ಊಟದ ಜೊತೆಗೆ ತಟ್ಟೆಯನ್ನೂ ತಿನ್ನಬಹುದು; ಗೋಧಿ ಹೊಟ್ಟಿನ ಪ್ಲೇಟ್ ತಯಾರಿಸಿ ಯಶಸ್ಸು ಕಂಡ ಕೇರಳದ ಉದ್ಯಮಿ

By Suvarna News  |  First Published Sep 19, 2023, 4:53 PM IST

ಸಮಾರಂಭಗಳಲ್ಲಿ ಊಟ ಮಾಡಲು ಪ್ಲಾಸ್ಟಿಕ್ ತಟ್ಟೆಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯದ ಜೊತೆಗೆ ಪರಿಸರಕ್ಕೂ ಹಾನಿಕಾರ. ಆದ್ರೆ ಕೇರಳದ ಥೂಶನ್ ಎಂಬ ಸಂಸ್ಥೆ ಸಿದ್ಧಪಡಿಸುವ ಗೋಧಿ ಹೊಟ್ಟಿನ ತಟ್ಟೆಯನ್ನು ಊಟದ ಬಳಿಕ ತಿನ್ನಬಹುದಾಗಿದೆ. ಇಂಥ ವಿನೂತನ ಉದ್ಯಮ ಪ್ರಾರಂಭಿಸಿ ಯಶಸ್ವಿಯಾಗಿರುವ ವಿನಯಕುಮಾರ್ ಬಾಲಕೃಷ್ಣನ್, ಇದಕ್ಕಾಗಿ ಪ್ರತಿಷ್ಟಿತ ವಿಮಾ ಕಂಪನಿ ಸಿಇಒ ಹುದ್ದೆಯನ್ನೇ ತ್ಯಜಿಸಿದ್ದರು. 


Business Desk: ನಿಮ್ಮ ಊಟದ ತಟ್ಟೆಯಲ್ಲಿ ಬಡಿಸಿಕೊಂಡಿರುವ ಆಹಾರಕ್ಕಿಂತ ಹೆಚ್ಚಿನ ನಾರಿನಾಂಶ ಇದ್ದರೆ ಹೇಗೆ? ಅರೇ, ಪ್ಲೇಟ್ ನಲ್ಲಿ ನಾರಿನಾಂಶ ಇರಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಕಾಡಬಹುದು. ಕೇರಳ ಮೂಲದ ಥೂಶನ್ ಸಂಸ್ಥೆಯ ಪ್ಲೇಟ್ ಗಳಲ್ಲಿ ಊಟ ಮಾಡಿದವರಿಗೆ 43 ಗ್ರಾಂ ನಾರು ಹಾಗೂ 16 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಇದರಿಂದ ನೀವು ತಿನ್ನೋ ಊಟದಲ್ಲಿ ನಾರಿನಾಂಸ ಕಡಿಮೆಯಿದ್ದರೂ ಅಡ್ಡಿಯಿಲ್ಲ ತಟ್ಟೆಯೇ ಅದನ್ನು ಸರಿದೂಗಿಸುತ್ತದೆ. ಅಷ್ಟೇ ಅಲ್ಲ, ತಟ್ಟೆಗೆ ಹಾಕಿಕೊಂಡ ಊಟದಿಂದ ಹೊಟ್ಟೆ ತುಂಬಿಲ್ಲವೆಂದ್ರೆ ತಟ್ಟೆಯನ್ನೇ ತಿನ್ನಬಹುದು. ಅರೇ, ಇದೇನು ಎಂದು ಹುಬ್ಬೇರಿಸಬೇಡಿ. ಈ ತಟ್ಟೆಗಳನ್ನು ಗೋಧಿ ಹೊಟ್ಟಿನಿಂದ ಸಿದ್ಧಪಡಿಸಲಾಗಿದೆ. ಹೀಗಾಗಿ ಈ ತಟ್ಟೆಯನ್ನು ತಿಂದ್ರೆ ಯಾವುದೇ ತೊಂದರೆಯಿಲ್ಲ. ಸರಳವಾಗಿ ಹೇಳೋದಾದ್ರೆ ಈ ಪ್ಲೇಟ್ ಗಳು ಹೊಟ್ಟೆ ಹಾಗೂ ಪರಿಸರ ಎರಡಕ್ಕೂ ಹಿತಕಾರಿ. ಎರ್ನಾಕುಲಂ ಮೂಲದ ವಿನಯಕುಮಾರ್ ಬಾಲಕೃಷ್ಣನ್ ಇಂಥದೊಂದು ವಿನೂತನ ತಟ್ಟೆ, ಚಮಚಗಳನ್ನು ಸಿದ್ಧಪಡಿಸುವ ಮೂಲಕ ಉದ್ಯಮ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. 

ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ
ವಿನಯಕುಮಾರ್ ಬಾಲಕೃಷ್ಣನ್ ಕಠಿಣ ಪರಿಶ್ರಮಿ. ಸದಾ ಹೊಸತನಕ್ಕಾಗಿ ತುಡಿಯುವ ಮನಸ್ಥಿತಿ ಹೊಂದಿರೋರು. ಕಳೆದ 55 ವರ್ಷಗಳಲ್ಲಿ ಭೂಗೋಳಶಾಸ್ತ್ರ, ಮಾನವ ಸಂಪನ್ಮೂಲ ನಿರ್ವಹಣೆ, ಬ್ಯಾಂಕಿಂಗ್ ಹಾಗೂ ವಿಮೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇನ್ನು ಪ್ರತಿ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಿದ್ದಾರೆ ಕೂಡ. ಆದರೂ ಹೊಸದಾಗಿ ಏನಾದರೂ ಮಾಡಬೇಕೆಂಬ ತುಡಿತ  ಥೂಶನ್ ಪರಿಸರಸ್ನೇಹಿ ತಟ್ಟೆ, ಚಮಚ ಉತ್ಪಾದನಾ ಸಂಸ್ಥೆಯನ್ನು ಹುಟ್ಟುಹಾಕಲು ಅವರಿಗೆ ಪ್ರೇರಣೆ ನೀಡಿದೆ. ಈ ಉದ್ಯಮ ಪ್ರಾರಂಭಿಸುವ ಮುನ್ನ ವಿನಯಕುಮಾರ್ ಬಾಲಕೃಷ್ಣನ್ ಹಾಗೂ ಅವರ ಪತ್ನಿ ಇಂದಿರಾ ಇಬ್ಬರೂ ಮಾರಿಷನ್ ನಲ್ಲಿ ಉದ್ಯೋಗದಲ್ಲಿದ್ದರು. ಬಾಲಕೃಷ್ಣನ್ ಅವರು ವಿಮಾ ಸಂಸ್ಥೆಯೊಂದರಲ್ಲಿ ಸಿಇಒ ಹುದ್ದೆಯಲ್ಲಿದ್ದರು. 

Latest Videos

undefined

9ನೇ ಕ್ಲಾಸ್‌ ಫೇಲ್‌ ಆದ ವ್ಯಕ್ತಿ ಈಗ 1,843 ಕೋಟಿ ಮೌಲ್ಯದ ಐಸ್‌ಕ್ರೀಂ ಕಂಪನಿಯ ಬಾಸ್‌!

ಪೋಲ್ಯಾಂಡ್ ಟ್ರಿಪ್ ನಲ್ಲಿ ಹುಟ್ಟಿದ ಯೋಚನೆ
ಪೋಲ್ಯಾಂಡ್  ಟ್ರಿಪ್ ಗೆ ತೆರಳಿದ ಸಂದರ್ಭದಲ್ಲಿ ವಿನಯಕುಮಾರ್ ಈ ವಿನೂತನ ಪರಿಸರಸ್ನೇಹಿ ತಟ್ಟೆಗಳನ್ನು ನೋಡಿದರು. ಸಂಸ್ಥೆಯೊಂದು ಅಲ್ಲಿ ಈ ಮಾದರಿಯ ತಟ್ಟೆಗಳನ್ನು ಸಿದ್ಧಪಡಿಸುತ್ತಿತ್ತು. ಅದನ್ನು ನೋಡಿದ ತಕ್ಷಣ ತಾಯ್ನಾಡಿಗೆ ಹಿಂತಿರುಗಿದ ತಕ್ಷಣ ಅಂಥದ್ದೇ ಸಂಸ್ಥೆ ಸ್ಥಾಪಿಸುವ ನಿರ್ಧಾರ ಕೈಗೊಂಡರು. ಇವರಿಗೆ ಪತ್ನಿ ಇಂದಿರಾ ಕೂಡ ಬೆಂಬಲ ನೀಡಿದರು. ಥೂಶನ್ ಎಂಬ ಹೆಸರು ಬಾಳೆ ಎಲೆಗಳಲ್ಲಿ ಕೇರಳದ ಸಾಂಪ್ರದಾಯಿಕ ಊಟವನ್ನು ಬಡಿಸುವ ಪರಿಕಲ್ಪನೆಯಿಂದ ಪ್ರೇರಣೆ ಪಡೆದು ಇಟ್ಟಿರುವ ಹೆಸರಾಗಿದೆ.ಸಿಎಸ್ ಐಆರ್ ನೆರವು ಪಡೆದು ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಈ ಸಂಸ್ಥೆ ಪ್ರತಿದಿನ 1,000 ತಟ್ಟೆಗಳನ್ನು ಉತ್ಪಾದಿಸುತ್ತಿದೆ. 

