4,500 ಕೋಟಿ ಆಸ್ತಿ ಮಾಲೀಕ ಲಲಿತ್ ಮೋದಿ ಗರ್ಲ್ ಫ್ರೆಂಡ್ ಸುಶ್ಮಿತಾ ನಿವ್ವಳ ಆಸ್ತಿ ಎಷ್ಟು?

By Suvarna News  |  First Published Jul 15, 2022, 2:45 PM IST

ಹುಟ್ಟುವಾಗ್ಲೇ ಶ್ರೀಮಂತ ಲಲಿತ್ ಮೋದಿ. ಈಗ ಕೋಟಿ ಕೋಟಿ ಆಸ್ತಿಯಿದೆ. ಭಾರತದಿಂದ ಓಡಿ ಹೋಗಿ ಲಂಡನ್ ಸೇರಿರುವ ಲಲಿತ್ ಮೋದಿ ಈಗ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಪ್ರೀತಿಗೆ ಬಿದ್ದಿದ್ದಾರೆ.
 


ಐಪಿಎಲ್ ಮಾಜಿ ಚೇರ್ಮನ್ ಆಗಿದ್ದ ಲಲಿತ್ ಮೋದಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ನಡೆಸುತ್ತಿರುವುದು. ಈ ಬಗ್ಗೆ ಸ್ವತಃ ಲಲಿತ್ ಮೋದಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಲಲಿತ್ ಮೋದಿ ವ್ಯಾಪಾರ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದವರು. ಸುಶ್ಮಿತಾ ಸೇನ್ ಕೂಡ ಕಡಿಮೆಯೇನಿಲ್ಲ.  ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಗಳಿಸಿರುವ ಸುಶ್ಮಿತಾ ಸೇನ್, ಕೋಟ್ಯಂತರ ರೂಪಾಯಿ ಆಸ್ತಿಯ ಒಡತಿ. ಮಾಧ್ಯಮ ವರದಿಗಳ ಪ್ರಕಾರ, ಸುಶ್ಮಿತಾ ಸೇನ್ ಪ್ರತಿ ತಿಂಗಳು ಸುಮಾರು 60 ಲಕ್ಷ ಮತ್ತು ವಾರ್ಷಿಕವಾಗಿ 9 ಕೋಟಿ ಗಳಿಸುತ್ತಾರೆ. ಇಂದು ನಾವು ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ಒಟ್ಟು ಆಸ್ತಿ ಎಷ್ಟು ಎಂಬುದನ್ನು ನಿಮಗೆ ಹೇಳ್ತೇವೆ.

ಲಲಿತ್ ಮೋದಿ (Lalit Modi), ಉದ್ಯಮ ಕುಟುಂಬಕ್ಕೆ ಸೇರಿದವರು. ಅವರ ಮುತ್ತಜ್ಜ ಗುಜರ್ಮಲ್ ಮೋದಿ ಅವರು ಉತ್ತರ ಪ್ರದೇಶ (Uttar Pradesh) ದ ಮೀರತ್ ಬಳಿ ಮೋದಿನಗರ ಎಂಬ ಕೈಗಾರಿಕಾ ಪಟ್ಟಣವನ್ನು ಸ್ಥಾಪಿಸಿದ್ದರು. ಅವರ ಎಂಟು ಮಕ್ಕಳಲ್ಲಿ ಒಬ್ಬರು ಲಲಿತ್ ಮೋದಿ ಅವರ ತಂದೆ ಕೆಕೆ ಮೋದಿ. ಲಲಿತ್ ಮೋದಿ,  ತಂದೆ ಸ್ಥಾಪಿಸಿದ ಕೆಕೆ ಮೋದಿ ಕಂಪನಿಯ ಅಧ್ಯಕ್ಷರಾಗಿದ್ದಾರೆ. ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್, ಅವರ ವೆಬ್‌ಸೈಟ್ LalitModi.com ಮತ್ತು ಅವರ ಫೇಸ್‌ಬುಕ್ ಪುಟವೂ ಅವರನ್ನು ಮೋದಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಎಂದು ಗುರುತಿಸಿದೆ. ಮೋದಿ ಎಂಟರ್‌ಪ್ರೈಸಸ್ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುತ್ತದೆ.  ಈ ಕಂಪನಿಯು ಗ್ರಾಹಕ ಉತ್ಪನ್ನಗಳು, ನೆಟ್‌ವರ್ಕ್ ಮಾರ್ಕೆಟಿಂಗ್, ಶಿಕ್ಷಣ, ಮನರಂಜನೆ, ಚಹಾ ಮತ್ತು ಇತರ ಪಾನೀಯಗಳು, ಆರೋಗ್ಯ, ಫ್ಯಾಷನ್, ಆಹಾರ ಮತ್ತು ಆಸ್ಪತ್ರೆಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತವಲ್ಲದೆ  ಮಧ್ಯಪ್ರಾಚ್ಯ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಆಗ್ನೇಯ ಆಫ್ರಿಕಾದಂತಹ ಹಲವು ದೇಶಗಳಲ್ಲಿ ಮೋದಿ ಗ್ರೂಪ್‌ನ ವ್ಯವಹಾರವಿದೆ.

