ದಿನದ ಆರಂಭ ಯಾವಾಗ್ಲೂ ಚೆನ್ನಾಗಿರಬೇಕು. ಇಡೀ ದಿನವನ್ನು ನಿರ್ಧರಿಸುವ ಶಕ್ತಿ ದಿನದ ಆರಂಭಕ್ಕಿದೆ. ಪ್ರತಿಯೊಬ್ಬರೂ ತಮ್ಮಿಷ್ಟದಂತೆ ದಿನ ಶುರು ಮಾಡ್ತಾರೆ. ಗೂಗಲ್ ಸಿಇಒ ಅವರ ದಿನದ ಆರಂಭ ಸ್ವಲ್ಪ ಭಿನ್ನವಾಗಿದೆ.
ನಮ್ಮ ಇಡೀ ದಿನವನ್ನು ಮುಂಜಾನೆ ನಿರ್ಧರಿಸುತ್ತದೆ. ವ್ಯಕ್ತಿ ಯಾರೇ ಇರಲಿ, ತಮ್ಮ ಇಡೀ ದಿನ ಯಾವುದೇ ಸಮಸ್ಯೆ ಇಲ್ಲದೆ ಕಳೆಯಬೇಕು ಎಂದು ಬಯಸುತ್ತಾನೆ. ಆರಂಭ ಚೆನ್ನಾಗಿದ್ರೆ ಅಂತ್ಯ ಖುಷಿಯಿಂದ ಕೂಡಿರುತ್ತದೆ. ಬೆಳಿಗ್ಗೆ ಬೆಳಿಗ್ಗೆ ಮೂಡ್ ಹಾಳಾದ್ರೆ ಇಡೀ ದಿನದ ಕೆಲಸ ಹಾಳಾದಂತೆ. ಸಿಟ್ಟು, ಕೋಪ, ಬೇಸರದಲ್ಲಿಯೇ ಇಡೀ ದಿನ ವ್ಯರ್ಥವಾಗುತ್ತದೆ. ಅದೇ ಬೆಳಿಗ್ಗೆ ನೀವು ಖುಷಿಯಾಗಿ ಎದ್ದರೆ, ಮುಂದಿನ ಇಪ್ಪನ್ನಾಲ್ಕು ಗಂಟೆಯನ್ನು ನೀವು ಸಂತೋಷ, ನೆಮ್ಮದಿಯಿಂದಲೇ ಕಳೆಯಬಹುದು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಎಲ್ಲವೂ ಸುಗಮವಾಗಿರುತ್ತದೆ ಎಂದು ಅನೇಕರು ಹೇಳ್ತಾರೆ. ಇನ್ನು ಕೆಲವರು ಬೆಳಿಗ್ಗೆ ಬೇಗ ಎದ್ದು, ತಮ್ಮಿಷ್ಟದ ಕೆಲಸ ಮಾಡುವ ಮೂಲಕ ದಿನವನ್ನು ಆರಂಭಿಸುತ್ತಾರೆ. ಕೆಲವರು ಯೋಗ ಮಾಡಿದ್ರೆ ಮತ್ತೆ ಕೆಲವರು ವಾಕಿಂಗ್ ಮಾಡ್ತಾರೆ. ಇನ್ನು ಕೆಲವರು ಮೊಬೈಲ್ ನೋಡಿ, ರೀಲ್ಸ್ ನೋಡಿ ದಿನವನ್ನು ಆರಂಭಿಸುತ್ತಾರೆ. ದಿನವನ್ನು ಹೇಗೆ ಶುರು ಮಾಡಬೇಕು ಎಂಬುದು ನಿಮಗೆ ಬಿಟ್ಟಿದ್ದು.
ಶ್ರೀಮಂತರು, ಪ್ರಸಿದ್ಧ ವ್ಯಕ್ತಿಗಳು (Famous People) ಹೇಗೆ ದಿನ ಶುರು ಮಾಡ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇರುತ್ತೆ. ಒಬ್ಬೊಬ್ಬ ಸೆಲೆಬ್ರಿಟಿ, ಬ್ಯುಸಿನೆಸ್ ಮೆನ್ ದಿನದ ಆರಂಭ ಒಂದೊಂದು ರೀತಿ ಇರುತ್ತದೆ. ನಾವಿಂದು ಗೂಗಲ್ (Google) ಸಿಇಒ ಸುಂದರ್ ಪಿಚೈ (Sundar Pichai) ತಮ್ಮ ದಿನಚರಿ ಹೇಗೆ ಶುರು ಮಾಡ್ತಾರೆ ಎಂಬುದನ್ನು ಹೇಳ್ತೇವೆ.
ನೆಟ್‌ಫ್ಲಿಕ್ಟ್, ಅಮೆಜಾನ್ ಪ್ರೈಂಗೆ ಭರ್ಜರಿ ಪೈಪೋಟಿ; ಬೃಹತ್ OTT ಒಪ್ಪಂದಕ್ಕೆ ಸಹಿ ಹಾಕಲಿರುವ ಮುಕೇಶ್ ಅಂಬಾನಿ!
