ಒಂದು ತಿಂಗಳ ಕಾಲ ಮಹಾಕುಂಭ ಮೇಳದಲ್ಲಿ ಭಾಗಿಯಾಗಲಿರುವ ದಿ. ಸ್ಟೀವ್‌ ಜಾಬ್‌ ಪತ್ನಿ

Published : Jan 08, 2025, 01:51 PM ISTUpdated : Jan 08, 2025, 02:14 PM IST
 ಒಂದು ತಿಂಗಳ ಕಾಲ ಮಹಾಕುಂಭ ಮೇಳದಲ್ಲಿ ಭಾಗಿಯಾಗಲಿರುವ  ದಿ. ಸ್ಟೀವ್‌ ಜಾಬ್‌ ಪತ್ನಿ

ಸಾರಾಂಶ

ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ ಅವರ ಪತ್ನಿ ಲಾರೆನ್ ಪಾವೆಲ್ ಅವರು 2025ರ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿ ಕಲ್ಪವಾಸ ಮಾಡಲಿದ್ದಾರೆ. ಜನವರಿ 13 ರಿಂದ ಪ್ರಾರಂಭವಾಗುವ ಈ ಮೇಳದಲ್ಲಿ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ ಪತ್ನಿ ಲಾರೆನ್ ಪಾವೆಲ್ ಅವರು ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸಮಾವೇಶ ಮಹಾ ಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಅವರು ಕಲ್ಪವಾಸವನ್ನು ಕೂಡ ಮಾಡಲಿದ್ದಾರೆ ಎಂದು ವರದಿಯಾಗಿದೆ. ಕೋಟ್ಯಾಂತರ ಸಂಖ್ಯೆಯಲ್ಲಿ ಸಾಧುಗಳು ಸಂತರು, ಭಕ್ತರು ಸೇರುವ ಹಿಂದೂ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳವಾಗಿದೆ, ಪ್ರತಿ 12 ವರ್ಷಗಳಿಗೆ ಒಮ್ಮೆ ಉತ್ತರ ಪ್ರದೇಶ ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಈ ಮಹಾಕುಂಭ ಮೇಳವು ನಡೆಯುತ್ತದೆ.  

2025ರ ಈ ಮಹಾ ಕುಂಭ ಮೇಳದಲ್ಲಿ  ಹಲವು ವಿಐಪಿಗಳು, ವಿವಿಐಪಿಗಳು, ಮಿಲಿಯನೇರ್‌ಗಳು, ಸಾಧು ಸಂತರುಗಳು ಭಾಗವಹಿಸುತ್ತಿದ್ದಾರೆ. ಜನವರಿ 13 ರಿಂದ ಈ ಮಹಾಕುಂಭ ಮೇಳ ಆರಂಭವಾಗಲಿದ್ದು, ಕೋಟ್ಯಾಂತರ ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ಜನ ಭಾಗವಹಿಸುವ ನಿರೀಕ್ಷೆ ಇದೆ.  ಅದೇ ರೀತಿ ಆಪಲ್ ಸಂಸ್ಥೆಯ ಮುಖ್ಯಸ್ಥ ದಿವಂಗತ ಸ್ಟೀವ್ ಜಾಬ್ ಅವರ ಪತ್ನಿ ಲಾರೆನ್ ಪಾವೆಲ್ ಕೂಡ ಈ ಮೇಳದಲ್ಲಿ ಭಾಗಿಯಾಗಿ ಮಹಾಕುಂಭಮೇಳದಲ್ಲಿ ಕಲ್ಪವಾಸ ಮಾಡಲಿದ್ದಾರೆ ಎಂದು ವರದಿಯಾಗಿದೆ. 