Tap to resize

Latest Videos

ಲಲಿತ್ ಮೋದಿ ನಿವ್ವಳ ಆಸ್ತಿ ಮೌಲ್ಯ : ಐಪಿಎಲ್ 2008 ರಲ್ಲಿ ಪ್ರಾರಂಭವಾಯಿತು. ಇಂದು ಇದು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ಲೀಗ್‌ಗಳಲ್ಲಿ ಒಂದಾಗಿದೆ. ಬಹುಮಟ್ಟಿಗೆ ಅದನ್ನು ಯಶಸ್ವಿಗೊಳಿಸಿದ ಕೀರ್ತಿ ಲಲಿತ್ ಮೋದಿಗೆ ಸಲ್ಲುತ್ತದೆ. ಆದರೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2010ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು ಲಲಿತ್ ಮೋದಿ. ಸದ್ಯ ಅವರು ಲಂಡನ್‌ನಲ್ಲಿ ನೆಲೆಸಿದ್ದಾರೆ.  ಒಂದು ಅಂದಾಜಿನ ಪ್ರಕಾರ, ಲಲಿತ್ ಮೋದಿ ಅವರ ಆಸ್ತಿ ಸುಮಾರು 57 ಮಿಲಿಯನ್ ಡಾಲರ್ ಅಥವಾ 4,555 ಕೋಟಿ ರೂಪಾಯಿ. ಅವರು ಲಂಡನ್‌ನ ಐಕಾನಿಕ್ 117, ಸ್ಲೋನ್ ಸ್ಟ್ರೀಟ್‌ನಲ್ಲಿ ಐದು ಅಂತಸ್ತಿನ ಮನೆ ಹೊಂದಿದ್ದಾರೆ. ಇದು 7000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. 

ಬ್ಯುಸಿನೆಸ್ ಮಾಡ್ಬೇಕಾ? ಸ್ಟೇಷನರಿ ಅಂಗಡಿ ಹೇಗೆ ತೆರೆಯೋದು?