ಗೋಧಿ ಹೊಟ್ಟಿನಿಂದ ಪ್ಲೇಟ್
ಈ ಪ್ಲೇಟ್ ಳನ್ನು ಗೋಧಿ ಹೊಟ್ಟೆನಿಂದ ಸಿದ್ಧಪಡಿಸಲಾಗುತ್ತಿದೆ. ಕೇರಳ ಹಾಗೂ ಹೊರರಾಜ್ಯಗಳಿಂದ ಗೋಧಿ ಹೊಟ್ಟನ್ನು ಖರೀದಿಸಲಾಗುತ್ತಿದೆ. ಕೇರಳದಲ್ಲೇ ಗೋಧಿ ಬೆಳೆ ಕಟಾವು ಬಳಿಕ  7,000 ಟನ್ ಗಳಷ್ಟು ತ್ಯಾಜ್ಯ ಸಿಗುತ್ತದೆ. ಇದರಲ್ಲಿ ಒಂದಿಷ್ಟು ಭಾಗವನ್ನು ಜಾನುವಾರುಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಇನ್ನು ಈ ಪ್ಲೇಟ್ ಗಳನ್ನು ಸಿದ್ಧಪಡಿಸುವ ಯಂತ್ರವನ್ನು ಭಾರತದಲ್ಲೇ ತಯಾರಿಸಲಾಗಿದೆ. ಈ ಯಂತ್ರವನ್ನು ಸಿದ್ಧಪಡಿಸಲು ಒಂದೂವರೆ ವರ್ಷ ಹಿಡಿದಿತ್ತು. 2018ರಲ್ಲಿ  ಥೂಶನ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ಅಕ್ಕಿಯಿಂದ ಸ್ಟ್ರಾ
ಇನ್ನು ಈ ಸಂಸ್ಥೆ ಅಕ್ಕಿಯಿಂದ ಸ್ಟ್ರಾ ತಯಾರಿಸುತ್ತದೆ. ಈ ಸ್ಟ್ರಾ ಅನ್ನು ಕೂಡ ತಿನ್ನಬಹುದು. ಆಂಧ್ರಪ್ರದೇಶದ ರೈಸ್ ಮಿಲ್ ಗಳಲ್ಲಿ ಉಳಿದಿರುವ ಅಕ್ಕಿ ತುಣುಕುಗಳನ್ನು ಬಳಸಿಕೊಂಡು ಈ ಸ್ಟ್ರಾ ಸಿದ್ಧಪಡಿಸಲಾಗುತ್ತದೆ. 

ದೇಶದ ಶ್ರೀಮಂತ ಮಹಿಳಾ ಫ್ಯಾಷನ್ ಡಿಸೈನರ್‌, ಖಾಲಿ 2 ಟೈಲರಿಂಗ್ ಮೆಷಿನ್‌ನಿಂದ 1000 ಕೋಟಿ ರೂ ಸಾಮ್ರಾಜ್ಯಕ್ಕೆ ಒಡತಿ

ಒಂದು ಗಂಟೆ ತನಕ ಒದ್ದೆಯಾಗದು
ಪ್ಲೇಟ್ ಹಾಗೂ ಸ್ಟ್ರಾಗಳು ಒಂದು ಗಂಟೆ ತನಕ ಒದ್ದೆಯಾಗೋದಿಲ್ಲ. ಹೀಗಾಗಿ ಊಟದ ಸಮಯದಲ್ಲಿ ಸಾರು, ಸಾಂಬಾರನ್ನು ಹೆಚ್ಚು ಬಡಿಸಿಕೊಂಡರೆ ಏಊ ತೊಂದರೆಯಾಗದು ಎನ್ನುತ್ತಾರೆ ವಿನಯಕುಮಾರ್ ಬಾಲಕೃಷ್ಣನ್. ಎರಡು ವಿಧದ ಪ್ಲೇಟ್ ಗಳಿದ್ದು, ಒಂದು ಊಟಕ್ಕೆ ಹಾಗೂ ಇನ್ನೊಂದು ಸೈಡ್ಸ್ ಗೆ. ಊಟಕ್ಕೆ ಬಳಸುವ ತಟ್ಟೆ ದೊಡ್ಡದಾಗಿದ್ದರೆ ಇನ್ನೊಂದು ಚಿಕ್ಕದು. ಇವುಗಳ ಬೆಲೆ 3ರೂ. ನಿಂದ 20ರೂ. ತನಕ ಇದೆ. ಕೇರಳದಲ್ಲಿ ಈ ಸಂಸ್ಥೆ 10 ವಿತರಕರನ್ನು ಹೊಂದಿದೆ.

click me!