ಕಲ್ಪವಾಸ್ ಎಂಬುದು ಹಿಂದೂ ಸಂಪ್ರದಾಯದಲ್ಲಿ ಪುರಾತನವಾದ ಆಚರಣೆಯಾಗಿದೆ, ಇದನ್ನು ಕಲ್ಪವಾಸಿಸ್‌ ಅಥವಾ ಕಲ್ಪವಶಿಶ್ ಎಂದು ಕರೆಯಲಾಗುತ್ತದೆ. ಪುಷ್ಯ ಹುಣಿಮೆಯಿಂದ ಮಾಘಿ ಹುಣ್ಣಿಮೆಯವರೆಗೆ ಒಂದು ತಿಂಗಳ ಕಾಲ ಇದನ್ನು ಆಚರಿಸಲಾಗುತ್ತದೆ. ಈ ಕಲ್ಪವಾಸಿಗಳು ಪ್ರತಿದಿನ ಗಂಗಾ ಸ್ನಾನವನ್ನು ಮಾಡುತ್ತಾರೆ ಮತ್ತು ಕುಂಭಮೇಳದ ಸಮಯದಲ್ಲಿ  ಧರ್ಮೋಪದೇಶಗಳನ್ನು ಕೇಳಲು ಮತ್ತು ಭಜನೆ ಮತ್ತು ಕೀರ್ತನೆಗಳಲ್ಲಿ ಭಾಗವಹಿಸಲು ವಿವಿಧ ದಾರ್ಶನಿಕರು ಮತ್ತು ಸಂತರ ಶಿಬಿರಗಳಿಗೆ ಭೇಟಿ ನೀಡುತ್ತಾರೆ.

ಕಲ್ಪವಾಸ್‌ನಲ್ಲಿ ಭಾಗಿಯಾಗುವ ಲಾರೆನ್ ಪೊವೆಲ್ ಜಾಬ್

ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಜನವರಿ 13 ರಂದು ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಕ್ಕೆ ಆಗಮಿಸುವ ಸಾಧ್ಯತೆಯಿದೆ ಮತ್ತು ಅವರು ನಿರಂಜನಿ ಅಖಾರದ 'ಮಹಾಮನಾದ್ಲೇಶ್ವರ' ಸ್ವಾಮಿ ಕಲಿಯಾಶಾನಂದ ಅವರ ಶಿಬಿರದಲ್ಲಿ ತಂಗಲಿದ್ದಾರೆ. ಕೆಲ ವರದಿಗಳ ಪ್ರಕಾರ ಅವರು ಜನವರಿಯವರೆಗೂ ಈ ಮಹಾಕುಂಭ ಮೇಳದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಲಿದ್ದಾರೆ ಎಂದು ವರದಿಯಾಗಿದೆ. 

ಕಲ್ಪವಾಸ್ ಅಥವಾ ಕಲ್ಪವಾಸಿಗಳು ಏನು ಮಾಡುತ್ತಾರೆ?

ಮಹಾಭಾರತ ಮತ್ತು ರಾಮಚರಿತ ಮಾನಸಗಳಲ್ಲಿ ಉಲ್ಲೇಖಿಸಿರುವಂತೆ ಈ ಹಿಂದೂ ಸಂಪ್ರದಾಯವು ಸ್ವಯಂ-ಶುದ್ಧೀಕರಣ ಮತ್ತು ತೀವ್ರವಾದ ಆಧ್ಯಾತ್ಮಿಕ ಶಿಸ್ತನ್ನು ಒಳಗೊಂಡಿರುತ್ತದೆ. ಈ ಸಮಯವು ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಶುದ್ಧೀಕರಣದ ಭಾವನೆಯಾಗಿ ಕಾರ್ಯನಿರ್ವಹಿಸುತ್ತದೆ. ಸಂಗಮಕ್ಕೆ ಭಕ್ತರ ಆಗಮನದೊಂದಿಗೆ ಆಚರಣೆಗಳು ಪ್ರಾರಂಭವಾಗುತ್ತವೆ, ಅಲ್ಲಿ ಅವರು ಎಲ್ಲಾ ಸೌಕರ್ಯಗಳನ್ನು ಬಿಟ್ಟು ತಮ್ಮ ತಾತ್ಕಾಲಿಕ ಡೇರೆಗಳನ್ನು ಸ್ಥಾಪಿಸುತ್ತಾರೆ. ಕಲ್ಪವಾಸಿಗಳು ಪ್ರತಿದಿನ ನಡೆಸುವ ಮತ್ತೊಂದು ಆಚರಣೆಯು ಸಂಗಮದಲ್ಲಿ ಮಾಡುವ ಪವಿತ್ರ ಸ್ನಾನವಾಗಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