ಸುಶ್ಮಿತಾ ಸೇನ್ (Sushmita Sen) ನಿವ್ವಳ ಆಸ್ತಿ ಮೌಲ್ಯ : ಇನ್ನು ನಟಿ ಸುಶ್ಮಿತಾ ಸೇನ್ ಕೂಡ ಕೋಟ್ಯಂತರ ರೂಪಾಯಿ ಒಡತಿ. ಮಾಧ್ಯಮಗಳ ವರದಿ  ಪ್ರಕಾರ, ಸುಶ್ಮಿತಾ ಸೇನ್ ವಾರ್ಷಿಕವಾಗಿ ಸುಮಾರು 9 ಕೋಟಿ ರೂಪಾಯಿ ಸಂಪಾದನೆ ಮಾಡ್ತಾರೆ. ಪ್ರತಿ ತಿಂಗಳು 60 ಲಕ್ಷ ರೂಪಾಯಿ ಗಳಿಸ್ತಾರೆ. ಸುಶ್ಮಿತಾ ಸೇನ್ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 74 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮುಂಬೈನ ವರ್ಸೋವಾದಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ದತ್ತು ಪುತ್ರಿಯರೊಂದಿಗೆ ಸುಶ್ಮಿತಾ ವಾಸವಾಗಿದ್ದಾರೆ. ಸುಶ್ಮಿತಾ ಸೇನ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಅವರು ಬಿಎಂಡಬ್ಲ್ಯೂ 7 ಸಿರೀಸ್ನ 730Ld  ಹೊಂದಿದ್ದಾರೆ. ಇದರ ಬೆಲೆ 1.42 ಕೋಟಿ ರೂಪಾಯಿ. ಅವರ ಬಳಿ ಬಿಎಂಡಬ್ಲ್ಯೂX6 ಕೂಡ ಇದೆ. ಅದರ ಬೆಲೆ 1 ಕೋಟಿ ರೂಪಾಯಿ. ಇದಲ್ಲದೆ, ಆಡಿ ಕ್ಯೂ 7 ಹೊಂದಿದ್ದು ಅದ್ರ ಬೆಲೆ ಸುಮಾರು 89.90 ಲಕ್ಷ ಮತ್ತು ಲೆಕ್ಸಸ್ LX 470ರ ಬೆಲೆ  35 ಲಕ್ಷ ರೂಪಾಯಿ ಎಂದು ಮಾಧ್ಯಮಗಳು ವರದಿ ಮಾಡಿವೆ. 

Success Mantra: ಕೋಟ್ಯಾಧಿಪತಿಯಾಗಬೇಕಾ? ಹೀಗೆಲ್ಲಾ ಮಾಡಬಹುದು ನೋಡಿ!

ಸುಶ್ಮಿತಾ ಸೇನ್ ಆದಾಯದ ಮೂಲ ಯಾವುದು ? : ಮಾಧ್ಯಮ ವರದಿಗಳ ಪ್ರಕಾರ, ವಿಶ್ವ ಸುಂದರಿಯಾಗಿದ್ದ ಸುಶ್ಮಿತಾ ಆದಾಯದ ಮುಖ್ಯ ಮೂಲ ಸಿನಿಮಾ. ಚಿತ್ರವೊಂದಕ್ಕೆ ಮೂರರಿಂದ ನಾಲ್ಕು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಸುಶ್ಮಿತಾ. ಅಲ್ಲದೆ ಸುಶ್ಮಿತಾ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಾಗಿ 1.5 ಕೋಟಿ ರೂಪಾಯಿ ಪಡೆಯುತ್ತಾರೆ. ಸುಶ್ಮಿತಾ ಅವರು ಬೆಂಗಾಲಿ ಮಾಶಿಸ್ ಕಿಚನ್ ಹೆಸರಿನ ರೆಸ್ಟೋರೆಂಟ್  ತೆರೆದಿದ್ದರು. ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ನಟಿಸುವುದರ ಜೊತೆಗೆ, ಸುಶ್ಮಿತಾ ಸೇನ್ ಅವರು ತಂತ್ರ ಎಂಟರ್‌ಟೈನ್‌ಮೆಂಟ್ ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ಸಹ ನಡೆಸುತ್ತಿದ್ದಾರೆ. ಸುಶ್ಮಿತಾ ಸೇನ್ ದುಬೈನಲ್ಲಿ ಆಭರಣ ಮಳಿಗೆಯನ್ನು ಹೊಂದಿದ್ದಾರೆ.  
 

click me!