ನ ಅರ್ಜಿಯಲ್ಲಿ ತನಗೆ ಹಣದ ತುರ್ತು ಅವಶ್ಯಕತೆಯಿರಲಿಲ್ಲ ಹಾಗೂ ಈ ಹಣವನ್ನು ನಾನು ಉಳಿತಾಯ ಎಂದೇ ಭಾವಿಸಿದ್ದೆ. ನಂತರ  2020ರ ಮಾರ್ಚ್ ಬಳಿಕ ಕೋವಿಡ್ -19 ಹಾಗೂ ಲಾಕ್ ಡೌನ್ ಕಾರಣದಿಂದ ಹಣವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಕೊನೆಗೆ ನಾನು 2020ರ ಅಕ್ಟೋಬರ್ ನಲ್ಲಿ ಪೊಲೀಸ್ ಠಾಣೆಗೆ ತೆರಳಿ ಹಣ ಹಿಂತಿರುಗಿಸುವಂತೆ ಮನವಿ ಮಾಡಿದ್ದೆ. ಆದ್ರೆ ತನಗೆ ಬ್ಯಾನ್ ಆಗಿರೋ 1,000ರೂ. ನೋಟುಗಳನ್ನು ನೀಡಲಾಗಿತ್ತು. ಈ ಪ್ರತಿ ನೋಟನ್ನು ಸೊಹೋನಿ, 'ಮಹಾತ್ಮ ಗಾಂಧಿ ಅವರ ಫೋಟೋ ಇರೋ ಒಂದು ಕಾಗದದ ತುಂಡು' ಎಂದೇ ಉಲ್ಲೇಖಿಸಿದ್ದರು. 

ಆರ್ ಬಿಐ ಪರ ವಕೀಲರಾದ ಅದಿತಿ ಪಾಟಕ್ ಹಣಕಾಸು ಸಚಿವರ 2017ರ ಮೇ 12ರ ಅಧಿಸೂಚನೆಯನ್ನು ಉಲ್ಲೇಖಿಸಿ, ಒಂದು ವೇಳೆ ನಿರ್ದಿಷ್ಟ ಬ್ಯಾಂಕಿನಿಂದ ಮುಟ್ಟುಗೋಲು ಹಾಕಿಕೊಂಡ ನೋಟುಗಳನ್ನು ನ್ಯಾಯಾಲಯ ಹಿಂತಿರುಗಿಸಿದ್ರೆ, ಆಗ ಆ ವ್ಯಕ್ತಿ ಹಣವನ್ನು ನ್ಯಾಯಾಲಯದ ಆದೇಶದ ಅನುಸಾರ ಠೇವಣಿ ಅಥವಾ ವಿನಿಮಯ ಮಾಡಲು ಆರ್ಹನಾಗಿದ್ದಾನೆ ಎಂದು ತಿಳಿಸಿದರು.  ಈ ಅಧಿಸೂಚನೆಯನ್ನು ಪರಿಗಣಿಸಿ ನ್ಯಾಯಾಧೀಶರ ಆದೇಶವನ್ನು ವಿಶ್ಲೇಷಿಸಿದರೆ ಅದು 'ಅಮಾನ್ಯೀಕರಣಗೊಂಡ ನೋಟುಗಳನ್ನು ಪ್ರಸ್ತುತ ಮಾನ್ಯತೆ ಹೊಂದಿರೋ ನೋಟುಗಳೊಂದಿಗೆ ಬದಲಾಯಿ ಸುವಂತೆ ಆರ್ ಬಿಐಗೆ ನಿರ್ದೇಶನ ನೀಡಿಲ್ಲ' ಎಂಬುದನ್ನು ಅದಿತಿ ಪಾಟಕ್ ಈ ಸಂದರ್ಭದಲ್ಲಿ ನ್ಯಾಯಾಲಯದ ಗಮನಕ್ಕೆ ತಂದರು.ಇದನ್ನು ಪರಿಗಣಿಸಿದ ನ್ಯಾಯಾಧೀಶರು, ಆರ್ ಬಿಐಗೆ ಅಮಾನ್ಯೀಕರಣಗೊಂಡ ನೋಟುಗಳನ್ನು ಬದಲಾಯಿಸಿ ನೀಡುವಂತೆ ನಿರ್ದೇಶನ ನೀಡಿದ್ದಾರೆ. 

Russia Ukrain Crisis: ರಷ್ಯಾ ವಿರುದ್ಧ ಪೂರ್ಣ ಆರ್ಥಿಕ ದಿಗ್ಭಂದನಕ್ಕೆ ಹೆಚ್ಚಿದ ಕೂಗು

'ಭಾರತ ಸಂವಿಧಾನದ ಪರಿಚ್ಛೇದ 226ರ ಅಡಿಯಲ್ಲಿನ ವಿಶೇಷ ಅಧಿಕಾರ ಬಳಸಿ ಆರ್ ಬಿಐಗೆ ಈ ನಿರ್ದೇಶನ ನೀಡುತ್ತಿದ್ದು, ಅರ್ಜಿದಾರರಿಗೆ ಸೇರಿದ ಅಮಾನ್ಯೀಕರಣಗೊಂಡ ನೋಟುಗಳನ್ನು ಪ್ರಸ್ತುತ ಮಾನ್ಯತೆ ಹೊಂದಿರೋ ನೋಟುಗಳೊಂದಿಗೆ ಬದಲಾಯಿಸಿ ನೀಡಬೇಕು. ಹಾಗೆಯೇ  ಸೀರಿಯಲ್ ಸಂಖ್ಯೆಗಳ ನಮೂದು ಸೇರಿದಂತೆ  ಅರ್ಜಿದಾರರ ಇತರ ಮನವಿಗಳನ್ನು ಪರಿಗಣಿಸಬೇಕು' ಎಂದು ಪೀಠ ತಿಳಿಸಿದೆ. 
 

click me!