NCDFY: ಕೆಎಂಎಫ್‌ಗೆ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ಗರಿ

By Girish Goudar  |  First Published Apr 11, 2022, 5:56 AM IST

*  ಬಾಲಚಂದ್ರ ಜಾರಕಿಹೊಳಿಗೆ ಅಮಿತ್‌ ಶಾ ಪ್ರಶಸ್ತಿ ಪ್ರದಾನ
*  ಮಾರುಕಟ್ಟೆ ಜಾಲ ವಿಸ್ತರಿಸಿದ್ದಕ್ಕಾಗಿ ಹಾಲು ಒಕ್ಕೂಟಕ್ಕೆ ಗೌರವ
*  ಸುಮಾರು 2400 ಕೋಟಿ ರು. ವಹಿವಾಟು ನಡೆಸಿದ ಕೆಎಂಎಫ್‌ 
 


ಬೆಂಗಳೂರು(ಏ.11): ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾಮಂಡಲ (NCDFY) ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಹಾಲು ಮತ್ತು ಹಾಲಿನ ಉತ್ಪಾದನೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆ ಗುರುತಿಸಿ ಕರ್ನಾಟಕ ಹಾಲು ಮಹಾಮಂಡಲಕ್ಕೆ (KMF) ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾನುವಾರ ಗುಜರಾತ್‌ ರಾಜಧಾನಿ ಗಾಂಧಿನಗರದಲ್ಲಿ ನಡೆದ ಎನ್‌ಸಿಡಿಎಫ್‌ಐ ಸುವರ್ಣ ಮಹೋತ್ಸವದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ(Amit Shah) ಅವರು ದೇಶದಲ್ಲೇ(India) ಅತ್ಯುತ್ತಮ ಮಾರುಕಟ್ಟೆ ಜಾಲ ವಿಸ್ತರಿಸಿದ್ದಕ್ಕಾಗಿ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ(Balachandr Jarkiholi) ಅವರಿಗೆ ಪ್ರಶಸ್ತಿ(Award) ಪ್ರದಾನ ಮಾಡಿ ಗೌರವಿಸಿದರು.

Tap to resize

Latest Videos

Price Hike: : ನಂದಿನಿ ಹಾಲಿನ ದರ ಲೀಟರ್‌ಗೆ 5 ರೂ ಹೆಚ್ಚಳ?

