Interest Rate Hike: ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಚ್ ಡಿಎಫ್ ಸಿ ಬ್ಯಾಂಕ್; ಹೊಸ ಬಡ್ಡಿದರ ಏ. 6ರಿಂದಲೇ ಜಾರಿಗೆ

Published : Apr 10, 2022, 12:08 PM IST
Interest Rate Hike: ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಚ್ ಡಿಎಫ್ ಸಿ ಬ್ಯಾಂಕ್; ಹೊಸ ಬಡ್ಡಿದರ ಏ. 6ರಿಂದಲೇ ಜಾರಿಗೆ

ಸಾರಾಂಶ

*2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳಿಗೆ ಹೊಸ ಬಡ್ಡಿದರ *ಒಂದು ವರ್ಷದ ಸ್ಥಿರ ಠೇವಣಿ ( FD) ಬಡ್ಡಿದರ ಶೇ.5ರಿಂದ ಶೇ.5.10ರಷ್ಟು ಹೆಚ್ಚಳ *ಇತ್ತೀಚೆಗೆ ಎಚ್ ಡಿಎಫ್ ಸಿ ಬ್ಯಾಂಕ್ ಉಳಿತಾಯ ಖಾತೆ ಮೇಲಿನ ಬಡ್ಡಿದರ ಕೂಡ ಪರಿಷ್ಕರಿಸಿದೆ

ನವದೆಹಲಿ (ಏ.9): ಖಾಸಗಿ ವಲಯದ ಬ್ಯಾಂಕ್ ಎಚ್ ಡಿಎಫ್ ಸಿ (HDFC) ಸ್ಥಿರ ಠೇವಣಿಗಳ (Fixed Deposits) ಮೇಲಿನ ಬಡ್ಡಿದರವನ್ನು (Interest rate) ಹೆಚ್ಚಿಸಿದೆ.  ಕೆಲವು ವರ್ಷಗಳ ಅವಧಿಯ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳಿಗೆ (Fixed Deposit) ಮಾತ್ರ ಹೊಸ ಬಡ್ಡಿದರ (Interest rate) ಅನ್ವಯಿಸುತ್ತದೆ. ಈ ಬಗ್ಗೆ ಎಚ್ ಡಿಎಫ್ ಸಿ ಬ್ಯಾಂಕ್ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ. 

ಎಚ್ ಡಿಎಫ್ ಸಿ (HDFC) ಬ್ಯಾಂಕಿನ ಪರಿಷ್ಕೃತ ಬಡ್ಡಿದರ (Interest rate) ಏಪ್ರಿಲ್ 6ರಿಂದಲೇ ಜಾರಿಗೆ ಬಂದಿದೆ. ಎಚ್ ಡಿಎಫ್ ಸಿ ಬ್ಯಾಂಕಿನ ವೆಬ್ ಸೈಟ್ ನಲ್ಲಿ ನೀಡಿರೋ ಮಾಹಿತಿ ಪ್ರಕಾರ ಒಂದು ವರ್ಷದ ಸ್ಥಿರ ಠೇವಣಿ ( FD) ಬಡ್ಡಿದರ 10 ಬೇಸಿಸ್ ಪಾಯಿಂಟ್ ಗಳಷ್ಟು ಅಂದರೆ  ಶೇ.5 ರಿಂದ ಶೇ.5.10ರಷ್ಟು ಹೆಚ್ಚಿಸಲಾಗಿದೆ. ಇನ್ನು ಒಂದು ವರ್ಷ ಒಂದು ದಿನದಿಂದ ಹಿಡಿದು ಎರಡು ವರ್ಷಗಳ ತನಕದ ಎಫ್ ಡಿ (FD) ಬಡ್ಡಿದರವನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು ಅಂದ್ರೆ ಶೇ.5ರಿಂದ ಶೇ.5.10ರಷ್ಟು ಹೆಚ್ಚಿಸಲಾಗಿದೆ. ಹಾಗೆಯೇ 2 ವರ್ಷ 1 ದಿನದಿಂದ 3 ವರ್ಷ ತನಕದ ಎಫ್ ಡಿ ಮೇಲಿನ ಬಡ್ಡಿದರವನ್ನು ಶೇ.5.20  ಹೆಚ್ಚಿಸಲಾಗಿದೆ. 3 ವರ್ಷ 1 ದಿನದಿಂದ 5 ವರ್ಷಗಳ ತನಕದ ಎಫ್ ಡಿ (FD) ಮೇಲಿನ ಬಡ್ಡಿದರವನ್ನು ಶೇ.5.45ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ 5 ವರ್ಷ 1 ದಿನದಿಂದ 10 ವರ್ಷಗಳ ತನಕದ ಎಫ್ ಡಿ (FD) ಮೇಲಿನ ಬಡ್ಡಿದರವನ್ನು ಶೇ.5.60ಕ್ಕೆ ಹೆಚ್ಚಿಸಲಾಗಿದೆ.