ಗೂಗಲ್ (Google) ಸಿಇಒ ಸುಂದರ್ ಪಿಚೈ ದಿನದ ಆರಂಭ ಹೀಗಿರುತ್ತೆ : ಸುಂದರ್ ಪಿಚೈ ನಮ್ಮ ನಿಮ್ಮಂತೆ ವಾಕಿಂಗ್ (walking) ಮಾಡೋದಾಗ್ಲಿ, ರೀಲ್ಸ್ (Reels) ನೋಡೋದಾಗ್ಲಿ ಮಾಡ್ತಾ ದಿನವನ್ನು ಆರಂಭಿಸೋದಿಲ್ಲ. ಸುಂದರ ಪಿಚೈ, ಸುದ್ದಿಯ (News) ಮೇಲೆ ಕಣ್ಣು ಹಾಯಿಸುತ್ತಾರೆ. ಅದೂ ಟೆಕ್ ಸುದ್ದಿಯ (Tech News) ಮೇಲೆ ಅವರು ಗಮನ ಹರಿಸುತ್ತಾರೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುಂದರ್ ಪಿಚೈ, ಬೆಳಿಗ್ಗೆ ಎದ್ದ ತಕ್ಷಣ ಟೆಕ್ ಸುದ್ದಿಯನ್ನು ನೋಡೋದಾಗಿ ಹೇಳಿದ್ದಾರೆ. ಪಿಚೈ ಅವರು ಬೆಳಿಗ್ಗೆ ಟೆಕ್ ಮೀಮ್ ವೆಬ್‌ಸೈಟ್‌ಗೆ ಭೇಟಿ ನೀಡುತ್ತಾರೆ. ಟೆಕ್ ಮೀಮ್ ವಿಶ್ವದಲ್ಲಿ ಟೆಕ್ ಸುದ್ದಿಗಳನ್ನು ಒದಗಿಸುವ ಎಲ್ಲಾ ಪ್ರಕಟಣೆಗಳ ಮುಖ್ಯಾಂಶಗಳನ್ನು ಒಟ್ಟುಗೂಡಿಸಿ ಬಳಕೆದಾರರಿಗೆ ಪ್ರಸ್ತುತಪಡಿಸುವ ಉತ್ತಮ ಸಂಗ್ರಾಹಕ ವೆಬ್‌ಸೈಟ್ ಆಗಿದೆ. ಸುಂದರ್ ಪಿಚೈ ಟೆಕ್ ಮೀಮ್‌ಗಳ ಅಭಿಮಾನಿಯಾಗಿದ್ದಾರೆ.
ಸುಂದರ್ ಪಿಚೈ ಮಾತ್ರವಲ್ಲ ಇನ್ನೂ ಅನೇಕ ಗಣ್ಯರು ಟೆಕ್ ಮೀಮ್ ವೆಬ್ಸೈಟ್ ಪರಿಶೀಲಿಸೋದಾಗಿ ಹೇಳಿದ್ದಾರೆ. ಅದ್ರಲ್ಲಿ ಫೇಸ್‌ಬುಕ್ ಅಂದರೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡ ಸೇರಿದ್ದಾರೆ. ಜುಕರ್‌ಬರ್ಗ್ ಟೆಕ್ ಸುದ್ದಿಗಳಿಗಾಗಿ ಟೆಕ್ ಮೀಮ್‌ಗಳನ್ನು ಅವಲಂಬಿಸಿರೋದಾಗಿ ಈ ಹಿಂದೆ ಹೇಳಿದ್ದರು. ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಕೂಡ ಟೆಕ್ ಮೀಮ್ ಸುದ್ದಿಗಳನ್ನು ನೋಡುತ್ತಾರೆ.
ಏಪಲ್ ಸಿಇಒ ಟಿಮ್ ಕುಕ್ ಬೆಳಿಗ್ಗೆ ಏನು ಮಾಡ್ತಾರೆ? : ಆಪಲ್‌ನಂತಹ ದೊಡ್ಡ ಕಂಪನಿಯ ಸಿಇಒ ಟಿಮ್ ಕುಕ್ ದಿನದ ಆರಂಭ ಇ ಮೇಲ್ ನೋಡುವ ಮೂಲಕ ಶುರುವಾಗುತ್ತದೆ. ಗ್ರಾಹಕರ ಇ ಮೇಲ್ ಚೆಕ್ ಮಾಡಿ, ಅದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ದಿನವನ್ನು ಅವರು ಶುರು ಮಾಡ್ತಾರೆ. ಗ್ರಾಹಕರ ಮೇಲ್ ಗೆ ಸ್ಪಂದಿಸುವ ಮೂಲಕ ಉತ್ಪನ್ನದ ಬಗ್ಗೆ ಗ್ರಾಹಕರಿಂದ ಅಭಿಪ್ರಾಯ ತಿಳಿಯಬಹುದು ಎಂಬುದು ಅವರ ನಂಬಿಕೆಯಾಗಿದೆ.
ಬಾಲಿವುಡ್‌ನ ಟಾಪ್ ಹೀರೋಸ್ ಜೊತೆ ರೋಮ್ಯಾನ್ಸ್ ಮಾಡಿದ್ದ ನಟಿ, ಅಪ್ಸರೆಯಂತಿದ್ದ ಚೆಲುವೆ ಈಗ ಏಕಾಂಗಿ!
ಸ್ಪಾಟಿಫೈ ಸಿಇಒ ಡೇನಿಯಲ್ ಇಕೆ ಕೂಡ ತನ್ನ ದಿನವನ್ನು ಸುದ್ದಿಯೊಂದಿಗೆ ಪ್ರಾರಂಭಿಸುತ್ತಾನೆ. ಡೇನಿಯಲ್ ಅವರು ದಿನವಿಡೀ ತಾಜಾತನದಿಂದ ಇರಲು ಬೆಳಿಗ್ಗೆ ಪುಸ್ತಕಗಳನ್ನು ಓದೋದಾಗಿ ಹೇಳಿದ್ದಾರೆ.