ನಂತರ ಮಾತನಾಡಿದ ಅವರು, ಹೈನೋದ್ಯಮದಲ್ಲಿ ಅಮೂಲ್‌ ಸಂಸ್ಥೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೆಎಂಎಫ್‌ ಎರಡನೇ ಸ್ಥಾನದಲ್ಲಿದ್ದು ‘ನಂದಿನಿ’ ಬ್ರಾಂಡ್‌ ಕರ್ನಾಟಕ ಸೇರಿದಂತೆ ನೆರೆಯ ಬಹುತೇಕ ರಾಜ್ಯಗಳಲ್ಲಿ ಖ್ಯಾತಿಯನ್ನು ಗಳಿಸಿದೆ. ಹೈನುಗಾರ ರೈತರಿಂದ(Farmers) ಹಾಲು(Milk) ಸಂಗ್ರಹಿಸಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಹೈನು ಉದ್ಯಮ ಬೆಳೆಯಲು ಈ ಸಂಸ್ಥೆಯು ಹೆಚ್ಚು ಸಹಕಾರಿಯಾಗಿದೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಸಹ ಸಹಕಾರಿ ಸಂಘಗಳು ಬೆಳೆಯಬೇಕು. ದೇಶದಾದ್ಯಂತ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಮಹಿಳೆಯರು ಸಹ ಈ ನಿಟ್ಟಿನಲ್ಲಿ ಮುಂದೆ ಬಂದು ಹೈನುಗಾರಿಕೆ ಪ್ರೋತ್ಸಾಹಿಸುವ ಕೆಲಸ ನಿರ್ವಹಿಸಬೇಕು. ಇದರಿಂದ ಹೈನುಗಾರಿಕೆ ಅಭಿವೃದ್ಧಿಯೊಂದಿಗೆ ಆರ್ಥಿಕವಾಗಿ ಸಬಲೀಕರಣವೂ ಸಾಧ್ಯವಾಗಲಿದೆ. ಹೈನುಗಾರಿಕೆಯು ಕೃಷಿಗೆ ಪೂರಕವಾಗಿರುವ ಉದ್ಯಮವಾಗಿದ್ದು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದ ಅವರು, ಕೃಷಿ ಪ್ರಧಾನ ಭಾರತದಲ್ಲಿ ಈ ವರ್ಷ 40ನೇ ಅಂತಾರಾಷ್ಟ್ರೀಯ ಹೈನುಗಾರಿಕೆ ಸಮ್ಮೇಳನ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಎನ್‌ಸಿಡಿಎಫ್‌ಐ ಕಳೆದ ಐದು ವರ್ಷದ ಅವಧಿಯಲ್ಲಿ ಸುಮಾರು ಐದು ಸಾವಿರ ಕೋಟಿ ರು.ಗಳಿಗೂ ಅಧಿಕ ವ್ಯವಹಾರ ನಡೆಸಿದೆ. ಈ ಪೈಕಿ ಕೆಎಂಎಫ್‌ ಸಂಸ್ಥೆಯೊಂದೇ ಸುಮಾರು 2400 ಕೋಟಿ ರು.ಗಳ ವಹಿವಾಟು ನಡೆಸಿದ್ದರಿಂದ ಕೆಎಂಎಫ್‌ ನಂದಿನಿ ಬ್ರಾಂಡ್‌ಗೆ ಪ್ರಶಸ್ತಿ ನೀಡಿ ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾ ಮಂಡಲ ಗೌರವಿಸಿದೆ ಎಂದು ಕೆಎಂಎಫ್‌ ಮಾಹಿತಿ ನೀಡಿದೆ.

Puneeth Rajkumar: ಪವರ್ ಸ್ಟಾರ್ ಅಪ್ಪು ಅನಘ್ರ್ಯ ರತ್ನ: ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಕೆಎಂಎಫ್‌ ನಂದಿನಿ ರಾಯಭಾರಿಯಾಗಿದ್ದ ನಟ ದಿವಂತ ಪುನೀತ್‌ ರಾಜ್‌ಕುಮಾರ್‌ (Puneet Rajkumar) ಅವರು ಅಗಲಿದ್ದರೂ ಅವರ ನೆನಪು ಜನರ ಹೃದಯದಲ್ಲಿ ಶಾಶ್ವತವಾಗಿರುತ್ತದೆ. ಅವರು ಕರ್ನಾಟಕದ ಅನಘ್ರ್ಯ ರತ್ನ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. 

Viral News: ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರ.?

ಕೆಎಂಎಫ್‌ ಪ್ರಧಾನ ಕಚೇರಿಯಲ್ಲಿ ದಿ. ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೆಎಂಎಫ್‌ ಬೆಳವಣಿಗೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪಾತ್ರ ಹಿರಿದಾಗಿತ್ತು. 

ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಸ್ವಯಂ ಪ್ರೇರಿತವಾಗಿ ನಮ್ಮ ಸಂಸ್ಥೆಯ ನೌಕರರು ರಕ್ತದಾನ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಎಂಎಫ್‌ ರಾಜ್ಯದ ಎಲ್ಲ ವರ್ಗಗಳ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ರುಚಿ, ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಒದಗಿಸುತ್ತಿದೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿಯೂ ನಮ್ಮ ನಂದಿನಿ ಬ್ರ್ಯಾಂಡ್‌ ಗ್ರಾಹಕರ ಆಯ್ಕೆಯಾಗಿದೆ ಎಂದು ಹೇಳಿದ್ದರು. 
 

click me!