ಠೇವಣಿ, ಬಡ್ಡಿ ದರ ಯಥಾಸ್ಥಿತಿಗೆ ಆರ್‌ಬಿಐ ನಿರ್ಧಾರ!

ಇನ್ನು 7 ರಿಂದ 29 ದಿನಗಳ ಮೆಚ್ಯುರಿಟಿ ಅವಧಿ ಹೊಂದಿರೋ ಠೇವಣಿಗಳ (FD) ಮೇಲಿನ ಬಡ್ಡಿಯನ್ನು ಎಚ್ ಡಿಎಫ್ ಸಿ ಬ್ಯಾಂಕ್ ಶೇ.2.50 ಹೆಚ್ಚಿಸಿದೆ. 30 ರಿಂದ 90 ದಿನಗಳ ಅವಧಿಯ ಟರ್ಮ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.3ರಷ್ಟು ಹೆಚ್ಚಿಸಲಾಗಿದೆ. 91 ದಿನಗಳಿಂದ 6 ತಿಂಗಳ ತನಕದ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.3.50ರಷ್ಟು ಏರಿಸಲಾಗಿದೆ.ಇನ್ನು 6 ತಿಂಗಳು 1 ದಿನದಿಂದ 9 ತಿಂಗಳು ಹಾಗೂ 9 ತಿಂಗಳು 1 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಟರ್ಮ್ ಠೇವಣಿಗಳ (Term Deposits) ಮೇಲೆ ಶೇ.4.40 ಬಡ್ಡಿದರ ನಿಗದಿಪಡಿಸಲಾಗಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಉಳಿತಾಯ ಖಾತೆ ಮೇಲಿನ ಬಡ್ಡಿದರವನ್ನು (Interest rate) ಕೂಡ ಪರಿಷ್ಕರಿಸಿದೆ. ಫೆಬ್ರವರಿಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಟರ್ಮ್ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಿಸಿತ್ತು ಕೂಡ. 

LPG ಭಾರತದಲ್ಲೇ ಅತ್ಯಂತ ದುಬಾರಿ, ಹೇಗೆ? ಇಲ್ಲಿದೆ ವಿವರ

ಏಪ್ರಿಲ್ 8ರಂದು ನಡೆದ ಆರ್ ಬಿಐ (RBI) ಹಣಕಾಸು ನೀತಿ  ಸಮಿತಿ ಸಭೆಯಲ್ಲಿ (MPC) ಸತತ 11ನೇ ಬಾರಿಗೆ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದಿನಂತೆ ರೆಪೋ (Repo) ದರವನ್ನು ಶೇ.4 ಹಾಗೂ ರಿವರ್ಸ್ ರೆಪೋ (Reverse Repo) ದರವನ್ನು ಶೇ. 3.35ಕ್ಕೆ ನಿಗದಿಪಡಿಸಲಾಗಿದೆ. ರೆಪೋ ದರವೆಂದ್ರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ವಾಣಿಜ್ಯ ಬ್ಯಾಂಕುಗಳಿಗೆ (Commercial banks)ಹಣದ ಅವಶ್ಯಕತೆ ಬಿದ್ದಾಗ ನೀಡೋ ಸಾಲದ (Loan) ಮೇಲೆ ವಿಧಿಸೋ ಬಡ್ಡಿದರವಾಗಿದೆ. ರಿವರ್ಸ್ ರೆಪೋ ಬ್ಯಾಂಕುಗಳು ಆರ್ ಬಿಐನಲ್ಲಿ(RBI) ಠೇವಣಿಯಿರಿಸಿರೋ (Deposit) ಹಣಕ್ಕೆ ಪಡೆಯೋ ಬಡ್ಡಿದರವಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!